Bengaluru : ಕೆ ಜಿ ಹಳ್ಳಿ ಪೊಲೀಸರು ಸೀಜ್ ಮಾಡಿದ್ದ ವಾಹನಗಳು ಬೆಂಕಿಗಾಹುತಿ
ಬಾಣಸವಾಡಿ ಹೆಚ್ ಬಿ ಆರ್ ಲೇಔಟ್ ಬಳಿಯ ಅಯೋಧ್ಯಾ ಮೈದಾನದಲ್ಲಿ ಅಗ್ನಿ ಅವಘಡ ಸಂಭವಿಸಿದೆ..
ಕೆ ಜಿ ಹಳ್ಳಿ ಪೊಲೀಸರು ಸೀಜ್ ಮಾಡಿದ್ದ ವಾಹನಗಳಿಗೆ ಬೆಂಕಿ ಬಿದ್ದಿದೆ.. ಮೈದಾನದಲ್ಲಿ ಇದ್ದ ಒಣ ಹುಲ್ಲಿನಿಂದ ಬೆಂಕಿ ಹೊತ್ತಿಕೊಂಡ ಶಂಕೆ ವ್ಯಕ್ತವಾಗಿದೆ. ಮೈದಾನದಲ್ಲಿ ನಿಂತಿದ್ದ ಏಳು ಕಾರುಗಳು ಬೆಂಕಿಗೆ ಆಹುತಿಯಾಗಿವೆ.
ವಿವಿಧ ಕೇಸ್ ನಲ್ಲಿ ಪೊಲೀಸರು ಸೀಜ್ ಮಾಡಿದ್ದ ಕಾರುಗಳು ಬೆಂಕಿಗಾಹುತಿಯಾಗಿವೆ. ಸ್ಥಳಕ್ಕೆ ದೌಡಾಯಿಸಿದ ಅಗ್ನಿ ಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ಧಾರೆ. ಕೆ.ಜಿ. ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ..








