Beating retreat – ಬೀಟಿಂಗ್ ರಿಟ್ರೀಟ್ ಎಂದರೇನು ಗೊತ್ತಾ ?
ಬೀಟಿಂಗ್ ರಿಟ್ರೀಟ್ ಎಂಬುದು ಒಂದು ವಾರದ ಗಣರಾಜ್ಯೋತ್ಸವದ ಆಚರಣೆಯ ಮುಕ್ತಾಯವನ್ನು ಸೂಚಿಸುತ್ತದೆ. ಈ ಸಮಯದಲ್ಲಿ, ರಾಷ್ಟ್ರಪತಿಗಳು ಸೇನಾ ಪಡೆಗಳಿಗೆ ತಮ್ಮ ತಮ್ಮ ಬ್ಯಾರಕ್ಗಳಿಗೆ ಮರಳಲು ಅವಕಾಶ ನೀಡುತ್ತಾರೆ. ಇದರೊಂದಿಗೆ ಗಣರಾಜ್ಯೋತ್ಸವ ಸಮಾರಂಭ ಮುಕ್ತಾಯವಾಗುತ್ತದೆ.
ಮೊದಲು ಬೀಟಿಂಗ್ ರೀಟ್ರೀಟ್ ಜನವರಿ 24 ರಿಂದ ಪ್ರಾರಂಭವಾಗುತ್ತಿತ್ತು, ಆದರೆ 2022 ರಿಂದ ಅಂದರೆ ಈ ವರ್ಷದಿಂದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದಂದು ಅಂದರೆ ಜನವರಿ 23 ರಿಂದ ಆಚರಿಸಲಾಗುತ್ತದೆ. ಈ ಬಾರಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜಯಂತಿಯನ್ನು ಆಚರಿಸಲಾಗುತ್ತಿದೆ.
ಹಿಸ್ಟರಿ ಆಫ್ ಬೀಟಿಂಗ್ ರಿಟ್ರೀಟ್ You know what the Beating retreat is ?
ಬೀಟಿಂಗ್ ರಿಟ್ರೀಟ್ 1950 ರ ದಶಕದಲ್ಲಿ ಭಾರತದಲ್ಲಿ ಹುಟ್ಟಿಕೊಂಡಿತು. ಭಾರತೀಯ ಸೇನೆಯ ಮೇಜರ್ ರಾಬರ್ಟ್ ಸೇನೆಯ ಬ್ಯಾಂಡ್ಗಳ ಪ್ರದರ್ಶನದೊಂದಿಗೆ ಸಮಾರಂಭವನ್ನು ಪೂರ್ಣಗೊಳಿಸಿದರು. 1952 ರಲ್ಲಿ, ಈ ಸಮಾರಂಭದ ಎರಡು ಕಾರ್ಯಕ್ರಮಗಳನ್ನು ಭಾರತದಲ್ಲಿ ಆಯೋಜಿಸಲಾಯಿತು. ಮೊದಲ ಕಾರ್ಯಕ್ರಮವು ದೆಹಲಿಯ ರೀಗಲ್ ಮೈದಾನದ ಮುಂಭಾಗದಲ್ಲಿ ಮತ್ತು ಎರಡನೆಯದು ಕೆಂಪು ಕೋಟೆಯಲ್ಲಿ ನಡೆಯಿತು.