ಚನ್ನಪಟ್ಟಣದಲ್ಲಿ `ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಏಕವಚನ ದಾಳಿ’

1 min read
Yogeshwar

ಚನ್ನಪಟ್ಟಣದಲ್ಲಿ `ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಏಕವಚನ ದಾಳಿ’

ರಾಮನಗರ :ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ಯಾರಿಗೆ ಅಧಿಕಾರ ಕೊಟ್ಟಿದ್ದಾನೆ.

ಜನರ ಮುಂದೆ ದುರಾಹಂಕಾರ ನಡೆಯಲ್ಲ ಅಂತಾ ಅವನಿಗೆ ಈಗ ಗೊತ್ತಾಗಿದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಸಚಿವ ಸಿ.ಪಿ.ಯೋಗೇಶ್ವರ್ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಗುರುವಾರ ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಸಿ.ಪಿ.ಯೋಗೇಶ್ವರ್, ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಜನರ ಕೈಗೆ ಸಿಗುತ್ತಿರಲಿಲ್ಲ.

ಅಧಿಕಾರ ಹೋದ ಮೇಲೆ ಅವನು ಬೆಳಗ್ಗೆ 6 ಗಂಟೆಗೆ ಚನ್ನಪಟ್ಟಣಕ್ಕೆ ಬರ್ತಿದ್ದಾನೆ. ಜನರ ಜೊತೆ ನಮ್ಮ ದುರಾಹಂಕಾರ ನಡೆಯಲ್ಲ ಎಂಬುದು ಅವನಿಗೀಗ ಗೊತ್ತಾಗಿದೆ.

ಕುಮಾರಸ್ವಾಮಿ ಬಂದಾಗ ಜೆಡಿಎಸ್ ಮುಖಂಡರು ಹಲ್ಲು ಗಿಂಜುತ್ತಾರೆ. ಅವನಿಗೆ ಹೂವಿನ ಹಾರ ಹಿಡ್ಕೊಂಡು ಹೋಗ್ತಾರೆ. ಆದರೆ ಅವನು ಅಧಿಕಾರದಲ್ಲಿದ್ದಾಗ ಯಾರಿಗೆ ಅಧಿಕಾರ ಕೊಟ್ಟಿದ್ದಾನೆ ಅಂತಾ ಪ್ರಶ್ನೆ ಮಾಡಿದರು.

Yogeshwar

ಇನ್ನು ಏಪ್ರಿಲ್ ನಿಂದ ನನ್ನ ರಾಜಕೀಯ ಆರಂಭವಾಗಿಲಿದೆ. ಏಪ್ರಿಲ್ ನಿಂದ ಕ್ಷೇತ್ರದ ಪ್ರವಾಸ ಮಾಡ್ತೇನೆ. ಪ್ರತಿಹಳ್ಳಿಗೂ ಭೇಟಿ ಕೊಡ್ತೇನೆ, ಪಕ್ಷ ಸಂಘಟನೆ ಮಾಡ್ತೇನೆ

. ಚನ್ನಪಟ್ಟಣ ನನ್ನ ತವರೂರು, ನನಗೆ ರಾಜಕೀಯ ಜನ್ಮ ನೀಡಿದ ತಾಲೂಕು. ನನಗೆ ನೀವು ಬಿಡುವು ಮಾಡಿಕೊಟ್ಟಿದ್ದೀರಿ.

ಚನ್ನಪಟ್ಟಣದಿಂದ ರಾಜ್ಯ ಪ್ರವಾಸ ಮಾಡಲು ಅವಕಾಶ ಮಾಡಿಕೊಟ್ಟಿದ್ದೀರಿ. ಜನ ನನಗೆ ಮತಹಾಕದಿದ್ದರೂ ಸಚಿವನಾಗುವ ಶಕ್ತಿ ಕೊಟ್ಟಿದ್ದೀರಿ ಎಂದು ಸಿ.ಪಿ ಯೋಗೇಶ್ವರ್ ತಿಳಿಸಿದರು.

 

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd