ADVERTISEMENT
Wednesday, July 22, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports

Football – ಇಂಡಿಯಾ ಫಿಫಾ ವಿಶ್ವಕಪ್‍ನಲ್ಲಿ ಯಾಕೆ ಆಡುತ್ತಿಲ್ಲ.. ಕ್ರಿಕೆಟ್ ಧರ್ಮವಾಗಿರುವ ಭಾರತದಲ್ಲಿ ಫುಟ್‍ಬಾಲ್ ಕ್ರೀಡೆ ಧರ್ಮವಾಗಿ ಬೆಳೆಯಲು ಸಾಧ್ಯನಾ..?

admin by admin
July 22, 2026
in Sports, Newsbeat, ಜ್ಯೋತಿಷ್ಯ
ranjith bajaj menerva fc

ranjith bajaj menerva fc

Share on FacebookShare on TwitterShare on WhatsappShare on Telegram

ಇಂಡಿಯಾ ಫಿಫಾ ವಿಶ್ವಕಪ್‍ನಲ್ಲಿ ಯಾಕೆ ಆಡುತ್ತಿಲ್ಲ…? ಹೀಗೆ ಕೇಳುವುದು ತುಂಬಾ ಸುಲಭ. ಆದ್ರೆ ನಮ್ಮ ದೇಶದ ಫುಟ್‍ಬಾಲ್ ವ್ಯವಸ್ಥೆಯನ್ನು ಸರಿ ಮಾಡೋದು ಯಾರು..? ಭಾರತದಲ್ಲಿ ಕ್ರಿಕೆಟ್ ಆಟವೇ ಧರ್ಮವಾಗಿರುವಾಗ, ಫುಟ್‍ಬಾಲ್ ಕ್ರೀಡೆ ಧರ್ಮವಾಗಿ ಬೆಳೆಯಲು ಹೇಗೆ ಸಾಧ್ಯ..?
===============================

ಇದು ನಮ್ಮ ಪರಿಶ್ರಮಕ್ಕೆ ಸಿಕ್ಕ ಫಲ. ಇವತ್ತು ಫೈನಲ್‍ಗೆ ಬಂದು ನಿಂತಿದ್ದೇವೆ. ಈಗ ಭಾರತದ ಹಿರಿಮೆಗಾಗಿ ಆಡುವ ಸಮಯ ಬಂದಿದೆ. 150 ಕೋಟಿ ಜನರ ನಂಬಿಕೆಗೆ ತಕ್ಕಂತೆÀ ನಾವು ಆಡಬೇಕು. ಈ ಟ್ರೋಫಿಯನ್ನು ಗೆದ್ರೆ… ನಾವೇ ಚಾಂಪಿಯನ್ಸ್.. ಗೋ ಗೋ ಗೋ..!

Related posts

astrology

Astro- ಎಂತದ್ದೇ ಮಾಟ – ಮಂತ್ರ,ಕೆಟ್ಟ ಶಕ್ತಿ,ಕೆಟ್ಟ ದೃಷ್ಟಿ ಕಳೆದು ಮನೆಯಲ್ಲಿ ಸುಖ ಶಾಂತಿ ನೆಲೆಸಲು ಅಮವಾಸ್ಯೆ ದಿನ ಹೀಗೆ ಮಾಡಿ

July 22, 2026
shukravara-lakshmi-anugraha-dhana-sampattu-poodja-vidhi-tips

Astro- ಶುಕ್ರವಾರದ ದಿನ ನಿಮಗೆ ಧನ ಸಂಪತ್ತಿನ ಲಕ್ಷ್ಮಿ ಯಾಕೆ ಒಲಿಯಲಿಲ್ಲ ಗೊತ್ತಾ…?ಒಲಿಸಿಕೊಳ್ಳಲು ಏನು ಮಾಡಬೇಕು ನೋಡಿ…

July 22, 2026

ಯುರೋಪ್ ನೆಲದಲ್ಲಿ ಭಾರತದ ಒಬ್ಬ ಹಠಮಾರಿ ಕೋಚ್, ತನ್ನ 12 ವರ್ಷದ ಬಾಲಕರ ತಂಡವನ್ನು ಹುರಿದುಂಬಿಸಿದ್ದ ಪರಿ..!

ಆ ಛಲಗಾರ ಕೋಚ್ ಆವೇಗದಿಂದಲೇ ಬಾಲಕರ ಹೃದಯದಲ್ಲಿ ಗೆಲುವಿನ ಕಿಚ್ಚು ಹೊತ್ತಿಸಿದ್ರು. ಬೆಂಕಿಯಂತಹ ಮಾತುಗಳಿಂದಲೇ ಆ ಸಣ್ಣ ಹುಡುಗರ ನರನಾಡಿಗಳನ್ನು ಬಡಿದೆಬ್ಬಿಸುವಂತೆ ಮಾಡಿದರು. ಆವೇಶ, ಉನ್ಮಾದದಿಂದ ಜಾಗೃತಗೊಂಡ ಆ ಹುಡುಗರು ತಡ ಮಾಡಲಿಲ್ಲ. ಗುರುವಿಗೆ ಹಾಗೂ ಮೈದಾನಕ್ಕೆ ನಮಸ್ಕರಿಸಿ ಆಡಲು ಶುರು ಮಾಡಿದ್ರು.

ಆಮೇಲೆ ಮೈದಾನದಲ್ಲಿ ನಡೆದಿದ್ದು ಕೋಚ್ ಹೊತ್ತಿಸಿದ್ದ ಬೆಂಕಿಯ ಜ್ವಾಲೆ. ತಮ್ಮ ಪುಟಾಣಿ ಕಾಲುಗಳಿಂದಲೇ ಬಾಲಕರು ಚೆಂಡಿನ ಜೊತೆ ಕಸರತ್ತು ನಡೆಸಿದ್ರು. ಅದ್ಭುತ ಕೌಶಲ್ಯ ಪ್ರದರ್ಶಿಸಿ ಸಾಂಬಾ ಬಾಲಕರನ್ನು ತಬ್ಬಿಬ್ಬುಗೊಳಿಸಿದ್ರು. ಈ ಹುಡುಗರ ಕಾಲ್ಗಿಚ್ಚಿನ ಆಟದ ಮುಂದೆ ಸಾಂಬಾ ಬಾಯ್ಸ್ ಬೆಚ್ಚಿಬಿದ್ದಿದ್ದರು. ಈ ಚಿಣ್ಣರ ನಿಖರವಾದ ಪಾಸ್, ವೇಗದ ಆಟ, ಮನಮೋಹಕ ಡ್ರಿಬ್ಲಿಂಗ್ ಎದುರಾಳಿ ತಂಡದ ಗಿಂಗಾ ಶೈಲಿಯ ಆಟವನ್ನೇ ಮಂಕಾಗಿಸಿತ್ತು. ಸಾಂಬಾ ಬಾಯ್ಸ್‍ಗೆ ಇದು ಬರೀ ಆಟವಾಗಿರಲಿಲ್ಲ. ಬೆಂಕಿಯ ಜ್ವಾಲೆಯಲ್ಲಿ ಆಡುತ್ತಿರುವ ಅನುಭವವಾಗಿತ್ತು.

ಕೊನೆಗೂ ಕೋಚ್‍ನ ನಂಬಿಕೆಯನ್ನು ಈ ಹುಡುಗರು ಹುಳಿಗೊಳಿಸಲಿಲ್ಲ. ಭಾರತದ ಮಿನರ್ವಾ ಬಾಯ್ಸ್ 2-1 ಗೋಲುಗಳಿಂದ ಬ್ರೆಜಿಲ್‍ನ ಪ್ರತಿಷ್ಠಿತ ಆರ್ ಎಸ್ ಕ್ಲಬ್ ತಂಡವನ್ನು ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿತ್ತು. ಸ್ವೀಡನ್‍ನಲ್ಲಿ ನಡೆದ ಅಗ್ನಪರೀಕ್ಷೆಯನ್ನು ಗೆದ್ದ ಭಾರತದ ಸಿಂಹದ ಮರಿಗಳನ್ನು ಕೋಚ್ ಅಪ್ಪಿಕೊಂಡು ಭಾವುಕರಾಗಿದ್ದರು. ಆ ದೃಶ್ಯಗಳನ್ನು ನೋಡಿದಾಗ ಒಂದು ಕ್ಷಣ ಮೈ ಝುಂ ಅನ್ನುತ್ತೆ.

ಅಷ್ಟಕ್ಕೂ ಈ ಸಿಂಹದ ಮರಿಗಳು ಘರ್ಜಿಸಿದ್ದು ಫುಟ್‍ಬಾಲ್ ನಾಡು ಯೂರೋಪ್‍ನಲ್ಲಿ. ಅಲ್ಲಿ ಗೆದ್ದಿದ್ದು ಕೇವಲ ಒಂದು ಟ್ರೋಪಿಯಲ್ಲ. ಈಗಾಗಲೇ ನಾಲ್ಕೈದು ಟ್ರೋಫಿಗಳನ್ನು ಗೆದ್ದಿದ್ದಾರೆ. ಪ್ರತಿಷ್ಠಿತ ಕ್ಲಬ್ ತಂಡಗಳನ್ನೇ ಮಿನರ್ವ ಬಾಯ್ಸ್ ಅಚ್ಚರಿಗೊಳಿಸಿದ್ದಾರೆ.

ಗೊತಿಯಾ ಕಪ್‍ನಲ್ಲಿ ಆಡಿರುವ 9 ಪಂದ್ಯಗಳಲ್ಲಿ 87 ಗೋಲು ಹೊಡೆದಿದ್ದಾರೆ. ಎದುರಾಳಿ ತಂಡಗಳಿಗೆ ಬಿಟ್ಟುಕೊಟ್ಟಿದ್ದು ಕೇವಲ ಎಂಟು ಗೋಲುಗಳು ಮಾತ್ರ. ತಂಡದ ಭರವಸೆಯ ಮಿಂಚು ಥಾಂಗ್  ಸಾಂಗ್ಲೇನ್ ಒಬ್ಬನೇ 18 ಗೋಲು ಹೊಡೆದಿದ್ದಾನೆ. ಯೂರೋಪ್‍ನ ಮಾಧ್ಯಮಗಳು ಕೂಡ ಭಾರತದ ಈ ಹುಡುಗರ ಪ್ರದರ್ಶನ ನೋಡಿ ಚಕಿತಗೊಂಡಿವೆ.

ಅಂದ ಹಾಗೇ ಈ ಸಿಂಹದಮರಿ ಸೈನ್ಯವನ್ನು ಕಟ್ಟಿದ ರೂವಾರಿ ರಂಜಿತ್ ಬಜಾಜ್. ಪ್ರತಿಷ್ಠಿತ ಮಿನರ್ವಾ ಫುಟ್‍ಬಾಲ್ ಅಕಾಡೆಮಿಯ ಸಂಸ್ಥಾಪಕ.

ಭಾರತೀಯ ಫುಟ್‍ಬಾಲ್‍ನ ಭರವಸೆಯ ಬೆಳಕು..!

ಮಿನರ್ವಾ ಫುಟ್‍ಬಾಲ್ ಅಕಾಡೆಮಿ. 2034ರ ಫಿಫಾ ವಿಶ್ವಕಪ್‍ಗೆ ಭಾರತದ ಭರವಸೆಯ ಬೆಳಕು. ಇಲ್ಲಿ ಫಿಫಾ ಮಾನ್ಯತೆ ಪಡೆದಿರುವ ಮೈದಾನಗಳಿವೆ. ಯೂರೋಪಿಯನ್ ಕ್ಲಬ್‍ಗಳಲ್ಲಿ ಇರುವಂತಹ ಸೌಲಭ್ಯಗಳಿವೆ. ಹಾಗೇ ತಳಮಟ್ಟದಿಂದ ಯುವ ಆಟಗಾರರನ್ನು ಆಯ್ಕೆ ಮಾಡಿ ಉಚಿತ ತರಬೇತಿ ಹಾಗೂ ಉಚಿತ ಶಿಕ್ಷಣವನ್ನು ನೀಡಲಾಗುತ್ತದೆ. ಸೇಮ್ ಯುರೋಪಿಯನ್ ಕ್ಲಬ್ ಸಂಸ್ಕøತಿಯನ್ನೇ ಇಲ್ಲಿ ಅಳವಡಿಸಿಕೊಳ್ಳಲಾಗಿದೆ.

ಮಿನರ್ವಾ ಕ್ಲಬ್‍ನ “ಬಾಲ” ತ್ರಿಮೂರ್ತಿಗಳು..!

ಥಾಂಗ್ ಸಾಂಗ್ಲೆನ್ ಕಿಪ್ಗೆನ್. ಮಣಿಪುರದ ಕುಕ್ಕಿ ಸಮುದಾಯದ ಹುಡುಗ. ಸಾಮಾನ್ಯ ಕುಟುಂಬದ ಥಾಂಗ್, ಯುರೋಪಿಯನ್ ಅಂಗಳದಲ್ಲಿ ಗೋಲುಗಳ ಸುರಿಮಳೆಗೈದಿದ್ದಾನೆ. ಹುಟ್ಟು ಪ್ರತಿಭೆಯಾಗಿರುವ ಥಾಂಗ್, ಸ್ಥಳೀಯ ಟ್ರಯಲ್ಸ್ ಮೂಲಕ ಮಿನರ್ವಾ ಕ್ಲಬ್‍ಗೆ ಆಯ್ಕೆಯಾಗಿದ್ದ. ಹೆಲ್ಸಿಂಕಿ ಕಪ್ ಮತ್ತು ಗೊತಿಯಾ ಕಪ್ ಟೂರ್ನಿಗಳಲ್ಲಿ ಒಟ್ಟು 35 ಗೋಲುಗಳನ್ನು ಹೊಡೆದಿದ್ದಾನೆ, ಈತನನ್ನು ಈಗಲೇ ಇಂಡಿಯನ್ ನೈಮರ್ ಅಂತ ಕರೆಯಲಾಗುತ್ತದೆ.

ಇನ್ನು ಮೇಘಾಲಯದ ಪಶ್ಚಿಮ ಖಾಸಿ ಹಿಲ್ಸ್‍ನ ಡೊನಾಲ್ಡ್ ಮೈರ್ಟಾಂಗ್ ಮತ್ತು ಮೈರಾಂಗ್ ಮೂಲದ ಮೇಕಮ್ ಖ್ರಾವ್ ನೋಂಗ್ರೆಮ್. ಗುಡ್ಡಗಾಡಿನಲ್ಲಿ ಬೆಳೆದ ಇಬ್ಬರು ಬಾಲಕರು ಕೂಡ ಯುರೋಪಿಯನ್ ನೆಲದಲ್ಲಿ ಗಮನ ಸೆಳೆದಿದ್ದಾರೆ. ತೀರಾ ಬಡತನದ ಕುಟುಂಬದ ಹಿನ್ನೆಲೆಯ ಈ ಹುಡುಗರ ಪ್ರತಿಭೆಯನ್ನು ಗುರುತಿಸಿದ್ದು ಮಿನರ್ವಾ ಕ್ಲಬ್. ಅದರಲ್ಲೂ ಮೇಕನ್ ಖ್ರಾವ್, ಬ್ರೆಜಿಲ್ ವಿರುದ್ದ ಕೊನೆಯ ಕ್ಷಣದಲ್ಲಿ ದಾಖಲಿಸಿದ್ದ ಗೋಲು ಅವಿಸ್ಮರಣೀಯ ಕ್ಷಣಕ್ಕೆ ಸಾಕ್ಷಿಯಾಗಿತ್ತು.

ರಂಜಿತ್ ಬಜಾಜ್‍ನ ದೂರದೃಷ್ಟಿಯ ಚಿಂತನೆ..ಯೋಜನೆ..ಯೋಚನೆ..!

ಹೌದು, ಭಾರತದ ಫುಟ್‍ಬಾಲ್ ಇತಿಹಾಸದ ಪುಟ ತೆರೆದಾಗ ಅದೆಷ್ಟೋ ಪ್ರತಿಭಾವಂತ ಆಟಗಾರರು ನಮ್ಮ ರಾಷ್ಟ್ರದ ಹಿರಿಮೆಯನ್ನು ಹೆಚ್ಚಿಸಿದ್ದಾರೆ. ಸುನೀಲ್ ಚೆಟ್ರಿಯಂತಹ ಆಟಗಾರ ಮೆಸ್ಸಿ, ಕ್ರಿಸ್ಟಿಯಾನೊ ರೊನಾಲ್ಡೊಗೆ ಸರಿಸಮಾನವಾಗಿ ಗೋಲು ದಾಖಲಿಸಿದ್ದಾನೆ. ಆದ್ರೆ ಭಾರತೀಯ ಆಟಗಾರರಿಗೆ ಸೂಕ್ತ ಅವಕಾಶ ಸಿಕ್ಕಿಲ್ಲ. ಸೌಲಭ್ಯ ಪ್ರೋತ್ಸಾಹಗಳು ಕೂಡ ಇರಲಿಲ್ಲ.

ಆದ್ರೆ ಮಿನರ್ವ ಬಾಯ್ಸ್‍ಗೆ ಹಠಮಾರಿ ಗುರು ಸಿಕ್ಕಿದ್ದಾನೆ. ಸ್ವಂತ ದುಡ್ಡಿನಲ್ಲಿ ಯೂರೋಪಿಯನ್‍ನ ವಿವಿಧ ವಯೋಮಿತಿಯ ಟೂರ್ನಿಗಳಲ್ಲಿ ತನ್ನ ಹುಡುಗರನ್ನು ಆಡಿಸುತ್ತಿದ್ದಾನೆ. ಯಾಕಂದ್ರೆ ಹುಡುಗರಿಗೆ ಯೂರೋಪಿಯನ್ ಸಂಸ್ಕøತಿಯ ಆಟ ಪರಿಚಯವಾಗಬೇಕು. ಹುಡುಗರ ಪ್ರತಿಭೆ, ಸಾಮಥ್ರ್ಯ ಅಲ್ಲಿನ ಪ್ರಮುಖ ಕ್ಲಬ್‍ಗಳ ಕಣ್ಣಿಗೆ ಬೀಳಬೇಕು. ಪ್ರತಿಷ್ಠಿತ ಲೀಗ್‍ನಲ್ಲಿ ಭಾರತದ ಆಟಗಾರರು ಆಡಬೇಕು. 2034 ಫಿಫಾ ಅಖಾಡದಲ್ಲಿ ಭಾರತದ ಹೆಸರು ಇರಬೇಕು. ಇಂತಹ ದೂರದೃಷ್ಟಿಯ ಚಿಂತನೆ, ಯೋಚನೆ, ಯೋಜನೆಯನ್ನು ಹಾಕಿಕೊಂಡಿದ್ದಾರೆ ರಂಜಿತ್ ಬಜಾಜ್.

ಭಾರತ ಯಾಕೆ ಫಿಫಾ ವಿಶ್ವಕಪ್‍ನಲ್ಲಿ ಆಡುತ್ತಿಲ್ಲ..?

ಇದು ಪ್ರತಿಯೊಬ್ಬ ಭಾರತೀಯರ ಪ್ರಶ್ನೆ. ಆದ್ರೆ ಈ ಪ್ರಶ್ನೆಯನ್ನು ಕೇಳುವುದು ಬರೀ ನಾಲ್ಕು ವರ್ಷಕ್ಕೊಮ್ಮೆ. ಮಾತ್ರ ಫಿಫಾ ವಿಶ್ವಕಪ್ ಟೂರ್ನಿಯ ಫೀವರ್ ಜಾಸ್ತಿಯಾದಾಗ ಈ ಪ್ರಶ್ನೆ ಮೂಡುತ್ತದೆ. ಇನ್ನುಳಿದಂತೆ ಈ ಪ್ರಶ್ನೆಯೂ ಇರಲ್ಲ. ಉತ್ತರ ಹುಡುಕುವ ಪ್ರಯತ್ನವೂ ನಡೆಯುವುದಿಲ್ಲ.

ಫಿಫಾ ವಿಶ್ವಕಪ್‍ನ ಆದಾಯದಿಂದ ಭಾರತಕ್ಕೆ ಸುಮಾರು 80 ಕೋಟಿ ರೂ. ಅನುದಾನ ಸಿಗುತ್ತದೆ. ಭಾರತದಲ್ಲಿ ಫುಟ್‍ಬಾಲ್ ಆಟದ ಅಭಿವೃದ್ದಿಗೆ ಫಿಫಾ ಕೂಡ ಬೆಂಬಲ, ಪ್ರೋತ್ಸಾಹ ನೀಡುತ್ತದೆ. ಆದ್ರೆ ಅಭಿವೃದ್ದಿ ಎಲ್ಲಿ ಆಗುತ್ತದೆ ಎಂಬುದು ಮಾತ್ರ ನಿಗೂಢವಾಗಿದೆ.

ಮೂಲ ಸೌಕರ್ಯ ಹಾಗೂ ತರಬೇತಿ ಕೊರತೆ..!

ಯುರೋಪ್ ಮತ್ತು ದಕ್ಷಿಣ ಅಮೆರಿಕಾ, ಆಫ್ರಿಕಾದಲ್ಲಿ ಫುಟ್‍ಬಾಲ್ ಆಟ ಒಂದು ಸಂಸ್ಕøತಿಯ ಭಾಗವಾಗಿದೆ. ಫುಟ್‍ಬಾಲ್ ಚೆಂಡು ಅಲ್ಲಿನ ಮಕ್ಕಳ ದಿನ ನಿತ್ಯ ಆಟವಾಡುವ ಸಂಗಾತಿ. ಹಾಗೇ ಐದಾರು ವರ್ಷ ಆಗುತ್ತಿದ್ದಂತೆ ಮಕ್ಕಳನ್ನು ಫುಟ್‍ಬಾಲ್ ತರಬೇತಿಗೆ ಸೇರಿಸಲಾಗುತ್ತದೆ. ಅಂತಾರಾಷ್ಟ್ರೀಯ ಗುಣಮಟ್ಟದ ಸೌಲಭ್ಯ ಹಾಗೂ ತರಬೇತಿ ಸಿಗುವುದರಿಂದ ಕೌಶಲ್ಯ ಹಾಗೂ ಗುಣಮಟ್ಟದ ಆಟವನ್ನು ಆಡಲು ಸಾಧ್ಯವಾಗುತ್ತದೆ. ಆದ್ರೆ ಭಾರತದಲ್ಲಿ ವಿಶ್ವ ದರ್ಜೆಯ ಸೌಲಭ್ಯಗಳನ್ನು ಹೊಂದಿರುವ ಅಕಾಡೆಮಿಗಳು ತೀರಾ ವಿರಳ.

ಫುಟ್‍ಬಾಲ್ ಸಂಸ್ಕøತಿ ಮತ್ತು ಲೀಗ್ ಸಿಸ್ಟಮ್..!

ಭಾರತದಲ್ಲಿ ಕ್ರಿಕೆಟ್‍ಗೆ ಸಿಗುವಷ್ಟು ಆದ್ಯತೆ ಬೇರೆ ಕ್ರೀಡೆಗಳಿಗೆ ಸಿಗುತ್ತಿಲ್ಲ. ಮುಖ್ಯವಾಗಿ ಪ್ರಾಯೋಜಕರ ಕೊರತೆ ಕಾಡುತ್ತಿದೆ. ಹಾಗೇ ಕ್ಲಬ್ ಫುಟ್‍ಬಾಲ್ ಸಂಸ್ಕøತಿಯನ್ನು ಗಂಭೀರವಾಗಿ ಬೆಳೆಸುತ್ತಿಲ್ಲ. ದೇಶದಲ್ಲಿ ಅನೇಕ ಫುಟ್‍ಬಾಲ್ ಕ್ಲಬ್‍ಗಳಿದ್ರೂ ಆಟಗಾರರಿಗೆ ಜಾಗತಿಕ ಮಟ್ಟದ ಅವಕಾಶಗಳನ್ನು ನೀಡುತ್ತಿಲ್ಲ.

ಈಗಾಗಲೇ ಐ ಲೀಗ್, ಇಂಡಿಯನ್ ಸೂಪರ್ ಲೀಗ್ ನಡೆದ್ರೂ ಯುರೋಪಿಯನ್ ಲೀಗ್ ಮಟ್ಟಕ್ಕೆ ಇನ್ನೂ ಬೆಳೆದಿಲ್ಲ.ಯುರೋಪ್‍ನಲ್ಲಿ ಪ್ರತಿ ಲೀಗ್‍ಗೆ ಆಡುವ ಆಟಗಾರನಿಗೆ ಕೋಟಿ ಕೋಟಿ ಲೆಕ್ಕದಲ್ಲಿ ಹಣ ನೀಡಿ ಖರೀದಿ ಮಾಡಲಾಗುತ್ತದೆ. ಆದ್ರೆ ನಮ್ಮಲ್ಲಿ ಲಕ್ಷ ಸಿಗೋದೇ ದೊಡ್ಡ ಕಷ್ಟ. ಹೀಗಾಗಿ ಭಾರತದ ಫುಟ್‍ಬಾಲ್ ಹಿನ್ನಡೆಗೆ ಇದು ಒಂದು ಕಾರಣವಾಗಿರಬಹುದು.

ತಾಂತ್ರಿಕ ಕೌಶಲ್ಯ ಮತ್ತು ಫಿಟ್‍ನೆಸ್..!

ಫುಟ್‍ಬಾಲ್ ಆಟಗಾರ ಅಂದ್ರೆ ಸತತ 90 ರಿಂದ 120 ನಿಮಿಷಗಳ ತನಕ ಆಡುವ ಸಾಮಥ್ರ್ಯ ಹೊಂದಿರಬೇಕು. ಕೌಶಲ್ಯ, ಅಪ್ರತಿಮ ಪ್ರತಿಭೆ ಬೇಕು. ಹಾಗಂತ ನಮ್ಮಲ್ಲಿ ಇಲ್ಲ ಅಂತಲ್ಲ. ಇದ್ದಾರೆ. ಆದ್ರೆ ಒಬ್ಬ ಅಂತಾರಾಷ್ಟ್ರೀಯ ಫುಟ್‍ಬಾಲ್ ಆಟಗಾರರನ್ನು ತಯಾರು ಮಾಡುವಂತಹ ಸೌಲಭ್ಯ ಹಾಗೂ ದೂರದೃಷ್ಟಿ ನಮ್ಮ ಫುಟ್‍ಬಾಲ್ ಸಂಸ್ಥೆಗಳಿಗೆ ಇಲ್ಲ. ಫುಟ್‍ಬಾಲ್ ಕ್ಲಬ್‍ಗಳಿಗೂ ಇಲ್ಲ. ಅಕಾಡೆಮಿಗಳಿಗೂ ಇಲ್ಲ. ಇಲ್ಲಿ ಆಟಗಾರರಿಗೆ ದುಡ್ಡು ಖರ್ಚು ಮಾಡಲ್ಲ. ಬದಲಾಗಿ ತಮ್ಮ ಜೇಬು ತುಂಬಿಸಿಕೊಳ್ಳುತ್ತಾರೆ ಅಷ್ಟೇ..!

ಫಿಫಾ ವಿಶ್ವಕಪ್‍ಗೆ ಅರ್ಹತೆ ಪಡೆಯಲು ಏನು ಕಷ್ಟ..?

ಸದ್ಯ ಭಾರತ, ಫಿಫಾ ಶ್ರೇಯಾಂಕ ಪಟ್ಟಿಯಲ್ಲಿ 138ನೇ ಸ್ಥಾನದಲ್ಲಿದೆ. ಏಷ್ಯನ್ ಫುಟ್‍ಬಾಲ್ ಶೇಯಾಂಕ ಪಟ್ಟಿಯಲ್ಲಿ 24ನೇ ಸ್ಥಾನದಲ್ಲಿದೆ. ಫಿಫಾ ವಿಶ್ವಕಪ್‍ಗೆ ಅರ್ಹತೆ ಪಡೆಯಬೇಕಾದ್ರೆ ಏಷ್ಯನ್ ಫುಟ್‍ಬಾಲ್ ಕಾನ್ಫೆಡರೇಷನ್‍ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಬೇಕು. ಯಾಕಂದ್ರೆ, ಏಷ್ಯಾದಿಂದ ಕೇವಲ ಎಂಟು ತಂಡಗಳಿಗೆ ಮಾತ್ರ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಆಡುವ ಅವಕಾಶವಿರುತ್ತದೆ.

ಹಾಗಾಗಿ ಇಲ್ಲಿ ಅರ್ಹತೆ ಪಡೆಯಲು ಜಪಾನ್, ಆಸ್ಟ್ರೇಲಿಯಾ, ಸೌದಿ ಅರೆಬಿಯಾ, ದಕ್ಷಿಣ ಕೊರಿಯಾ, ಇರಾನ್‍ನಂತಹ ಬಲಿಷ್ಠ ತಂಡಗಳ ಜೊತೆ ಗುದ್ದಾಡಬೇಕು. ವಿಶ್ವಕಪ್‍ನ ಅರ್ಹತಾ ಪಂದ್ಯಗಳಲ್ಲಿ ಭಾರತ ಅದ್ಭುತ ಪ್ರದರ್ಶನ ನೀಡಿದ್ರೆ ಮಾತ್ರ ಅರ್ಹತೆ ಪಡೆಯಲು ಸಾಧ್ಯ. ಬಹುಶಃ ಮುಂದಿನ ದಿನಗಳಲ್ಲಿ ಏಷ್ಯಾದಿಂದ ಹೆಚ್ಚಿನ ತಂಡಗಳಿಗೆ ಆಡುವ ಅವಕಾಶ ಸಿಕ್ಕಿದ್ರೆ ಭಾರತಕ್ಕೂ ಫಿಫಾದಲ್ಲಿ ಆಡುವ ಭಾಗ್ಯ ದೊರೆಯಬಹುದು..!

ಫಿಫಾದಲ್ಲಿ ಸಣ್ಣ ಪುಟ್ಟ ರಾಷ್ಟ್ರಗಳು ಕಾಣಿಸಿಕೊಳ್ಳುವುದು ಹೇಗೆ..?

ಅಂದ ಹಾಗೇ ಭಾರತ ಫುಟ್‍ಬಾಲ್ ಹೇಳಿಕೊಳ್ಳುವಷ್ಟು ದುರ್ಬಲವೇನೂ ಇಲ್ಲ. ಹಾಗೇ ಪ್ರತಿಭೆಗಳಿಗೂ ಕೊರತೆ ಇಲ್ಲ. ಆದ್ರೆ ಪ್ರತಿಭೆಗಳನ್ನು ಹುಡುಕುವ ಪ್ರಯತ್ನ ನಡೆಸುತ್ತಿಲ್ಲ. ಆಫ್ರಿಕಾ, ಅಮೆರಿಕಾ ಹಾಗೂ ಯೂರೋಪ್ ದೇಶಗಳಲ್ಲಿ ಪ್ರತಿಭೆಯ ಅನ್ವೇಷಣೆ ನಡೆಯುತ್ತದೆ. ಯುರೋಪ್ ಹಾಗೂ ಆಫ್ರಿಕನ್ ಲೀಗ್‍ಗಳಲ್ಲಿ ಆಡುವ ಅವಕಾಶಗಳು ಸಿಗುತ್ತವೆ.

ಆಡುವುದು ಕ್ಲಬ್ ಟೂರ್ನಿಯಾದ್ರೂ ಅಂತಾರಾಷ್ಟ್ರೀಯ ಮಟ್ಟದ ಪಂದ್ಯವನ್ನು ಆಡಿದ್ದ ಅನುಭವ ಸಿಗುತ್ತದೆ. ಬಹುತೇಕ ಸಣ್ಣ ಪುಟ್ಟ ದೇಶದ ಆಟಗಾರರು ಕ್ಲಬ್ ಲೀಗ್‍ನಲ್ಲಿ ಆಡ್ತಾರೆ. ಅಲ್ಲಿನ ಕೌಶಲ್ಯ ಹಾಗೂ ಸಾಮಥ್ರ್ಯವನ್ನು ರಾಷ್ಟ್ರೀಯ ತಂಡಕ್ಕೆ ಧಾರೆ ಎರೆಯುತ್ತಾರೆ. ಹಾಗಾಗಿಯೇ ಮೊರಕ್ಕೋ, ಕ್ರೊವೇಶಿಯಾ, ಈಜಿಪ್ಟ್, ಕೇಪ್‍ವರ್ಡಿಯಂತಹ ದೇಶದ ತಂಡಗಳು ಫಿಫಾ ಅಂಗಣದಲ್ಲಿ ಸದ್ದು ಮಾಡುತ್ತಿರುವುದು.

ಇನ್ನು ಫಿಫಾ ವಿಶ್ವಕಪ್ ಅರ್ಹತೆಯ ನಿಯಮದ ಪ್ರಕಾರ, ಯುರೋಪ್, ಆಫ್ರಿಕಾ, ದಕ್ಷಿಣ ಅಮೆರಿಕಾ, ಉತ್ತರ ಅಮೆರಿಕಾದ ತಂಡಗಳಿಗೆ ಹೆಚ್ಚು ಅವಕಾಶಗಳಿವೆ. ಹೀಗಾಗಿ ಯೂರೋಪ್ ಮತ್ತು ಉತ್ತರ- ದಕ್ಷಿಣ ಅಮೆರಿಕಾದ ಸಣ್ಣ ಪುಟ್ಟ ದೇಶಗಳು ಅದ್ಭುತ ಆಟವಾಡಿ ಫಿಫಾ ವಿಶ್ವಕಪ್‍ಗೆ ಅರ್ಹತೆ ಪಡೆದುಕೊಳ್ಳುತ್ತವೆ.

ಒಟ್ಟಿನಲ್ಲಿ ಭಾರತ ಫಿಫಾ ವಿಶ್ವಕಪ್‍ನಲ್ಲಿ ಯಾವಾಗ ಆಡುತ್ತೆ..? ಈ ಪ್ರಶ್ನೆಗೆ ಉತ್ತರ, ಮೊದಲು ಏಷ್ಯಾ ವಲಯದಲ್ಲಿ ಭಾರತ ಬಲಿಷ್ಠ ತಂಡವಾಗಿ ಹೊರಹೊಮ್ಮಬೇಕು. ಆಗ ಮಾತ್ರ ಇಂಡಿಯಾ ತಂಡವನ್ನು ಫಿಫಾ ಅಂಗಣದಲ್ಲಿ ನೋಡಬಹುದು.

ಆದ್ರೂ ಇಂಡಿಯಾ ಫಿಫಾ ವಿಶ್ವಕಪ್‍ನಲ್ಲಿ ಆಡುತ್ತಿಲ್ಲ ಯಾಕೆ…? ಹೀಗೆ ಕೇಳುವುದು ತುಂಬಾ ಸುಲಭ.. ಆದ್ರೆ ನಮ್ಮ ದೇಶದ ಫುಟ್‍ಬಾಲ್ ವ್ಯವಸ್ಥೆಯನ್ನು ಸರಿ ಮಾಡೋದು ಯಾರು..? ಭಾರತದಲ್ಲಿ ಕ್ರಿಕೆಟ್ ಆಟವೇ ಧರ್ಮವಾಗಿರುವಾಗ, ಫುಟ್‍ಬಾಲ್ ಧರ್ಮವಾಗಿ ಬೆಳೆಯಲು ಹೇಗೆ ಸಾಧ್ಯ..? ಏನಂತೀರಿ..?

ಸನತ್ ರೈ

saakshatv.com

Tags: #IndianFootball #FIFAWorldCup #MinervaAcademy #IndianFootballTeam #RanjitBajaj #GothiaCup #BlueTigers #FootballInIndia #SunilChhetri #BackTheBlue #saakshatv #sanathrai
ShareTweetSendShare
Join us on:

Related Posts

astrology

Astro- ಎಂತದ್ದೇ ಮಾಟ – ಮಂತ್ರ,ಕೆಟ್ಟ ಶಕ್ತಿ,ಕೆಟ್ಟ ದೃಷ್ಟಿ ಕಳೆದು ಮನೆಯಲ್ಲಿ ಸುಖ ಶಾಂತಿ ನೆಲೆಸಲು ಅಮವಾಸ್ಯೆ ದಿನ ಹೀಗೆ ಮಾಡಿ

by admin
July 22, 2026
0

ಯಾವುದಾದರೂ ಅಮವಾಸೆಯಂದು ಆಥವಾ ಶುಕ್ರವಾರದಂದು ಈ ಪರಿಹಾರವನ್ನು ನೀವು ಪಾಲಿಸಿ ಹವ್ಯಾಸ ತಿಂಗಳಿಗೊಮ್ಮೆ ಬರುವ ಈ ಅಮವಾಸ್ಯೆ ಬಹಳ ಶಕ್ತಿಯುತವಾಗಿರುತ್ತದೆ. ಆದ್ದರಿಂದ ನಿಮ್ಮ ಮನೆಯಲ್ಲಿಯೂ ಕೂಡ ಯಾವುದೇ...

shukravara-lakshmi-anugraha-dhana-sampattu-poodja-vidhi-tips

Astro- ಶುಕ್ರವಾರದ ದಿನ ನಿಮಗೆ ಧನ ಸಂಪತ್ತಿನ ಲಕ್ಷ್ಮಿ ಯಾಕೆ ಒಲಿಯಲಿಲ್ಲ ಗೊತ್ತಾ…?ಒಲಿಸಿಕೊಳ್ಳಲು ಏನು ಮಾಡಬೇಕು ನೋಡಿ…

by admin
July 22, 2026
0

ಶುಕ್ರವಾರದ ದಿನ ನಿಮಗೆ ಧನ ಸಂಪತ್ತಿನ ಲಕ್ಷ್ಮಿ ಯಾಕೆ ಒಲಿಯಲಿಲ್ಲ ಗೊತ್ತಾ...?ಒಲಿಸಿಕೊಳ್ಳಲು ಏನು ಮಾಡಬೇಕು ನೋಡಿ... ಸನಾತನ ಹಿಂದೂ ಧರ್ಮದ ಸಂಪ್ರಾದಾಯದಲ್ಲಿ ಮಹಾಲಕ್ಷ್ಮಿ ದೇವಿಯನ್ನು ಧನ ಸಂಪತ್ತಿನ...

ಪ್ರಧಾನಿ ಮೋದಿ ನಿವಾಸದ ಎದುರು ರಸ್ತೆ ಮೇಲೆಯೇ ಕುಳಿತ ರಾಹುಲ್ ಗಾಂಧಿ: ಅಮಿತ್ ಶಾ ಮತ್ತು ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಬಿಗಿಪಟ್ಟು

ಪ್ರಧಾನಿ ಮೋದಿ ನಿವಾಸದ ಎದುರು ರಸ್ತೆ ಮೇಲೆಯೇ ಕುಳಿತ ರಾಹುಲ್ ಗಾಂಧಿ: ಅಮಿತ್ ಶಾ ಮತ್ತು ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಬಿಗಿಪಟ್ಟು

by Shwetha
July 22, 2026
0

ನವದೆಹಲಿ: ದೇಶದ ರಾಜಧಾನಿಯಲ್ಲಿ ನಿನ್ನೆ ರಾಜಕೀಯ ಹಂಗಾಮ ಉತ್ತುಂಗಕ್ಕೇರಿತ್ತು. ನೀಟ್ ಪರೀಕ್ಷಾ ಅಕ್ರಮ ಮತ್ತು ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ಲಾಠಿಚಾರ್ಜ್ ಖಂಡಿಸಿ, ಲೋಕಸಭೆಯ...

ರಾಜ್ಯದಲ್ಲಿ ಕೋವಿಡ್ ಅಪಾಯ ಇಲ್ಲ; ಎಚ್ಚರಿಕೆ ಮಾತ್ರ ಅಗತ್ಯ: ಸಚಿವ ಯು.ಟಿ. ಖಾದರ್

ರಾಜ್ಯದಲ್ಲಿ ಕೋವಿಡ್ ಅಪಾಯ ಇಲ್ಲ; ಎಚ್ಚರಿಕೆ ಮಾತ್ರ ಅಗತ್ಯ: ಸಚಿವ ಯು.ಟಿ. ಖಾದರ್

by Shwetha
July 22, 2026
0

ಆಂಧ್ರ ಪ್ರದೇಶದಲ್ಲಿ ಕೋವಿಡ್-19 ಸೋಂಕಿನಿಂದ ನಾಲ್ವರು ಮೃತಪಟ್ಟಿರುವ ವರದಿಗಳ ಬೆನ್ನಲ್ಲೇ, ಕರ್ನಾಟಕದ ಜನರಿಗೆ ಆರೋಗ್ಯ ಸಚಿವ ಯು.ಟಿ. ಖಾದರ್ ಮಹತ್ವದ ಸಂದೇಶ ನೀಡಿದ್ದಾರೆ. ರಾಜ್ಯದಲ್ಲಿ ಸದ್ಯ ಕೋವಿಡ್...

ಫುಟ್ ಪಾತ್ ಕದನ:ಶಿವಾಜಿನಗರದಲ್ಲಿ ಪುಂಡಾಟ ನಡೆಸಿದವರನ್ನು ಸುಮ್ಮನೆ ಬಿಡಲ್ಲ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದವರು ಬಡವರಲ್ಲ ಸಮಾಜಘಾತುಕರು ಶಿವಾಜಿನಗರ ಪುಂಡರ ವಿರುದ್ಧ ಸಚಿವ ಕೃಷ್ಣ ಭೈರೇಗೌಡ ಕೆಂಡ

ಫುಟ್ ಪಾತ್ ಕದನ:ಶಿವಾಜಿನಗರದಲ್ಲಿ ಪುಂಡಾಟ ನಡೆಸಿದವರನ್ನು ಸುಮ್ಮನೆ ಬಿಡಲ್ಲ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದವರು ಬಡವರಲ್ಲ ಸಮಾಜಘಾತುಕರು ಶಿವಾಜಿನಗರ ಪುಂಡರ ವಿರುದ್ಧ ಸಚಿವ ಕೃಷ್ಣ ಭೈರೇಗೌಡ ಕೆಂಡ

by Shwetha
July 22, 2026
0

ಬೆಂಗಳೂರು: ರಾಜಧಾನಿಯ ಶಿವಾಜಿನಗರದಲ್ಲಿ ಫುಟ್ ಪಾತ್ ಒತ್ತುವರಿ ತೆರವುಗೊಳಿಸಲು ಹೋದ ಅಧಿಕಾರಿಗಳ ಮೇಲೆ ನಡೆದ ಹಲ್ಲೆ ಪ್ರಕರಣ ಈಗ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ಭಾರಿ ಕಿಚ್ಚು...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram