ಮಂಡ್ಯ: ಮುಸ್ಲಿಂರು (Muslims) ಮತ ನೀಡಿಲ್ಲ ಎಂದು ಧಮ್ಕಿ ಹಾಕುವ ನೀವು ಅವರ ಮತಗಳಿಂದಲೇ ಶಾಸಕರಾಗಿದ್ದು, ನಿಮ್ಮ ತಂದೆ ಸಿಎಂ ಆಗಿದ್ದು.ನೀನು ಬಿಜೆಪಿಗೆ ಹೋಗಿ ಮಂತ್ರಿಯಾದ ತಕ್ಷಣ ಯಾರನ್ನೂ ಸಂವಿಧಾನದಿಂದ ಓಡಿಸಲು ಆಗಲ್ಲ. ನಿನ್ನ ಧಮ್ಕಿಗೆ ಮುಸಲ್ಮಾನರು ಹೆದರಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಮತ್ತೊಮ್ಮೆ ಕುಮಾರಸ್ವಾಮಿ(HD Kumaraswamy) ವಿರುದ್ಧ ಗುಡುಗಿದ್ದಾರೆ.
ಮದ್ದೂರಿನಲ್ಲಿ ನಡೆಯುತ್ತಿರುವ ಎರಡು ದಿನಗಳ ಜನಾಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿರುದ್ಧ ವಾಗ್ದಾಳಿ ನಡೆಸಿದರು. 10 ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ (Congress Government) ಬೀಳಿಸುವುದಾಗಿ ಕುಮಾರಸ್ವಾಮಿ ಹೇಳುತ್ತಾರೆ. ಬ್ರಿಟಿಷರ ಕೈಯಲ್ಲೇ ಕಾಂಗ್ರೆಸ್ ಮುಗಿಸಲು ಆಗಲಿಲ್ಲ. ಕುಮಾರಸ್ವಾಮಿ ಕೈಯಲ್ಲಿ ಆಗುತ್ತಾ? ನಮ್ಮದು 10 ತಿಂಗಳ ಸರ್ಕಾರ ಅಲ್ಲ ಕುಮಾರಣ್ಣ, 10 ವರ್ಷದ ಸರ್ಕಾರ ಎಂದು ವ್ಯಂಗ್ಯವಾಡಿದ್ದಾರೆ.
ನೀನು ಬಿಜೆಪಿಗೆ ಹೋಗಿ ಮಂತ್ರಿಯಾದ ತಕ್ಷಣ ಯಾರನ್ನು ಸಂವಿಧಾನದಿಂದ ಓಡಿಸಲು ಆಗಲ್ಲ. ನಿನ್ನ ಧಮ್ಕಿಗೆ ಮುಸಲ್ಮಾನರು ಹೆದರಲ್ಲ. ಪೆನ್‌ಡ್ರೈವ್ ವಿಚಾರದಲ್ಲಿ ನಾವ್ಯಾರು ಬಂದಿರಲಿಲ್ಲ. ಮಹಾನಾಯಕ ಪೆನ್ ಡ್ರೈವ್ ಹಂಚಿದ್ದು ಅಂತ ಆರೋಪಿಸಿದ್ದಿ. ನೀನು ಸಿಎಂ ಆಗಿದ್ದಾಗ ಡಿಕೆಶಿ ಅಪ್ಪ ಅಮ್ಮನಿಗೆ ಹುಟ್ಟಿಲ್ಲ ಎಂದಾಗಲೇ ಹೆದರಿಲ್ಲ. ಸಾತನೂರಿಗೆ ಬಂದು ಕ್ಷಮೆ ಕೇಳಿದ್ದೆ ನೀನು. ದೊಡ್ಡ ಆಲದಹಳ್ಳಿ ಕೆಂಪೇಗೌಡನ ಮಗ ಯಾರಿಗೂ ಹೆದರುವ ಮಗ ಅಲ್ಲ ಎಂದು ಗುಡುಗಿದ್ದಾರೆ.
ಯಡಿಯೂರಪ್ಪರನ್ನು ಜೈಲಿಗೆ ಹಾಕಿಸಿದ್ದು ಯಾರು? ಧರ್ಮಸ್ಥಳ ಮಂಜುನಾಥ ಸನ್ನಿಧಿಯಲ್ಲಿ ಯಾಕೆ ಆಣೆ ಪ್ರಮಾಣ ಮಾಡಲು ಹೋಗಿದ್ರಿ? ಎಲ್ಲವೂ ರಾಜ್ಯದ ಜನರಿಗೆ ಗೊತ್ತಿದೆ. ತಿಮ್ಮಪ್ಪ ಕಾಸು ಬಿಡಲ್ಲ, ಮಂಜುನಾಥ ಮಾತು ಬಿಡಲ್ಲ ಎಂದು ಕುಮಾರಸ್ವಾಮಿ ವಿರುದ್ಧ ಗುಡುಗಿದ್ದಾರೆ.