ದೇವೇಗೌಡರ ವಿರುದ್ಧ ತಿರುಗಿ ಬಿದ್ದ ಸಿಎಂ ಇಬ್ರಾಹಿಂ

ಬಿಜೆಪಿ ಜೊತೆ ಮೈತ್ರಿ ಬೇಡ ಎಂದ ಇಬ್ರಾಹಿಂ

ಬೆಂಗಳೂರು: ಲೋಕಸಭೆ ಚುಣಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದಕ್ಕೆ ಪಕ್ಷದ ವಿರುದ್ಧ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ತಿರುಗಿ ಬಿದ್ದಿದ್ದಾರೆ.

ನಾನು ಪಕ್ಷದ ಅಧ್ಯಕ್ಷ. ನನ್ನನ್ನು ತೆಗೆದು ಹಾಕಲು ಸಾಧ್ಯವಿಲ್ಲ. ಈ ಪಕ್ಷ ಕುಟುಂಬದ ಸ್ವತ್ತಲ್ಲ. ಬಿಜೆಪಿ ಹಾಗೂ ಜೆಡಿಎಸ್ ಸಿದ್ಧಾಂತ ಬೇರೆ ಬೇರೆ. ಲೋಕಸಭೆ ಚುನಾವಣೆಯಲ್ಲಿ ಎನ್​ಡಿಎ ಮೈತ್ರಿಕೂಟ ಸೋಲಬೇಕಿದೆ. ನಾವು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಸೂಚಿಸುತ್ತೇವೆ ಎಂದು ಹೇಳಿದ್ದಾರೆ.

Related posts

ಅಧ್ಯಕ್ಷ ಸ್ಥಾನದಿಂದ ತೆಗೆಯಲು ಆಗಲ್ಲ. ಚನ್ನಪಟ್ಟಣ ಕ್ಷೇತ್ರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಗೆದ್ದಿದ್ದು ಹೇಗೆ? ಕುಮಾರಸ್ವಾಮಿ ಎಂಎಲ್ಎ ಆಗಿದ್ದಕ್ಕೆ ಅಮಿಶ್ ಶಾ ಕರೆದಿದ್ದು. ಮುಸ್ಲಿಂರು ಮತ ಹಾಕದಿದ್ದರೆ ನೀವು ಸೋತು ಮನೆಯಲ್ಲಿ ಇರಬೇಕಿತ್ತು ಎಂದು ಗುಡುಗಿದ್ದಾರೆ.
ದೇವೇಗೌಡರಿಗೆ ಮನವಿ ಮಾಡುತ್ತಿದ್ದೇನೆ. ನಿಮ್ಮನ್ನು ಪ್ರಧಾನಮಂತ್ರಿ ಮಾಡಿದ್ದು ಜಾತ್ಯಾತೀತ ತತ್ವ. ಆದರೆ, ಸೀತಾರಾಮ್ ಕೇಸರ್ ಬೆಂಬಲ ಹಿಂಪಡೆದಿದ್ದಕ್ಕೆ ಸರ್ಕಾರ ಬಿತ್ತು. ಹೀಗಾಗಿಯೇ ಬಿಜೆಪಿಗೆ ಶಕ್ತಿ ಬಂದಿತು ಎಂದು ಹೇಳಿದ್ದಾರೆ.

Join us on: