ADVERTISEMENT
Wednesday, August 26, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ಸಾಯಿ ದುರ್ಗಾ ತೇಜ್ ನಟನೆಯ ಪ್ಯಾನ್-ಇಂಡಿಯಾ ಸಿನಿಮಾ ‘ಸಂಬರಾಲ ಯೇಟಿ ಗಟ್ಟು’ ಶೂಟಿಂಗ್ ಕಂಪ್ಲೀಟ್; 2027ರ ಸಂಕ್ರಾಂತಿಗೆ ರಿಲೀಸ್

admin by admin
August 26, 2026
in Cinema, Newsbeat, ಮನರಂಜನೆ
saakshatv.com/sai-durga-tej-sambarala-yeti-gattu-shooting-completed-release-date-announced

saakshatv.com/sai-durga-tej-sambarala-yeti-gattu-shooting-completed-release-date-announced

Share on FacebookShare on TwitterShare on WhatsappShare on Telegram

ಮೆಗಾ ಸುಪ್ರೀಂ ಹೀರೋ ಸಾಯಿ ದುರ್ಗಾ ತೇಜ್ ಅಭಿನಯದ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಆ್ಯಕ್ಷನ್-ಡ್ರಾಮಾ ‘ಸಂಬರಾಲ ಯೇಟಿ ಗಟ್ಟು’ (SYG) ಚಿತ್ರದ ಸಂಪೂರ್ಣ ಚಿತ್ರೀಕರಣ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಪ್ರತಿಷ್ಠಿತ ಪ್ರೈಮ್‌ಶೋ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಕೆ. ನಿರಂಜನ್ ರೆಡ್ಡಿ ಹಾಗೂ ಚೈತನ್ಯ ರೆಡ್ಡಿ ಅತ್ಯಂತ ಅದ್ಧೂರಿ ವೆಚ್ಚದಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ನೂತನ ಪ್ರತಿಭೆ ರೋಹಿತ್ ಕೆ.ಪಿ. ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಸದ್ಯ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡವು, ಪೋಸ್ಟ್-ಪ್ರೊಡಕ್ಷನ್ ಕೆಲಸಗಳನ್ನು ಭರದಿಂದ ಮಾಡುತ್ತಿದೆ. 2027ರ ಜನವರಿ 12ರಂದು ಸಂಕ್ರಾಂತಿ ಹಬ್ಬದ ಕೊಡುಗೆಯಾಗಿ ಚಿತ್ರವನ್ನು ವಿಶ್ವಾದ್ಯಂತ ತೆರೆಗೆ ತರುವುದಾಗಿ ಅಧಿಕೃತವಾಗಿ ಚಿತ್ರತಂಡ ಪ್ರಕಟಿಸಿದೆ.

ಚಿತ್ರದ ರಿಲೀಸ್ ಡೇಟ್ ಪೋಸ್ಟರ್ ಸಿನಿಪ್ರಿಯರಲ್ಲಿ ಭಾರಿ ಕುತೂಹಲ ಮೂಡಿಸಿದೆ. ಪೋಸ್ಟರ್‌ನಲ್ಲಿ ಸಾಯಿ ದುರ್ಗಾ ತೇಜ್ ಅವರು ಹಿಂದೆಂದೂ ಕಾಣದ ರಗಡ್ ಮತ್ತು ತೀವ್ರ ಲುಕ್‌ನಲ್ಲಿ ಅಬ್ಬರಿಸಿದ್ದಾರೆ. ರಕ್ತಸಿಕ್ತ ಮುಖ, ಕೈಯಲ್ಲಿ ಆಯುಧ, ಮುಖದಲ್ಲಿ ಗಂಭೀರ ಭಾವದೊಂದಿಗೆ ಬೆಂಕಿಯ ಜ್ವಾಲೆಗಳು ಹಾಗೂ ಹೊತ್ತಿ ಉರಿಯುತ್ತಿರುವ ಕಟ್ಟಡಗಳ ನಡುವೆ ಅವರು ನಿರ್ಭಯವಾಗಿ ನಡೆದುಬರುವ ದೃಶ್ಯವು ಚಿತ್ರದಲ್ಲಿನ ಭೀಕರ ಸಂಘರ್ಷ ಹಾಗೂ ಚಿತ್ರದಲ್ಲಿ ಹೈ-ವೋಲ್ಟೇಜ್ ಆ್ಯಕ್ಷನ್ ಇದೆ ಎಂಬುದನ್ನು ಅನಾವರಣಗೊಳಿಸಿದೆ. ಈಗಾಗಲೇ ಬಿಡುಗಡೆಯಾಗಿರುವ ‘ಅಸುರ ಆಗಮನ’ ಗ್ಲಿಂಪ್ಸ್ ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ಪಡೆದುಕೊಂಡಿದ್ದು, ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

Related posts

saakshatv.com/dr-vishnuvardhan-75th-birth-anniversary-amruthamahotsava-grand-event-bengaluru

ಸೆಪ್ಟೆಂಬರ್ 27ರಂದು ‘ಡಾ. ವಿಷ್ಣುವರ್ಧನ್ ಅಮೃತಮಹೋತ್ಸವ’

August 26, 2026
saakshatv.com/karthik-sharma-directorial-bhavantara-kannada-movie-ready-for-release

ಕಾರ್ತಿಕ್ ಶರ್ಮ ನಿರ್ದೇಶನದ ‘ಭಾವಾಂತರ’ ಸಿನಿಮಾ ಬಿಡುಗಡೆಗೆ ಸಜ್ಜು: ಗಮನ ಸೆಳೆದ ವಿಭಿನ್ನ ಪೋಸ್ಟರ್

August 26, 2026

ಹಲವು ನೈಜ ಹಾಗೂ ವಿಭಿನ್ನ ತಾಣಗಳಲ್ಲಿ ಬೃಹತ್ ಸೆಟ್‌ಗಳನ್ನು ನಿರ್ಮಿಸಿ ಈ ಚಿತ್ರವನ್ನು ಶೂಟ್ ಮಾಡಲಾಗಿದೆ. ಸಾಯಿ ದುರ್ಗಾ ತೇಜ್ ಅವರ ಜೊತೆಗೆ ಐಶ್ವರ್ಯಾ ಲಕ್ಷ್ಮಿ ನಾಯಕಿಯಾಗಿ ನಟಿಸಿದ್ದು, ಜಗಪತಿ ಬಾಬು, ಸಾಯಿ ಕುಮಾರ್, ಶ್ರೀಕಾಂತ್, ಅನನ್ಯಾ ನಾಗಲ್ಲ ಹಾಗೂ ಬಾಲಿವುಡ್‌ನ ಖ್ಯಾತ ನಟರೊಬ್ಬರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಪ್ಯಾನ್-ಇಂಡಿಯಾ ಮೆರುಗನ್ನು ಹೆಚ್ಚಿಸಿದ್ದಾರೆ. ರೋಹಿತ್ ಕೆ.ಪಿ. ಭಾವನಾತ್ಮಕ ಅಂಶಗಳ ಜೊತೆಗೆ ರೋಮಾಂಚಕ ಆ್ಯಕ್ಷನ್ ಸನ್ನಿವೇಶಗಳನ್ನು ಈ ಕಥೆಯಲ್ಲಿ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ ಎಂಬುದು ಚಿತ್ರತಂಡದ ಮಾಹಿತಿ.

ಉನ್ನತ ತಾಂತ್ರಿಕ ಮೌಲ್ಯಗಳೊಂದಿಗೆ ಮೂಡಿಬರುತ್ತಿರುವ ಈ ಚಿತ್ರಕ್ಕೆ ಬಿ. ಅಜನೀಶ್ ಲೋಕನಾಥ್ ಅವರ ಸಂಗೀತ ನಿರ್ದೇಶನವಿದ್ದು, ವೆಟ್ರಿವೇಲ್ ಪಳನಿಸಾಮಿ ಅವರ ಛಾಯಾಗ್ರಹಣವಿದೆ. ಛೋಟಾ ಕೆ. ಪ್ರಸಾದ್ ಸಂಕಲನ, ಗಾಂಧಿ ನಡಿಕುಡಿಕರ್ ಪ್ರೊಡಕ್ಷನ್ ಡಿಸೈನ್, ಕೆವಿನ್ ಮಾಸ್ಟರ್ ಸಾಹಸ ನಿರ್ದೇಶನ ಹಾಗೂ ಆಯೆಷಾ ಮರಿಯಮ್ ಕಾಸ್ಟ್ಯೂಮ್ ಡಿಸೈನಿಂಗ್ ಜವಾಬ್ದಾರಿ ಹೊತ್ತಿದ್ದಾರೆ. ಪ್ರೇಕ್ಷಕರಿಗೆ ಅತ್ಯುತ್ತಮ ಸಿನಿಮೀಯ ಅನುಭವ ನೀಡಲು ಚಿತ್ರತಂಡವು ತಾಂತ್ರಿಕ ಹಾಗೂ ದೃಶ್ಯ ವೈಭವದ ಗುಣಮಟ್ಟಕ್ಕೆ ಹೆಚ್ಚಿನ ಒತ್ತು ನೀಡಿ ಕೆಲಸ ಮಾಡುತ್ತಿದೆ.

Tags: #SambaralaYetiGattu #SaiDurgaTej #SYGMovie #Sankranti2027 #PrimeshowEntertainment #CinemaNews #SaakshaTV
ShareTweetSendShare
Join us on:

Related Posts

saakshatv.com/dr-vishnuvardhan-75th-birth-anniversary-amruthamahotsava-grand-event-bengaluru

ಸೆಪ್ಟೆಂಬರ್ 27ರಂದು ‘ಡಾ. ವಿಷ್ಣುವರ್ಧನ್ ಅಮೃತಮಹೋತ್ಸವ’

by admin
August 26, 2026
0

ಡಾ. ವಿಷ್ಣುವರ್ಧನ್ ಅವರ 75ನೇ ಜನ್ಮವರ್ಷದ ಅಂಗವಾಗಿ ಆಯೋಜಿಸಲಾಗುತ್ತಿರುವ ‘ಡಾ. ವಿಷ್ಣುವರ್ಧನ್ ಅಮೃತಮಹೋತ್ಸವ’ ಕಾರ್ಯಕ್ರಮದ ಕುರಿತು ಮಾಹಿತಿ ನೀಡಲು ಇಂದು ಪತ್ರಿಕಾಗೋಷ್ಠಿಯನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ...

saakshatv.com/karthik-sharma-directorial-bhavantara-kannada-movie-ready-for-release

ಕಾರ್ತಿಕ್ ಶರ್ಮ ನಿರ್ದೇಶನದ ‘ಭಾವಾಂತರ’ ಸಿನಿಮಾ ಬಿಡುಗಡೆಗೆ ಸಜ್ಜು: ಗಮನ ಸೆಳೆದ ವಿಭಿನ್ನ ಪೋಸ್ಟರ್

by admin
August 26, 2026
0

ಬೆಂಗಳೂರು: ‘ವೀರ ಕನ್ನಡಿಗ’, ‘ಮ್ಯಾಜಿಕ್ ಅಜ್ಜಿ’ ಸೇರಿದಂತೆ 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬಾಲನಟನಾಗಿ ಹಾಗೂ 100ಕ್ಕೂ ಹೆಚ್ಚು ಧಾರಾವಾಹಿ-ಟಿವಿ ಶೋಗಳಿಗೆ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಕಾರ್ತಿಕ್ ಶರ್ಮ,...

saakshatv.com/nagabhushana-new-movie-announced-on-birthday-kasturi-talkies

ನಾಗಭೂಷಣ್ ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಘೋಷಣೆ; 90ರ ದಶಕದ ಫ್ಯಾಮಿಲಿ ಡ್ರಾಮಾದಲ್ಲಿ ‘ಟಗರು ಪಲ್ಯ’ ಹೀರೋ

by admin
August 26, 2026
0

ಬೆಂಗಳೂರು: ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಟ, 'ಟಗರು ಪಲ್ಯ' ಖ್ಯಾತಿಯ ನಾಗಭೂಷಣ್ ಅವರ ಜನ್ಮದಿನದ ಪ್ರಯುಕ್ತ ಅವರ ಹೊಸ ಚಿತ್ರದ ಅಧಿಕೃತ ಘೋಷಣೆಯಾಗಿದೆ. ಕಸ್ತೂರಿ ಟಾಕೀಸ್ ಬ್ಯಾನರ್‌ನಡಿ ನಿರ್ಮಾಪಕ...

saakshatv.com/bell-bottom-producers-hubballi-hunters-dubbing-completed/

ಬೆಲ್‌ ಬಾಟಮ್ʼ ನಿರ್ಮಾಪಕರ ಬಹುನಿರೀಕ್ಷಿತ ‘ಹುಬ್ಬಳ್ಳಿ ಹಂಟರ್ಸ್’ ಚಿತ್ರದ ಡಬ್ಬಿಂಗ್ ಪೂರ್ಣ; ಬಿಡುಗಡೆಗೆ ಸಜ್ಜಾಗುತ್ತಿದೆ ಉತ್ತರ ಕರ್ನಾಟಕ ಸೊಗಡಿನ ಸಿನಿಮಾ!

by admin
August 26, 2026
0

ಬೆಂಗಳೂರು: ರಿಷಬ್‌ ಶೆಟ್ಟಿ ಅಭಿನಯದ ಬ್ಲಾಕ್‌ಬಸ್ಟರ್ ‘ಬೆಲ್ ಬಾಟಮ್’ ಖ್ಯಾತಿಯ ನಿರ್ಮಾಪಕ ಸಂತೋಷ್ ಕುಮಾರ್ ಕೆ.ಸಿ. ಅವರ ಸಾರಥ್ಯದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ‘ಹುಬ್ಬಳ್ಳಿ ಹಂಟರ್ಸ್’ ಸಿನಿಮಾ ಇದೀಗ...

saakshatv.com/prasanth-varma-pvcu-mahakali-shukracharya-glimpse-released

ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್‌ನ ‘ಮಹಾಕಾಳಿ’ ಚಿತ್ರದ ‘ಶುಕ್ರಚಾರ್ಯ’ ಗ್ಲಿಂಪ್ಸ್ ಬಿಡುಗಡೆ: 2027ರ ಜನವರಿ 8ಕ್ಕೆ ಗ್ರ್ಯಾಂಡ್ ರಿಲೀಸ್

by admin
August 26, 2026
0

'ಹನು-ಮಾನ್' ಸಿನಿಮಾದ ಜಾಗತಿಕ ಯಶಸ್ಸಿನ ನಂತರ ಕ್ರಿಯೇಟಿವ್ ಡೈರೆಕ್ಟರ್ ಪ್ರಶಾಂತ್ ವರ್ಮಾ ಅವರ 'ಪ್ರಶಾಂತ್ ವರ್ಮಾ ಸಿನಿಮಾಟಿಕ್ ಯೂನಿವರ್ಸ್' (PVCU) ಅಡಿಯಲ್ಲಿ ಸಿದ್ಧವಾಗುತ್ತಿರುವ ಬಹುನಿರೀಕ್ಷಿತ ಐತಿಹಾಸಿಕ ಪೌರಾಣಿಕ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram