ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಸದ್ಯ ಹಾಲಿವುಡ್ (Hollywood) ಅಂಗಳದಲ್ಲಿ ಮಿಂಚುತ್ತಿದ್ದಾರೆ. ಈ ಮಧ್ಯೆ ತಮ್ಮ ಹುಟ್ಟೂರು ಮುಂಬೈಗೆ ಬಂದಿರುವ ನಟಿ ಹೊಸ ಫೋಟೋಶೂಟ್ ಮೂಲಕ ಅಭಿಮಾನಿಗಳ ನಿದ್ದೆ ಕದ್ದಿದ್ದಾರೆ.
ಲೈಟ್ ಬಣ್ಣದ ಶಾರ್ಟ್ ಡ್ರೆಸ್ ನಲ್ಲಿ ದೇಸಿ ಗರ್ಲ್ ಪ್ರಿಯಾಂಕಾ ಹಾಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ನಟಿಯ ನಯಾ ಪೋಸ್ಗೆ ಪಡ್ಡೆಹುಡುಗರು ಫಿದಾ ಆಗಿದ್ದಾರೆ.
ಹಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಪ್ರಿಯಾಂಕಾ ಇದೀಗ ‘ಪಾನಿ’ (Paani) ಎಂಬ ಮರಾಠಿ ಚಿತ್ರದ ಮೂಲಕ ನಿರ್ಮಾಪಕಿಯಾಗಿ ಮತ್ತೆ ದೇಶಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ಚಿತ್ರ ಇಂದು ಬಿಡುಗಡೆಯಾಗಿದೆ. ಪ್ರಿಯಾಂಕಾ ಅವರ ಬಾಲಿವುಡ್ ಚಿತ್ರಕ್ಕಾಗಿ ಫ್ಯಾನ್ಸ್ ಎದುರು ನೋಡುತ್ತಿದ್ದಾರೆ. ಇತ್ತೀಚೆಗೆ ಸಮಂತಾ (Samantha), ವರುಣ್ (Varun Dhawan) ನಟಿಸಿರುವ ‘ಸಿಟಾಡೆಲ್ ಹನಿ ಬನಿ’ (Citadel Honey Bunny) ವೆಬ್ ಸಿರೀಸ್ ಪ್ರಚಾರಕ್ಕೂ ಪ್ರಿಯಾಂಕಾ ಕೈಜೋಡಿಸಿದ್ದರು. ಪ್ರಿಯಾಂಕಾ ನಟಿಸಿದ್ದ ಸಿಟಾಡೆಲ್ ಪಾತ್ರವನ್ನೇ ಹಿಂದಿಯಲ್ಲಿ ಸಮಂತಾ ಮಾಡಿದ್ದಾರೆ.
ಅಮೆರಿಕನ್ ಸಿಂಗರ್ ನಿಕ್ ಜೋನಸ್ (Nick Jonas) ಜೊತೆ ಪ್ರಿಯಾಂಕಾ 2018ರಲ್ಲಿ ಮದುವೆಯಾದರು. ಹೀಗಾಗಿ ಪತಿ ಜೊತೆ ವಿದೇಶದಲ್ಲಿ ಪ್ರಿಯಾಂಕ ಸೆಟಲ್ ಆಗಿದ್ದಾರೆ.