Yazvendra Chahal | ಐಪಿಎಲ್ ನಲ್ಲಿ 200 ವಿಕೆಟ್ ಪಡೆಯೋದು ನನ್ನ ಗುರಿ
ಐಪಿಎಲ್ ನಲ್ಲಿ 200 ವಿಕೆಟ್ ಪಡೆಯುವುದೇ ನನ್ನ ಗುರಿ ಎಂದು ಟೀಂ ಇಂಡಿಯಾದ ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಾಲ್ ತಿಳಿಸಿದ್ದಾರೆ.
2021 ರ ಟಿ 20 ವಿಶ್ವಕಪ್ ಗೆ ಭಾರತದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾದ ಬಗ್ಗೆ ಇದೇ ಮೊದಲ ಬಾರಿಗೆ ಚಹಾಲ್ ಮನಬಿಚ್ಚಿ ಮಾತನಾಡಿದ್ದಾರೆ.
”ಟಿ20 ವಿಶ್ವಕಪ್ಗೆ ಟೀಂ ಇಂಡಿಯಾ ತಂಡವನ್ನು ಪ್ರಕಟಿಸುವ ದಿನ ಅದು. ಬೆಳಿಗ್ಗೆ 9.30ಕ್ಕೆ ತಂಡವನ್ನು ಪ್ರಕಟಿಸುತ್ತೇವೆ ಎಂದಿದ್ದರು. ಆದರೆ ಸ್ವಲ್ಪ ತಡವಾಗಿತ್ತು.
ಅಲ್ಲಿಯವರೆಗೆ ನನ್ನ ಹೆಸರು ತಂಡದಲ್ಲಿ ಇರುತ್ತದೆ ಎಂದು ಚೆನ್ನಾಗಿ ನಂಬಿದ್ದೆ. ಆದರೆ ಪಟ್ಟಿ ಬರುವಷ್ಟರಲ್ಲಿ ನನಗೆ ಆಘಾತವಾಗಿತ್ತು.

ಇದರಿಂದ ಕೆಲವು ನಿಮಿಷಗಳ ಕಾಲ ನಾನು ಯಾರೊಂದಿಗೂ ಮಾತನಾಡಲಿಲ್ಲ. ಸ್ವಲ್ಪ ಸಮಯದ ನಂತರ ನನ್ನ ಹೆಂಡತಿ ವಿಷಯ ಪ್ರಸ್ತಾಪಿಸಿದರು. ನಾನು ಅವಳಿಗೆ ಪಟ್ಟಿಯ ಸ್ಕ್ರೀನ್ಶಾಟ್ ಕಳುಹಿಸಿದೆ.
ಆ ರಾತ್ರಿ ಏನು ತಿನ್ನದೇ ಯೋಚಿಸುತ್ತಾ ಕುಳಿತೆ. ಹಿಂದಿನ ಐದು ವರ್ಷಗಳಲ್ಲಿ ನಾನು ಒಮ್ಮೆಯೂ ಟೀಮ್ ಇಂಡಿಯಾದಲ್ಲಿ ಸ್ಥಾನ ಕಳೆದುಕೊಂಡಿಲ್ಲ.. ಆದ್ರೆ ಯಾಕೆ ಹೀಗಾಗಿತು ಅಂತಾ ಯೋಚಿಸುತ್ತಾ ಕುಳಿತಿದ್ದೆ ಎಂದು ಚಹಾಲ್ ಹೇಳಿದ್ದಾರೆ.
ಇದೇ ವೇಳೆ ಐಪಿಎಲ್ ಮೆಗಾ ಹರಾಜುಗಾಗಿ ಎದುರು ನೋಡುತ್ತಿದ್ದೇನೆ ಎಂದಿರುವ ಯುಜಿ, ಐಪಿಎಲ್ನಲ್ಲಿ 200 ವಿಕೆಟ್ ಪಡೆದ ಮೊದಲ ಬೌಲರ್ ಆಗಿ ನಿಲ್ಲಬೇಕು ಅನ್ನೋದೇ ನನ್ನ ಗುರಿ ಎಂದಿದ್ದಾರೆ.
ಅಲ್ಲದೇ ಟೀಂ ಇಂಡಿಯಾ ಪರ ಇನ್ನೂ 5-6 ವರ್ಷಗಳ ಕಾಲ ಆಡುವ ಆಸೆ ಇದೆ ಎಂದಿದ್ದಾರೆ. ಐಪಿಎಲ್ನಲ್ಲಿ ಚಹಲ್ 114 ಪಂದ್ಯಗಳಲ್ಲಿ 139 ವಿಕೆಟ್ಗಳನ್ನು ಕಬಳಿಸಿದ್ದಾರೆ.