ರೈಲಿಗೆ ಸಿಕ್ಕು 4 ಯುವಕರು ದುರ್ಮರಣ Saaksha Tv
ದೆಹಲಿ: ರೈಲು ಹಳಿ ಮೇಲೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ, ರೈಲಿಗೆ ಸಿಕ್ಕು ನಾಲ್ವರು ಯುವಕರು ಸಾವಾನ್ನಪ್ಪಿರುವ ಘಟನೆ ದೆಹಲಿಯ ಗುರುಗ್ರಾಮ್ ದಲ್ಲಿ ನಡೆದಿದೆ.
ದೇವಿಲಾಲ್ ಕಾಲೋನಿಯ ಸಮೀರ್ (19), ಮೊಹಮ್ಮದ್ ಅನಸ್ (20), ಯೂಸುಫ್ ಅಲಿಯಾಸ್ ಭೋಲಾ (21) ಮತ್ತು ಯುವರಾಜ್ ಗೋಗಿಯಾ (18) ಮೃತ ದುರ್ದೈವಿಗಳು. ಸರ್ಕಾರಿ ರೈಲ್ವೆ ಪೊಲೀಸ್ (GRP) ಪ್ರಕಾರ, ದೆಹಲಿಯ ಸರಾಯ್ ರೋಹಿಲ್ಲಾದಿಂದ ಅಜ್ಮೀರ್‌ಗೆ ಹೋಗುವ ಜನ ಶತಾಬ್ದಿ ಎಕ್ಸ್‌ಪ್ರೆಸ್ ಗುರ್ಗಾಂವ್ ರೈಲು ನಿಲ್ದಾಣದಿಂದ ಬಸಾಯಿ ರೈಲು ನಿಲ್ದಾಣದ ಕಡೆಗೆ ಚಲಿಸುತ್ತಿದ್ದಾಗ ಸಂಜೆ 5 ಗಂಟೆಗೆ ಅಪಘಾತ ಸಂಭವಿಸಿದೆ ಎಂದು ಹೇಳಿದ್ದಾರೆ.
ಮಂಗಳವಾರ ಸಂಜೆ 18 ರಿಂದ 21 ವರ್ಷ ವಯಸ್ಸಿನ ನಾಲ್ವರು ಯುವಕರು ರೈಲು ಸಮೀಪಿಸುತ್ತಿದ್ದಾಗ ಟ್ರ್ಯಾಕ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳಲು ಪ್ರಾರಂಭಿಸಿದರು. ರೈಲು ಸಾಕಷ್ಟು ಸಮೀಪ ಬಂದರೂ ಯುವಕರು, ಚಿತ್ರದಲ್ಲಿ ರೈಲು ಬೇಕು ಎಂದು ಕದಲದೆ ಸ್ಪೆಲ್ಪಿ ತೆಗೆದುಕೊಳ್ಳುತ್ತಿದ್ದಾರೆ. ಆಗ ರೈಲು ಗುದ್ದಿದ ಪರಿಣಾಮ ಯುವಕರು ಸ್ಥಳದಲ್ಲೆ ಮೃತಪಟ್ಟಿದ್ದಾರೆ.
ನಂತರ ರೈಲು ಚಾಲಕನಿಂದ ಮಾಹಿತಿ ಪಡೆದ ಜಿಆರ್‌ಪಿ ಪೊಲೀಸ್ ಠಾಣೆಯ ತಂಡವು ತಕ್ಷಣ ಸ್ಥಳಕ್ಕೆ ತಲುಪಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.








