Black magic ನಾಗಪುರ : ತಮ್ಮ ಆರು ವರ್ಷದ ಮಗಳಿಗೆ ದೆವ್ವ ಹಿಡಿದಿದೆ ಎಂದುಕೊಂಡು ಹೆತ್ತ ತಂದೆ-ತಾಯಿಯೇ ಬಾಲಕಿಯನ್ನು ಹೊಡೆದು ಕೊಲೆ ಮಾಡಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ನಾಗಪುರದಲ್ಲಿ ನಡೆದಿದೆ.
ಸಿದ್ಧಾರ್ಥ್ ಚಿಮನೆ ಮತ್ತು ರಂಜನಾ ಚಿಮನೆ ಎಂಬ ಸುಭಾಷ್ ನಗರದ ನಿವಾಸಿಗಳಾದ ಮಗಳು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಈ ಸಂದರ್ರಭದಲ್ಲಿ ಆಕೆಯ ಹಾವಭಾವಗಳಲ್ಲಿ ವ್ಯತ್ಯಾಸ ಕಂಡು ಬಂದಿದ್ದು. ಮಗಳಿಗೆ ದೆವ್ವ ಹಿಡಿದಿದೆ ಎಂದು ಅನುಮಾನಗೊಂಡ ಪೋಷಕರು, ನಕಲಿ ಬಾಬಾನ ಬಳಿಗೂ ಬಾಲಕಿಯನ್ನು ಕರೆದುಕೊಂಡು ಹೋಗಿದ್ದರು.
ನಕಲಿ ಬಾಬಾನ ಸಲಹೆಯ ಮೇರೆಗೆ ಬಾಲಕಿಗೆ ವಿವಿಧ ರೀತಿಯ ಚಿಕಿತ್ಸೆಗಳನ್ನು ನೀಡಲು ಪ್ರಾರಂಭಿಸಿದ್ದರು. ಆದರೂ, ಯಾವುದೂ ಪ್ರಯೋಜನವಾಗಲಿಲ್ಲ. ಆದ್ದರಿಂದ ಸಿದ್ದಾರ್ಥ್, ರಂಜನಾ ಹಾಗೂ ರಂಜನಾಳ ಸಹೋದರಿ +
ಬಾಲಕಿಗೆ ಅಮಾನುಷವಾಗಿ ಥಳಿಸಿದ್ದಾರೆ. ಈ ವೇಳೆ ಹೊಡೆತಗಳನ್ನು ತಾಳಲಾರದೆ ಬಾಲಕಿ ಕುಸಿದುಬಿದ್ದಿದ್ದಾಳೆ.
ಕುಸಿದುಬಿದ್ದಿದ ರಿಂದ ಗಾಬರಿಗೊಂಡ ಪೋಷಕರು ಕೂಡಲೇ ಬಾಲಕಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಬಾಲಕಿ ಸಾವನ್ನಪ್ಪಿದ್ದಾಳೆ. ತಾವು ಸಿಕ್ಕಿಬೀಳುವ ಭಯದಿಂದ ಬಾಲಕಿಯ ಶವವನ್ನು ಆಸ್ಪತ್ರೆ ಆವರಣದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.
ಪೊಲೀಸರು ತನಿಖೆಯನ್ನ ನಡಸುವ ವೇಳೆ ಬಾಲಕಿಯ ಪೂರ್ವಪರ ಮಾಹಿತಿ ಕಲೆ ಹಾಕಿದ್ದಾರೆ. ಜೊತೆಗೆ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಬದಲ್ಲಿ ಆರೋಪಿ ತಂದೆ-ತಾಯಿ ಪತ್ತೆಯಾಗಿದ್ದಾರೆ. ಅಲ್ಲದೇ, ತಂದೆ ಸಿದ್ಧಾರ್ಥ ಚಿಮನೆ, ತಾಯಿ ರಂಜನಾ ಚಿಮನೆ ಹಾಗೂ ರಂಜನಾಳ ಸಹೋದರಿ ಮೂವರನ್ನೂ ವಿಚಾರಣೆಗೆ ಒಳಪಡಿಸಿದಾಗ ಈ ಕೃತ್ಯ ಬಯಲಿಗೆ ಬಂದಿದೆ. ಹೆಚ್ಚಿನ ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ.








