ADVERTISEMENT
Friday, June 12, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಜಮೀರ್ ವಿರುದ್ಧ ಸಿದ್ದರಾಮಯ್ಯ ಅಸಮಾಧಾನ; ಸಚಿವ ಸ್ಥಾನ ಕೈತಪ್ಪಲು ಇದೇ ಕಾರಣವೇ?

Shwetha by Shwetha
June 12, 2026
in ರಾಜ್ಯ, Newsbeat, Politics, State, ರಾಜಕೀಯ
Share on FacebookShare on TwitterShare on WhatsappShare on Telegram

ರಾಜಕೀಯದಲ್ಲಿ ಶಾಶ್ವತ ಶತ್ರುಗಳೂ ಇಲ್ಲ, ಶಾಶ್ವತ ಮಿತ್ರರೂ ಇಲ್ಲ ಎಂಬ ಮಾತಿಗೆ ಮತ್ತೊಮ್ಮೆ ಪುಷ್ಟಿ ಸಿಕ್ಕಂತಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಆಪ್ತರೆಂದು ಗುರುತಿಸಿಕೊಂಡಿರುವ ಕಾಂಗ್ರೆಸ್ ನಾಯಕ ಜಮೀರ್ ಅಹ್ಮದ್ ಖಾನ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಾಹಿತಿಯ ಪ್ರಕಾರ, ಜಮೀರ್ ಅಹ್ಮದ್ ಖಾನ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಅವರ ಬೆಂಬಲಿಗರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದರು. ಈ ವೇಳೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅವನು ನನ್ನ ಆಪ್ತ ಎಂದು ನೀವು ಹೇಳುತ್ತೀರಿ. ಆದರೆ ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

Related posts

ಕಸದ ಹೆಸರಿನಲ್ಲಿ ಕೋಟಿ ಕೋಟಿ ಲೂಟಿ!:ಕಾಗದದ ತುಂಡೂ ಇಲ್ಲ ಬರಿ ಸುಳ್ಳು ಆರೋಪ ;ಸಾಕ್ಷ್ಯ ತೋರಿಸಿ ಅಶೋಕ್ ಅವರೇ – ಪ್ರಿಯಾಂಕ್ ಖರ್ಗೆ

ಕಸದ ಹೆಸರಿನಲ್ಲಿ ಕೋಟಿ ಕೋಟಿ ಲೂಟಿ!:ಕಾಗದದ ತುಂಡೂ ಇಲ್ಲ ಬರಿ ಸುಳ್ಳು ಆರೋಪ ;ಸಾಕ್ಷ್ಯ ತೋರಿಸಿ ಅಶೋಕ್ ಅವರೇ – ಪ್ರಿಯಾಂಕ್ ಖರ್ಗೆ

June 12, 2026
ಮೋದಿಗೆ ಬಸವಣ್ಣನ ಉಡುಗೊರೆ ನೀಡಿದ ಡಿಕೆಶಿ: ಆ ಒಂದು ಭೇಟಿಯ ಹಿಂದೆ ಅಡಗಿದೆಯೇ ಕರ್ನಾಟಕದ ಬಿಗ್ ಪ್ಲಾನ್?

ಮೋದಿಗೆ ಬಸವಣ್ಣನ ಉಡುಗೊರೆ ನೀಡಿದ ಡಿಕೆಶಿ: ಆ ಒಂದು ಭೇಟಿಯ ಹಿಂದೆ ಅಡಗಿದೆಯೇ ಕರ್ನಾಟಕದ ಬಿಗ್ ಪ್ಲಾನ್?

June 12, 2026

ರಾಜ್ಯದ ಹೊಸ ಸಚಿವ ಸಂಪುಟದಲ್ಲಿ ಜಮೀರ್ ಅಹ್ಮದ್ ಖಾನ್ ಅವರಿಗೆ ಸ್ಥಾನ ಸಿಗದಿರುವ ಹಿನ್ನೆಲೆಯಲ್ಲಿ ಈ ಹೇಳಿಕೆ ಮತ್ತಷ್ಟು ಮಹತ್ವ ಪಡೆದಿದೆ. ರಾಜಕೀಯ ವಲಯದಲ್ಲಿ, ಇದೇ ಅಸಮಾಧಾನದಿಂದ ಜಮೀರ್ ಅವರಿಗೆ ಮೊದಲ ಹಂತದ ಸಚಿವ ಸಂಪುಟದಲ್ಲಿ ಅವಕಾಶ ಸಿಗಲಿಲ್ಲವೇ ಎಂಬ ಚರ್ಚೆ ಜೋರಾಗಿದೆ.

ಈಗಾಗಲೇ ಜಮೀರ್ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆಗಳ ಆರೋಪ ಕೇಳಿಬಂದಿದ್ದರೆ, ಅದಕ್ಕೆ ಸಂಬಂಧಿಸಿದ ಆಡಿಯೋ ಕೂಡ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಸಿದ್ದರಾಮಯ್ಯ ಅವರ ಈ ಹೇಳಿಕೆ ಹೊರಬಿದ್ದಿರುವುದು ಕಾಂಗ್ರೆಸ್ ವಲಯದಲ್ಲಿ ಹೊಸ ಸಂಚಲನ ಮೂಡಿಸಿದೆ.

ಆದಾಗ್ಯೂ, ಜಮೀರ್ ಅಹ್ಮದ್ ಖಾನ್ ಅಥವಾ ಕಾಂಗ್ರೆಸ್ ಹೈಕಮಾಂಡ್ ಈ ಕುರಿತು ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಸದ್ಯ ಈ ಬೆಳವಣಿಗೆ ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ShareTweetSendShare
Join us on:

Related Posts

ಕಸದ ಹೆಸರಿನಲ್ಲಿ ಕೋಟಿ ಕೋಟಿ ಲೂಟಿ!:ಕಾಗದದ ತುಂಡೂ ಇಲ್ಲ ಬರಿ ಸುಳ್ಳು ಆರೋಪ ;ಸಾಕ್ಷ್ಯ ತೋರಿಸಿ ಅಶೋಕ್ ಅವರೇ – ಪ್ರಿಯಾಂಕ್ ಖರ್ಗೆ

ಕಸದ ಹೆಸರಿನಲ್ಲಿ ಕೋಟಿ ಕೋಟಿ ಲೂಟಿ!:ಕಾಗದದ ತುಂಡೂ ಇಲ್ಲ ಬರಿ ಸುಳ್ಳು ಆರೋಪ ;ಸಾಕ್ಷ್ಯ ತೋರಿಸಿ ಅಶೋಕ್ ಅವರೇ – ಪ್ರಿಯಾಂಕ್ ಖರ್ಗೆ

by Shwetha
June 12, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಈಗ 39 ಸಾವಿರ ಕೋಟಿ ರೂಪಾಯಿ ಹಗರಣದ ಆರೋಪ ಹೊಸ ಸಂಚಲನ ಮೂಡಿಸಿದೆ. ಬೆಂಗಳೂರು ಘನತ್ಯಾಜ್ಯ ವಿಲೇವಾರಿ ಹೆಸರಿನಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ...

ಮೋದಿಗೆ ಬಸವಣ್ಣನ ಉಡುಗೊರೆ ನೀಡಿದ ಡಿಕೆಶಿ: ಆ ಒಂದು ಭೇಟಿಯ ಹಿಂದೆ ಅಡಗಿದೆಯೇ ಕರ್ನಾಟಕದ ಬಿಗ್ ಪ್ಲಾನ್?

ಮೋದಿಗೆ ಬಸವಣ್ಣನ ಉಡುಗೊರೆ ನೀಡಿದ ಡಿಕೆಶಿ: ಆ ಒಂದು ಭೇಟಿಯ ಹಿಂದೆ ಅಡಗಿದೆಯೇ ಕರ್ನಾಟಕದ ಬಿಗ್ ಪ್ಲಾನ್?

by Shwetha
June 12, 2026
0

ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಕರ್ನಾಟಕದ ಹಿತದೃಷ್ಟಿಯಿಂದ...

ರಾಮಾಯಣದ ಬಗ್ಗೆ ಅಪಹಾಸ್ಯ ಭಗವಾನ್ ನಾಲಿಗೆ ಸೀಳುವ ಖಡಕ್ ಎಚ್ಚರಿಕೆ ರವಾನಿಸಿದ ಮುತಾಲಿಕ್

ರಾಮಾಯಣದ ಬಗ್ಗೆ ಅಪಹಾಸ್ಯ ಭಗವಾನ್ ನಾಲಿಗೆ ಸೀಳುವ ಖಡಕ್ ಎಚ್ಚರಿಕೆ ರವಾನಿಸಿದ ಮುತಾಲಿಕ್

by Shwetha
June 12, 2026
0

ಧಾರವಾಡ: ಪ್ರಭು ಶ್ರೀರಾಮಚಂದ್ರ ಹಾಗೂ ಹಿಂದೂ ಧಾರ್ಮಿಕ ನಂಬಿಕೆಗಳ ಬಗ್ಗೆ ನಿರಂತರವಾಗಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುವ ಪ್ರೊ. ಕೆ.ಎಸ್. ಭಗವಾನ್ ವಿರುದ್ಧ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್...

ದಿನ ಭವಿಷ್ಯ (25-05-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (12-06-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
June 12, 2026
0

ದಿನ ಭವಿಷ್ಯ : 12-06-2026 ಮೇಷ ರಾಶಿ ಇಂದು ಗ್ರಹಗಳ ಅನುಕೂಲಕರ ಚಲನೆಯಿಂದಾಗಿ ನಿಮ್ಮ ಆತ್ಮವಿಶ್ವಾಸ ಉತ್ತುಂಗದಲ್ಲಿರುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ದಿಟ್ಟ ನಿರ್ಧಾರಗಳಿಗೆ ಮೇಲಧಿಕಾರಿಗಳಿಂದ ತಕ್ಕ...

ದೇವೇಗೌಡರ ಕುರಿತು ಕಾಂಗ್ರೆಸ್ ನಾಯಕರ ಮೊಸಳೆ ಕಣ್ಣೀರು: ಬಿವೈ ವಿಜಯೇಂದ್ರ

ದೇವೇಗೌಡರ ಕುರಿತು ಕಾಂಗ್ರೆಸ್ ನಾಯಕರ ಮೊಸಳೆ ಕಣ್ಣೀರು: ಬಿವೈ ವಿಜಯೇಂದ್ರ

by Shwetha
June 11, 2026
0

ಮಾಜಿ ಪ್ರಧಾನಿ H. D. ದೇವೇಗೌಡ ಅವರಿಗೆ ರಾಜ್ಯಸಭಾ ಟಿಕೆಟ್ ಸಿಗದ ವಿಚಾರವಾಗಿ ಕಾಂಗ್ರೆಸ್ ನಾಯಕರು ವ್ಯಕ್ತಪಡಿಸುತ್ತಿರುವ ಕಾಳಜಿಯನ್ನು ಬಿಜೆಪಿ ರಾಜ್ಯಾಧ್ಯಕ್ಷ B. Y. ವಿಜಯೇಂದ್ರ ತೀವ್ರವಾಗಿ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram