ನಾವು ಸಾಂಬಾರ್ ಅನ್ನು ವಿವಿಧ ರೀತಿಯಲ್ಲಿ ಮತ್ತು ವಿವಿಧ ತರಕಾರಿಗಳೊಂದಿಗೆ ತಯಾರಿಸುತ್ತೇವೆ. ಪ್ರತಿಯೊಂದು ಸಾಂಬಾರ್ ಅದರದೇ ಆದ ರುಚಿಯನ್ನು ಹೊಂದಿರುತ್ತದೆ. ಹಾಗದ್ರೆ ಇವತ್ತು ನಾವು ಬಸಳೆ ಸೊಪ್ಪಿನ ಹುಳಿ ಮಾಡೋದು ಹೇಗೆ ತಿಳಿಯೋಣ…ಆದರೆ ಅದಕ್ಕೂ ಮೊದಲು ಬಸಳೆ ಸೊಪ್ಪುಗಳು ನಮ್ಮ ಆರೋಗ್ಯಕ್ಕೆ ಎಷ್ಟು ಮುಖ್ಯ ತಿಳಿಯೋಣ…
ಆರೋಗ್ಯಕ್ಕೆ ತುಂಬಾ ಒಳ್ಳೆಯದು: ಇದರಲ್ಲಿ ನಮಗೆ ಬೇಕಾದಂತಹ ಬಹಳಷ್ಟು ವಿಟಮಿನ್ಗಳು, ಮಿನರಲ್ಸ್ ಇರುತ್ತವೆ. ವಿಶೇಷವಾಗಿ ಕಬ್ಬಿಣ ಮತ್ತು ಕ್ಯಾಲ್ಸಿಯಂ ತುಂಬಾ ಇರುತ್ತೆ.
ಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ಬೇಕಾದ ಪೋಷಕಾಂಶಗಳು: ಮಕ್ಕಳು ಬೆಳೆಯಲು ಮತ್ತು ಗರ್ಭಿಣಿಯರಿಗೆ ಆರೋಗ್ಯವಾಗಿರಲು ಬಸಳೆ ಸೊಪ್ಪು ತುಂಬಾ ಒಳ್ಳೆಯದು.
ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ: ನಮ್ಮ ದೇಹವನ್ನು ರೋಗಗಳಿಂದ ಕಾಪಾಡಲು ಇದು ಸಹಾಯ ಮಾಡುತ್ತೆ.
ಬಾಯಿ ಹುಣ್ಣಿಗೆ ರಾಮಬಾಣ: ಬಾಯಿ ಹುಣ್ಣು ಆದಾಗ ಬಸಳೆ ಸೊಪ್ಪು ಅಗಿದರೆ ಬೇಗ ಗುಣವಾಗುತ್ತೆ.
ದೇಹವನ್ನು ತಂಪಾಗಿಡುತ್ತೆ: ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡಲು ಇದು ಸಹಾಯ ಮಾಡುತ್ತೆ.
-ಬಸಳೆ ಸೊಪ್ಪಿನ ಹುಳಿ ಮಾಡುವ ವಿಧಾನ-
-ಪದಾರ್ಥಗಳು-
– ಬಸಳೆ ಸೊಪ್ಪು: 1 ಕಪ್
– ಹೆಸರು ಬೇಳೆ: 1/2 ಕಪ್
– ಟೊಮೆಟೋ: 2
– ಹಸಿಮೆಣಸು: 2-3
– ತೆಂಗಿನಕಾಯಿ ತುರಿ: 1/2 ಕಪ್
– ಹುಣಸೆ ಹಣ್ಣು: 1 ಚಮಚ
– ಸಾಂಬಾರ್ ಪುಡಿ: 2 ಚಮಚ
– ಜೀರಿಗೆ: 1 ಚಮಚ
– ಸಾಸಿವೆ: 1 ಚಮಚ
– ಕರಿಬೇವು: 1 ಕೊಂಬು
– ಉಪ್ಪು: ರುಚಿಗೆ ತಕ್ಕಷ್ಟು
– ಎಣ್ಣೆ: 2 ಚಮಚ
– ಇಂಗು: ಚಿಟಿಕೆ
-ಮಾಡುವ ವಿಧಾನ-
1. ಹೆಸರು ಬೇಳೆಯನ್ನು ತೊಳೆದು ಕುಕ್ಕರ್ನಲ್ಲಿ 2-3 ಸೀಟಿ ಹೊಡೆಸಿ ಬೇಯಿಸಿ.
2. ಟೊಮೆಟೋ, ಹಸಿಮೆಣಸು, ಬಸಳೆ ಸೊಪ್ಪು, ಹುಣಸೆ ಹಣ್ಣು, ಸಾಂಬಾರ್ ಪುಡಿ, ಉಪ್ಪು ಸೇರಿಸಿ 5-10 ನಿಮಿಷ ಕುದಿಸಿಕೊಳ್ಳಿ.
3. ತೆಂಗಿನಕಾಯಿ ತುರಿ, ಜೀರಿಗೆ, ಇಂಗು ಸೇರಿಸಿ ಮಿಕ್ಸಿಯಲ್ಲಿ ರುಬ್ಬಿ, ಈ ಮಿಶ್ರಣವನ್ನು ಸಾಂಬಾರ್ಗೆ ಸೇರಿಸಿ.
4. ಒಗ್ಗರಣೆಗಾಗಿ, ಎಣ್ಣೆ ಕಾದ ನಂತರ ಸಾಸಿವೆ, ಜೀರಿಗೆ, ಕರಿಬೇವು ಹಾಕಿ, ಸಾಂಬಾರ್ಗೆ ಸೇರಿಸಿ.
ರುಚಿಕರವಾದ ಬಸಳೆ ಸೊಪ್ಪಿನ ಹುಳಿ ರೆಡಿ ನೀವು ನಿಮ್ಮ ಉತ್ತಮ ಆರೋಗ್ಯಕ್ಕೆ ಒಮ್ಮೆ ಮಾಡಿ ನೋಡಿ
Tip’s
– ಸಾಂಬಾರ್ಗೆ ನೀರಿನ ಪ್ರಮಾಣವನ್ನು ನಿಮ್ಮ ಇಷ್ಟಕ್ಕೆ ತಕ್ಕಂತೆ ಮಾಡಿಕೊಳ್ಳಿ
– ರುಚಿಗೆ ತಕ್ಕಂತೆ ಹುಣಸೆ ಹಣ್ಣು ಅಥವಾ ಸಾಂಬಾರ್ ಪುಡಿ ಹೆಚ್ಚಿಸಬಹುದು.