ವಕ್ಫ್ ವಿರುದ್ಧ 3ನೇ ಹಂತದ ಹೋರಾಟಕ್ಕೂ ಶಾಸಕ ಯತ್ನಾಳ್ ಬಣ ಸಜ್ಜಾಗಿದೆ. ಈಗಾಗಲೇ 2ನೇ ಹಂತದ ಹೋರಾಟಕ್ಕೆ ಧುಮುಕಿರುವ ರೆಬೆಲ್ಸ್ ಟೀಂ, ಹೋರಾಟವನ್ನ ಮತ್ತಷ್ಟು ತೀವ್ರಗೊಳಿಸುವುದಕ್ಕೆ ನಿರ್ಧಾರ ಮಾಡಿದೆ. ಯಾವ ಯಾವ ಜಿಲ್ಲೆಯಲ್ಲಿ ಹೋರಾಟ ಮಾಡಿಲ್ವೋ ಆ ಜಿಲ್ಲೆಗಳಲ್ಲಿ ಹೋರಾಟ ನಡೆಸಿ ವರದಿ ಸಂಗ್ರಹಿಸುವುದಕ್ಕೆ ನಿರ್ಧಾರ ಮಾಡಲಾಗಿದೆ. ವಕ್ಫ್ ಬೋರ್ಡ್ ವಿರುದ್ಧ ನಮ್ಮ ಹೋರಾಟ ನಿಲ್ಲೋದಿಲ್ಲ, 3ನೇ ಹಂತದ ಹೋರಾಟವನ್ನೂ ಮಾಡುತ್ತೇವೆ ಅಂತಾ ಶಾಸಕ ಯತ್ನಾಳ್ ಹೇಳಿದ್ದಾರೆ.
ಪರಾಜಿತ ಬಿಜೆಪಿ ಅಭ್ಯರ್ಥಿಗಳ ಜೊತೆ ಸಭೆ: ಇತ್ತಾ ಕಡೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪಕ್ಷವನ್ನ ಸಂಘಟಿಸುವ ಕೆಲಸದಲ್ಲಿ ಹೆಚ್ಚು ಬ್ಯುಸಿ ಆಗಿದ್ದಾರೆ. ಪಕ್ಷವನ್ನ ಒಗ್ಗಟ್ಟಾಗಿ ತೆಗೆದುಕೊಂಡುವ ಹೋಗುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಕಳೆದ ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಸೋತಿರುವವರ ಜೊತೆ ಇಂದು ಸಭೆ ಮಾಡಲಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ವಿಜಯೇಂದ್ರ ಸಭೆ ಕರೆದಿದ್ದಾರೆ. ಚುನಾವಣೆಯಲ್ಲಿ ಸೋತಿರೋದು ಒಂದುಕಡೆಯಾದರೆ, ಮುಂದೆ ಯಾವ ರೀತಿಯಲ್ಲಿ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಅಂತಾ ಚರ್ಚೆ ನಡೆಸಲಿದ್ದಾರೆ.
ಪಕ್ಷವನ್ನ ತಳಮಟ್ಟದಿಂದ ಬಲಪಡಿಸಿ ಅಧಿಕಾರಕ್ಕೆ ಬರೋದರ ಬಗ್ಗೆ ಯೋಚನೆ ಮಾಡಬೇಕಿದ್ದ ಬಿಜೆಪಿ, ಬಣ ಬಡಿದಾಟಕ್ಕೆ ಸಿಲುಕಿ ಅಲ್ಲೋಲ, ಕಲ್ಲೋಲ ಆಗುವಂತಾಗಿದೆ. ಪಕ್ಷದಲ್ಲಿ ಕಚ್ಚಾಟ ಜೋರಾಗ್ತಾನೆ ಇದೆ. ಆದರೆ ಹಿರಿಯ ನಾಯಕರು ಮಾತ್ರ ಸದ್ಯ ಮೌನ ಮುರಿದಿದ್ದು, ಸದ್ಯದಲ್ಲೇ ಎಲ್ಲವೂ ಬಗೆಹರಿಯೋ ವಿಶ್ವಾಸ ವ್ಯಕ್ತಪಡಿಸ್ತಿದ್ದಾರೆ.