ADVERTISEMENT
Monday, March 23, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಅಮಿತ್ ಶಾ ಬಳಿ ರಾಜ್ಯ ಕಮಲ ಪಡೆಯ ಜಾತಕ ಬಿಚ್ಚಿಟ್ಟ ಎಚ್ ಡಿ ಕೆ ಮೈತ್ರಿ ಧರ್ಮ ಪಾಲಿಸದ ನಾಯಕರ ಬಗ್ಗೆ ದೂರು!

Shwetha by Shwetha
March 23, 2026
in ರಾಜ್ಯ, Newsbeat, Politics, State, ರಾಜಕೀಯ
Share on FacebookShare on TwitterShare on WhatsappShare on Telegram

ನವದೆಹಲಿ: ಯುಗಾದಿ ಹಬ್ಬದ ಶುಭಾಶಯ ಕೋರುವ ನೆಪದಲ್ಲಿ ರಾಷ್ಟ್ರ ರಾಜಧಾನಿಗೆ ಭೇಟಿ ನೀಡಿರುವ ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ರಾಜ್ಯ ಬಿಜೆಪಿ ನಾಯಕರ ವಿರುದ್ಧ ಹೈಕಮಾಂಡ್ ಅಂಗಳದಲ್ಲಿ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಮೈತ್ರಿ ಧರ್ಮವನ್ನು ಪಾಲಿಸದೆ ಏಕಪಕ್ಷೀಯವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವ ಕರ್ನಾಟಕದ ಕಮಲ ನಾಯಕರ ನಡೆಯ ಬಗ್ಗೆ ಅವರು ಗೃಹ ಸಚಿವ ಅಮಿತ್ ಶಾ ಅವರಿಗೆ ನೇರವಾಗಿಯೇ ದೂರು ನೀಡಿದ್ದಾರೆ.

ನವದೆಹಲಿಯಲ್ಲಿ ಪುತ್ರ ನಿಖಿಲ್ ಕುಮಾರಸ್ವಾಮಿ ಅವರೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ಕುಮಾರಸ್ವಾಮಿ ಅವರು, ಕರ್ನಾಟಕದ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಬಗ್ಗೆ ಸುದೀರ್ಘ ಮಾತುಕತೆ ನಡೆಸಿದ್ದಾರೆ. ಇದಕ್ಕೂ ಮುನ್ನ ಬಿಜೆಪಿ ನಾಯಕರಾದ ನಿತಿನ್ ನವೀನ್ ಹಾಗೂ ಆರೋಗ್ಯ ಸಚಿವ ಮತ್ತು ಪಕ್ಷದ ಮಾಜಿ ಅಧ್ಯಕ್ಷರಾದ ಜೆ ಪಿ ನಡ್ಡಾ ಅವರನ್ನು ಕೂಡ ಭೇಟಿಯಾಗಿ ಚರ್ಚಿಸಿದ್ದರು. ಈ ಎಲ್ಲಾ ಭೇಟಿಗಳ ಹಿಂದಿನ ಪ್ರಮುಖ ಉದ್ದೇಶ ರಾಜ್ಯ ಬಿಜೆಪಿ ನಾಯಕರ ಕಡೆಗಣಿಸುವ ಧೋರಣೆಯ ವಿರುದ್ಧ ಹೈಕಮಾಂಡ್ ಗಮನ ಸೆಳೆಯುವುದೇ ಆಗಿತ್ತು ಎಂಬುದು ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.

Related posts

ಚುನಾವಣೆಗೂ ಮುನ್ನವೇ ಬಾಗಲಕೋಟೆಯಲ್ಲಿ ಬಿಜೆಪಿ ಆಪರೇಷನ್ ಶುರು: ಕಾಂಗ್ರೆಸ್ ಶಿಬಿರದಲ್ಲಿ ಆತಂಕದ ಕಾರ್ಮೋಡ

ಚುನಾವಣೆಗೂ ಮುನ್ನವೇ ಬಾಗಲಕೋಟೆಯಲ್ಲಿ ಬಿಜೆಪಿ ಆಪರೇಷನ್ ಶುರು: ಕಾಂಗ್ರೆಸ್ ಶಿಬಿರದಲ್ಲಿ ಆತಂಕದ ಕಾರ್ಮೋಡ

March 23, 2026
ಕಂಟೆಂಟ್ ಇದ್ದರೆ ಗೆಲುವು ಪಕ್ಕಾ : ಬಾಲಿವುಡ್ ಟಾಲಿವುಡ್ ಚಿತ್ರಗಳಿಗೂ ಟಕ್ಕರ್ ಕೊಟ್ಟ ಡಾರ್ಲಿಂಗ್ ಕೃಷ್ಣ ; ಬಾಕ್ಸ್ ಆಫೀಸ್ ಧೂಳಿಪಟ ಮಾಡಿದ ಲವ್ ಮಾಕ್ಟೇಲ್ 3

ಕಂಟೆಂಟ್ ಇದ್ದರೆ ಗೆಲುವು ಪಕ್ಕಾ : ಬಾಲಿವುಡ್ ಟಾಲಿವುಡ್ ಚಿತ್ರಗಳಿಗೂ ಟಕ್ಕರ್ ಕೊಟ್ಟ ಡಾರ್ಲಿಂಗ್ ಕೃಷ್ಣ ; ಬಾಕ್ಸ್ ಆಫೀಸ್ ಧೂಳಿಪಟ ಮಾಡಿದ ಲವ್ ಮಾಕ್ಟೇಲ್ 3

March 23, 2026

ಇತ್ತೀಚೆಗೆ ವಿಧಾನ ಪರಿಷತ್ತಿನ ನಾಲ್ಕು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿ ರಾಜ್ಯ ಬಿಜೆಪಿ ನಾಯಕರು ಕನಿಷ್ಠ ಸೌಜನ್ಯಕ್ಕಾದರೂ ಮೈತ್ರಿ ಪಕ್ಷವಾದ ಜೆಡಿಎಸ್ ನಾಯಕರ ಅಭಿಪ್ರಾಯ ಕೇಳಿಲ್ಲ ಎಂದು ಅಮಿತ್ ಶಾ ಅವರ ಗಮನಕ್ಕೆ ತರಲಾಗಿದೆ. ವಿಶೇಷವಾಗಿ ಆಗ್ನೇಯ ಪದವೀಧರರ ಕ್ಷೇತ್ರವನ್ನು ಈ ಹಿಂದೆ ಜೆಡಿಎಸ್ ಗೆದ್ದುಕೊಂಡಿತ್ತು. ಈ ಬಾರಿಯೂ ಆ ಕ್ಷೇತ್ರವನ್ನು ತಮಗೆ ಬಿಟ್ಟುಕೊಡುವಂತೆ ಜೆಡಿಎಸ್ ನಾಯಕರು ಮನವಿ ಮಾಡಿದ್ದರು.

ಆದರೆ ರಾಜ್ಯ ಬಿಜೆಪಿ ನಾಯಕರು ಮೈತ್ರಿ ಪಕ್ಷದ ಜೊತೆ ಯಾವುದೇ ಪ್ರಾಥಮಿಕ ಚರ್ಚೆ ನಡೆಸದೆ, ಕೋರ್ ಕಮಿಟಿ ಸಭೆಗಳಲ್ಲೂ ಪ್ರಸ್ತಾಪಿಸದೆ ನೇರವಾಗಿ ತಮ್ಮ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ದೆಹಲಿಗೆ ರವಾನಿಸಿದ್ದಾರೆ. ಅಂತಿಮವಾಗಿ ಕೇವಲ ಬೆಂಗಳೂರು ಶಿಕ್ಷಕರ ಕ್ಷೇತ್ರವನ್ನು ಮಾತ್ರ ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಡಲಾಗಿದೆ. ಒಟ್ಟಾಗಿ ಚುನಾವಣೆ ಎದುರಿಸುವಾಗ ರಾಜ್ಯ ಬಿಜೆಪಿ ನಾಯಕರ ಈ ರೀತಿಯ ಅಸಹಕಾರ ಮತ್ತು ಏಕಪಕ್ಷೀಯ ಧೋರಣೆ ಒಕ್ಕೂಟ ವ್ಯವಸ್ಥೆಗೆ ಸರಿಯಲ್ಲ ಎಂದು ಕುಮಾರಸ್ವಾಮಿ ಅವರು ರಾಷ್ಟ್ರೀಯ ನಾಯಕರ ಮುಂದೆ ಕಟುವಾಗಿಯೇ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದರ ಜೊತೆಗೆ ಮುಂಬರುವ ರಾಜ್ಯಸಭಾ ಚುನಾವಣೆ ವಿಚಾರ ಕೂಡ ಮೈತ್ರಿ ನಾಯಕರ ನಡುವೆ ಹೊಸ ಹಗ್ಗಜಗ್ಗಾಟಕ್ಕೆ ವೇದಿಕೆ ಸೃಷ್ಟಿಸಿದೆ. ಜೂನ್ ತಿಂಗಳಲ್ಲಿ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಾಲ್ವರು ಸದಸ್ಯರ ಅಧಿಕಾರಾವಧಿ ಮುಕ್ತಾಯಗೊಳ್ಳಲಿದ್ದು, ಇದರಲ್ಲಿ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ಸ್ಥಾನವೂ ಸೇರಿದೆ.

ವಿಧಾನಸಭೆಯ ಸಂಖ್ಯಾಬಲದ ಆಧಾರದ ಮೇಲೆ ಒಟ್ಟು ನಾಲ್ಕು ಸ್ಥಾನಗಳ ಪೈಕಿ ಮೂರು ಸ್ಥಾನಗಳಲ್ಲಿ ಆಡಳಿತಾರೂಢ ಕಾಂಗ್ರೆಸ್ ಸುಲಭವಾಗಿ ಗೆಲುವು ಸಾಧಿಸಲಿದೆ. ಉಳಿದ ಒಂದು ಸ್ಥಾನವನ್ನು ಗೆಲ್ಲಲು ಬಿಜೆಪಿಗೆ ಜೆಡಿಎಸ್ ಬೆಂಬಲದ ಅಗತ್ಯವಿಲ್ಲ. ಆದರೂ ಮೈತ್ರಿ ಧರ್ಮದ ಆಧಾರದ ಮೇಲೆ ಹಾಗೂ ಹಿರಿಯ ನಾಯಕರಾಗಿರುವ ಕಾರಣಕ್ಕೆ ಈ ಏಕೈಕ ಸ್ಥಾನವನ್ನು ದೇವೇಗೌಡರಿಗೆ ಬಿಟ್ಟುಕೊಡಬೇಕು ಎಂಬುದು ಜೆಡಿಎಸ್ ಪಾಳೆಯದ ಬಲವಾದ ಆಗ್ರಹವಾಗಿದೆ.

ಆದರೆ ರಾಜ್ಯ ಬಿಜೆಪಿಯಲ್ಲಿ ಬಿ ಎಸ್ ಯಡಿಯೂರಪ್ಪ ಅವರ ಬಣವು ಮಾಜಿ ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಡಿ ವಿ ಸದಾನಂದ ಗೌಡ ಅವರನ್ನು ರಾಜ್ಯಸಭೆಗೆ ಕಳುಹಿಸಲು ತೀವ್ರ ಕಸರತ್ತು ನಡೆಸುತ್ತಿದೆ. ಈ ವಿಚಾರವೂ ಇದೀಗ ಹೈಕಮಾಂಡ್ ಮೆಟ್ಟಿಲೇರಿದ್ದು, ರಾಜ್ಯಸಭಾ ಟಿಕೆಟ್ ಹಂಚಿಕೆ ವಿಚಾರದಲ್ಲಿ ಜೆಡಿಎಸ್ ಪಕ್ಷಕ್ಕೆ ಆಗುತ್ತಿರುವ ಮುಜುಗರವನ್ನು ಕುಮಾರಸ್ವಾಮಿ ಅವರು ಅಮಿತ್ ಶಾ ಅವರ ಬಳಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಒಟ್ಟಾರೆಯಾಗಿ ಲೋಕಸಭಾ ಚುನಾವಣೆಯ ಬಳಿಕ ರಾಜ್ಯದಲ್ಲಿ ಎನ್ ಡಿ ಎ ಮೈತ್ರಿಕೂಟವನ್ನು ಇನ್ನಷ್ಟು ಸಮನ್ವಯದಿಂದ ಕೊಂಡೊಯ್ಯಬೇಕಾದ ಸಮಯದಲ್ಲಿ, ಟಿಕೆಟ್ ಹಂಚಿಕೆ ವಿಚಾರದಲ್ಲಿ ರಾಜ್ಯ ನಾಯಕರ ನಡುವೆ ಭಿನ್ನಮತ ಭುಗಿಲೆದ್ದಿರುವುದು ಸ್ಪಷ್ಟವಾಗಿದೆ. ಇದೀಗ ಚೆಂಡು ಅಮಿತ್ ಶಾ ಹಾಗೂ ರಾಷ್ಟ್ರೀಯ ನಾಯಕರ ಅಂಗಳದಲ್ಲಿದ್ದು, ರಾಜ್ಯ ಬಿಜೆಪಿ ನಾಯಕರ ಏಕಪಕ್ಷೀಯ ನಡೆಗಳಿಗೆ ದೆಹಲಿ ವರಿಷ್ಠರು ಯಾವ ರೀತಿಯಲ್ಲಿ ಪ್ರತಿಕ್ರಿಯಿಸಲಿದ್ದಾರೆ ಕಾದು ನೋಡಬೇಕಿದೆ.

ShareTweetSendShare
Join us on:

Related Posts

ಚುನಾವಣೆಗೂ ಮುನ್ನವೇ ಬಾಗಲಕೋಟೆಯಲ್ಲಿ ಬಿಜೆಪಿ ಆಪರೇಷನ್ ಶುರು: ಕಾಂಗ್ರೆಸ್ ಶಿಬಿರದಲ್ಲಿ ಆತಂಕದ ಕಾರ್ಮೋಡ

ಚುನಾವಣೆಗೂ ಮುನ್ನವೇ ಬಾಗಲಕೋಟೆಯಲ್ಲಿ ಬಿಜೆಪಿ ಆಪರೇಷನ್ ಶುರು: ಕಾಂಗ್ರೆಸ್ ಶಿಬಿರದಲ್ಲಿ ಆತಂಕದ ಕಾರ್ಮೋಡ

by Shwetha
March 23, 2026
0

ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ದಿವಂಗತ ಎಚ್ ವೈ ಮೇಟಿ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಏಪ್ರಿಲ್ 9 ರಂದು ನಡೆಯಲಿರುವ ಉಪಚುನಾವಣೆ ರಾಜ್ಯ ರಾಜಕಾರಣದಲ್ಲಿ ಭಾರಿ...

ಕಂಟೆಂಟ್ ಇದ್ದರೆ ಗೆಲುವು ಪಕ್ಕಾ : ಬಾಲಿವುಡ್ ಟಾಲಿವುಡ್ ಚಿತ್ರಗಳಿಗೂ ಟಕ್ಕರ್ ಕೊಟ್ಟ ಡಾರ್ಲಿಂಗ್ ಕೃಷ್ಣ ; ಬಾಕ್ಸ್ ಆಫೀಸ್ ಧೂಳಿಪಟ ಮಾಡಿದ ಲವ್ ಮಾಕ್ಟೇಲ್ 3

ಕಂಟೆಂಟ್ ಇದ್ದರೆ ಗೆಲುವು ಪಕ್ಕಾ : ಬಾಲಿವುಡ್ ಟಾಲಿವುಡ್ ಚಿತ್ರಗಳಿಗೂ ಟಕ್ಕರ್ ಕೊಟ್ಟ ಡಾರ್ಲಿಂಗ್ ಕೃಷ್ಣ ; ಬಾಕ್ಸ್ ಆಫೀಸ್ ಧೂಳಿಪಟ ಮಾಡಿದ ಲವ್ ಮಾಕ್ಟೇಲ್ 3

by Shwetha
March 23, 2026
0

ಕರುನಾಡಿನ ಪ್ರೇಕ್ಷಕರ ನಾಡಿಮಿಡಿತ ಅರಿತ ಕ್ಯೂಟ್ ಕಪಲ್ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಕಾಂಬಿನೇಷನ್ ಅಂದರೆ ಅಲ್ಲಿ ಮ್ಯಾಜಿಕ್ ಗ್ಯಾರಂಟಿ. ಲವ್ ಮಾಕ್ಟೇಲ್ ಸರಣಿಯ ಮೂಲಕ...

ಭಾರತೀಯ ರಾಜಕೀಯದಲ್ಲಿ ಹೊಸ ಶಕೆ ಅತಿ ದೀರ್ಘಕಾಲ ಸರ್ಕಾರದ ಮುಖ್ಯಸ್ಥರಾಗಿ ಪ್ರಧಾನಿ ಮೋದಿ ಐತಿಹಾಸಿಕ ದಾಖಲೆ

ಭಾರತೀಯ ರಾಜಕೀಯದಲ್ಲಿ ಹೊಸ ಶಕೆ ಅತಿ ದೀರ್ಘಕಾಲ ಸರ್ಕಾರದ ಮುಖ್ಯಸ್ಥರಾಗಿ ಪ್ರಧಾನಿ ಮೋದಿ ಐತಿಹಾಸಿಕ ದಾಖಲೆ

by Shwetha
March 23, 2026
0

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ರಾಜಕೀಯ ಇತಿಹಾಸದಲ್ಲಿ ಮತ್ತೊಂದು ಬೃಹತ್ ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ. ಭಾನುವಾರ ಭಾರತದಲ್ಲಿ ಅತ್ಯಂತ ದೀರ್ಘಕಾಲದವರೆಗೆ ಸರ್ಕಾರದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ...

ನಮ್ಮ ಮೇಲೆ ಅಮೆರಿಕ ಯುದ್ಧ ಸಾರಿದರೆ ನವದೆಹಲಿ ಮುಂಬೈ ಮೇಲೆ ದಾಳಿ ಮಾಡುತ್ತೇವೆ ಎಂದ ಪಾಕಿಸ್ತಾನ

ನಮ್ಮ ಮೇಲೆ ಅಮೆರಿಕ ಯುದ್ಧ ಸಾರಿದರೆ ನವದೆಹಲಿ ಮುಂಬೈ ಮೇಲೆ ದಾಳಿ ಮಾಡುತ್ತೇವೆ ಎಂದ ಪಾಕಿಸ್ತಾನ

by Shwetha
March 23, 2026
0

ಪಾಕಿಸ್ತಾನದ ನಾಯಕರು ಮತ್ತು ಅಧಿಕಾರಿಗಳ ಬಾಯಲ್ಲಿ ಭಾರತದ ಮೇಲಿನ ದ್ವೇಷ ಆಗಾಗ್ಗೆ ಹೊರಬೀಳುತ್ತಲೇ ಇರುತ್ತದೆ. ಇದೀಗ ಭಾರತದಲ್ಲಿ ಪಾಕಿಸ್ತಾನದ ಮಾಜಿ ಹೈಕಮಿಷನರ್ ಆಗಿ ಕಾರ್ಯನಿರ್ವಹಿಸಿದ್ದ ಅಬ್ದುಲ್ ಬಾಸಿತ್...

ಪಾಠ ಕಲಿಸ್ತೀವಿ ಎಂದ ಮುಸ್ಲಿಂ ನಾಯಕರು : ನಲವತ್ತು ವರ್ಷದ ಸೇವೆ ಕಡೆಗಣನೆ ಕಾಂಗ್ರೆಸ್ ವಿರುದ್ಧ ಸಿಡಿದೆದ್ದ ದಾವಣಗೆರೆಯ ಅಲ್ಪಸಂಖ್ಯಾತರು

ಪಾಠ ಕಲಿಸ್ತೀವಿ ಎಂದ ಮುಸ್ಲಿಂ ನಾಯಕರು : ನಲವತ್ತು ವರ್ಷದ ಸೇವೆ ಕಡೆಗಣನೆ ಕಾಂಗ್ರೆಸ್ ವಿರುದ್ಧ ಸಿಡಿದೆದ್ದ ದಾವಣಗೆರೆಯ ಅಲ್ಪಸಂಖ್ಯಾತರು

by Shwetha
March 23, 2026
0

ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಕಾಂಗ್ರೆಸ್ ತನ್ನ ಅಧಿಕೃತ ಅಭ್ಯರ್ಥಿಗಳನ್ನು ಅಖಾಡಕ್ಕಿಳಿಸಿದೆ. ಆದರೆ ಟಿಕೆಟ್ ಘೋಷಣೆಯಾದ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram