ADVERTISEMENT
Monday, February 2, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಸಿಎಂ ಯಡಿಯೂರಪ್ಪ ಆಧುನಿಕ ಕಾಲದ ಬಸವಣ್ಣ; ಬಿಎಸ್‍ವೈ ಹಾಡಿಹೊಗಳಿದ ರೇಣುಕಾಚಾರ್ಯ..!

Kariyappa N by Kariyappa N
November 24, 2020
in Newsbeat, Politics, Samagra karnataka, ರಾಜ್ಯ
bsy praises
Share on FacebookShare on TwitterShare on WhatsappShare on Telegram

ದಾವಣಗೆರೆ: ಸಚಿವ ಸ್ಥಾನಕ್ಕೆ ತೀವ್ರ ಲಾಬಿ ನಡೆಸುತ್ತಿರುವ ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಆಧುನಿಕ ಕಾಲದ ಬಸವಣ್ಣ ಎಂದು ಹಾಡಿ ಹೊಗಳಿದ್ದಾರೆ.
ದಾವಣಗೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಯಡಿಯೂರಪ್ಪ ಜನರ ಧ್ವನಿಯಾಗಿ ಎಲ್ಲ ಸಮುದಾಯದವರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಸಾಮಾಜಿಕ ನ್ಯಾಯ ಕೊಡಿಸುತ್ತಿರುವ ಯಾರಾದರೂ ಒಬ್ಬ ನಾಯಕರಿದ್ದಾರೆ ಎಂದರೆ ಅವರು ಯಡಿಯೂರಪ್ಪ ಮಾತ್ರ ಎಂದರು.


ಅಂದು 12ನೇ ಶತಮಾನದಲ್ಲಿ ಬಸಣ್ಣನವರು ಸಾಮಾಜಿಕ ನ್ಯಾಯ ಕೊಡಿಸಿದ್ದರು. ಇಂದು 21ನೇ ಶತಮಾನದಲ್ಲಿ ಯಡಿಯೂರಪ್ಪ ಅವರು ಎಲ್ಲಾ ಸಮುದಾಯದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಅವರು ಆಧುನಿಕ ಕಾಲದ ಬಸವಣ್ಣ ಬಣ್ಣಿಸಿದ್ದಾರೆ.

Related posts

Vision of Vedanta in the eyes of science: 'Dakshinasya Darshini', which won the public's attention, has a big screen

ವಿಜ್ಞಾನದ ಕಣ್ಣಲ್ಲಿ ವೇದಾಂತದ ದರ್ಶನ: ಜನಮನ ಗೆದ್ದ ‘ದಕ್ಷಿಣಾಸ್ಯ ದರ್ಶಿನಿ’ಗೆ ಅದ್ಧೂರಿ ತೆರೆ

February 2, 2026
ಬುರ್ಖಾ ಧರಿಸಿದವಳು ಲಕ್ಷ್ಮಮ್ಮ ಆಗಿದ್ದು ಹೇಗೆ? ಉಚಿತ ಪ್ರಯಾಣದ ಆಸೆಗೆ ಬೇರೊಬ್ಬರ ಆಧಾರ್ ಬಳಸಿದ ಮಹಿಳೆ ಲಾಕ್: ಶಕ್ತಿ ಯೋಜನೆ ದುರ್ಬಳಕೆಯ ಅಸಲಿ ಬಣ್ಣ ಬಯಲು

ಬುರ್ಖಾ ಧರಿಸಿದವಳು ಲಕ್ಷ್ಮಮ್ಮ ಆಗಿದ್ದು ಹೇಗೆ? ಉಚಿತ ಪ್ರಯಾಣದ ಆಸೆಗೆ ಬೇರೊಬ್ಬರ ಆಧಾರ್ ಬಳಸಿದ ಮಹಿಳೆ ಲಾಕ್: ಶಕ್ತಿ ಯೋಜನೆ ದುರ್ಬಳಕೆಯ ಅಸಲಿ ಬಣ್ಣ ಬಯಲು

February 2, 2026

ಸಚಿವ ಸ್ಥಾನಕ್ಕಾಗಿ ವರಿಷ್ಠ ಭೇಟಿ
ದಾವಣಗೆರೆ ಜಿಲ್ಲೆ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿದೆ. ಪ್ರಾದೇಶಿಕ ಅಸಮತೋಲನ ಜತೆಗೆ ದಾವಣಗೆರೆ ಜಿಲ್ಲೆ ಸಚಿವ ಸ್ಥಾನದಿಂದಲೂ ವಂಚಿತವಾಗಿದೆ. ಹೀಗಾಗಿ ದಾವಣಗೆರೆ ಜಿಲ್ಲೆಯ ಸಚಿವ ಸ್ಥಾನ ನೀಡಬೇಕೆಂದು ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ಮುಖ್ಯಮಂತ್ರಿ ಯಡಿಯೂರಪ್ಪ, ದೆಹಲಿಯಲ್ಲಿ ಕೇಂದ್ರ ಸಚಿವರು, ಬಿ.ಎಲ್ ಸಂತೋಷ್ ಸೇರಿದಂತೆ ಪಕ್ಷದ ವರಿಷ್ಠರು ಹಾಗೂ ಸಂಘ ಪರಿವಾರದ ಪ್ರಮುಖರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇನೆ ಎಂದು ರೇಣುಕಾಚಾರ್ಯ ಸ್ಪಷ್ಟಪಡಿಸಿದ್ದಾರೆ.

ಯತ್ನಾಳ್ ವಿರುದ್ಧ ಅಸಮಾಧಾನ
ಮಾಜಿ ಕೇಂದ್ರ ಸಚಿವರು ಹಾಗೂ ಶಾಸಕರೂ ಆಗಿರುವ ಬಸನಗೌಡ ಪಾಟೀಲ್ ಯತ್ನಾಳ್, ಸಿಎಂ ಯಡಿಯೂರಪ್ಪ ಅವರ ಬಗ್ಗೆ ಹಾದಿ ಬೀದಿಯಲ್ಲಿ ಏಕ ವಚನದಲ್ಲಿ ಮಾತನಾಡುವುದು ಎಷ್ಟು ಸರಿ. ಇದರಿಂದ ಪಕ್ಷದ ವರ್ಚಸ್ಸು, ಮುಖ್ಯಮಂಂತ್ರಿಗಳು ಹಾಗೂ ಅವರ ವರ್ಚಸ್ಸು ಕಡಿಮೆ ಆಗುತ್ತದೆ ಎಂದು ರೇಣುಕಾಚಾರ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಬಸ್‍ನ ಸೀಟಿನಲ್ಲಿ ಟವಲ್ ಹಾಕುವುದು ಸಾಮಾನ್ಯ, ಸಿಎಂ ಸ್ಥಾನಕ್ಕೆ ಟವೆಲ್ ಹಾಕಲಾಗುವುದೇ ಎಂದ ರೇಣುಕಾಚಾರ್ಯ, ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಯಾರು ಅಸೆ ಇಟ್ಟುಕೊಂಡಿದ್ದಾರೆ ಅವರಿಗೆ ನಿರಾಸೆ ಆಗುತ್ತದೆ. ನಾಯಕತ್ವ ಬದಲಾವಣೆ ಮಾಡುವುದೇ ಆದರೆ, ಪ್ರಧಾನಿ ಮೋದಿ, ರಾಷ್ಟ್ರೀಯ ಅಧ್ಯಕ್ಷರು ಕುಳಿತು ತೀರ್ಮಾನ ಮಾಡುತ್ತಾರೆ ಎಂದರು.

ಕನ್ನಡ ಸಂಘಟನೆಗಳ ವಿರುದ್ಧ ಕಿಡಿ
ಮರಾಠಿ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿರುವ ಸರ್ಕಾರದ ವಿರುದ್ಧ ಕರ್ನಾಟಕ ಬಂದ್‍ಗೆ ಕರೆ ನೀಡಿರುವ ಕನ್ನಡ ಸಂಘಟನೆಗಳ ವಿರುದ್ಧ ಕಿಡಿಕಾರಿದ ರೇಣುಕಾಚಾರ್ಯ, ಬೆಳಗಾವಿಯ ಗಡಿಭಾಗದಲ್ಲಿ ಗಡಿತಂಟೆ ಮಾಡುವುದನ್ನು ಖಂಡಿಸುತ್ತೇವೆ. ಆದರೆ, ನಾವು ಮರಾಠಿ ಭಾಷೆಗೆ ಆದ್ಯತೆ ಕೊಡುತ್ತಿಲ್ಲ, ಕನ್ನಡ ಭಾಷೆಯನ್ನು ಪ್ರೀತಿಸುವ, ಗೌರವಿಸುವ ಮರಾಠಿಗರಿಗೆ ಆದ್ಯತೆ ಕೊಡುತ್ತಿದ್ದೇವೆ. ವಿಕೃತಿ ಮನಸ್ಸಿನವರು ಯತ್ನಾಳ್ ಫೋಟೋ ಗೆ ಚಪ್ಪಲಿ ಹೊಡೆದದ್ದು ಯಾವ ಸಂಸ್ಕøತಿ. ನಾನು ಬೂಟಾಟಿಕೆ, ಡೊಂಬರಾಟ ಮಾಡಲ್ಲ, ಪ್ರಚಾರಕ್ಕಾಗಿ ಹೋರಾಟ ಮಾಡಲ್ಲ ಎಂದು ರೇಣುಕಾಚಾರ್ಯ ಹೇಳಿದ್ದಾರೆ.

 

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: cabinet lobbyChief Minister BS Yeddyurappamodern BasavannaMP Renukacharya
ShareTweetSendShare
Join us on:

Related Posts

Vision of Vedanta in the eyes of science: 'Dakshinasya Darshini', which won the public's attention, has a big screen

ವಿಜ್ಞಾನದ ಕಣ್ಣಲ್ಲಿ ವೇದಾಂತದ ದರ್ಶನ: ಜನಮನ ಗೆದ್ದ ‘ದಕ್ಷಿಣಾಸ್ಯ ದರ್ಶಿನಿ’ಗೆ ಅದ್ಧೂರಿ ತೆರೆ

by admin
February 2, 2026
0

- ​ವಿಜ್ಞಾನ-ವೇದಾಂತದ ಸಂಗಮಕ್ಕೆ ಸಾಕ್ಷಿಯಾದ ಅರಮನೆ ಮೈದಾನ - ​ದಕ್ಷಿಣಾಸ್ಯ ದರ್ಶಿನಿ: ಕಣ್ಮನ ಸೆಳೆದ ದ್ವಾರಕಾ ದರ್ಶನ - ​ಪ್ರಾಚೀನ ಜ್ಞಾನಕ್ಕೆ ಆಧುನಿಕ ತಂತ್ರಜ್ಞಾನದ ಸ್ಪರ್ಶ -...

ಬುರ್ಖಾ ಧರಿಸಿದವಳು ಲಕ್ಷ್ಮಮ್ಮ ಆಗಿದ್ದು ಹೇಗೆ? ಉಚಿತ ಪ್ರಯಾಣದ ಆಸೆಗೆ ಬೇರೊಬ್ಬರ ಆಧಾರ್ ಬಳಸಿದ ಮಹಿಳೆ ಲಾಕ್: ಶಕ್ತಿ ಯೋಜನೆ ದುರ್ಬಳಕೆಯ ಅಸಲಿ ಬಣ್ಣ ಬಯಲು

ಬುರ್ಖಾ ಧರಿಸಿದವಳು ಲಕ್ಷ್ಮಮ್ಮ ಆಗಿದ್ದು ಹೇಗೆ? ಉಚಿತ ಪ್ರಯಾಣದ ಆಸೆಗೆ ಬೇರೊಬ್ಬರ ಆಧಾರ್ ಬಳಸಿದ ಮಹಿಳೆ ಲಾಕ್: ಶಕ್ತಿ ಯೋಜನೆ ದುರ್ಬಳಕೆಯ ಅಸಲಿ ಬಣ್ಣ ಬಯಲು

by Shwetha
February 2, 2026
0

ಬೆಂಗಳೂರು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ರಾಜ್ಯಾದ್ಯಂತ ಉಚಿತ ಬಸ್ ಪ್ರಯಾಣದ ಸೌಲಭ್ಯ ಕಲ್ಪಿಸಲಾಗಿದೆ. ಆದರೆ ಈ ಜನಪ್ರಿಯ ಯೋಜನೆಯನ್ನು...

ನರೇಗಾ ವಿವಾದಕ್ಕೆ ಮೋದಿ ಸರ್ಕಾರ ಜಾಣ್ಮೆಯ ತಿರುಗೇಟು ಬಜೆಟ್ ನಲ್ಲಿ ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ ಯೋಜನೆ ಘೋಷಣೆ

ನರೇಗಾ ವಿವಾದಕ್ಕೆ ಮೋದಿ ಸರ್ಕಾರ ಜಾಣ್ಮೆಯ ತಿರುಗೇಟು ಬಜೆಟ್ ನಲ್ಲಿ ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ ಯೋಜನೆ ಘೋಷಣೆ

by Shwetha
February 2, 2026
0

ನವದೆಹಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಥವಾ ನರೇಗಾ ಕಾಯ್ದೆಗೆ ತಿದ್ದುಪಡಿ ತಂದು ಅದರಿಂದ ಮಹಾತ್ಮ ಗಾಂಧಿ ಹೆಸರನ್ನು ಕೈಬಿಟ್ಟ ಕೇಂದ್ರ ಸರ್ಕಾರದ...

ಭಾರತದ ಅತ್ಯಂತ ಬಡ ರಾಜ್ಯಗಳ ಪಟ್ಟಿ ಪ್ರಕಟ: ಅಗ್ರಸ್ಥಾನದಲ್ಲಿ ಬಿಹಾರ, ಕೊನೆಯಲ್ಲಿ ಯಾರು? ಕರ್ನಾಟಕದ ಸ್ಥಾನವೆಷ್ಟು?

ಭಾರತದ ಅತ್ಯಂತ ಬಡ ರಾಜ್ಯಗಳ ಪಟ್ಟಿ ಪ್ರಕಟ: ಅಗ್ರಸ್ಥಾನದಲ್ಲಿ ಬಿಹಾರ, ಕೊನೆಯಲ್ಲಿ ಯಾರು? ಕರ್ನಾಟಕದ ಸ್ಥಾನವೆಷ್ಟು?

by Shwetha
February 2, 2026
0

ನವದೆಹಲಿ: ಭಾರತದ ಆರ್ಥಿಕ ಚಿತ್ರಣವನ್ನು ಪ್ರತಿಬಿಂಬಿಸುವ ಮಹತ್ವದ ವರದಿಯೊಂದನ್ನು ನೀತಿ ಆಯೋಗ (Niti Aayog) ಬಹಿರಂಗಪಡಿಸಿದೆ. ದೇಶದ ಆರ್ಥಿಕ ಸ್ಥಿತಿ, ಜನರ ಜೀವನಮಟ್ಟ, ಶಿಕ್ಷಣ, ಆರೋಗ್ಯ ಮತ್ತು...

ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕಿತ್ತು : ಸ್ವಪಕ್ಷದ ವಿರುದ್ಧವೇ ಕಾಂಗ್ರೆಸ್ ಹಿರಿಯ ಮುಖಂಡ ಕೆ.ಮುಹಮ್ಮದ್  ವಾಗ್ದಾಳಿ

ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕಿತ್ತು : ಸ್ವಪಕ್ಷದ ವಿರುದ್ಧವೇ ಕಾಂಗ್ರೆಸ್ ಹಿರಿಯ ಮುಖಂಡ ಕೆ.ಮುಹಮ್ಮದ್ ವಾಗ್ದಾಳಿ

by Shwetha
February 2, 2026
0

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮುಸ್ಲಿಮ್ ಸಮುದಾಯದ ಮತಗಳನ್ನು ಪಡೆದು ಗೆದ್ದ ಶಾಸಕರು ಇದೀಗ ಅದೇ ಸಮುದಾಯವನ್ನು ಕಡೆಗಣಿಸುತ್ತಿದ್ದಾರೆ. ಕೋಮುವಾದಿ ವ್ಯಕ್ತಿಯೊಬ್ಬನನ್ನು ವೇದಿಕೆಯಲ್ಲಿ ಕೊಂಡಾಡಿದ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram