Rahul Gandhi : ಸತ್ಯ ಹೊರಬರುವವರೆಗೂ ಅದಾನಿ ವಿಚಾರದಲ್ಲಿ ಪ್ರಶ್ನಿಸುತ್ತಲೇ ಇರುತ್ತೇನೆ….

ಉದ್ಯಮಿ ಗೌತಮ್ ಅದಾನಿ ಪ್ರಕರಣದಲ್ಲಿ ಸತ್ಯ ಹೊರಬರುವವರೆಗೂ ಕಾಂಗ್ರೆಸ್ ಪಕ್ಷದ ಪರವಾಗಿ ಸಂಸತ್ತಿನಲ್ಲಿ ಆಡಳಿತ ಪಕ್ಷವನ್ನ ಪ್ರಶ್ನಿಸುತ್ತಲೇ ಇರುತ್ತೇನೆ ಎಂದು ಕಾಂಗ್ರೆಸ್ ಸಂಸದ ಹಾಗೂ ನಾಯಕ ರಾಹುಲ್ ಗಾಂಧಿ ಸ್ಪಷ್ಟಪಡಿಸಿದ್ದಾರೆ.

Related posts

ಸತ್ಯ ಹೊರಬರುವವರೆಗೂ ಅದಾನಿ ವಿಚಾರದಲ್ಲಿ ಪ್ರಶ್ನಿಸುತ್ತಲೇ ಇರುತ್ತೇನೆ – ರಾಹುಲ್ ಗಾಂಧಿ…

ಉದ್ಯಮಿ ಗೌತಮ್ ಅದಾನಿ ಪ್ರಕರಣದಲ್ಲಿ ಸತ್ಯ ಹೊರಬರುವವರೆಗೂ ಕಾಂಗ್ರೆಸ್ ಪಕ್ಷದ ಪರವಾಗಿ ಸಂಸತ್ತಿನಲ್ಲಿ ಆಡಳಿತ ಪಕ್ಷವನ್ನ ಪ್ರಶ್ನಿಸುತ್ತಲೇ ಇರುತ್ತೇನೆ ಎಂದು ಕಾಂಗ್ರೆಸ್ ಸಂಸದ ಹಾಗೂ ನಾಯಕ ರಾಹುಲ್ ಗಾಂಧಿ ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್ ಪಕ್ಷದ 84ನೇ ರಾಷ್ಟ್ರೀಯ ಕಾಂಗ್ರೆಸ್ ಅಂಗವಾಗಿ ಕೊನೆಯ ದಿನ  ಸಮಾವೇಶವನ್ನ ಉದ್ದೇಶಿಸಿ ಮಾತನಾಡಿದ   ರಾಹುಲ್ ಗಾಂಧಿ ಗೌತಮ್ ಅದಾನಿ ವಿಚಾರದಲ್ಲಿ  ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದರು. ಸಂಸತ್ತಿನಲ್ಲಿ ಗೌತಮ್ ಅದಾನಿಯನ್ನು ಟೀಕಿಸಿದ್ದೆ. ಪ್ರಧಾನಿಯವರಿಗೂ ಅವರಿಗೂ ಏನು ಸಂಬಂಧ ಎಂದು ನಾನು ಅವರನ್ನು ಕೇಳಿದೆ ಮತ್ತು ನಾನು ಪ್ರಶ್ನೆಗಳನ್ನ ಎತ್ತಿದಾಗ, ಕೇಂದ್ರ ಸಚಿವರು ಉದ್ಯಮಿಯನ್ನು ಸಮರ್ಥಿಸಿಕೊಂಡರು. ಅದಾನಿ ಬಗ್ಗೆ ಸತ್ಯ ಹೊರಬರುವವರೆಗೂ ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಅದಾನಿಯನ್ನು ರಕ್ಷಿಸಲು ಬಿಜೆಪಿ ಮತ್ತು ಆರ್‌ಎಸ್‌ಎಸ್ ಏಕೆ ಬಯಸಿದೆ ಎಂದು ರಾಹುಲ್ ಕೇಳಿದರು. ಸಂಸತ್ತಿನಲ್ಲಿ ವಿರೋಧ ಪಕ್ಷಗಳು ಪ್ರಶ್ನಿಸುತ್ತಿದ್ದರೂ ಕೇಂದ್ರ ಸರ್ಕಾರ ಏಕೆ ಜೆಪಿಸಿ ಮಾಡುತ್ತಿಲ್ಲ ಎಂದು ರಾಹುಲ್ ಪ್ರತಿಭಟಿಸಿದರು. ಅದಾನಿ ಮತ್ತು ಮೋದಿ ಒಂದಾಗಿದ್ದು, ದೇಶದ ಎಲ್ಲ ಸಂಪತ್ತು ಒಬ್ಬರ ಕೈ ಸೇರಲಿದೆ ಎಂದು ರಾಹುಲ್ ಆರೋಪಿಸಿದ್ದಾರೆ.

ವಿದೇಶಾಂಗ ಸಚಿವ ಜೈಶಂಕರ್ ಅವರ ಹೇಳಿಕೆಯನ್ನು ರಾಹುಲ್ ತೀವ್ರವಾಗಿ ಖಂಡಿಸಿದ್ದಾರೆ. ಚೀನಾದ ಆರ್ಥಿಕತೆ ನಮಗಿಂತ ದೊಡ್ಡದಾಗಿದೆ, ಅವರೊಂದಿಗೆ ನಾವು ಹೇಗೆ ಹೋರಾಡುತ್ತೇವೆ ಎಂದು ಸಚಿವರು ಹೇಳುವುದು ರಾಷ್ಟ್ರೀಯತೆ ಅಲ್ಲ, ಅದು ಹೇಡಿತನ ಎಂದು ರಾಹುಲ್ ಹೇಳಿದರು.  ಭಾರತ್ ಜೋಡೋ ಯಾತ್ರೆ ಮೂಲಕ ನಾನು ಸಾಕಷ್ಟು ಕಲಿತಿದ್ದೇನೆ ಎಂದು ರಾಹುಲ್ ಹೇಳಿದ್ದಾರೆ. ಕಾಶ್ಮೀರದಲ್ಲಿ ಭಾರತ್ ಜೋಡೋ ಯಾತ್ರೆಗೆ ಹೆಚ್ಚಿನ ಪ್ರೀತಿ ಸಿಕ್ಕಿದೆ ಎಂದು ರಾಹುಲ್ ಹೇಳಿದ್ದಾರೆ.

Rahul Gandhi: I will keep questioning about Adani until the truth comes out.

Join us on: