ADVERTISEMENT
Friday, July 17, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಬೆಂಗಳೂರು

ಸ್ವಚ್ಛ ಬೆಂಗಳೂರು ಎಂಬುದು ಕೇವಲ ಘೋಷಣೆಯೇ?ಅಭಿವೃದ್ಧಿಯ ಮಂತ್ರ ಜಪಿಸುವ ಅಧಿಕಾರಿಗಳೇ, ಈ ಕಸದ ರಾಶಿಯೇ ನಿಮ್ಮ ಸಾಧನೆಯೇ? 500 ಕುಟುಂಬಗಳ ಉಸಿರು ಕಟ್ಟುತ್ತಿದೆ ಈ ಡಂಪಿಂಗ್ ಯಾರ್ಡ್!ಹೆಮ್ಮಿಗೆಪುರ ನಿವಾಸಿಗಳ ಕಣ್ಣೀರಿನ ಕಥೆ

Shwetha by Shwetha
July 17, 2026
in ಬೆಂಗಳೂರು, Newsbeat, State, ರಾಜ್ಯ
Share on FacebookShare on TwitterShare on WhatsappShare on Telegram

ಬೆಂಗಳೂರು ದಕ್ಷಿಣದ ಹೆಮ್ಮಿಗೆಪುರ ವಾರ್ಡ್ ವ್ಯಾಪ್ತಿಯಲ್ಲಿರುವ ಕಾವೇರಿ ಪೈಪ್ ಲೈನ್ ರಸ್ತೆ ಇಂದು ಅಭಿವೃದ್ಧಿಯ ಸಂಕೇತವಾಗುವ ಬದಲು, ಅನಾರೋಗ್ಯದ ಅಗರವಾಗಿ ಮಾರ್ಪಟ್ಟಿದೆ. ನಗರಕ್ಕೆ ಕುಡಿಯುವ ನೀರು ಪೂರೈಸುವ ಪೈಪ್ ಲೈನ್ ಹಾದುಹೋಗುವ ಈ ರಸ್ತೆ, ಈಗ ಅಧಿಕೃತ ಡಂಪಿಂಗ್ ಯಾರ್ಡ್ ನಂತೆ ಭಾಸವಾಗುತ್ತಿದೆ. ಇಲ್ಲಿನ ನಿವಾಸಿಗಳ ಗೋಳು ಕೇಳುವವರಿಲ್ಲದಂತಾಗಿದ್ದು, ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸದಾ ಮಾಸ್ಕ್ ಧರಿಸಿಯೇ ಓಡಾಡಬೇಕಾದ ದುಸ್ಥಿತಿ

Related posts

ನಿಮ್ಮ ಪಿಎಫ್ ಖಾತೆಗೆ ಬಡ್ಡಿ ಹಣ ಬಂದಿದೆಯೇ ಮನೆಯಲ್ಲೇ ಕುಳಿತು ಚೆಕ್ ಮಾಡಲು ಹೀಗೆ ಮಾಡಿ ಸಾಕು

ನಿಮ್ಮ ಪಿಎಫ್ ಖಾತೆಗೆ ಬಡ್ಡಿ ಹಣ ಬಂದಿದೆಯೇ ಮನೆಯಲ್ಲೇ ಕುಳಿತು ಚೆಕ್ ಮಾಡಲು ಹೀಗೆ ಮಾಡಿ ಸಾಕು

July 17, 2026
ಸಚಿವ ಸ್ಥಾನಕ್ಕೆ ಅವಕಾಶ ನೀಡಿ; ವರಿಷ್ಠರಿಗೆ ಶಾಸಕ ಅಶೋಕ್ ಪಟ್ಟಣ್ ಮನವಿ

ಸಚಿವ ಸ್ಥಾನಕ್ಕೆ ಅವಕಾಶ ನೀಡಿ; ವರಿಷ್ಠರಿಗೆ ಶಾಸಕ ಅಶೋಕ್ ಪಟ್ಟಣ್ ಮನವಿ

July 17, 2026

ಬಾಲಾಜಿ ಲೇ ಔಟ್ ಸೇರಿದಂತೆ ಈ ರಸ್ತೆಯ ಅಕ್ಕಪಕ್ಕದಲ್ಲಿ ಸುಮಾರು 500ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಪ್ರತಿನಿತ್ಯ ನೂರಾರು ಮಂದಿ ಸಂಚರಿಸುವ ಈ ಮಾರ್ಗದಲ್ಲಿ ಈಗ ಉಸಿರಾಡುವುದೇ ಕಷ್ಟವಾಗಿದೆ. ಕೊರೊನಾ ಕಾಲದಲ್ಲಿ ಮಾಸ್ಕ್ ಧರಿಸುತ್ತಿದ್ದ ಜನ, ಇಂದು ಇಲ್ಲಿನ ದರ್ವಾಸನೆಯಿಂದ ಬಚಾವಾಗಲು ಮಾಸ್ಕ್ ಧರಿಸುವುದು ಅನಿವಾರ್ಯವಾಗಿದೆ. ರಸ್ತೆಯ ಇಕ್ಕೆಲಗಳಲ್ಲಿ ಕಸದ ರಾಶಿ ಬಿದ್ದಿರುವುದರಿಂದ, ಗಾಳಿ ಬೀಸಿದಾಗ ಪ್ಲಾಸ್ಟಿಕ್ ತ್ಯಾಜ್ಯಗಳು ಮನೆಗಳ ಒಳಗೆ ನುಗ್ಗುತ್ತಿವೆ.

ನಾಗರಿಕ ಪ್ರಜ್ಞೆ ಮರೆತವರಿಂದ ಹೆಚ್ಚುತ್ತಿದೆ ಆತಂಕ

ರಸ್ತೆಯ ಬದಿಯಲ್ಲಿ ಯಾರು ಕಸ ಸುರಿಯುತ್ತಾರೆ ಎಂಬುದು ಯಕ್ಷಪ್ರಶ್ನೆಯಾಗಿದೆ. ಸಾರ್ವಜನಿಕ ಪ್ರಜ್ಞೆಯಿಲ್ಲದ ಕೆಲವರು ಕತ್ತಲೆಯಲ್ಲಿ ಅಥವಾ ಯಾರು ಇಲ್ಲದ ಸಮಯ ನೋಡಿಕೊಂಡು ಕಸ ಎಸೆದು ಪರಾರಿಯಾಗುತ್ತಿದ್ದಾರೆ. ಎಷ್ಟು ಬಾರಿ ಸ್ವಚ್ಛಗೊಳಿಸಿದರೂ ಈ ಸಮಸ್ಯೆ ಮುಗಿಯುತ್ತಿಲ್ಲ. ಮಳೆ ಬಂದರೆ ಕೆಸರು ಮತ್ತು ಕೊಳೆತ ಕಸದ ವಾಸನೆ ನಿವಾಸಿಗಳ ನೆಮ್ಮದಿಯನ್ನು ಕೆಡಿಸಿದೆ. ಬಿಸಿಲು ಬಂದರಂತೂ ಇಲ್ಲಿನ ವಾಸನೆ ಅಸಹನೀಯವಾಗುತ್ತಿದೆ.

ರೋಗರುಜಿನಗಳ ಭೀತಿ ಮತ್ತು ಬೀದಿನಾಯಿಗಳ ಕಾಟ

ಈ ಡಂಪಿಂಗ್ ಯಾರ್ಡ್ ಈಗ ಬೀಡಾಡಿ ದನಗಳು ಮತ್ತು ನಾಯಿಗಳ ವಾಸಸ್ಥಾನವಾಗಿದೆ. ರಾತ್ರಿ ವೇಳೆಯಲ್ಲಿ ಇಲ್ಲಿ ಓಡಾಡುವುದು ಪ್ರಾಣಾಪಾಯಕ್ಕೆ ಆಹ್ವಾನ ನೀಡಿದಂತಿದೆ. ಕಸದ ರಾಶಿಯಿಂದಾಗಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದ್ದು, ವಿಶೇಷವಾಗಿ ಮಕ್ಕಳು ಮತ್ತು ವೃದ್ಧರ ಆರೋಗ್ಯದ ಮೇಲೆ ಇದು ಗಂಭೀರ ಪರಿಣಾಮ ಬೀರುತ್ತಿದೆ. ನಮಗೆ ಶುದ್ಧ ಗಾಳಿ ಮತ್ತು ನೆಮ್ಮದಿಯ ಬದುಕು ಬೇಕು ಎನ್ನುವುದು ಇಲ್ಲಿನ ಜನರ ಏಕೈಕ ಬೇಡಿಕೆಯಾಗಿದೆ.

ಅಧಿಕಾರಿಗಳ ಗಮನಕ್ಕೆ ನಿವಾಸಿಗಳ ಮನವಿ

ಈ ಗಂಭೀರ ಸಮಸ್ಯೆಯನ್ನು ಎದುರಿಸುತ್ತಿರುವ ನಿವಾಸಿಗಳು ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್ ಟಿ ಸೋಮಶೇಖರ್, ಸಂಸದೆ ಶೋಭಾ ಕರಂದ್ಲಾಜೆ, ಬಿಬಿಎಂಪಿ ಆಯುಕ್ತರು ಹಾಗೂ ಬಿಡಬ್ಲ್ಯುಎಸ್ ಎಸ್ ಬಿ ಅಧಿಕಾರಿಗಳಿಗೆ ಬಹಿರಂಗ ಮನವಿ ಮಾಡಿದ್ದಾರೆ. ಒಂದು ವೇಳೆ ಈ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ಸಾಧ್ಯವಾಗದಿದ್ದರೆ, ಈ ರಸ್ತೆಯನ್ನೇ ಸಂಪೂರ್ಣವಾಗಿ ಮುಚ್ಚಿಬಿಡಿ ಎಂದು ನೊಂದ ನಿವಾಸಿಗಳು ಆಗ್ರಹಿಸಿದ್ದಾರೆ.

ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ ಈ ಕೂಡಲೇ ಎಚ್ಚೆತ್ತುಕೊಂಡು, ಹೆಮ್ಮಿಗೆಪುರದ ಈ ರಸ್ತೆಯನ್ನು ಕಸಮುಕ್ತಗೊಳಿಸಿ ಜನರ ಆರೋಗ್ಯವನ್ನು ಕಾಪಾಡಬೇಕಿದೆ.

ಸನತ್ ರೈ

ShareTweetSendShare
Join us on:

Related Posts

ನಿಮ್ಮ ಪಿಎಫ್ ಖಾತೆಗೆ ಬಡ್ಡಿ ಹಣ ಬಂದಿದೆಯೇ ಮನೆಯಲ್ಲೇ ಕುಳಿತು ಚೆಕ್ ಮಾಡಲು ಹೀಗೆ ಮಾಡಿ ಸಾಕು

ನಿಮ್ಮ ಪಿಎಫ್ ಖಾತೆಗೆ ಬಡ್ಡಿ ಹಣ ಬಂದಿದೆಯೇ ಮನೆಯಲ್ಲೇ ಕುಳಿತು ಚೆಕ್ ಮಾಡಲು ಹೀಗೆ ಮಾಡಿ ಸಾಕು

by Shwetha
July 17, 2026
0

ಕೋಟ್ಯಂತರ ಖಾಸಗಿ ವಲಯದ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರವು ಸಿಹಿ ಸುದ್ದಿ ನೀಡಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು (ಇಪಿಎಫ್‌ಒ) 2025-26ನೇ ಹಣಕಾಸು ವರ್ಷದ ವಾರ್ಷಿಕ ಬಡ್ಡಿ ಹಣವನ್ನು...

ಸಚಿವ ಸ್ಥಾನಕ್ಕೆ ಅವಕಾಶ ನೀಡಿ; ವರಿಷ್ಠರಿಗೆ ಶಾಸಕ ಅಶೋಕ್ ಪಟ್ಟಣ್ ಮನವಿ

ಸಚಿವ ಸ್ಥಾನಕ್ಕೆ ಅವಕಾಶ ನೀಡಿ; ವರಿಷ್ಠರಿಗೆ ಶಾಸಕ ಅಶೋಕ್ ಪಟ್ಟಣ್ ಮನವಿ

by Shwetha
July 17, 2026
0

ಕರ್ನಾಟಕ ಸಚಿವ ಸಂಪುಟ ವಿಸ್ತರಣೆಯ ಚರ್ಚೆ ಮತ್ತೆ ತೀವ್ರಗೊಂಡಿರುವ ನಡುವೆ, ಕಾಂಗ್ರೆಸ್ ಶಾಸಕ ಅಶೋಕ್ ಪಟ್ಟಣ್ ಅವರು ಸಚಿವ ಸ್ಥಾನಕ್ಕಾಗಿ ತಮ್ಮ ಆಕಾಂಕ್ಷೆಯನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ...

ಸಾರ್ವಜನಿಕರೇ ಗಮನಿಸಿ ಬಿಎಲ್‌ಒ ಸೋಗಿನಲ್ಲಿ ಬರುವ ಕರೆಗಳಿಗೆ ಒಟಿಪಿ ನೀಡಿದರೆ ಖಾಲಿಯಾಗಲಿದೆ ನಿಮ್ಮ ಹಣ

ಸಾರ್ವಜನಿಕರೇ ಗಮನಿಸಿ ಬಿಎಲ್‌ಒ ಸೋಗಿನಲ್ಲಿ ಬರುವ ಕರೆಗಳಿಗೆ ಒಟಿಪಿ ನೀಡಿದರೆ ಖಾಲಿಯಾಗಲಿದೆ ನಿಮ್ಮ ಹಣ

by Shwetha
July 17, 2026
0

ಸದ್ಯ ದೇಶಾದ್ಯಂತ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಅಂದರೆ ಎಸ್‌ಐಆರ್ ಪ್ರಕ್ರಿಯೆಯು ಅತ್ಯಂತ ವೇಗವಾಗಿ ನಡೆಯುತ್ತಿದೆ. ಮತದಾನದ ಹಕ್ಕನ್ನು ಪಡೆಯಲು ಅಥವಾ ತಿದ್ದುಪಡಿ ಮಾಡಲು ಲಕ್ಷಾಂತರ...

9ನೇ ತರಗತಿಯಲ್ಲಿ ಮೂರನೇ ಭಾಷೆ ಸೂಕ್ತವಲ್ಲ: ನ್ಯಾ. ಬಿ.ವಿ. ನಾಗರತ್ನ

9ನೇ ತರಗತಿಯಲ್ಲಿ ಮೂರನೇ ಭಾಷೆ ಸೂಕ್ತವಲ್ಲ: ನ್ಯಾ. ಬಿ.ವಿ. ನಾಗರತ್ನ

by Shwetha
July 17, 2026
0

ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರು, CBSE 9ನೇ ತರಗತಿ ಪಠ್ಯಕ್ರಮದಲ್ಲಿ ಹೊಸ ಮೂರನೇ ಭಾಷೆಯನ್ನು ಪರಿಚಯಿಸುವುದು ಸೂಕ್ತವಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತಮಿಳುನಾಡು ಸರ್ಕಾರವು ಹೈಕೋರ್ಟ್ ತೀರ್ಪನ್ನು...

ವಂದೇ ಮಾತರಂಗೆ ರಾಷ್ಟ್ರಗೀತೆಯ ಸರಿಸಮಾನ ಸ್ಥಾನ ನೀಡುವುದು ಸಂವಿಧಾನ ವಿರೋಧಿ ಮತ್ತು ಅಪಾಯಕಾರಿ ನಡೆ: ಕೇಂದ್ರದ ವಿರುದ್ಧ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ

ರಾಜಕೀಯ ಸಂಚುಗಳು ಇನ್ನು ನಡೆಯಲ್ಲ,ಯಾರು ಈ ಗಾಯತ್ರಿ ಶಾಂತೇಗೌಡ ಬಿ ಕೆ ಹರಿಪ್ರಸಾದ್ ಅವರ ಸಂಭ್ರಮಕ್ಕೆ ಕಾರಣವಾದ ಆ ಸುಪ್ರೀಂ ತೀರ್ಪಿನ ಹಿನ್ನೆಲೆ ಏನು?

by Shwetha
July 17, 2026
0

ವಿಧಾನಪರಿಷತ್ ಸದಸ್ಯ ಎಂ ಕೆ ಪ್ರಾಣೇಶ್ ಅವರ ಸದಸ್ಯತ್ವವನ್ನು ವಜಾಗೊಳಿಸಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಪ್ರಜಾಪ್ರಭುತ್ವದ ಅತಿದೊಡ್ಡ ಗೆಲುವು ಎಂದು ಕಾಂಗ್ರೆಸ್ ನಾಯಕ ಬಿ ಕೆ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram