Yuva : ಯುವ ಪರ್ವ ಆರಂಭ – ರಾಜ್ ಕುಟುಂಬದ ಮತ್ತೊಂದು ಕುಡಿ ಚಿತ್ರರಂಗಕ್ಕೆ…
ಡಾ.ರಾಜ್ ಕುಮಾರ್ ಕುಟುಂಬದ ಮತ್ತೊಂದು ಕುಡಿ ಕನ್ನಡ ಚಲನ ಚಿತ್ರಕ್ಕೆ ಭರ್ಜರಿಯಾಗಿಯೇ ಎಂಟ್ರಿ ಕೊಟ್ಟಿದೆ. ರಾಜ್ ಕುಮಾರ್ ಅವರ ಎರಡನೇ ಪುತ್ರ ಯುವ ರಾಜ್ಕುಮಾರ್ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ಮೂಲಕ ಬೆಳ್ಳಿ ತೆರೆಗೆ ಪದಾರ್ಪಣೆ ಮಾಡುತ್ತಿದ್ದಾರೆ.
ಪುನೀತ್ ರಾಜ್ ಕುಮಾರ್ ಅವರ ಉತ್ತರಾಧಿಕಾರಿ ಎಂಬಂತೆ ಅವರ ಅಭಿಮಾನಿಗಳು ಬಿಂಬಿಸುತ್ತಿದ್ದಾರೆ. ಯುವ ರಾಜ್ ಕುಮಾರ್ ನಟಿಸುತ್ತಿರುವ ಚಿತ್ರದ ಶೀರ್ಷಿಕೆ ಬಿಡುಗಡೆ ಕಾರ್ಯಕ್ರಮ ನಿನ್ನೆ ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆಯಿತು.
ಚಿತ್ರಕ್ಕೆ ಯುವ ಎಂದು ಹೆಸರಿಡಲಾಗಿದ್ದು ಅವರದೇ ಹೆಸರನ್ನ ಸಿನಿಮಾ ಟೈಟಲ್ ಮಾಡಲಾಗಿದೆ. ಪುನೀತ್ ರಾಜ್ ಕುಮಾರ್ ಅವರ ರಾಜಕುಮಾರ, ಯುವರತ್ನ ನಿರ್ದೇಶಿಸಿದ್ದ ಸಂತೋಷ್ ಆನಂದ್ ರಾಮ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಚಿತ್ರದ ಟೈಟಲ್ ಅನ್ನ ಟೀಸರ್ ಮೂಲಕ ರಿಲೀಸ್ ಮಾಡಲಾಯಿತು. ಬಿಡುಗಡೆಯಾದ ಕೆಲವೆ ಗಂಟೆಗಳಲ್ಲಿ ಲಕ್ಷಗಟ್ಟಲೇ ವೀಕ್ಷಣೆ ಪಡೆದು ದಾಖಲೆ ಮಾಡಿದೆ. ಟೀಸರ್ ಬಿಡುಗಡೆ ಜೊತೆಗೆ ಚಿತ್ರದ ರಿಲೀಸ್ ಡೇಟ್ ಸಹ ಬಿಡುಗಡೆ ಮಾಡಲಾಗಿದೆ. ಈ ವರ್ಷದ ಡಿಸೆಂಬರ್ 22 ಕ್ಕೆ ಚಿತ್ರ ಬಿಡುಗಡೆಯಾಗಲಿದೆ.
ನಿನ್ನೆ ಚಿತ್ರದ ಮುಹೂರ್ತ ಕಾರ್ಯಕ್ರಮ ಹೋಟೆಲ್ ಒಂದರಲ್ಲಿ ಅದ್ದೂರಿಯಾಗಿ ನೆರವೆರಿಸಲಾಯಿತು. ದೊಡ್ಮನೆ ಕುಟುಂಬ ಸೇರಿದಂತೆ ಜಗ್ಗೇಶ್, ರಿಷಬ್ ಶೆಟ್ಟಿ ಮೊದಲಾದ ಸ್ಟಾರ್ಸ್ಗಳು ಭಾಗಿ ಆಗಿದ್ದರು.
Yuva : Start of Yuva Parva – Another scion of the Raj family enters the film industry…