ADVERTISEMENT

BC Nagesh: ಶೇ 98.2ರಷ್ಟು ಮುಸ್ಲಿಂ ಧರ್ಮದ ವಿದ್ಯಾರ್ಥಿಗಳು SSLC ಪರೀಕ್ಷೆ ಬರೆದಿದ್ದಾರೆ

ಶೇ 98.2ರಷ್ಟು ಮುಸ್ಲಿಂ ಧರ್ಮದ ವಿದ್ಯಾರ್ಥಿಗಳು SSLC ಪರೀಕ್ಷೆ ಬರೆದಿದ್ದಾರೆ

ಬೆಂಗಳೂರು : ಇದುವರೆಗೂ SSLC ಪರೀಕ್ಷೆಯಲ್ಲಿ ಶೇ 98.2ರಷ್ಟು ಮುಸ್ಲಿಂ ಧರ್ಮದ ವಿದ್ಯಾರ್ಥಿಗಳು ಹಾಜರಾಗಿದ್ದಾರೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ.

Related posts

ವಿಧಾನಸೌಧದಲ್ಲಿ ಮಾತನಾಡಿದ ಅವರು ಹಾಗೇ ಇತರೆ ಧರ್ಮೀಯರು 97.8%ರಷ್ಟು ಹಾಜರಾಗಿದ್ದಾರೆ. ಇನ್ನೂ ಇದುವರೆಗೂ ಪರೀಕ್ಷಾ ಕೇಂದ್ರದಲ್ಲಿ ಯಾರೂ ಹಿಜಾಬ್ ಧರಿಸಿಲ್ಲ. ಮೊದಲ ದಿನ ಮಾತ್ರ ತೊಂದರೆಯಾಗಿತ್ತು. ಆದರೆ ನಂತರದ ದಿನಗಳಲ್ಲಿ ತೊಂದರೆಯಾಗಿಲ್ಲ ಎಂದು ಹೇಳಿದರು.

ಅಲ್ಲದೇ ವಿದ್ಯಾರ್ಥಿನಿಯರ ಬಗ್ಗೆ ಸಂತೋಷ ಇದೆ. ಸರ್ಕಾರದ ನೋಟಿಸ್ ಪಾಲಿಸಿದ್ದಾರೆ. ಊಹಾಪೋಹಕ್ಕೆ ಯಾವುದೇ ಬೆಲೆ ಇಲ್ಲ. ಹಾಜರಾತಿ ಎರಡೂ ಕಡೆ ಒಂದೇ ಸಂಖ್ಯೆಯಲ್ಲಿದೆ. ಒಟ್ಟು ಸಂಖ್ಯೆ ಜಾಸ್ತಿ ಇದೆ. ಹಿಜಾಬ್ ತೆಗೆದು ಪರೀಕ್ಷೆ ಬರೆದಿದ್ದಾರೆ. ಆ ಧರ್ಮದ ಅಕ್ಕ-ತಂಗಿಯರೇ ಹೆಚ್ಚು ಮಂದಿ ಪರೀಕ್ಷೆ ಬರೆದಿದ್ದಾರೆ ಎಂದು ತಿಳಿಸಿದರು.

 ಕಳೆದ ವರ್ಷ ಸುಮ್ಮನೆ ಪಾಸ್ ಮಾಡ್ತಾರೆ ಅಂದಿದ್ದಕ್ಕೆ 8ಲಕ್ಷ ಜನ ಬಂದಿದ್ದರು. ಈ ವರ್ಷ ಕೂಡ 8ಲಕ್ಷ ಜನ ಬಂದಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಗೈರು ಆಗಿದ್ದಾರೆ. ಈ ಬಾರಿ ನಡೆಸಿದ ಪೂರ್ವ ಸಿದ್ಧತಾ ಮತ್ತು ಮಧ್ಯ ವಾರ್ಷಿಕ ಪರೀಕ್ಷೆಗಳು ಸಹಾಯ ಆಗಿದೆ. ಇಂಗ್ಲಿಷ್ ಪರೀಕ್ಷೆಗೆ ಜಾಸ್ತಿ ಜನ ಗೈರಾಗಿದ್ದರು ಎಂದರು.

Join us on: