ಬೆಂಗಳೂರು : ಬಿಜೆಪಿಯಲ್ಲಿ ಯಡಿಯೂರಪ್ಪ (B.S Yediyurappa) ಅವರನ್ನು ಸಿಎಂ ಸ್ಥಾನದಿಂದ ಇಳಿಸಿ, ಕಡೆಗಣಿಸಿದ್ದಕ್ಕೆ ಪಕ್ಷ ಅವನತಿಯ ಹಾದಿ ಹಿಡಿಯಿತು ಎಂದು ಮಾಜಿ ಶಾಸಕ ರಾಜೂಗೌಡ (Raju Gowda) ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಸ್‍ವೈ ಹಾಗೂ ವಿಜಯೇಂದ್ರ ಅವರು ಪಕ್ಷ ಕಟ್ಟುತ್ತಿದ್ದಾರೆ. ಅವರು ಸೋತವರ ಜೊತೆ ಇಂದಿಗೂ ಇದ್ದಾರೆ. ಅವರ ಕಡೆಗಣನೆಯೇ ಪಕ್ಷದ ಕುಸಿತಕ್ಕೆ ಕಾರಣ ಎಂದು ಹೇಳಿದ್ದಾರೆ.
ಆಪರೇಷನ್ ಆಗಲೂ ನನಗೆ ಕ್ಯಾನ್ಸರ್ ಗಡ್ಡೆ ಬೆಳೆದಿಲ್ಲ. ಯಾವ ರೋಗವೂ ಬಂದಿಲ್ಲ. ಸಹಜವಾಗಿ ಸುದೀಪ್ ಹುಟುಹಬ್ಬದ ಪಾರ್ಟಿಯಲ್ಲಿ ಡಿ.ಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದೇನೆ ಎಂದು ಆಪರೇಷನ್ ಹಸ್ತದ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಭೇಟಿ ಮಾಡಿದ ಸಂದರ್ಭದಲ್ಲಿ ಶಿವಕುಮಾರ್ ಅವರು, ಉತ್ತಮ ಕೆಲಸ ಮಾಡಿದರೂ ಏಕೆ ಸೋತಿದ್ದೀರಿ ಎಂದು ಪ್ರಶ್ನಿಸಿದರು. ಇದಕ್ಕೆ ನಿಮ್ಮ ಪ್ರಭಾವ ಹಾಗೂ ಸಿದ್ದರಾಮಯ್ಯ ಅವರ ಪ್ರಭಾವ ಎಂದಿದ್ದೇನೆ. ನಾವು ಮೊದಲಿನಿಂದಲೂ ಆತ್ಮೀಯರು ಎಂದು ಹೇಳಿದ್ದಾರೆ.