ಮಾ.30ರಂದು ನಡೆಯಬೇಕಿದ್ದ SSLC ತೃತೀಯ ಭಾಷೆ ಪರೀಕ್ಷೆಯನ್ನು ಮಾ.31ಕ್ಕೆ ಮುಂದೂಡಲಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷಾ ಮಂಡಳಿ ತಿಳಿಸಿದೆ.
ಮಹಾವೀರ ಜಯಂತಿ ರಜೆಯಲ್ಲಿ ಮಾಡಿದ ಪರಿಷ್ಕರಣೆ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಮೊದಲು ಮಾ.31ರಂದು ರಜೆ ಇರುವುದರಿಂದ ಪರೀಕ್ಷೆಯನ್ನು ಮಾ.30ಕ್ಕೆ ನಿಗದಿಪಡಿಸಲಾಗಿತ್ತು. ಆದರೆ ಇದೀಗ ಸರ್ಕಾರ ಮಾ.31ರ ರಜೆಯನ್ನು ಮಾ.30ಕ್ಕೆ ಬದಲಾಯಿಸಿರುವುದರಿಂದ, ಪರೀಕ್ಷೆಯನ್ನು ಮರುನಿಗದಿಪಡಿಸಲಾಗಿದೆ.
ಈ ಹಿನ್ನೆಲೆ, SSLC ವಿದ್ಯಾರ್ಥಿಗಳು ಮಾ.31ರಂದು ಪರೀಕ್ಷೆಗೆ ಹಾಜರಾಗಬೇಕಿದೆ ಎಂದು ಮಂಡಳಿ ಸ್ಪಷ್ಟಪಡಿಸಿದೆ.







