ಡೇವಿಸ್ ಕಪ್ ನಲ್ಲಿ ಸಾಧನೆ ಮೆರೆದ ಕನ್ನಡದ ಕುವರ!

ಟೆನ್ನಿಸ್ ಟೀಮ್ ಇವೆಂಟ್ ನಲ್ಲಿ ಸ್ಥಾನ ಪಡೆದ ಭಾರತ

ಮಡಿಕೇರಿ: ಕನ್ನಡದ ಯುವಕನೊಬ್ಬ ಡೇವಿಸ್ ಕಪ್ ನಲ್ಲಿ ಸಾಧನೆ ಮೆರೆದು, ಅಂತರಾಷ್ಟ್ರೀಯ ಟೆನ್ನಿಸ್ (Tennis) ಜಗತ್ತಿನ ವರ್ಲ್ಡ್‌‌ ಕಪ್ ಆಗಿರುವ ಟೆನ್ನಿಸ್ ಟೀಮ್ ಇವೆಂಟ್ ನಲ್ಲಿ ಸ್ಥಾನ ಪಡೆದಿದ್ದಾರೆ.

ಡೇವಿಸ್ ಕಪ್‍ನಲ್ಲಿ (Davis Cup) ಭಾರತವು ಪಾಕಿಸ್ತಾನ (Pakistan) ತಂಡವನ್ನು 4-0 ರಿಂದ ಸೋಲಿಸಿ, ವರ್ಲ್ಡ್‌‌ ಕಪ್ ಗ್ರೂಪ್ 1ರಲ್ಲಿ ಸ್ಥಾನ ಪಡೆದಿದೆ. ಈ ಸ್ಥಾನ ಪಡೆಯುವಲ್ಲಿ ಕೊಡಗಿನ 28 ವರ್ಷದ ನಿಕ್ಕಿ ಪೂಣಚ್ಚ ಪಾತ್ರ ಕೂಡ ದೊಡ್ಡದಿದೆ.

Related posts

ಭಾರತ ಡೇವಿಸ್ ಕಪ್ ತಂಡವು ಪಾಕಿಸ್ತಾನವನ್ನು 4 ಪಂದ್ಯಗಳಲ್ಲೂ ಸೋಲಿಸಿದೆ. 4ನೇ ಪಂದ್ಯವು ಸಿಂಗಲ್ಸ್ ವಿಭಾಗದಲ್ಲಿ ನಡೆದಿದ್ದು, ಕೊಡಗಿನ ಕಲಿಯಂಡ ನಿಕ್ಕಿ ಪೂಣಚ್ಚ ಅವರು ಮಹಮ್ಮದ್ ಶೋಯಬ್ ರನ್ನು 6-3, 6-4ರ ನೇರ ಸೆಟ್‍ಗಳಿಂದ ಸೋಲಿಸಿದ್ದಾರೆ.

ಡಬಲ್ಸ್ ವಿಭಾಗದಲ್ಲಿ ಭಾರತದ ಯುಕಿ ಬಾಂಬ್ರಿ – ಸಾಕೆತ್ ಮೈನೆನಿ ಜೋಡಿ, ಸಿಂಗಲ್ಸ್ ನಲ್ಲಿ ರಾಮ್ ಕುಮಾರ್ ರಾಮನಾಥಾನ್, ಎನ್.ಶ್ರೀರಾಮ್ ಬಾಲಾಜಿ, ನಿಕ್ಕಿ ಪೂಣಚ್ಚ ಗೆಲುವು ಸಾಧಿಸಿದರು.

Join us on: