IND vs NZ:  ಮೂರನೇ ಪಂದ್ಯವೂ ಮಳೆಗೆ ಆಹುತಿ –  ಸರಣಿ ವಶಪಡಿಸಿಕೊಂಡ ಕಿವೀಸ್…

ಭಾರತ ಮತ್ತು ನ್ಯೂಜಿಲೆಂಡ್  ನಡುವೆ ನಡೆದ  ಮೂರನೇ ಏಕದಿನ ಪಂದ್ಯ ಮಳೆಗೆ ಆಹುತಿಯಾಗಿದೆ. ಈ ಮೂಲಕ  ನ್ಯೂಜಿಲೆಂಡ್ ಮೂರು ಪಂದ್ಯಗಳ  ಏಕದಿನ ಸರಣಿಯನ್ನು 1-0 ಅಂತರದಿಂದ ವಶಪಡಿಸಿಕೊಂಡಿದೆ.  ವರುಣನ ಅಡ್ಡಿಯಿಂದಾಗಿ ಭಾರತ ನೀರಸವಾಗಿ ಸೋಲಪ್ಪುವುದು ತಪ್ಪಿದೆ. 

Related posts

IND vs NZ:  ಮೂರನೇ ಪಂದ್ಯವೂ ಮಳೆಗೆ ಆಹುತಿ –  ಸರಣಿ ವಶಪಡಿಸಿಕೊಂಡ ಕಿವೀಸ್…

 

ಭಾರತ ಮತ್ತು ನ್ಯೂಜಿಲೆಂಡ್  ನಡುವೆ ನಡೆದ  ಮೂರನೇ ಏಕದಿನ ಪಂದ್ಯ ಮಳೆಗೆ ಆಹುತಿಯಾಗಿದೆ. ಈ ಮೂಲಕ  ನ್ಯೂಜಿಲೆಂಡ್ ಮೂರು ಪಂದ್ಯಗಳ  ಏಕದಿನ ಸರಣಿಯನ್ನು 1-0 ಅಂತರದಿಂದ ವಶಪಡಿಸಿಕೊಂಡಿದೆ.  ವರುಣನ ಅಡ್ಡಿಯಿಂದಾಗಿ ಭಾರತ ನೀರಸವಾಗಿ ಸೋಲಪ್ಪುವುದು ತಪ್ಪಿದೆ.  ಎರಡನೇ ಇನಿಂಗ್ಸ್‌ ಆರಂಭಿಸಿದ ನ್ಯೂಜಿಲೆಂಡ್‌ 18 ಓವರ್‌ಗಳಲ್ಲಿ ಒಂದು ವಿಕೆಟ್‌ ನಷ್ಟಕ್ಕೆ 104 ರನ್‌ ಗಳಿಸಿದ ಸಂದರ್ಭದಲ್ಲಿ ಮಳೆ ಸುರಿದ  ಕಾರಣ ಪಂದ್ಯವನ್ನ ರದ್ದು  ಮಾಡಲಾಯಿತು.

ಈ ಸಮಯದಲ್ಲಿ ಫಿನ್ ಅಲೆನ್ 54 ಎಸೆತಗಳಲ್ಲಿ 57 ರನ್ ಗಳಿಸಿ ಅರ್ಧಶತಕ ಗಳಿಸಿ ಔಟ್ ಆಗಿದ್ದರು.  ಕಾನ್ವೆ 38, ವಿಲಿಯಮ್ಸನ್ (0) ಕ್ರೀಸ್‌ನಲ್ಲಿದ್ದರು.   ಎಡೆಬಿಡದೇ ಮಳೆ ಸುರಿಯಿತ್ತಿದ್ದು, ಪಂದ್ಯ  ಮುಂದುವರೆಯುವ ಲಕ್ಷಣ  ಕಾಣದ ಕಾರಣ  ಪಂದ್ಯವನ್ನ ರದ್ದುಗೊಳಿಸಲಾಯಿತು.

ಇದಕ್ಕೂ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ  ಬ್ಯಾಟಿಂಗ್ ನಲ್ಲಿ ನೀರಸ ಪ್ರದರ್ಶನ ನೀಡಿತು.  ಆರಂಭಿಕರಾದ ಶಿಖರ್ ಧವನ್ 28 ರನ್ ಆಟಗಾರ ಗಿಲ್ ಕೇವಲ 13 ರನ್ ಗಳಿಸಿದರು. ನಂತರ ಶ್ರೇಯಸ್ ಅಯ್ಯರ್ 49 ರನ್ ಗಳಿಸಿ ಮಿಂಚಿದರು. ಈ ಪಂದ್ಯದಲ್ಲೂ ನಿರಾಸೆ ಮೂಡಿಸಿದ್ದ ಪಂಥ್ ಕೇವಲ 10 ರನ್ ಗಳಿಸಿ ಪೆವಿಲಿಯನ್ ತಲುಪಿದರು. ಸೂರ್ಯಕುಮಾರ್ ಯಾದವ್ 6 ಮತ್ತು ದೀಪಕ್ ಹೂಡಾ 12 ರನ್ ಗಳಿಸಿ ಔಟಾಗಿದ್ದು, ಭಾರತದ ಕುಸಿತಕ್ಕೆ ಕಾರಣವಾಯಿತು.  ಕೊನೆಯಲ್ಲಿ ವಾಷಿಂಗ್ಟನ್ ಸುಂದರ್ ಸ್ಥಿರ ಆಟವಾಡಿ 51 ರನ್ ಗಳಿಸಿ ಅರ್ಧಶತಕದೊಂದಿಗೆ ಮಿಂಚಿದರು. ಪರಿಣಾಮ.. ಟೀಂ ಇಂಡಿಯಾ ಕೇವಲ 219 ರನ್ ಗಳಿಸಿ 47.3 ಓವರ್ ಗಳಲ್ಲಿ ಆಲೌಟ್ ಆಯಿತು.

ಮೂರನೇ ಏಕದಿನ ಪಂದ್ಯದಂತೆ ಎರಡನೇ ಏಕದಿನ ಪಂದ್ಯವೂ ಮಳೆಯಿಂದಾಗಿ ರದ್ದುಗೊಂಡಿತ್ತು.  ಮೊದಲ ಪಂದ್ಯವನ್ನ ಕಿವೀಸ್ ಗೆದ್ದುಕೊಂಡರೆ, ಎರಡನೇ ಮತ್ತು ಮೂರನೇ ಏಕದಿನ ಪಂದ್ಯಗಳು ಮಳೆಗೆ ಆಹುತಿಯಾದ ಕಾರಣ ಕಿವೀಸ್ 1- 0 ಅಂತರದಿಂದ  ಸರಣಿ ವಶಪಡಿಸಿಕೊಂಡಿತು.

IND vs NZ: Third match also rained out – Kiwis clinch series…

Join us on: