ಬಿಡುಗಡೆಗೂ ಮುನ್ನವೇ RRR ಚಿತ್ರದ ದಾಖಲೆ ಮುರಿದ ‘ಕೆಜಿಎಫ್-2’

1 min read

ಬಿಡುಗಡೆಗೂ ಮುನ್ನವೇ RRR ಚಿತ್ರದ ದಾಖಲೆ ಮುರಿದ ‘ಕೆಜಿಎಫ್-2’

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ಕೆಜಿಎಫ್-2’ ಚಿತ್ರ ಬಿಡುಗಡೆಗೂ ಮುನ್ನವೇ ದಾಖಲೆಗಳನ್ನು ಮುರಿಯುತ್ತ ಹೊಸ ದಾಖಲೆ ಬರೆಯುತ್ತಿದೆ.  ಟ್ರೇಲರ್ ನಂತರ,  ಅಡ್ವಾನ್ಸ್ ಬುಕ್ಕಿಂಗ್‌ನಲ್ಲಿ ಕೆಜಿಎಫ್ ಭಾರತೀಯ ಚಿತ್ರರಂಗದಲ್ಲೇ ದಾಖಲೆಗಳನ್ನ ಮಾಡಿದೆ. ಮೊದಲ ದಿನವೇ ಮುಂಗಡ ಬುಕ್ಕಿಂಗ್‌ನಿಂದ ಬಂದ ಗಳಿಕೆಯಲ್ಲಿ ಕೆಜಿಎಫ್-2 ‘RRR’ ಚಿತ್ರದ ದಾಖಲೆಯನ್ನು ಮುರಿದಿದೆ. ‘ದಂಗಲ್’, ‘ಬಾಹುಬಲಿ-2’ ಮತ್ತು RRR ಚಿತ್ರದ ಸಾರ್ವಕಾಲಿಕ ದಾಖಲೆಗಳನ್ನು ಬಿಡುಗಡೆಯಾದ ಮೊದಲ ದಿನವೇ ಕೆಜಿಎಫ್-2 ಮುರಿಯಲಿದೆ ಎಂದು  ಬಾಕ್ಸ್ ಆಫೀಸ್ ಪಂಡಿತರು ಅಭಿಪ್ರಾಯ ಪಟ್ಟಿದ್ದಾರೆ.

‘ಕೆಜಿಎಫ್-2’ ಬಿಡುಗಡೆಗೂ ಮುನ್ನವೇ ದೇಶಾದ್ಯಂತ ಮುಂಗಡ ಬುಕಿಂಗ್‌ನಿಂದ ಸುಮಾರು 28.51 ಕೋಟಿ ರೂಪಾಯಿ ಗಳಿಸಿದೆ, ಇದು ಎಸ್‌ಎಸ್ ರಾಜಮೌಳಿ ಅವರ RRR ಗಿಂತ ಹೆಚ್ಚು. ‘RRR’ ಬಿಡುಗಡೆಗೆ ಮುನ್ನ ಮೊದಲ ದಿನದ ಮುಂಗಡ ಬುಕಿಂಗ್ ಮೂಲಕ 5 ಕೋಟಿ ಗಳಿಸಿತ್ತು. ಈ ಹಿನ್ನೆಲೆಯಲ್ಲಿ, ‘ಕೆಜಿಎಫ್-2’ ಮುಂಗಡ ಬುಕ್ಕಿಂಗ್ ಗಳಿಕೆಯು ‘RRR’ ಗಿಂತ ಐದು ಪಟ್ಟು ಹೆಚ್ಚಾಗಿದೆ. ವಿದೇಶಗಳಲ್ಲೂ ಮುಂಗಡ ಬುಕ್ಕಿಂಗ್‌ನಿಂದ ಚಿತ್ರ ಭರ್ಜರಿ ಗಳಿಕೆ ಆರಂಭಿಸಿದೆ.

‘ಕೆಜಿಎಫ್-2’ ಹಿಂದಿ ಆವೃತ್ತಿ ಕೂಡ ಮುಂಗಡ ಬುಕ್ಕಿಂಗ್‌ ಗಳಿಕೆಯಲ್ಲಿ RRR ಚಿತ್ರವನ್ನ ಹಿಂದಿಕ್ಕಿದೆ. ಬಿಡುಗಡೆಗೂ ಮುನ್ನವೇ ಮುಂಗಡ ಬುಕ್ಕಿಂಗ್‌ನಿಂದ ಹಿಂದಿ ಆವೃತ್ತಿಯು ಈಗಾಗಲೇ 16.30 ಕೋಟಿ ರೂ.ಗೂ ಹೆಚ್ಚು ಗಳಿಸಿದೆ.  ವ್ಯಾಪಾರ ವಿಶ್ಲೇಷಕರ ಪ್ರಕಾರ, ಕೆಜಿಎಫ್-2 ನ ಹಿಂದಿ ಆವೃತ್ತಿಯು ಮುಂಗಡ ಬುಕಿಂಗ್‌ನಿಂದ 20 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಗಳಿಕೆ ಮಾಡಲಿದೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd