ಭದ್ರಾ ನದಿಯಲ್ಲಿ ನಂದಿ ಕೊಚ್ಚಿ ಹೋದರೂ ಶಿವ ಮತ್ತು ನಂದಿ (Lord Shiva And Nandi Statues) ಒಬ್ಬರನ್ನೊಬ್ಬರು ನೋಡುತ್ತಾ ಕುಳಿತಿರುವ ಅಪರೂಪದ ವಿದ್ಯಮಾನವೊಂದು ನಡೆದಿದ್ದು, ಎಲ್ಲರೂ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.
ಭದ್ರಾ ನದಿಯಲ್ಲಿ (Bhadra River) ಕೊಚ್ಚಿ ಬಂದರೂ ಬಸವ ಶಿವನನ್ನು ಬಿಡದೇ ನೋಡುತ್ತಿರುವ ಬಸವನ ಮೂರ್ತಿ ಅಚ್ಚರಿ ಹುಟ್ಟಿಸಿದೆ. ಕಳಸ ತಾಲೂಕಿನ ಕಗ್ಗನಳ್ಳ ಗ್ರಾಮದ ಬಳಿ ಹರಿಯುವ ಭದ್ರಾ ನದಿಯಲ್ಲಿ ಈ ವಿಶೇಷ ಘಟನೆ ನಡೆದಿದೆ. ಈಶ್ವರನ ದೇವಾಲಯವಿದ್ದರೂ ಶಿವನ ಎದುರು ನಂದಿಯ ವಿಗ್ರಹ ಇರುತ್ತದೆ ಎಂದು ಹಿಂದೂ ಧಾರ್ಮಿಕ ನಂಬಿಕೆಯಿದೆ. ಅದರಂತೆ ಕೊಚ್ಚಿಕೊಂಡು ಬಂದ ಮೂರ್ತಿಗಳಲ್ಲಿಯೂ ಶಿವಲಿಂಗದ ಎದುರು ಬಸವನ ಮೂರ್ತಿ ನದಿಯ ಮಧ್ಯೆ ಕುಳಿತಿರುವುದು ಅಚ್ಚರಿ ಹುಟ್ಟಿಸುತ್ತಿದೆ.
ಯಾವುದೋ ದೇವಾಲಯದ ಈ ಮೂರ್ತಿಗಳು ಮಳೆಯಲ್ಲಿ ಕೊಚ್ಚಿ ಬಂದು ಭದ್ರೆಯ ಒಡಲಲ್ಲಿ ಕುಳಿತಿವೆ. ಭದ್ರೆಯ ಹರಿವಿನಲ್ಲಿ ಕೊಚ್ಚಿಕೊಂಡು ಬಂದ ಈ ಈಶ್ವರ ಹಾಗೂ ನಂದಿಯ ವಿಗ್ರಹಗಳು ನದಿಯಲ್ಲೂ ಧಾರ್ಮಿಕ ನಂಬಿಕೆಯ ಪ್ರಕಾರವೇ ಕುಳಿತಿರುವುದು ಸ್ಥಳೀಯರಲ್ಲಿ ಬೆರಗು ಮೂಡಿಸುತ್ತಿವೆ. ಜನರು ಆಶ್ಚರ್ಯದಿಂದ ಈ ವಿದ್ಯಾಮಾನ ನೋಡುತ್ತಿದ್ದಾರೆ.







