Yuva : ಯುವರಾಜನಿಗೆ ಅರಸಿಯಾಗಿ ಸಪ್ತಮಿ ಗೌಡ ಆಯ್ಕೆ…
ಡಾ.ರಾಜ್ ಕುಮಾರ್ ಕುಟುಂಬದ ಮತ್ತೊಂದು ಕುಡಿ ಕನ್ನಡ ಚಲನ ಚಿತ್ರಕ್ಕೆ ಭರ್ಜರಿಯಾಗಿಯೇ ಎಂಟ್ರಿ ಕೊಟ್ಟಿರುವುದು ನಿಮಗೆ ಗೊತ್ತೆ ಇದೆ. ರಾಜ್ ಕುಮಾರ್ ಅವರ ಎರಡನೇ ಪುತ್ರ ಯುವ ರಾಜ್ಕುಮಾರ್ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ಮೂಲಕ ಬೆಳ್ಳಿ ತೆರೆಗೆ ಪದಾರ್ಪಣೆ ಮಾಡುತ್ತಿದ್ದಾರೆ.
ಈ ನಡುವೆ ಹೊಂಬಾಳೆ ಫಿಲಂಸ್ ಚಿತ್ರದ ಕುರಿತು ಮತ್ತೊಂದು ಬಿಗ್ ಅಪ್ಡೇಟ್ ಕೊಟ್ಟಿದೆ. ಯುವ ಗೆ ನಾಯಕಿ ಯಾರಾಗುತ್ತಾರೆ ಎಂಬ ಪ್ರಶ್ನೆಗೆ ಹಲವು ನಾಯಕಿಯರ ಹೆಸರುಗಳು ಕೇಳಿಬಂದಿದ್ದವು. ಇದೀಗ ಹೊಂಬಾಳೆ ಫಿಲಂಸ್ ಚಿತ್ರದ ನಾಯಕಿಯ ಹೆಸರನ್ನ ರಿವಿಲ್ ಮಾಡಿದೆ. ಕಾಂತಾರ ಚಿತ್ರದ ಮೂಲಕ ದೇಶಾದ್ಯಂತ ಗುರುತಿಸಿಕೊಂಡಿರುವ ನಟಿ ಸಪ್ತಮಿ ಗೌಡ ಯುವರಾಜ್ ಕುಮಾರ್ ಜೊತೆ ಸ್ಕ್ರೀನ್ ಶೇರ್ ಮಾಡಲಿದ್ದಾರೆ.
ಇನ್ನೂ, ಯುವರಾಜ್ ಕುಮಾರ್ ಅಭಿನಯದ ಮೊದಲ ಚಿತ್ರಕ್ಕೆ ಯುವ ಎಂದೇ ಹೆಸರಿಡಲಾಗಿದ್ದು,ಅವರದೇ ಹೆಸರನ್ನ ಸಿನಿಮಾ ಟೈಟಲ್ ಮಾಡಲಾಗಿದೆ. ಪುನೀತ್ ರಾಜ್ ಕುಮಾರ್ ಅವರ ರಾಜಕುಮಾರ, ಯುವರತ್ನ ನಿರ್ದೇಶಿಸಿದ್ದ ಸಂತೋಷ್ ಆನಂದ್ ರಾಮ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಚಿತ್ರದ ಟೈಟಲ್ ಟೀಸರ್ ಬಿಡುಗಡೆಯಾದ ಕೆಲವೆ ಗಂಟೆಗಳಲ್ಲಿ ಲಕ್ಷಗಟ್ಟಲೇ ವೀಕ್ಷಣೆ ಪಡೆದು ದಾಖಲೆ ಮಾಡಿದೆ. ಟೀಸರ್ ಬಿಡುಗಡೆ ಜೊತೆಗೆ ಚಿತ್ರದ ರಿಲೀಸ್ ಡೇಟ್ ಸಹ ಬಿಡುಗಡೆ ಮಾಡಲಾಗಿದೆ. ಈ ವರ್ಷದ ಡಿಸೆಂಬರ್ 22 ಕ್ಕೆ ಚಿತ್ರ ಬಿಡುಗಡೆಯಾಗಲಿದೆ.
Yuva: Saptami Gowda chosen as lead role for yuva movie