ರೋಗಲಕ್ಷಣ ಟ್ರ್ಯಾಕಿಂಗ್ ಅಪ್ಲಿಕೇಶನ್ ನಿಂದ ಆರು ವಿಭಿನ್ನ ರೀತಿಯ ಕೋವಿಡ್-19 ಸೋಂಕು ಬಹಿರಂಗ
ಹೊಸದಿಲ್ಲಿ, ಜುಲೈ 18: ಹೆಚ್ಚಾಗಿ ಬಳಸಲಾಗುವ ಕೋವಿಡ್-19 ರೋಗಲಕ್ಷಣ ಟ್ರ್ಯಾಕಿಂಗ್ ಅಪ್ಲಿಕೇಶನ್ ನಿಂದ ಡೇಟಾವನ್ನು ವಿಶ್ಲೇಷಿಸಿರುವ ಬ್ರಿಟಿಷ್ ವಿಜ್ಞಾನಿಗಳು ಆರು ವಿಭಿನ್ನ ರೀತಿಯ ಕೋವಿಡ್-19 ಸೋಂಕನ್ನು ಕಂಡುಹಿಡಿದಿದ್ದಾರೆ ಮತ್ತು ಪ್ರತಿಯೊಂದು ವಿಭಿನ್ನ ರೋಗಲಕ್ಷಣಗಳಿಂದ ಗುರುತಿಸಲ್ಪಟ್ಟಿದೆ.
ಕಿಂಗ್ಸ್ ಕಾಲೇಜ್ ಲಂಡನ್ ತಂಡವು ಆರು ವಿಧಗಳ ಸೋಂಕು ತೀವ್ರ ಮಟ್ಟದೊಂದಿಗೆ ಸಂಬಂಧ ಹೊಂದಿವೆ ಎಂದು ಕಂಡುಹಿಡಿದಿದ್ದು, ರೋಗಿ ಆಸ್ಪತ್ರೆಗೆ ದಾಖಲಾಗಿ ಉಸಿರಾಟದ ಸಹಾಯದ ಅಗತ್ಯವಿರುವ ಆಮ್ಲಜನಕ ಅಥವಾ ವೆಂಟಿಲೇಟರ್ ಚಿಕಿತ್ಸೆಗೆ ಒಳಗಾಗ ಬೇಕಾಗುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.
ಯಾವ ಕೋವಿಡ್-19 ರೋಗಿಗಳು ಹೆಚ್ಚು ಅಪಾಯದಲ್ಲಿದ್ದಾರೆ ಮತ್ತು ಆಸ್ಪತ್ರೆಯ ಆರೈಕೆಯ ಅಗತ್ಯವಿರುತ್ತದೆ ಎಂದು ಸಂಗ್ರಹಿಸಲು ಸಂಶೋಧನೆಗಳು ವೈದ್ಯರಿಗೆ ಸಹಾಯ ಮಾಡಿದೆ.
ಕೆಮ್ಮು, ಜ್ವರ ಮತ್ತು ವಾಸನೆ/ರುಚಿ ಗ್ರಹಿಸುವಿಕೆ ವ್ಯತ್ಯಾಸ ಹೊರತಾಗಿ ಕೋವಿಡ್-19 ರ ಮೂರು ಪ್ರಮುಖ ಲಕ್ಷಣಗಳಾಗಿ ಅಪ್ಲಿಕೇಶನ್ ಡೇಟಾವು ತಲೆನೋವು, ಸ್ನಾಯು ನೋವು, ಆಯಾಸ, ಅತಿಸಾರ, ಗೊಂದಲ, ಹಸಿವು ಕಡಿಮೆಯಾಗುವುದು ಮತ್ತು ಉಸಿರಾಟದ ತೊಂದರೆ ಸೇರಿದಂತೆ ಇನ್ನಿತರ ಗುಣಲಕ್ಷಣಗಳನ್ನು ತೋರಿಸಿದೆ.
ಕೆಲವರಲ್ಲಿ ಸೌಮ್ಯ, ಜ್ವರ ತರಹದ ಲಕ್ಷಣಗಳು ಅಥವಾ ದದ್ದು ಮತ್ತು ಇತರ ತೀವ್ರವಾದ ರೋಗಲಕ್ಷಣಗಳು ಕಾಣಿಸಿಕೊಂಡಿದ್ದರೆ, ಕೆಲವರು ಸೋಂಕಿಗೆ ಬಲಿಯಾಗಿದ್ದಾರೆ.
ಈ ಅಧ್ಯಯನವು ಶುಕ್ರವಾರ ಆನ್‌ಲೈನ್‌ನಲ್ಲಿ ಬಿಡುಗಡೆಯಾಗಿದ್ದು, ವಿಜ್ಞಾನಿಗಳು ಆರು ಕೋವಿಡ್-19 ಪ್ರಕಾರಗಳನ್ನು ಹೀಗೆ ವಿವರಿಸಿದ್ದಾರೆ
1. ‘ಪ್ಲೂ’ ತರಹದ ಜ್ವರವಿಲ್ಲದ ಲಕ್ಷಣಗಳು : ತಲೆನೋವು, ವಾಸನೆ/ರುಚಿ ಗ್ರಹಿಸಲು ಆಗದಿರುವುದು , ಸ್ನಾಯು ನೋವು, ಕೆಮ್ಮು, ನೋಯುತ್ತಿರುವ ಗಂಟಲು, ಎದೆ ನೋವು, ಜ್ವರವಿಲ್ಲ.
2. ಜ್ವರದೊಂದಿಗೆ ‘ಪ್ಲೂ’ ತರಹದ ಲಕ್ಷಣಗಳು: ತಲೆನೋವು, ವಾಸನೆ/ರುಚಿ ಗ್ರಹಿಸಲು , ಕೆಮ್ಮು, ನೋಯುತ್ತಿರುವ ಗಂಟಲು, ಗೊರಕೆ, ಜ್ವರ, ಹಸಿವಿನ ಕೊರತೆ.
3. ಜಠರಗರುಳು: ತಲೆನೋವು, ವಾಸನೆ ಕಳೆದುಕೊಳ್ಳುವುದು, ಹಸಿವು ಕಡಿಮೆಯಾಗುವುದು, ಅತಿಸಾರ, ನೋಯುತ್ತಿರುವ ಗಂಟಲು, ಎದೆ ನೋವು, ಕೆಮ್ಮು ಇಲ್ಲ.
4. ತೀವ್ರ ಹಂತ ಒಂದು: ಆಯಾಸ, ತಲೆನೋವು, ವಾಸನೆಯ ನಷ್ಟ, ಕೆಮ್ಮು, ಜ್ವರ, ಗೊರಕೆ, ಎದೆ ನೋವು, ಆಯಾಸ.
5. ತೀವ್ರ ಹಂತ ಎರಡು : ತಲೆನೋವು, ವಾಸನೆ ಕಳೆದುಕೊಳ್ಳುವುದು, ಹಸಿವಿನ ಕೊರತೆ, ಕೆಮ್ಮು, ಜ್ವರ, ಗೊರಕೆ, ನೋಯುತ್ತಿರುವ ಗಂಟಲು, ಎದೆ ನೋವು, ಆಯಾಸ, ಗೊಂದಲ, ಸ್ನಾಯು ನೋವು.
6. ತೀವ್ರ ಹಂತ ಮೂರು: ತಲೆನೋವು, ವಾಸನೆ ನಷ್ಟ, ಹಸಿವು, ಕೆಮ್ಮು, ಜ್ವರ, ಗೊರಕೆ, ನೋಯುತ್ತಿರುವ ಗಂಟಲು, ಎದೆ ನೋವು, ಆಯಾಸ, ಗೊಂದಲ, ಸ್ನಾಯು ನೋವು, ಉಸಿರಾಟದ ತೊಂದರೆ, ಅತಿಸಾರ, ಹೊಟ್ಟೆ ನೋವು.
4,5 ಮತ್ತು 6 ವಿಧದ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸುವ ಸಾಧ್ಯತೆ ಹೆಚ್ಚಿದ್ದು ಮತ್ತು ವೆಂಟಿಲೇಟರ್ ಬೆಂಬಲ ಅಗತ್ಯವಿರುವ ಸಾಧ್ಯತೆಯಿದೆ ಎಂದು ಸಂಶೋಧಕರು ತಿಳಿಸಿದ್ದಾರೆ