ಬಾಲಕಿಗೆ ಲೈಗಿಂಕ ಕಿರುಕುಳ ನೀಡಿದ ಯುವಕ
ಮಂಗಳೂರು: ಯುವಕನೋರ್ವ ಬಾಲಕಿಗೆ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
16 ವರ್ಷದ ಬಾಲಕಿಗೆ 19 ವರ್ಷದ ಯುವಕ ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಬಾಲಕಿಗೆ ವೆಲೆನ್ಸಿಯಾದ ಯುವಕ ಲೈಂಗಿಕ ಕಿರುಕುಳ ನೀಡಿದ್ದಾನೆ. ಸಧ್ಯ ಮಂಗಳೂರು ಪೊಲೀಸರು ಯುವಕನನ್ನು ಬಂಧಿಸಿದ್ದಾರೆ.
ವರ್ಷದ ಹಿಂದೆ ಬಾಲಕಿ ಆರೋಪಿ ಮತ್ತು ಗೆಳೆಯರೊಂದಿಗೆ ವಾಮಂಜೂರಿನಲ್ಲಿ ನಡೆದ ಬರ್ತ್ಡೇ ಪಾರ್ಟಿಗೆ ಹೋಗಿದ್ದಳು. ಬಾಲಕಿ ಆರೋಪಿ ಮತ್ತು ಗೆಳೆಯರೊಂದಿಗೆ ಬರ್ತ್ಡೇ ಪಾರ್ಟಿಗೆ ಹೋಗಿರುವ ವಿಡಿಯೋ ಇತ್ತೀಚೆಗೆ ಬಾಲಕಿಯ ತಾಯಿಗೆ ಸಿಕ್ಕಿದೆ.
ಆರೋಪಿಯನ್ನು ವಿಚಾರಿಸಿದಾಗ ಲೈಂಗಿಕ ಕಿರುಕುಳ ನೀಡಿರುವುದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ತಾಯಿ ದೂರು ನೀಡಿದ್ದು ಪೊಕ್ಸೊ ಪ್ರಕರಣ ದಾಖಲಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.