ಬಾಕ್ಸ್ ಆಪೀಸ್ ಕಲೆಕ್ಷನ್ ಲ್ಲಿ ಕೆಜಿಎಫ್ ತೂಫಾನ್ – ಭಾರತದಲ್ಲಿ 134.5 ಕೋಟಿ ಗಳಿಕೆ
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಲನಚಿತ್ರ ವಿಶ್ವಾದ್ಯಂತ ತೂಫಾನ್ ಅನ್ನೇ ಎಬ್ಬಿಸಿದೆ. ನರಾಚಿ ಲೋಕದ ಮೂಲಕ ಪ್ರಶಾಂತ್ ನೀಲ್ ಕೆಜಿಎಫ್ ಚಾಪ್ಟರ್ 2 ಮೂಲಕ ಇಡೀ ಭಾರತ ಚಿತ್ರರಂಗದ ದಾಖಲೆಗಳನ್ನೆ ಅಳಿಸಿಹಾಕಿದ್ದಾರೆ.
ಏಪ್ರಿಲ್ 13 ರ ಮಧ್ಯರಾತ್ರಿಯಿಂದಲೇ ಶರುವಾದ ರಾಕಿಬಾಯ್ ವೈಯಲ್ಸ್ ನ್ನ ಕಂಡು ಗಲ್ಲಾ ಪೆಟ್ಟಿಗೆ ಬೆಚ್ಚಿಬಿದ್ದಿದೆ. ವಿಶ್ವಾದ್ಯಂತ 10.000 ಸಾವಿರ ಥಿಯೇಟರ್ ಗಳಲ್ಲಿ ಬಿಡುಗಡೆಯಾಗಿದ್ದ ಚಿತ್ರ ದಾಖಲೆಯ ಮಟ್ಟಕ್ಕೆ ಕಲೆಕ್ಷನ್ ಮಾಡಿದೆ. ಭಾರತದಾದ್ಯಂತ ಚಿತ್ರದ ಕಲೆಕ್ಷನ್ 134.5 ಕೋಟಿ ತಲುಪಿದೆ. ಈ ಮಾಹಿತಿಯನ್ನ ಹೊಂಬಾಳೆ ಫೀಲಂಸ್ ನವರು ಅಧಿಕೃತವಾಗಿ ಟ್ವೀಟ್ ಮಾಡಿ ತಿಳಿಸಿದ್ದಾರೆ.
ಆದರೆ ವರ್ಲ್ಡ್ ವೈಡ್ ಬಾಕ್ಸ್ ಆಫೀಸ್ ಕಲೆಕ್ಷನ್ ಕುರಿತು ಇನ್ನೂ ಮಾಹಿತಿಗಳು ಬರಬೇಕಿದೆ. ಕೆಲ ಸಿನಿ ಪಂಡಿತರ ಪ್ರಕಾರ ಚಿತ್ರ ವಿಶ್ವಾದ್ಯಂತ 180 ಕೋಟಿ ದಾಟಿದೆ ಎಂದು ಹೇಳಲಾಗುತ್ತಿದೆ. ಇನ್ನೂ ಕೆಲವು ಬಾಕ್ಸ್ ಆಫೀಸ್ ಪಂಡಿತರು ಚಿತ್ರದ ಕಲೆಕ್ಷನ್ 250 ಕೋಟಿ ದಾಟಿದೆ ಎಂದು ಹೇಳುತ್ತಿದ್ದಾರೆ.
ಕರ್ನಾಟಕದಲ್ಲಿಯೇ ಈ ಚಿತ್ರ ಬರೊಬ್ಬರಿ 35 ಕೋಟಿಯನ್ನ ಗಳಿಸಿ ಮೊದಲ ದಿನದ ರೆಕಾರ್ಡ ಸೃಷ್ಟಿಮಾಡಿದೆ. ಹಿಂದಿಬೆಲ್ಟ್ ನಲ್ಲಿ ಹಿಂದಿ ಚಿತ್ರ ವಾರ್ ಸಿನಿಮಾದ ಮೊದಲ ದಿನದ ದಾಖಲೆಯನನ್ ಅಳಿಸಿ ಅತಿಹೆಚ್ಚು ಅಂದರೆ 53 ಕೋಟಿ ರುಪಾಯಿಯನ್ನ ಗಳಿಸಿದೆ.
ವೀಕೆಂಡ್ ನಲ್ಲಿ ಚಿತ್ರದ ಕಲೆಕ್ಷನ್ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.