ಬೆಳಗಾವಿ : ಆರ್. ಆರ್ ನಗರ ಉಪಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಗಾಗಿ ಭಾರಿ ಪೈಪೋಟಿ ಏರ್ಪಟ್ಟಿದೆ.
ಸುಲಭವಾಗಿ ಟಿಕೆಟ್ ಸಿಗುತ್ತೆ ಎಂಬ ವಿಶ್ವಾಸದಲ್ಲಿದ್ದ ಮುನಿರತ್ನಗೆ ಈ ಹೈ ಟೆನ್ಷನ್ ಶುರುವಾಗಿದೆ.
ಈ ಮಧ್ಯೆ ಮುನಿರತ್ನಗೆ ಬಿಜೆಪಿ ಟಿಕೆಟ್ ಸಿಗದಿದ್ದರೇ ಕಾಂಗ್ರೆಸ್ ಗೆ ಸೇರಿಸಿಕೊಳ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರತಿಕ್ರಿಯಿಸಿ, ಪಾರ್ಟಿ ಫಸ್ಟ್, ವ್ಯಕ್ತಿ ನೆಕ್ಸ್ಟ್ ಎಂದಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾರ್ಟಿಗೆ ಬರುತ್ತೇನೆ ಎಂದು ಯಾರ ಬೇಕಾದರೂ ಅರ್ಜಿ ಕೊಡಬಹುದು. ಅರ್ಜಿಗಳೆಲ್ಲವೂ ಬರಲಿ, ಆಮೇಲೆ ಕುಳಿತುಕೊಂಡು ಮಾತನಾಡೋಣ.
ಫಸ್ಟ್ ಪಾರ್ಟಿ ಕಟ್ಟುವ ಕೆಲಸ, ಪಕ್ಷ ಸಂಘಟನೆ ಮಾಡಲು ಒತ್ತು. ವ್ಯಕ್ತಿ ಮೇಲೆ ನೆಕ್ಸ್ಟ್ ವಿಚಾರ, ಪಾರ್ಟಿ ಫಸ್ಟ್ ಎಂದು ತಿಳಿಸಿದರು.
ಇದನ್ನೂ ಓದಿ : ನಟಿಯರು ಬಿಟ್ಟು ಬೇರ್ಯಾರು ಡ್ರಗ್ಸ್ ತಗೊಂಡಿಲ್ವಾ : ಡಿಕೆಶಿ
ಇದೇ ವೇಳೆ ಶಿರಾ ಮತ್ತು ಆರ್.ಆರ್.ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ವಿಚಾರ ಕುರಿತು ಪ್ರತಿಕ್ರಿಯಿಸಿ, ನಾನು ಏನೂ ತೀರ್ಮಾನ ಮಾಡಲ್ಲ, ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಒಂದು ಸಮಿತಿ ಮಾಡಿದ್ದೇನೆ.
ಅವರು ಎಲ್ಲರ ಜೊತೆ ಸಭೆ ಮಾಡಿ ಶಿಫಾರಸು ಮಾಡ್ತಾರೆ. ನಾನು, ನನ್ನ ಶಾಸಕಾಂಗ ಪಕ್ಷದ ನಾಯಕರು, ವಿಪಕ್ಷ ನಾಯಕರು ಕುಳಿತು ಚರ್ಚೆ ಮಾಡ್ತೇವೆ.
ದಿವಂಗತ ಡಿ.ಕೆ ರವಿ ಪತ್ನಿಗೆ ಕಾಂಗ್ರೆಸ್ ಟಿಕೆಟ್ ನೀಡಲು ಕೆಲವರು ಶಿಫಾರಸು ಮಾಡ್ತಿದ್ದಾರೆ. ನಾನು ಇನ್ನೂ ಈ ಬಗ್ಗೆ ಚರ್ಚೆ ನಡೆಸಿಲ್ಲ.
ಏಳೆಂಟು ಜನ ಆಕಾಂಕ್ಷಿಗಳು ಇದ್ದಾರೆ, ಬಾಲಕೃಷ್ಣ, ಎಂ. ಶ್ರೀನಿವಾಸ್ ಬಾಬು ಇದ್ದಾರೆ. ನಮ್ಮ ಡಿಸಿಸಿ ಪ್ರೆಸಿಡೆಂಟ್ ಸೇರಿ ಹಲವು ಜನರು ಇದ್ದಾರೆ ಎಂದು ಹೇಳಿದರು.