ಟೀಮ್ ಇಂಡಿಯಾದ ಆಸ್ಟ್ರೇಲಿಯಾ ಪ್ರವಾಸದ ವೇಳಾಪಟ್ಟಿ ರೆಡಿ..!
ಟೀಮ್ ಇಂಡಿಯಾದ ಆಸ್ಟ್ರೇಲಿಯಾ ಪ್ರವಾಸಕ್ಕೆ ತಾತ್ಕಾಲಿಕ ವೇಳಾಪಟ್ಟಿ ಸಿದ್ಧವಾಗಿದೆ. ಐಪಿಎಲ್ ಮುಗಿದ ತಕ್ಷಣವೇ ಟೀಮ್ ಇಂಡಿಯಾ ಆಟಗಾರರು ನೇರವಾಗಿ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಲಿದ್ದಾರೆ. ಜೈವಿಕ ಸುರಕ್ಷತೆಯೊಂದಿಗೆ ನಡೆಯುವ ಈ ಪ್ರವಾಸದಲ್ಲಿ ಟೀಮ್ ಇಂಡಿಯಾ ಮತ್ತು ಆಸ್ಟ್ರೇಲಿಯಾ ತಂಡಗಳು ಏಕದಿನ ಸರಣಿ, ಟೆಸ್ಟ್ ಸರಣಿ ಹಾಗೂ ಟಿ-ಟ್ವೆಂಟಿ ಸರಣಿಗಳು ನಡೆಯಲಿವೆ.
ಸದ್ಯ ತಾತ್ಕಾಲಿಕ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ವೇಳಾಪಟ್ಟಿಯ ಪ್ರಕಾರ ನವೆಂಬರ್ 26, 28 ಮತ್ತು 30ರಂದು ಮೂರು ಏಕದಿನ ಪಂದ್ಯಗಳು ನಡೆಯಲಿವೆ. ಹಾಗೇ ಡಿಸೆಂಬರ್ 4, 6 ಮತ್ತು 8ರಂದು ಟಿ-ಟ್ವೆಂಟಿ ಸರಣಿ ನಡೆಯಲಿದೆ.
ಇನ್ನು ಡಿಸೆಂಬರ್ 17ರಿಂದ ಜನವರಿ 19ರವರೆಗೆ ನಾಲ್ಕು ಟೆಸ್ಟ್ ಪಂದ್ಯಗಳು ನಡೆಯಲಿವೆ. ಮೊದಲ ಟೆಸ್ಟ್ ಪಂದ್ಯ ಡಿಸೆಂಬರ್ 17ರಿಂದ, ಎರಡನೇ ಟೆಸ್ಟ್ ಪಂದ್ಯ ಡಿಸೆಂಬರ್ 26ರಿಂದ ಹಾಗೂ ಮೂರನೇ ಟೆಸ್ಟ್ ಪಂದ್ಯ ಜನವರಿ 7ರಿಂದ ಮತ್ತು ನಾಲ್ಕನೇ ಟೆಸ್ಟ್ ಪಂದ್ಯ ಜನವರಿ 15ರಿಂದ ಆರಂಭವಾಗಲಿದೆ.
ಐಪಿಎಲ್ ಮುಗಿದ ನಂತರ ಆಸ್ಟ್ರೇಲಿಯಾಗೆ ತೆರಳಿದ ನಂತರ ಟೀಮ್ ಇಂಡಿಯಾ ಆಟಗಾರರು 14 ದಿನಗಳ ಕಾಲ ಕ್ವಾರಂಟೈನ್ ನಲ್ಲಿ ಇರಲಿದ್ದಾರೆ. ಮೂರು ಮಾದರಿಯ ಸರಣಿಗೆ ಒಟ್ಟು 25ರಿಂದ 27 ಆಟಗಾರರನ್ನು ಆಯ್ಕೆ ಮಾಡಲಾಗುತ್ತದೆ.
ಏಕದಿನ ಸರಣಿ ವೇಳಾಪಟ್ಟಿ
ಮೊದಲ ಏಕದಿನ ಪಂದ್ಯ -ನವೆಂಬರ್ 26
ಎರಡನೇ ಏಕದಿನ ಪಂದ್ಯ – ನವೆಂಬರ್ 28
ಮೂರನೇ ಏಕದಿನ ಪಂದ್ಯ – ನವೆಂಬರ್ 30
ಟಿ-ಟ್ವೆಂಟಿ ಸರಣಿ ವೇಳಾಪಟ್ಟಿ
ಮೊದಲ ಟಿ-ಟ್ವೆಂಟಿ – ಡಿಸೆಂಬರ್ 4
ಎರಡನೇ ಟಿ-ಟ್ವೆಂಟಿ -ಡಿಸೆಂಬರ್ 6
ಮೂರನೇ ಟಿ-ಟ್ವೆಂಟಿ -ಡಿಸೆಂಬರ್ 8
ಟೆಸ್ಟ್ ಸರಣಿಯ ವೇಳಾಪಟ್ಟಿ
ಮೊದಲ ಟೆಸ್ಟ್ ಪಂದ್ಯ – ಡಿಸೆಂಬರ್ 17ರಿಂದ 21 (ಹಗಲು ರಾತ್ರಿ ಪಂದ್ಯ)
ಎರಡನೇ ಟೆಸ್ಟ್ ಪಂದ್ಯ -ಡಿಸೆಂಬರ್ 26ರಿಂದ 30 (ಬಾಕ್ಸಿಂಗ್ ಡೇ ಟೆಸ್ಟ್ )
ಮೂರನೇ ಟೆಸ್ಟ್ ಪಂದ್ಯ – ಜನವರಿ 7ರಿಂದ 11
ನಾಲ್ಕನೇ ಟೆಸ್ಟ್ ಪಂದ್ಯ – ಜನವರಿ 15ರಿಂದ 19







