ಕೋಲಾರ : ಕೆರೆಯಲ್ಲಿ ಈಜಲು ಹೋದ ಯುವಕರಿಬ್ಬರು ನೀರುಪಾಲಾಗಿರುವ ಘಟನೆ ಕೋಲಾರದ ಎಸ್.ಅಗ್ರಹಾರದಲ್ಲಿ ನಡೆದಿದೆ.
ಕೋಲಾರದ ರೆಹಮತ್ ನಗರದ ನಿವಾಸಿಗಳಾದ ಇಮ್ರಾನ್ (22) ಹಾಗೂ ನಜೀರ್ (23) ಮೃತ ಯುವಕರಾಗಿದ್ದಾರೆ.
ಕೆ.ಸಿ ವ್ಯಾಲಿ ನೀರಿನಿಂದಾಗಿ ಎಸ್.ಅಗ್ರಹಾರ ಕೆರೆ ತುಂಬಿ ಹರಿಯುತ್ತಿದೆ.
ಈ ಹಿನ್ನೆಲೆ ಕೋಲಾರದ ತಾಲೂಕಿನ ಸಾವಿರಾರು ಯುವಕರು ಇಲ್ಲಿಗೆ ಆಗಮಿಸುತ್ತಿದ್ದಾರೆ.
ನೀರು ಹರಿಯುತ್ತಿರುವ ಪ್ರದೇಶದಲ್ಲಿ ಅಪಾಯಕಾರಿ ಎಂದು ಸೂಚನಾ ಫಲಕಗಳು ಹಾಕಿದ್ದರೂ ಕೂಡ ಪ್ರವಾಸಿಗರು ಕೆರೆ ಕಟ್ಟೆ ಮೇಲೆ ಕಾಲ ಕಳೆಯುತ್ತಿದ್ದಾರೆ.
ಇದನ್ನೂ ಓದಿ : ಭೀಕರ ಅಪಘಾತಕ್ಕೆ 6 ಮಂದಿ ಬಲಿ
ಇನ್ನು ಸಂಜೆ ಇಮ್ರಾನ್ ಹಾಗೂ ನಜೀರ್ ಕೂಡ ಕೆರೆಯಲ್ಲಿ ಈಜಲು ಎಸ್.ಅಗ್ರಹಾರಕ್ಕೆ ಬಂದಿದ್ದರು. ಈ ವೇಳೆ ಆಯ ತಪ್ಪಿ ಕೆರೆಗೆ ಬಿದ್ದಿದ್ದಾರೆ.
ಕೂಡಲೇ ಅಲ್ಲಿನವರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ರಾತ್ರಿ ಸುಮಾರು ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಹೊರ ತೆಗೆದಿದ್ದಾರೆ.







