‘ಯುವರತ್ನ’ ಟ್ರೈಲರ್ ನಲ್ಲಿ ಪಂಚ್ ಡೈಲಾಗ್ ಗಳ ಸುರಿಮಳೆ..!
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಬಹುನಿರೀಕ್ಷೆಯ ಸಿನಿಮಾ ಯುವರತ್ನದ ಟೀಸರ್ ಇಂದು ಲಾಂಚ್ ಮಾಡಲಾಗಿದೆ. ಯುವರತ್ನ ಟೀಸರ್ ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಆಸ್ ಯೂಸುಯಲ್ ಪುನೀತ್ ರಾಜ್ ಕುಮಾರ್ ಸಖತ್ ಪವರ್ ಫುಲ್ ಲುಕ್ ನಲ್ಲಿಯೇ ದರ್ಶನ ನೀಡಿದ್ದು, ಟೀಸರ್ ಗೆ ಲಾಂಚ್ ಅದ್ಧೂರಿಯಾಗಿ ಮಾಡಲಾಗಿದೆ.
ತೆಲುಗಿನಲ್ಲೂ ಟ್ರೈಲರ್ ಲಾಂಚ್ ಆಗಿದ್ದು, ರಿಲೀಸ್ ಆದ ಕೆಲವೇ ನಿಮಿಷಗಳಲ್ಲಿ ಸಾವಿರಾರು ಲೈಕ್ಸ್ , ವೀವ್ಸ್ ಹಾಗೂ ಕಮೆಂಟ್ಸ್ ಪಡೆದುಕೊಂಡಿದೆ. ಬ್ಯಾಕ್ ಗ್ರೌಂಡ್ ಮ್ಯೂಸಿಕ್ , ಪವರ್ ಸ್ಟಾರ್ ಡೈಲಾಗ್ಸ್, ಆಕ್ಷನ್ ಸೀನ್ಸ್ ಗೆ ಫ್ಯಾನ್ಸ್ ಫ್ಲಾಟ್ ಆಗಿದ್ಧಾರೆ.
ಅಂದ್ಹಾಗೆ ಯುವರತ್ನ ಸಿನಿಮಾ ಏಪ್ರಿಲ್ 1 ರಂದು ಥಿಯೇಟರ್ ಗಳಲ್ಲಿ ಅಬ್ಬರಿಸಲಿದೆ. ಈಗಾಗಲೇ ಸಿನಿಮಾ ತಂಡ ಪ್ರಚಾರ ಕಾರ್ಯವನ್ನೂ ಕೈಗೊಂಡಿದೆ. ಯುವರತ್ನ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದು, ಈ ಟೀಸರ್ ಎಕ್ಸ್ ಪೆಕ್ಟೇಶನ್ಸ್ ಗಳನ್ನ ಮತ್ತಷ್ಟು ಹೆಚ್ಚಿಸಿದೆ.
ಇನ್ನೂ ಇತ್ತೀಚೆಗೆ ಸಿನಿಮಾದ ಮತ್ತೊಂದು ಲಿರಿಕಲ್ ಹಾಡು ರಿಲೀಸ್ ಆಗಿ ಯೂಟ್ಯೂಬ್ ನಲ್ಲಿ ಧೂಳೆಬ್ಬಿಸಿತ್ತು. ”ಫೀಲ್ ದಿ ಪವರ್” ಲಿರಿಕಲ್ ಸಾಂಗ್ ರಿಲೀಸ್ ಆಗಿದ್ದು, ಅಭಿಮಾನಿಗಳು ಫುಲ್ ಥ್ರಿಲ್ ಆಗಿದ್ದಾರೆ. ಅಪ್ಪು ಪವರ್ ಫುಲ್, ಲುಕ್ , ರಿಚ್ ಮ್ಯೂಸಿಕ್ ಹಾಗೂ ಬಿಜಿಮ್ ಗೆ ನೆಟ್ಟಿಗರು ಫಿದಾ ಆಗಿದ್ದರು. ಇದೀಗ ಟೀಸರ್ ಕೂಡ ಥ್ರಿಲ್ಲಿಂಗ್ ಆಗಿದ್ದು, ಸಿನಿಮಾ ತೆರೆಕಾಣಲು ಅಭಿಮಾನಿಗಳು ತುದಿಗಾಲಲ್ಲಿ ಕಾದು ನಿಂತಿದ್ದಾರೆ. ಸಿನಿಮಾದಲ್ಲಿ ಅಪ್ಪುಗೆ ಸಂತೋಶ್ ಆನಂದ್ ರಾಮ್ ಆಕ್ಷನ್ ಕಟ್ ಹೇಳಿದ್ದು, ವಿಜಯ್ ಕಿರಂದೂರ್ ನಿರ್ಮಾಣ ಮಾಡಿದ್ದಾರೆ. ಹೊಂಬಾಳೆ ಫಿಲಂಸ್ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗಿದೆ.