ADVERTISEMENT
Saturday, August 22, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ನನ್ನ ಟ್ರೋಲ್ ಮಾಡಿದಷ್ಟು ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚುತ್ತಿದೆ: ಕೋಟಿ ಕೊಟ್ಟರೂ ಸಿಗದ ಪ್ರಚಾರ- ಸೋಷಿಯಲ್ ಮೀಡಿಯಾ ವ್ಯಂಗ್ಯಕ್ಕೆ ವಿನಯ್ ಗೌಡ ಬಿಂದಾಸ್ ಉತ್ತರ

Shwetha by Shwetha
August 22, 2026
in ರಾಜ್ಯ, Cinema, Newsbeat, State, ಮನರಂಜನೆ
Share on FacebookShare on TwitterShare on WhatsappShare on Telegram

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 13ರ ಅಗ್ನಿಪರೀಕ್ಷೆ ಕಾರ್ಯಕ್ರಮದಲ್ಲಿ ಜ್ಯೂರಿಯಾಗಿ ಕಾಣಿಸಿಕೊಂಡಿರುವ ನಟ ವಿನಯ್ ಗೌಡ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ತಮ್ಮ ಒಂದು ವಿಶ್ಲೇಷಣಾತ್ಮಕ ಉತ್ತರದ ಮೂಲಕ ಟ್ರೋಲ್ ಆಗುತ್ತಿರುವ ವಿನಯ್, ಈಗ ಟ್ರೋಲಿಗರಿಗೆ ಖಡಕ್ ಆಗಿಯೇ ಉತ್ತರ ನೀಡಿದ್ದಾರೆ. ಟ್ರೋಲ್ ಮಾಡುವುದರಿಂದ ತನಗಾಗುತ್ತಿರುವ ಲಾಭಗಳ ಬಗ್ಗೆ ಅವರು ಬಹಿರಂಗವಾಗಿ ಮಾತನಾಡಿದ್ದಾರೆ.

ವೃತ್ತಕ್ಕೆ ಎರಡು ಬದಿ ಇವೆ ಎಂಬ ವಿವಾದ ಮತ್ತು ಲಾಜಿಕ್

Related posts

ಕಣ್ಣಿಗೆ 3 ದೇಹಕ್ಕೆ 200 ಪೆಲೆಟ್ ಗುಂಡುಗಳು ಬಿದ್ದರೂ ಪೊಲೀಸರ ಮೌನವೇಕೆ? ಎಫ್ ಐಆರ್ ದಾಖಲಾಗುವವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲ:ಪೊಲೀಸ್ ಠಾಣೆ ಎದುರು ರಾಹುಲ್ ಗಾಂಧಿ ಧರಣಿ

ಕಣ್ಣಿಗೆ 3 ದೇಹಕ್ಕೆ 200 ಪೆಲೆಟ್ ಗುಂಡುಗಳು ಬಿದ್ದರೂ ಪೊಲೀಸರ ಮೌನವೇಕೆ? ಎಫ್ ಐಆರ್ ದಾಖಲಾಗುವವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲ:ಪೊಲೀಸ್ ಠಾಣೆ ಎದುರು ರಾಹುಲ್ ಗಾಂಧಿ ಧರಣಿ

August 22, 2026
3 ವರ್ಷಗಳ ಬಳಿಕ ಇಮ್ರಾನ್ ಖಾನ್ ಆಸ್ಪತ್ರೆಗೆ ಶಿಫ್ಟ್; ಆರೋಗ್ಯ ಹದಗೆಟ್ಟ ಹಿನ್ನೆಲೆ ಚಿಕಿತ್ಸೆ

3 ವರ್ಷಗಳ ಬಳಿಕ ಇಮ್ರಾನ್ ಖಾನ್ ಆಸ್ಪತ್ರೆಗೆ ಶಿಫ್ಟ್; ಆರೋಗ್ಯ ಹದಗೆಟ್ಟ ಹಿನ್ನೆಲೆ ಚಿಕಿತ್ಸೆ

August 22, 2026

ಕಾರ್ಯಕ್ರಮದಲ್ಲಿ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಯೊಬ್ಬನಿಗೆ ಸವಾಲು ಹಾಕುವಾಗ ಸರ್ಕಲ್‌ಗೆ ಎರಡು ಸೈಡ್ಸ್‌ ಇರುತ್ತವೆ ಎಂದು ವಿನಯ್ ಹೇಳಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಇವರಿಗೆ ಗಣಿತ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದ್ದರು. ಕೆಲವರಂತೂ ಇವರ ಫೋಟೋಗೆ ಐನ್‌ಸ್ಟೈನ್ ಹೇರ್‌ಸ್ಟೈಲ್ ಜೋಡಿಸಿ ಅಲ್ಬರ್ಟ್ ವಿನಯ್ ಗೌಡ್‌ಸ್ಟೀನ್ ಎಂದು ಹೆಸರಿಟ್ಟು ಕಾಲೆಳೆದಿದ್ದರು.

ಈ ಬಗ್ಗೆ ಸ್ಪಷ್ಟನೆ ನೀಡಿದ ವಿನಯ್ ಗೌಡ, ಮ್ಯಾಥಮೆಟಿಕಲ್ ಆಗಿ ನೋಡುವುದಾದರೆ ಜೋರ್ಡಾನ್ ಕರ್ವ್ ಪ್ರಮೇಯದ ಪ್ರಕಾರ ಒಂದು ಕ್ಲೋಸ್ಡ್ ಲೈನ್ ಕರ್ವ್‌ಗೆ ಇನ್‌ಸೈಡ್ ಮತ್ತು ಔಟ್‌ಸೈಡ್ ಎಂಬ ಎರಡು ಭಾಗಗಳು ಇರುತ್ತವೆ. ಆ ಸ್ಪರ್ಧಿ ವೃತ್ತದ ಒಳಗಡೆ ನಿಂತಿದ್ದ, ಅವನು ಹೊರಗಡೆ ಹೋಗಬೇಕಿತ್ತು. ಅದೇ ಉದ್ದೇಶದಿಂದ ನಾನು ಒಳಗಡೆ ಮತ್ತು ಹೊರಗಡೆ ಎಂಬ ಎರಡು ಬದಿಗಳ ಬಗ್ಗೆ ಹೇಳಿದ್ದು. ಇದನ್ನು ಅರ್ಥ ಮಾಡಿಕೊಳ್ಳದೆ ಟ್ರೋಲ್ ಮಾಡುತ್ತಿದ್ದಾರೆ. ಆದರೆ ಇದರಿಂದ ನನಗೆ ಖುಷಿಯೇ ಇದೆ ಎಂದು ಹೇಳಿದ್ದಾರೆ.

ಬೆಳಗ್ಗೆ ಎದ್ದ ತಕ್ಷಣ ಬ್ಯಾಂಕ್ ಅಕೌಂಟ್ ಚೆಕ್ ಮಾಡುತ್ತೇನೆ

ನನ್ನನ್ನು ಟ್ರೋಲ್ ಮಾಡಿದಷ್ಟು ನನಗೇ ಲಾಭ. ಕೋಟಿ ರೂಪಾಯಿ ಖರ್ಚು ಮಾಡಿದರೂ ಬಿಗ್ ಬಾಸ್ ಅಗ್ನಿಪರೀಕ್ಷೆ ಕಾರ್ಯಕ್ರಮಕ್ಕೆ ಇಷ್ಟೊಂದು ಪ್ರಚಾರ ಸಿಗುತ್ತಿರಲಿಲ್ಲ. ನಾನು ಬೆಳಗ್ಗೆ ಎದ್ದ ತಕ್ಷಣ ಇನ್‌ಸ್ಟಾಗ್ರಾಮ್ ನೋಡುವುದಿಲ್ಲ, ಬದಲಾಗಿ ನನ್ನ ಬ್ಯಾಂಕ್ ಅಕೌಂಟ್ ನೋಡುತ್ತೇನೆ. ಟ್ರೋಲ್ ಹೆಚ್ಚಾದಂತೆ ನನ್ನ ವ್ಯವಹಾರ ಮತ್ತು ಪ್ರಮೋಷನ್‌ಗಳು ಹೆಚ್ಚುತ್ತಿವೆ. ನಿನ್ನೆ ಒಂದೇ ದಿನ ಮೂರು ಹೊಸ ಪ್ರಮೋಷನ್ ಡೀಲ್‌ಗಳು ಬುಕ್ ಆಗಿವೆ. ನನ್ನನ್ನು ಟ್ರೋಲ್ ಮಾಡುವವರು ತಮಗರಿವಿಲ್ಲದಂತೆ ನನಗೇ ದೊಡ್ಡ ಮಟ್ಟದ ಪ್ರಚಾರ ನೀಡುತ್ತಿದ್ದಾರೆ ಎಂದು ವಿನಯ್ ಟಾಂಗ್ ನೀಡಿದ್ದಾರೆ.

ಕಾಮನ್ ಮ್ಯಾನ್ ಸೆಲೆಬ್ರಿಟಿಗಳ ಮುಂದೆ ಡಮ್ಮಿ ಆಗಬಾರದು

ಬಿಗ್ ಬಾಸ್ ಮನೆಗೆ ಸಾಮಾನ್ಯ ವ್ಯಕ್ತಿಗಳು ಪ್ರವೇಶಿಸುವಾಗ ಅವರು ಸೆಲೆಬ್ರಿಟಿಗಳ ಮುಂದೆ ಸಾಧಾರಣವಾಗಿ ಕಾಣಬಾರದು. ಅವರನ್ನು ಮಾನಸಿಕವಾಗಿ ಗಟ್ಟಿಗೊಳಿಸುವುದೇ ಜ್ಯೂರಿಗಳಾದ ನಮ್ಮ ಕೆಲಸ. ಅವರಿಗೆ ನಾವು ನೀಡುವ ಗ್ರಿಲ್ಲಿಂಗ್ ಒಂದು ರೀತಿಯಲ್ಲಿ ಕ್ರಾಶ್ ಕೋರ್ಸ್ ಇದ್ದಂತೆ. ಸ್ಪರ್ಧಿಗಳು ವೇದಿಕೆಯ ಮೇಲೆ ಎದುರಿಸುವ ಸವಾಲುಗಳು ಅವರನ್ನು ಮನೆಯ ಒಳಗಡೆ ಬಲಿಷ್ಠವಾಗಿರಿಸುತ್ತವೆ ಎಂದು ವಿನಯ್ ಗೌಡ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.

ShareTweetSendShare
Join us on:

Related Posts

ಕಣ್ಣಿಗೆ 3 ದೇಹಕ್ಕೆ 200 ಪೆಲೆಟ್ ಗುಂಡುಗಳು ಬಿದ್ದರೂ ಪೊಲೀಸರ ಮೌನವೇಕೆ? ಎಫ್ ಐಆರ್ ದಾಖಲಾಗುವವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲ:ಪೊಲೀಸ್ ಠಾಣೆ ಎದುರು ರಾಹುಲ್ ಗಾಂಧಿ ಧರಣಿ

ಕಣ್ಣಿಗೆ 3 ದೇಹಕ್ಕೆ 200 ಪೆಲೆಟ್ ಗುಂಡುಗಳು ಬಿದ್ದರೂ ಪೊಲೀಸರ ಮೌನವೇಕೆ? ಎಫ್ ಐಆರ್ ದಾಖಲಾಗುವವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲ:ಪೊಲೀಸ್ ಠಾಣೆ ಎದುರು ರಾಹುಲ್ ಗಾಂಧಿ ಧರಣಿ

by Shwetha
August 22, 2026
0

ನವದೆಹಲಿ: ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ದಾಳಿ ನಡೆಸಿದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ದೆಹಲಿಯ ಸಂಸತ್ ಭವನ...

3 ವರ್ಷಗಳ ಬಳಿಕ ಇಮ್ರಾನ್ ಖಾನ್ ಆಸ್ಪತ್ರೆಗೆ ಶಿಫ್ಟ್; ಆರೋಗ್ಯ ಹದಗೆಟ್ಟ ಹಿನ್ನೆಲೆ ಚಿಕಿತ್ಸೆ

3 ವರ್ಷಗಳ ಬಳಿಕ ಇಮ್ರಾನ್ ಖಾನ್ ಆಸ್ಪತ್ರೆಗೆ ಶಿಫ್ಟ್; ಆರೋಗ್ಯ ಹದಗೆಟ್ಟ ಹಿನ್ನೆಲೆ ಚಿಕಿತ್ಸೆ

by Shwetha
August 22, 2026
0

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ, ಸುಮಾರು ಮೂರು ವರ್ಷಗಳ ಬಳಿಕ ಅವರನ್ನು ಜೈಲಿನಿಂದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ. ಆರೋಗ್ಯ...

ಅತಿಥಿ ಪಿಯು ಉಪನ್ಯಾಸಕರಿಗೆ ತಿಂಗಳ ರಜೆ, ಮಹಿಳೆಯರಿಗೆ ಮುಟ್ಟಿನ ರಜೆ – ಸರ್ಕಾರದ ಪರಿಶೀಲನೆ

ಅತಿಥಿ ಪಿಯು ಉಪನ್ಯಾಸಕರಿಗೆ ತಿಂಗಳ ರಜೆ, ಮಹಿಳೆಯರಿಗೆ ಮುಟ್ಟಿನ ರಜೆ – ಸರ್ಕಾರದ ಪರಿಶೀಲನೆ

by Shwetha
August 22, 2026
0

ರಾಜ್ಯದ ಸರ್ಕಾರಿ ಪದವಿ ಪೂರ್ವ (ಪಿಯು) ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ತಿಂಗಳಿಗೆ ಒಂದು ದಿನ ರಜೆ ಹಾಗೂ ಮಹಿಳಾ ಅತಿಥಿ ಉಪನ್ಯಾಸಕಿಯರಿಗೆ ಮಾಸಿಕ ಮುಟ್ಟಿನ...

ಟೆಲಿಪ್ರಾಂಪ್ಟರ್ ಇಲ್ಲದೆ ವಂದೇ ಮಾತರಂ ಹಾಡಿ ತೋರಿಸಲಿ -ಮೋದಿ ಮತ್ತು ಅಮಿತ್ ಶಾ ಸಂಪೂರ್ಣ ಗೀತೆ ಹಾಡಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದ ಪ್ರಿಯಾಂಕ್ ಖರ್ಗೆ

ಟೆಲಿಪ್ರಾಂಪ್ಟರ್ ಇಲ್ಲದೆ ವಂದೇ ಮಾತರಂ ಹಾಡಿ ತೋರಿಸಲಿ -ಮೋದಿ ಮತ್ತು ಅಮಿತ್ ಶಾ ಸಂಪೂರ್ಣ ಗೀತೆ ಹಾಡಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದ ಪ್ರಿಯಾಂಕ್ ಖರ್ಗೆ

by Shwetha
August 22, 2026
0

ಬೆಂಗಳೂರು: ವಂದೇ ಮಾತರಂ ಗೀತೆಯನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿರುವ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ನಾಯಕರಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ನೇರ ಸವಾಲು ಹಾಕಿದ್ದಾರೆ. ಪ್ರಧಾನಿ ನರೇಂದ್ರ...

FDA-SDA ಪರೀಕ್ಷಾ ನಿಯಮ ಬದಲಾವಣೆ; ಇನ್ಮುಂದೆ 1/4 ನೆಗೆಟಿವ್ ಮಾರ್ಕಿಂಗ್

FDA-SDA ಪರೀಕ್ಷಾ ನಿಯಮ ಬದಲಾವಣೆ; ಇನ್ಮುಂದೆ 1/4 ನೆಗೆಟಿವ್ ಮಾರ್ಕಿಂಗ್

by Shwetha
August 22, 2026
0

ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ರಾಜ್ಯದ ಲಕ್ಷಾಂತರ ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿ. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಪ್ರಥಮ ದರ್ಜೆ ಸಹಾಯಕ (FDA) ಮತ್ತು ದ್ವಿತೀಯ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram