Actress Meena: ಎರಡನೇ ಮದುವೆ ವದಂತಿ ಅಲ್ಲಗೆಳೆದ ನಟಿ…
ದಕ್ಷಿಣದ ಎಲ್ಲಾ ಸ್ಟಾರ್ ಹೀರೋಗಳ ಜೊತೆ ಸಿನಿಮಾ ಮಾಡಿರುವ ನಟಿಮಣಿಯರಲ್ಲಿ ಮೀನಾ ಕೂಡ ಒಬ್ಬರು. ಅವರ ಪತಿ ವಿದ್ಯಾ ಸಾಗರ್ ಇತ್ತೀಚೆಗಷ್ಟೆ ಅನಾರೋಗ್ಯದಿಂದ ನಿಧನರಾಗಿದ್ದರು.
ಆ ನೋವಿನಿಂದ ಚೇತರಿಸಿಕೊಳ್ಳುವ ಮುನ್ನವೇ ಎರಡ್ಮೂರು ದಿನಗಳಿಂದ ನಟಿ ಮೀನಾಗೆ ಸಂಬಂಧಿಸಿದ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಟಿ ಮೀನಾ ಎರಡನೇ ಮದುವೆಯಾಗುತ್ತಾರೆ ಎಂಬ ವದಂತಿಗಳು ಹರಿದಾಡುತ್ತಿವೆ.
ಪೋಷಕರ ಒತ್ತಡಕ್ಕೆ ಮಣಿದು ಮಗಳು ನೈನಿಕಾಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಎರಡನೇ ಮದುವೆಯಾಗುವುದಾಗಿ ಹಲವು ಜಾಲತಾಣಗಳು ಲೇಖನಗಳನ್ನು ಬರೆದಿವೆ. ಈ ಬಗ್ಗೆ ಮೀನಾ ಪ್ರತಿಕ್ರಿಯಿಸಿದ್ದಾರೆ. ಆ ಎಲ್ಲಾ ವದಂತಿಗಳನ್ನು ಅಲ್ಲಗಳೆದಿದ್ದಾರೆ. ಎರಡನೇ ಮದುವೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
“ಪತಿ ಸತ್ತಾಗಲೂ ಸುಳ್ಳು ಸುದ್ದಿಯನ್ನ ಹಬ್ಬಿಸುತ್ತಿದ್ದರು ಆ ನೋವಿನಿಂದ ಚೇತರಿಸಿಕೊಳ್ಳುವ ಮುನ್ನ ಹೇಗೆ ಮದುವೆಯಾಗುತ್ತೇನೆ” ಎಂದಿದ್ದಾರೆ. ಸದ್ಯ ಹೊಸ ಕಥೆಗಳನ್ನ ಕೇಳುತ್ತಿದ್ದೇನೆ ಎಂದು ಬಹಿರಂಗಪಡಿಸಿದ್ದಾರೆ. ಫೆಬ್ರವರಿಯಿಂದ ಶೂಟಿಂಗ್ ನಲ್ಲಿ ಭಾಗವಹಿಸಲಿದ್ದೇನೆ ಎಂದಿದ್ದಾರೆ.
ಪತಿ ತೀರಿಕೊಂಡಾಗಲೂ ಮೀನಾ ಸಾಮಾಜಿಕ ಜಾಲತಾಣಗಳಲ್ಲಿ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದರು. “ನನ್ನ ಗಂಡನ ಸಾವಿನಿಂದ ನಾನು ದುಃಖಿತನಾಗಿದ್ದೇನೆ. ದಯವಿಟ್ಟು ಈ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಿ ಮತ್ತು ದಯವಿಟ್ಟು ನಮ್ಮ ಕುಟುಂಬದ ಗೌಪ್ಯತೆಗೆ ಧಕ್ಕೆ ತರಬೇಡಿ. ನನ್ನ ಪತಿಯ ಸಾವಿನ ಬಗ್ಗೆ ಯಾವುದೇ ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಮಾಧ್ಯಮಗಳಲ್ಲಿ ಮನವಿ ಮಾಡುತ್ತಿದ್ದೇನೆ ಎಂದು ಪೋಸ್ಟ್ ಮಾಡಿದ್ದಾರೆ.
Actress Meena: The actress denied second marriage rumours…