ಡಬ್ಲ್ಯುಡಬ್ಲ್ಯುಇ ಸಮ್ಮರ್ಸ್ಲಾಮ್ 2021 : ರೋಮನ್ ರೇನ್ಸ್ ಗೆ ಜಯ
ಲಾಸ್ ವೇಗಾಸ್ : ಡಬ್ಲ್ಯುಡಬ್ಲ್ಯುಇ ಸಮ್ಮರ್ಸ್ಲಾಮ್ 2021 ಕೆಲವು ಪ್ರಮುಖ ಅಚ್ಚರಿಗಳಿಗೆ ಕಾರಣವಾಗಿದೆ.
ಲಾಸ್ ವೇಗಾಸ್ನ ಅಲೇಜಿಯಂಟ್ ಸ್ಟೇಡಿಯಂನಲ್ಲಿ ನಡೆದ ರಣರೋಚಕ ಪಂದ್ಯದಲ್ಲಿ ಜಾನ್ ಸೆನಾ ವಿರುದ್ಧ ಯೂನಿವರ್ಸಲ್ ಚಾಂಪಿಯನ್ ರೋಮನ್ ರೇನ್ಸ್ ಗೆಲುವು ಸಾಧಿಸಿದ್ದಾರೆ.
ಯುನಿವರ್ಸಲ್ ಚಾಂಪಿಯನ್ ಶಿಪ್ ಗಾಗಿ ನಡೆದ ಈ ಪಂದ್ಯದಲ್ಲಿ ಜಾನ್ ಸೀನಾ, ರೋಮನ್ ರೇನ್ಸ್ ಮುಖಾಮುಖಿಯಾಗಿದ್ದರು. ಅಂತಿಮವಾಗಿ ರೋಮನ್ ರೇನ್ಸ್ ಪಂದ್ಯದಲ್ಲಿ ಗೆಲುವು ಸಾಧಿಸಿದರು.
ಇತ್ತ ಗೋಲ್ಡ್ಬರ್ಗ್ ವರ್ಸಸ್ ಬಾಬಿ ಲ್ಯಾಶ್ಲೆ ಡಬ್ಲ್ಯುಡಬ್ಲ್ಯುಇ ಚಾಂಪಿಯನ್ ಶಿಪ್ ಪಂದ್ಯದಲ್ಲಿ ಬಾಬಿ ಲ್ಯಾಶ್ಲೆ ಗೆಲುವು ಸಾಧಿಸಿದರು.