Pathaan Vs Shehzada : ಶೆಹ್ಜಾದಾ ತುಳಿಯೋ ಪ್ಲಾನ್ ಮಾಡಿತ್ತಾ ಪಠಾಣ್..?? ಸಖತ್ ತಿರುಗೇಟನ್ನೇ ಕೊಟ್ಟಿದೆ ಶೆಹ್ಜಾದಾ ಟೀಮ್..!!
ಬಾಲಿವುಡ್ ನಲ್ಲಿ ವರ್ಷಗಳೇ ಬೇಕಾಯ್ತು ಒಂದು ಸಿನಿಮಾ ಸರಿಯಾಗಿ ಸೌಂಡ್ ಮಾಡೋದಕ್ಕೆ..
ಆ ರೀತಿ ಸೌಂಡ್ ಮಾಡ್ತಿರುವ ಸಿನಿಮಾವೇ ಶಾರುಖ್ ಖಾನ್ ನಟನೆಯ ‘ ಪಠಾಣ್ ‘ ಸಿನಿಮಾ…
ರಿಪೋರ್ಟ್ಗಳು ತೋರಿಸುತ್ತಿರುವಂತೆ ಬಾಕ್ಸ್ ಆಫೀಸ್ ನಲ್ಲಿ ಪಠಾಣ್ ಸಿನಿಮಾ ಹವಾ ಜೋರಾಗಿದೆಯಾದ್ರೂ , ಕೆಲವರು ಈ ರಿಪೋರ್ಟ್ ಫೇಕ್ ಎಂದು ಆರೋಪಿಸುತ್ತಿದ್ದಾರೆ..
ಈ ನಡುವೆಯೇ ಮತ್ತೊಮ್ಮೆ ಬಾಲಿವುಡ್ ಮಾಫಿಯಾ ಮುನ್ನೆಲೆಗೆ ಬಂದಿದೆ..
ಹೌದು..!
ಪಠಾಣ್ ಸಿನಿಮಾವು ಉದಯೋನ್ಮುಖ ನಟ ಕಾರ್ತಿಕ್ ಆರ್ಯನ್ ನಟನೆಯ ತೆಲುಗಿನ ಅಲಾ ವೈಕುಂಠ ಪುರಂಲೋ ಸಿನಿಮಾದ ರೀಮೇಕ್ ಶೆಹಜಾದಾವನ್ನ ತುಳಿಯುವ ಪ್ರಯತ್ನ ಮಾಡ್ತಿದೆ.. ಹೀಗಾಗಿ ಇಷ್ಟು ದಿನ ಹೆಚ್ಚಾಗಿದ್ದ ಟಿಕೆಟ್ ದರವನ್ನ ಇದೀಗ ಇದ್ದಕ್ಕಿದ್ದ ಹಾಗೆ ಇಳಿಕೆ ಮಾಡಿದೆ ಎಂಬ ಆರೋಪವೀಗ ಬಿ ಟೌನ್ ನಲ್ಲಿ ಸಂಚಲನವನ್ನೇ ಸೃಷ್ಟಿ ಮಾಡಿದೆ..
ಆದ್ರೆ ಪಠಾಣ್ ಗೆ ಟಕ್ಕರ್ ಕೊಡೋದ್ರಲ್ಲಿ ಶೆಹಜಾದಾ ಹಿಂದೆ ಬಿದ್ದಿಲ್ಲ.. ಸರಿಯಾದ ಉತ್ತರವನ್ನೇ ನೀಡಲು ಮುಂದಾಗಿದೆ..
ಹೌದು..!
ಪಠಾಣ್ ಸಿನಿಮಾ ಟಿಕೆಟ್ ದರ ಇಳಿಸಿದ್ರೆ ಶೆಹಜಾದಾ ಬೈ ಒನ್ ಗೆಟ್ ಒನ್ ಆಫರ್ ನೀಡಿದೆ..
ಈ ವಾರ ಕಾರ್ತಿಕ್ ಆರ್ಯನ್ ಮತ್ತು ಕೃತಿ ಸೆನನ್ ನಟನೆಯ ‘ಶೆಹ್ಜಾದಾ’ ಸಿನಿಮಾ ಬಿಡುಗಡೆ ಆಗಿದೆ.
ಈ ಸಿನಿಮಾವನ್ನು ತುಳಿಯುವುದಕ್ಕಾಗಿಯೇ ಪಠಾಣ್ ಸಿನಿಮಾ ಏಕಾಏಕಿ ತನ್ನ ಟಿಕೆಟ್ ದರವನ್ನು ಕಡಿಮೆ ಮಾಡಿದೆ ಎಂಬ ಆರೋಪವಿದೆ. ಇಂದು ಪಠಾಣ್ ಸಿನಿಮಾವನ್ನು ಕೇವಲ ರೂ.110ಕ್ಕೆ ನೋಡಬಹುದು ಎಂದು ಪೊಸ್ಟರ್ ರಿಲೀಸ್ ಮಾಡಿದೆಯೇ ಕಾರಣವೆಂಬ ಆರೋಪ ಪಠಾಣ್ ಟೀಮ್ ಮೇಲಿದೆ..
ಆದ್ರೆ ಶೆಹ್ಜಾದಾ ಸರಿ ತಿರುಗೇಟು ನೀಡಿದೆ. ಒಂದು ಟಿಕೆಟ್ ಕೊಂಡರೆ ಮತ್ತೊಂದು ಟಿಕೆಟ್ ಉಚಿತ ಎಂದು ಘೋಷಣೆ ಮಾಡಿದೆ. ಈ ಮೂಲಕ ಪಠಾಣ್ ಮಸ್ತ್ ಉತ್ತರ ಕೊಟ್ಟಿದೆ..
Pathaan Vs Shehzada , sharukh khan , karthik Aryan