Crime: ಆಹ್ವಾನದ ಮೇರೆಗೆ ಯುವತಿ ಯುವಕನ ಮನೆಗೆ ಹೋಗಿದ್ದೆ ತಪ್ಪಾಯ್ತಾ?!

1 min read
Crime Saaksha Tv

ಆಹ್ವಾನದ ಮೇರೆಗೆ ಯುವತಿ ಯುವಕನ ಮನೆಗೆ ಹೋಗಿದ್ದೆ ತಪ್ಪಾಯ್ತಾ?!

ಆಂದ್ರಪ್ರದೇಶ: ವಿದ್ಯಾರ್ಥಿನಿ ಮೂರ್ಛೆ ಹೋದಾಗ ಆಕೆಯನ್ನು ವಿವಸ್ತ್ರಗೊಳಿಸಿ ಆಕೆಯ ನಗ್ನ ಪೋಟೊ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಘಟನೆ ಪೆದ್ದದೊರ್ನಾಲ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ವಿದ್ಯಾರ್ಥನಿಯೊಬ್ಬಳು ತನಗೆ ಪರಿಚಯವಿದ್ದ ಯುವಕ ಮೀರಾವಲಿ ಮನೆಗೆ ಹೋದಾಗ, ಕೋಲ್ಡ್ರಿಂಕ್ಸ್ ನಲ್ಲಿ ಮತ್ತು ಬರುವ ಪದಾರ್ಥಹಾಕಿ ಆಕೆ ಕೊಟ್ಟಿದ್ದಾನೆ. ಅದನ್ನು ಕುಡಿದ ವಿದ್ಯಾರ್ಥಿನಿ ಕೆಲ ಸಮಯದ ನಂತರ ಮೂರ್ಛೆ ಹೋಗಿದ್ದಾಳೆ. ನಂತರ ಆಕೆಯನ್ನು ವಿವಸ್ತ್ರಗೊಳಿಸಿ ಆಕೆಯ ನಗ್ನ ಚಿತ್ರಗಳನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ.

ನಡೆದಿದ್ದೇನು ?: ಗ್ರಾಮವೊಂದರ ನಿವಾಸಿ ದೂದೆಕುಲ ನಾಗೂರ್​ ಮೀರಾವಲಿ ಎಂಬ ಯುವಕ ಡಿಪ್ಲೋಮಾ ಓದುತ್ತಿದ್ದಾನೆ. ಮತ್ತೊಂದು ಗ್ರಾಮದ ನಿವಾಸಿ ವಿದ್ಯಾರ್ಥಿನಿಯೊಬ್ಬಳು ಸ್ನೇಹಿತಳ ಹುಟ್ಟು ಹಬ್ಬಕ್ಕೆ ಯುವಕನ ಗ್ರಾಮಕ್ಕೆ ಆಗಮಿಸಿದ್ದಾಳೆ. ಈ ಸಮಯದಲ್ಲಿ ಯುವಕನಿಗೆ ಯುವತಿ ಪರಿಚಯವಿದ್ದಿದ್ದರಿಂದ ಯುವತಿಯನ್ನು ತನ್ನ ಮನೆಗೆ ಆಹ್ವಾನಿಸಿದ್ದಾನೆ.

ಯುವಕ ಪರಿಚಯವಿದ್ದಿದ್ದರಿಂದ ಯುವತಿ ಯುವಕನ ಮನೆಗೆ ಹೋಗಿದ್ದಾಳೆ. ಆಗ ಯುವತಿಗೆ ಮೀರಾವಲಿ ಮತ್ತು ಪದಾರ್ಥ ಕಲಿಸಿ ಕೂಲ್ಡ್ರಿಂಕ್ಸ್​ ಕೊಟ್ಟಿದ್ದಾನೆ. ಅದರಂತೆ ಯುವತಿ ಸೇವಿಸಿ ಸ್ವಲ್ಪ ಸಮಯದ ಬಳಿಕ ಮೂರ್ಛೆಗೆ ಹೋಗಿದ್ದಾಳೆ.

ಯುವತಿ ಮೂರ್ಛೆಗೆ ಹೋದ ನಂತರ ಮೀರಾವಲಿ ತನ್ನ ಮೆಕಾನಿಕ್​ ಗೆಳೆಯನಾದ ರಸೂಲ್​ನನ್ನು ಕರೆದಿದ್ದಾನೆ. ಬಳಿಕ ಇಬ್ಬರು ಯುವತಿಯ ನಗ್ನ ಚಿತ್ರಗಳನ್ನು ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ. ಬಳಿಕ ಆ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಮೀರಾವಲಿ ಹರಿಯಬಿಟ್ಟಿದ್ದಾನೆ.

ಈ ಫೋಟೋಗಳು ವೈರಲ್​ ಆಗಿದ್ದು, ಯುವತಿ ಕುಟುಂಬಸ್ಥರ ಗಮನಕ್ಕೆ ಬಂದಿದೆ. ಕೂಡಲೇ ಯುವತಿ ಪೋಷಕರು ಪೆದ್ದದೊರ್ನಾಲ ಪೊಲೀಸ್​ ಠಾಣೆಗೆ ತೆರಳಿ ದೂರು ನೀಡಿದರು. ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿರುವ ಯುವತಿಯ ಫೋಟೋಗಳನ್ನು ತೆಗೆದು ಹಾಕಿದ್ದಾರೆ. ಬಳಿಕ ಆ ಇಬ್ಬರು ಯುವಕರನ್ನು ಬಂಧಿಸಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಈ ಘಟನೆ ಕುರಿತು ಪೆದ್ದದೊರ್ನಾಲ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd