ADVERTISEMENT
Wednesday, April 22, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ನಾನು ಒಬ್ಬ ಒಳ್ಳೆಯ ಮಗನಾಗಲು ಆಗಲೇ ಇಲ್ಲ ; ತಂದೆಯ ಮಂತ್ರಿಗಿರಿ ತಪ್ಪಿಸಲು ಇಡಿ ದಾಳಿ ಹಾರಿಸ್ ಪುತ್ರನ ಗಂಭೀರ ಆರೋಪ

Shwetha by Shwetha
April 22, 2026
in ರಾಜ್ಯ, Newsbeat, State
Share on FacebookShare on TwitterShare on WhatsappShare on Telegram

ಬೆಂಗಳೂರಿನ ಶಾಂತಿನಗರ ಶಾಸಕ ಎನ್ ಎ ಹಾರಿಸ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಡೆಸಿದ ಸುದೀರ್ಘ ದಾಳಿಯು ರಾಜ್ಯ ರಾಜಕಾರಣದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ಈ ಕಾರ್ಯಾಚರಣೆಯ ನಂತರ ಮೊದಲ ಬಾರಿಗೆ ಮಾಧ್ಯಮಗಳ ಮುಂದೆ ಬಂದಿರುವ ಯೂತ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಹಾರಿಸ್ ನಲಪಾಡ್, ಇಡಿ ದಾಳಿಯ ಹಿಂದೆ ರಾಜಕೀಯ ಪಿತೂರಿ ಅಡಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಈ ದಾಳಿಯು ನಮ್ಮ ತಂದೆಯವರನ್ನು ಗುರಿಯಾಗಿಸಿಕೊಂಡು ನಡೆಸಿದ್ದಲ್ಲ, ಬದಲಾಗಿ ನಾನು ಮತ್ತು ನನ್ನ ಸಹೋದರ ಉಮರ್ ಹ್ಯಾರಿಸ್ ನಲಪಾಡ್ ಅವರನ್ನು ಸಿಲುಕಿಸುವ ಪ್ರಯತ್ನವಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಪ್ರಮುಖವಾಗಿ ತಮ್ಮ ತಂದೆ ಎನ್ ಎ ಹಾರಿಸ್ ಅವರಿಗೆ ಸಚಿವ ಸ್ಥಾನ ಸಿಗದಂತೆ ತಡೆಯುವ ಉದ್ದೇಶದಿಂದ ಈ ಸಮಯವನ್ನೇ ಆಯ್ದುಕೊಂಡು ದಾಳಿ ನಡೆಸಲಾಗಿದೆ. ನಾವು ಶಾಸಕರ ಮಕ್ಕಳು ಮತ್ತು ಅದೇ ಮನೆಯಲ್ಲಿ ವಾಸಿಸುತ್ತಿದ್ದೇವೆ ಎಂಬ ಕಾರಣಕ್ಕೆ ಅಧಿಕಾರಿಗಳು ಇಲ್ಲಿಗೆ ಬಂದಿದ್ದಾರೆ ಹೊರತು, ನಮ್ಮ ತಂದೆಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಅವರು ತಿಳಿಸಿದ್ದಾರೆ.

Related posts

ಮತ ಹಾಕಿದ ಸಮುದಾಯಕ್ಕೆ ಕಾಂಗ್ರೆಸ್ ತಾರತಮ್ಯ ರಾಜ್ಯಾದ್ಯಂತ ಮುಸ್ಲಿಂ ಸಂಘಟನೆಗಳ ತೀವ್ರ ಆಕ್ರೋಶ

ಮತ ಹಾಕಿದ ಸಮುದಾಯಕ್ಕೆ ಕಾಂಗ್ರೆಸ್ ತಾರತಮ್ಯ ರಾಜ್ಯಾದ್ಯಂತ ಮುಸ್ಲಿಂ ಸಂಘಟನೆಗಳ ತೀವ್ರ ಆಕ್ರೋಶ

April 22, 2026
ನಾನು ಹಿಂದೆ ಸರಿಯಲ್ಲ ನಿಮ್ಮ ಭ್ರಮೆಗಳಿಗೆ ಮಣಿಯುವ ಪ್ರಶ್ನೆಯೇ ಇಲ್ಲ ಅರವಿಂದ್ ಕೇಜ್ರಿವಾಲ್ ಗೆ ಹೈಕೋರ್ಟ್ ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಖಡಕ್ ಉತ್ತರ

ನಾನು ಹಿಂದೆ ಸರಿಯಲ್ಲ ನಿಮ್ಮ ಭ್ರಮೆಗಳಿಗೆ ಮಣಿಯುವ ಪ್ರಶ್ನೆಯೇ ಇಲ್ಲ ಅರವಿಂದ್ ಕೇಜ್ರಿವಾಲ್ ಗೆ ಹೈಕೋರ್ಟ್ ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಖಡಕ್ ಉತ್ತರ

April 22, 2026

ತನಿಖಾ ಸಂಸ್ಥೆಗಳ ಕಾರ್ಯವೈಖರಿಯನ್ನು ಪ್ರಶ್ನಿಸಿದ ನಲಪಾಡ್, 2021 ರಲ್ಲಿ ಇಸಿಐಆರ್ ದಾಖಲಾಗಿದ್ದರೂ ಐದಾರು ವರ್ಷಗಳ ನಂತರ ದಾಳಿ ಮಾಡಿರುವುದರ ಔಚಿತ್ಯವೇನು ಎಂದು ಕೇಳಿದ್ದಾರೆ. ಯಾರಾದರೂ ತಪ್ಪು ಮಾಡಿದ್ದರೆ ಇಷ್ಟು ವರ್ಷಗಳ ಕಾಲ ಸಾಕ್ಷ್ಯಗಳನ್ನು ಇಟ್ಟುಕೊಂಡು ಅಧಿಕಾರಿಗಳು ಕಾಯುತ್ತಾರೆಯೇ? ಇದು ಕೇವಲ ನಮ್ಮ ಕುಟುಂಬದ ಮೇಲೆ ಗೂಬೆ ಕೂರಿಸುವ ಮತ್ತು ರಾಜಕೀಯವಾಗಿ ಹತ್ತಿಕ್ಕುವ ಬಿಜೆಪಿ ತಂತ್ರ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ. ಬಿಟ್‌ಕಾಯಿನ್ ಪ್ರಕರಣದಲ್ಲಿ ಈ ಹಿಂದೆ ಬಿಜೆಪಿಯೇ ಯಾವುದೇ ಅಕ್ರಮ ನಡೆದಿಲ್ಲ ಎಂದು ಹೇಳಿತ್ತು ಮತ್ತು ಎಸ್ಐಟಿ ತನಿಖೆಯಲ್ಲೂ ಏನೂ ಪತ್ತೆಯಾಗಿಲ್ಲ. ಹೀಗಿದ್ದರೂ ಸತತ 21 ಗಂಟೆಗಳ ಕಾಲ ನಮ್ಮನ್ನು ವಿಚಾರಣೆ ನಡೆಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ದಾಳಿಯ ವೇಳೆ ಅಧಿಕಾರಿಗಳಿಗೆ ಮನೆಯಲ್ಲಿ ಒಂದು ನಯಾಪೈಸೆ ಕೂಡ ಸಿಕ್ಕಿಲ್ಲ. ಕೇವಲ ಎರಡು ಮೊಬೈಲ್ ಫೋನ್‌ಗಳನ್ನು ಮಾತ್ರ ವಶಕ್ಕೆ ಪಡೆದಿದ್ದಾರೆ ಎಂದು ಸ್ಪಷ್ಟಪಡಿಸಿದ ನಲಪಾಡ್, ಇಷ್ಟೆಲ್ಲಾ ಹೈಡ್ರಾಮಾ ನಡೆದರೂ ಶೂನ್ಯ ಫಲಿತಾಂಶ ಬಂದಿದೆ ಎಂದು ವ್ಯಂಗ್ಯವಾಡಿದ್ದಾರೆ.

ಇದೇ ಸಂದರ್ಭದಲ್ಲಿ ಅತ್ಯಂತ ಭಾವುಕರಾಗಿ ಮಾತನಾಡಿದ ನಲಪಾಡ್, ತಮ್ಮ ವೈಯಕ್ತಿಕ ಜೀವನದ ನೋವನ್ನು ಹಂಚಿಕೊಂಡಿದ್ದಾರೆ. ನಾನು ಒಬ್ಬ ಒಳ್ಳೆಯ ಮಗನಾಗಲು ಆಗಲೇ ಇಲ್ಲ, ಯಾವಾಗಲೂ ನನ್ನಿಂದ ನನ್ನ ತಂದೆ ತಾಯಿಗೆ ಕೆಟ್ಟ ಹೆಸರೇ ಬಂದಿದೆ ಎಂದು ಕಣ್ಣೀರು ಹಾಕಿದ್ದಾರೆ. ಯೂತ್ ಕಾಂಗ್ರೆಸ್ ಅಧ್ಯಕ್ಷನಾಗಿ ಜನಸೇವೆ ಮಾಡುವ ಮೂಲಕ ಪೋಷಕರಿಗೆ ಕೀರ್ತಿ ತರಬೇಕು ಎಂದು ಹಂಬಲಿಸುತ್ತಿದ್ದೇನೆ. ಆದರೆ ಪದೇ ಪದೇ ಇಂತಹ ಪ್ರಕರಣಗಳನ್ನು ಸೃಷ್ಟಿಸಿ ನಮ್ಮನ್ನು ಮತ್ತು ನಮ್ಮ ಕುಟುಂಬವನ್ನು ಗುರಿಯಾಗಿಸಲಾಗುತ್ತಿದೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ. ಒಟ್ಟಾರೆಯಾಗಿ ಈ ದಾಳಿಯು ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂಬುದು ನಲಪಾಡ್ ಅವರ ಪ್ರಬಲ ವಾದವಾಗಿದೆ.

ShareTweetSendShare
Join us on:

Related Posts

ಮತ ಹಾಕಿದ ಸಮುದಾಯಕ್ಕೆ ಕಾಂಗ್ರೆಸ್ ತಾರತಮ್ಯ ರಾಜ್ಯಾದ್ಯಂತ ಮುಸ್ಲಿಂ ಸಂಘಟನೆಗಳ ತೀವ್ರ ಆಕ್ರೋಶ

ಮತ ಹಾಕಿದ ಸಮುದಾಯಕ್ಕೆ ಕಾಂಗ್ರೆಸ್ ತಾರತಮ್ಯ ರಾಜ್ಯಾದ್ಯಂತ ಮುಸ್ಲಿಂ ಸಂಘಟನೆಗಳ ತೀವ್ರ ಆಕ್ರೋಶ

by Shwetha
April 22, 2026
0

ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯ ಬೆಳವಣಿಗೆಗಳ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಭದ್ರ ಬುನಾದಿಯಾಗಿ ನಿಂತಿರುವ ಮುಸ್ಲಿಂ ಸಮುದಾಯವು ಈಗ ಸರ್ಕಾರದ...

ನಾನು ಹಿಂದೆ ಸರಿಯಲ್ಲ ನಿಮ್ಮ ಭ್ರಮೆಗಳಿಗೆ ಮಣಿಯುವ ಪ್ರಶ್ನೆಯೇ ಇಲ್ಲ ಅರವಿಂದ್ ಕೇಜ್ರಿವಾಲ್ ಗೆ ಹೈಕೋರ್ಟ್ ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಖಡಕ್ ಉತ್ತರ

ನಾನು ಹಿಂದೆ ಸರಿಯಲ್ಲ ನಿಮ್ಮ ಭ್ರಮೆಗಳಿಗೆ ಮಣಿಯುವ ಪ್ರಶ್ನೆಯೇ ಇಲ್ಲ ಅರವಿಂದ್ ಕೇಜ್ರಿವಾಲ್ ಗೆ ಹೈಕೋರ್ಟ್ ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಖಡಕ್ ಉತ್ತರ

by Shwetha
April 22, 2026
0

ದೆಹಲಿ ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ದೆಹಲಿ ಹೈಕೋರ್ಟ್ ನಲ್ಲಿ ಭಾರಿ ಮುಖಭಂಗವಾಗಿದೆ. ಈ ಪ್ರಕರಣದ ವಿಚಾರಣೆಯಿಂದ ನ್ಯಾಯಮೂರ್ತಿ ಸ್ವರ್ಣ...

ಮೋದಿಯನ್ನು ಭಯೋತ್ಪಾದಕ ಎಂದ ಖರ್ಗೆ: ಕೈ ನಾಯಕನ ಹೇಳಿಕೆಗೆ ಕಮಲ ನಾಯಕರ ಆಕ್ರೋಶ

ಮೋದಿಯನ್ನು ಭಯೋತ್ಪಾದಕ ಎಂದ ಖರ್ಗೆ: ಕೈ ನಾಯಕನ ಹೇಳಿಕೆಗೆ ಕಮಲ ನಾಯಕರ ಆಕ್ರೋಶ

by Shwetha
April 22, 2026
0

ತಮಿಳುನಾಡು ವಿಧಾನಸಭಾ ಚುನಾವಣಾ ಪ್ರಚಾರದ ಕಣದಲ್ಲಿರುವ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ನೀಡಿರುವ ವಿವಾದಾತ್ಮಕ ಹೇಳಿಕೆ...

ನನ್ನಿಂದ ಆಕಾಶವನ್ನೇ ಭೂಮಿಗೆ ಇಳಿಸಲು ಸಾಧ್ಯವಿಲ್ಲ: ಮತದಾರರ ನಡೆಗೆ ಸಚಿವ ಚಲುವರಾಯಸ್ವಾಮಿ ತೀವ್ರ ಅಸಮಾಧಾನ

ನನ್ನಿಂದ ಆಕಾಶವನ್ನೇ ಭೂಮಿಗೆ ಇಳಿಸಲು ಸಾಧ್ಯವಿಲ್ಲ: ಮತದಾರರ ನಡೆಗೆ ಸಚಿವ ಚಲುವರಾಯಸ್ವಾಮಿ ತೀವ್ರ ಅಸಮಾಧಾನ

by Shwetha
April 22, 2026
0

ನಾಗಮಂಗಲ ತಾಲೂಕಿನ ಅಭಿವೃದ್ಧಿಗಾಗಿ ಜನರ ನಿರೀಕ್ಷೆಗೂ ಮೀರಿ ಅಹೋರಾತ್ರಿ ಶ್ರಮಿಸುತ್ತಿದ್ದರೂ ಸಹ ಸಾರ್ವಜನಿಕರಲ್ಲಿ ತೃಪ್ತಿ ಕಾಣುತ್ತಿಲ್ಲದಿರುವುದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅವರ...

ಜಾಗತಿಕ ಶಾಂತಿಯ ಹರಿಕಾರರು: ಶೆಹಬಾಜ್ ಶರೀಫ್ ಮತ್ತು ಅಸೀಮ್ ಮುನೀರ್‌ಗೆ ನೊಬೆಲ್ ಗೌರವಕ್ಕಾಗಿ ಪಾಕ್ ಅಸೆಂಬ್ಲಿಯಲ್ಲಿ ಮೊಳಗಿದ ಧ್ವನಿ

ಜಾಗತಿಕ ಶಾಂತಿಯ ಹರಿಕಾರರು: ಶೆಹಬಾಜ್ ಶರೀಫ್ ಮತ್ತು ಅಸೀಮ್ ಮುನೀರ್‌ಗೆ ನೊಬೆಲ್ ಗೌರವಕ್ಕಾಗಿ ಪಾಕ್ ಅಸೆಂಬ್ಲಿಯಲ್ಲಿ ಮೊಳಗಿದ ಧ್ವನಿ

by Shwetha
April 22, 2026
0

ಪಾಕಿಸ್ತಾನದ ರಾಜಕೀಯ ವಲಯದಲ್ಲಿ ಈಗ ನೊಬೆಲ್ ಶಾಂತಿ ಪ್ರಶಸ್ತಿಯ ವಿಚಾರ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ಪ್ರಾದೇಶಿಕ ಉದ್ವಿಗ್ನತೆಯನ್ನು ಶಮನಗೊಳಿಸುವಲ್ಲಿ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನದ ಗೌರವವನ್ನು...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram