ಉತ್ತರ ಪ್ರದೇಶ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ತಾವು ಪ್ರತಿನಿಧಿಸುತ್ತಿರುವ ವಾರಣಾಸಿಯಲ್ಲಿ (Varanasi) 6,700 ಕೋಟಿ ರೂ. ಮೌಲ್ಯದ 23 ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆಗೆ ಚಾಲನೆ ನೀಡಿದ್ದಾರೆ.
ಕಂಚಿ ಮಠದ ವತಿಯಿಂದ ನಡೆದ ಆರ್.ಜೆ ಶಂಕರ ನೇತ್ರಾಲಯ ಉದ್ಘಾಟಿಸಿ ಮಾತನಾಡಿದ ಅವರು, ಇಂದು ಕಾಶಿಗೆ ಮಹತ್ವದ ದಿನ. ಮುಂಜಾನೆ ನಾನು ಕಣ್ಣಿನ ಆಸ್ಪತ್ರೆಯನ್ನು ಉದ್ಘಾಟಿಸಿದೆ. ಆರ್.ಜೆ ಶಂಕರ ನೇತ್ರಾಲಯವು ವೃದ್ಧರು ಮತ್ತು ಮಕ್ಕಳಿಗೆ ಸಾಕಷ್ಟು ಸಹಾಯ ಮಡುತ್ತದೆ ಎಂದಿದ್ದಾರೆ.
ದೇಶಕ್ಕೆ ಮೂರನೇ ಬಾರಿ ಸೇವೆ ಸಲ್ಲಿಸಲು ಜನರು ನನ್ನನ್ನು ಆಶೀರ್ವದಿಸಿದ ನಂತರ, ನಾವು ಮೂರು ಪಟ್ಟು ವೇಗದಲ್ಲಿ ಕೆಲಸ ಮಾಡಲು ನಿರ್ಧರಿಸಿದ್ದೇವೆ. ದೇಶದಲ್ಲಿ 15 ಲಕ್ಷ ಕೋಟಿ ರೂ ಮೌಲ್ಯಕ್ಕೂ ಹೆಚ್ಚಿನ ಯೋಜನೆಗಳಿಗೆ ಚಾಲನೆ ಸಿಕ್ಕಿದೆ.
ಕೇಂದ್ರದಲ್ಲಿ ದಶಕಗಳ ಕಾಲ ಆಡಳಿತ ನಡೆಸಿದವರು ಕಾಶಿ ಅಭಿವೃದ್ಧಿಗೆ ಗಮನ ಹರಿಸಿಲ್ಲ. ನಮ್ಮ ಸರ್ಕಾರ ಕಾಶಿಯ ಅಭಿವೃದ್ಧಿಗೆ ಟೊಂಕಕಟ್ಟಿ ನಿಂತಿದೆ ಎಂದಿದ್ದಾರೆ.