Gopal Nagarkatte | ಬಜರಂಗ ದಳದ ಯುವಕರ ರಕ್ತ ಬಿಸಿ ಇಲ್ಲವೇ ?
ಬೆಳಗಾವಿ : ಬಜರಂಗ ದಳದ ಯುವಕರ ರಕ್ತ ಬಿಸಿ ಇಲ್ಲವೇ ? ಕನ್ಹಯ್ಯ ಹತ್ಯೆ, ನೂಪುರ್ ಶರ್ಮಾ ವಿರುದ್ಧ ಧ್ವನಿ ಎತ್ತಿದಾಗ ಬಜರಂಗದಳ ಯುವಕರು ಸುಮ್ಮನಾದದ್ದು ದುರ್ವೈವ ಎಂದು ಅಯೋಧ್ಯೆ ರಾಮಮಂದಿಯ ನಿರ್ಮಾಣದ ಉಸ್ತುವಾರಿ ಗೋಪಾಲ್ ನಾಗರಕಟ್ಟೆ ಹೇಳಿದ್ದಾರೆ.
ಬೆಳಗಾವಿಯಲ್ಲಿ ಆಯುಧ ಪೂಜೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಕೇವಲ ಸರ್ಕಾರ, ಪೊಲೀಸರು, ಸೈನಿಕರಿಂದ ಹಿಂದೂ ಧರ್ಮದ ರಕ್ಷಣೆ ಸಾಧ್ಯವಿಲ್ಲ.
ನಮ್ಮ ದೇಶದಲ್ಲಿ ಪರಾಕ್ರಮ ಮುಖ್ಯವಾಗಿದೆ. ನಾವು ಪರಾಕ್ರಮ ಆರಾಧನೆ ಮಾಡಿದ್ದೇವೆ. ಕೆಲವು ವರ್ಷಗಳ ಕಾಲ ಶಾಂತಿ ಶಾಂತಿ ಎಂದು ಹೇಳಿದರು.
ಆದ್ರೆ ಇದೀಗ ದೇಶದಲ್ಲಿ ಪರಾಕ್ರಮ ಜಾಗೃತ ಆಗಬೇಕಿದೆ. ಪರಾಕ್ರಮ ಮಾಡದೇ ಇದ್ದರೇ ಶಿವಾಜಿ ಫೋಟೋ ಹಾಕಲು ಅನರ್ಹರು ಎಂದು ಹೇಳಿದರು.
ನಾವು ಪೊಲೀಸ್ ಕೇಸ್ ಗೆ ಹೆದರಬಾರದು. ಸರಿಯಾದ ಉತ್ತರ ಹಿಂದೂಗಳು ಕೊಡದಿದ್ದರೆ ಜಗತ್ತು ನಮ್ಮ ಮುಂದೆ ಭಾಗುವುದಿಲ್ಲ.
ಶಸ್ತ್ರ ಪೂಜೆ ಅಂದ್ರೆ ಚಿಕ್ಕಚಿಕ್ಕ ಚಾಕು, ಚಿಕ್ಕ ಚಿಕ್ಕ ಕತ್ತರಿಯ ಪೂಜೆಯಲ್ಲ. ಶಸ್ತ್ರ ಪೂಜೆ ಅಂದರೇ ಹೊಡೆದಾಟ ಮಾಡಲು ಬಳಸುವ ಶಸ್ತ್ರಗಳು.
ಅಂತಹ ಶಸ್ತ್ರಗಳ ಅಭ್ಯಾಸ ಮಾಡಿ ಹಿಂದೂಗಳು ಪರಾಕ್ರಮ ಪ್ರದರ್ಶನ ಮಾಡಬೇಕಿದೆ ಎಂದರು.