ADVERTISEMENT
Friday, September 4, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಪ್ರತಿಪಕ್ಷಗಳಿಗೆ ಖೆಡ್ಡಾ ತೋಡಿದ DK ಸರ್ಕಾರ :ಹಳೆಯ ಹಗರಣಗಳಿಗೆ ಜೀವ ನೀಡಿದ ಕಾಂಗ್ರೆಸ್- ಕುಮಾರಸ್ವಾಮಿ ಮತ್ತು ಜನಾರ್ದನ ರೆಡ್ಡಿ ವಿರುದ್ಧ ಪ್ರಾಸಿಕ್ಯೂಷನ್ ಅಸ್ತ್ರ

Shwetha by Shwetha
September 4, 2026
in ರಾಜ್ಯ, Newsbeat, Politics, State, ರಾಜಕೀಯ
Share on FacebookShare on TwitterShare on WhatsappShare on Telegram

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಮತ್ತು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟ ಸಾರಿದ್ದ ಸಮರಕ್ಕೆ ಈಗ ಮುಖ್ಯಮಂತ್ರಿ ಡಿಕೆಶಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಭರ್ಜರಿ ತಿರುಗೇಟು ನೀಡಲು ಮುಂದಾಗಿದೆ. ವಿರೋಧ ಪಕ್ಷದ ಪ್ರಮುಖ ನಾಯಕರಾದ ಹೆಚ್ ಡಿ ಕುಮಾರಸ್ವಾಮಿ, ಜಿ ಜನಾರ್ದನ ರೆಡ್ಡಿ ಮತ್ತು ಎಂ ಪಿ ರೇಣುಕಾಚಾರ್ಯ ಅವರ ವಿರುದ್ಧದ ಹಳೆಯ ಪ್ರಕರಣಗಳನ್ನು ಮರುಪರಿಶೀಲಿಸಿ, ಅವರ ವಿರುದ್ಧ ಪ್ರಾಸಿಕ್ಯೂಷನ್ ಅಥವಾ ಅಭಿಯೋಜನೆಗೆ ಅನುಮತಿ ಕೋರಲು ಸರ್ಕಾರ ಗಂಭೀರ ತಂತ್ರ ರೂಪಿಸಿದೆ.

ಪ್ರತಿಪಕ್ಷಗಳ ಪಾದಯಾತ್ರೆ ಮತ್ತು ಪ್ರತಿಭಟನೆಗಳಿಂದ ಮುಜುಗರಕ್ಕೆ ಒಳಗಾಗಿದ್ದ ಕಾಂಗ್ರೆಸ್, ಈಗ ಬಿಜೆಪಿ ಮತ್ತು ಜೆಡಿಎಸ್ ನಾಯಕರನ್ನೇ ಕಾನೂನು ಬಲೆಯಲ್ಲಿ ಸಿಲುಕಿಸಲು ಸಜ್ಜಾಗಿದೆ. ವಿವಿಧ ಗಣಿ ಅಕ್ರಮ, ಭೂ ಅಕ್ರಮ ಹಾಗೂ ಭ್ರಷ್ಟಾಚಾರ ಆರೋಪಗಳಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಮತ್ತು ವಿಶೇಷ ತನಿಖಾ ತಂಡ (SIT) ಈಗಾಗಲೇ ವರದಿಗಳನ್ನು ಸಲ್ಲಿಸಿವೆ. ಆದರೆ ಹಿಂದಿನ ಸರ್ಕಾರಗಳ ಅವಧಿಯಲ್ಲಿ ಈ ವರದಿಗಳು ಧೂಳು ಹಿಡಿಯುತ್ತಿದ್ದವು. ಇದೀಗ ರಾಜಪಾಲರ ಮುಂದೆ ಈ ನಾಯಕರ ವಿರುದ್ಧದ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸುವ ಮೂಲಕ ಕಾಂಗ್ರೆಸ್ ರಾಜಕೀಯವಾಗಿ ಕೌಂಟರ್ ನೀಡುತ್ತಿದೆ.

Related posts

bz-cup-media-cricket-tournament-bengaluru-september-5-6

ಬ್ಯಾಟ್ & ಬಾಲ್ ಸಮರಕ್ಕೆ ಸಜ್ಜಾದ ಮಾಧ್ಯಮ ಲೋಕ..! ಸೆಪ್ಟೆಂಬರ್ 5 ಮತ್ತು 6ರಂದು ಬೆಂಗಳೂರಿನಲ್ಲಿ ಬಿ.ಝಡ್. ಕಪ್ ಮೀಡಿಯಾ ಕ್ರಿಕೆಟ್ ಟೂರ್ನಿ

September 4, 2026
ಪಿಒಪಿ ಗಣೇಶ ಮೂರ್ತಿಗಳ ನಿಷೇಧ ಜಾರಿ: ಪೊಲೀಸರ ನೆರವು ಕೋರಿದ ಮಾಲಿನ್ಯ ನಿಯಂತ್ರಣ ಮಂಡಳಿ

ಪಿಒಪಿ ಗಣೇಶ ಮೂರ್ತಿಗಳ ನಿಷೇಧ ಜಾರಿ: ಪೊಲೀಸರ ನೆರವು ಕೋರಿದ ಮಾಲಿನ್ಯ ನಿಯಂತ್ರಣ ಮಂಡಳಿ

September 4, 2026

ಯಾರ ವಿರುದ್ಧ ಯಾವ ಅಸ್ತ್ರ?

ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಸಾಯಿ ವೆಂಕಟೇಶ್ವರ ಮೈನಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ನೀಡಿರುವ ತನಿಖಾ ವರದಿಯನ್ನಿಟ್ಟುಕೊಂಡು ಸರ್ಕಾರ ಪ್ರಾಸಿಕ್ಯೂಷನ್ ಗೆ ಮುಂದಾಗಿದೆ. ಇನ್ನು ಇತ್ತೀಚೆಗಷ್ಟೇ ಬಿಜೆಪಿಗೆ ಮರಳಿರುವ ಜನಾರ್ದನ ರೆಡ್ಡಿ ಅವರ ಬಳ್ಳಾರಿ ಅಕ್ರಮ ಗಣಿಗಾರಿಕೆ ಪ್ರಕರಣದ ಫೈಲ್ ಗಳನ್ನು ಸರ್ಕಾರ ಮತ್ತೆ ಕೈಗೆತ್ತಿಕೊಂಡಿದೆ. ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ ಅವರ ಅಧಿಕಾರ ದುರುಪಯೋಗ ಮತ್ತು ಅಕ್ರಮ ಆಸ್ತಿ ಗಳಿಕೆ ಪ್ರಕರಣಗಳ ಮರುಪರಿಶೀಲನೆಗೆ ಚಾಲನೆ ನೀಡಲಾಗಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ಕ್ರಮಕ್ಕೆ ಪ್ರತಿಯಾಗಿ, ಕೇಂದ್ರ ಸಚಿವರಾದ ಕುಮಾರಸ್ವಾಮಿ ವಿರುದ್ಧವೂ ಅಂತಹದ್ದೇ ಕ್ರಮಕ್ಕೆ ಮುಂದಾಗುವ ಮೂಲಕ ಕಾಂಗ್ರೆಸ್ ತಕ್ಕ ಉತ್ತರ ನೀಡಲು ನಿರ್ಧರಿಸಿದೆ. ಈ ಬೆಳವಣಿಗೆಯಿಂದಾಗಿ ರಾಜ್ಯ ರಾಜಕಾರಣದಲ್ಲಿ ಕಾನೂನು ಮತ್ತು ರಾಜಕೀಯ ಸಮರ ತಾರಕಕ್ಕೇರಿದ್ದು, ಮುಂದಿನ ದಿನಗಳಲ್ಲಿ ಈ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ. ವಿರೋಧ ಪಕ್ಷಗಳ ಭ್ರಷ್ಟಾಚಾರದ ಆರೋಪಗಳಿಗೆ ಹಳೆಯ ಪ್ರಕರಣಗಳ ಮೂಲಕವೇ ಉತ್ತರ ನೀಡಲು ಕಾಂಗ್ರೆಸ್ ಮುಂದಾಗಿರುವುದು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.

ShareTweetSendShare
Join us on:

Related Posts

bz-cup-media-cricket-tournament-bengaluru-september-5-6

ಬ್ಯಾಟ್ & ಬಾಲ್ ಸಮರಕ್ಕೆ ಸಜ್ಜಾದ ಮಾಧ್ಯಮ ಲೋಕ..! ಸೆಪ್ಟೆಂಬರ್ 5 ಮತ್ತು 6ರಂದು ಬೆಂಗಳೂರಿನಲ್ಲಿ ಬಿ.ಝಡ್. ಕಪ್ ಮೀಡಿಯಾ ಕ್ರಿಕೆಟ್ ಟೂರ್ನಿ

by admin
September 4, 2026
0

ಮಾಧ್ಯಮ ಆಹ್ವಾನ ಸಂಪಾದಕರು/ ಮುಖ್ಯವರದಿಗಾರರು/ಕ್ರೀಡಾ ಸಂಪಾದಕರು ಸಿಎಂ ಕಪ್ ಆಯೋಜಿಸಿದ್ದ 9 ಡ್ರಿಮ್ಸ್ ತಂಡವು ಸೆಪ್ಟೆಂಬರ್ 5 ಮತ್ತು 6ರಂದು ಬೆಂಗಳೂರಿನ ಬಳ್ಳಾರಿ ರಸ್ತೆ ಜಿಕೆವಿಕೆ ಮೈದಾನದಲ್ಲಿ...

ಪಿಒಪಿ ಗಣೇಶ ಮೂರ್ತಿಗಳ ನಿಷೇಧ ಜಾರಿ: ಪೊಲೀಸರ ನೆರವು ಕೋರಿದ ಮಾಲಿನ್ಯ ನಿಯಂತ್ರಣ ಮಂಡಳಿ

ಪಿಒಪಿ ಗಣೇಶ ಮೂರ್ತಿಗಳ ನಿಷೇಧ ಜಾರಿ: ಪೊಲೀಸರ ನೆರವು ಕೋರಿದ ಮಾಲಿನ್ಯ ನಿಯಂತ್ರಣ ಮಂಡಳಿ

by Shwetha
September 4, 2026
0

ಪ್ಲಾಸ್ಟರ್ ಆಫ್ ಪ್ಯಾರಿಸ್ (PoP) ಹಾಗೂ ಭಾರ ಲೋಹಗಳನ್ನು ಒಳಗೊಂಡ ರಾಸಾಯನಿಕ ಬಣ್ಣಗಳಿಂದ ತಯಾರಿಸಿದ ಗಣೇಶ ಮೂರ್ತಿಗಳ ಬಳಕೆಯ ಮೇಲಿನ ನಿಷೇಧಕ್ಕೆ ಒಂದು ದಶಕಕ್ಕೂ ಹೆಚ್ಚು ಕಾಲ...

ವಾಯುಪಡೆಗೆ ನಿವೃತ್ತಿ: F-16  ವೀರಚಕ್ರ ಪುರಸ್ಕೃತ ಅಭಿನಂದನ್ ವರ್ಧಮಾನ್‌ ಈಗ FLY91 ಪೈಲಟ್

ವಾಯುಪಡೆಗೆ ನಿವೃತ್ತಿ: F-16 ವೀರಚಕ್ರ ಪುರಸ್ಕೃತ ಅಭಿನಂದನ್ ವರ್ಧಮಾನ್‌ ಈಗ FLY91 ಪೈಲಟ್

by Shwetha
September 4, 2026
0

ಪಾಕಿಸ್ತಾನದ ಎಫ್-16 ಯುದ್ಧವಿಮಾನವನ್ನು ಹೊಡೆದುರುಳಿಸಿ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದ ಭಾರತೀಯ ವಾಯುಪಡೆಯ ವೀರಚಕ್ರ ಪ್ರಶಸ್ತಿ ಪುರಸ್ಕೃತ ಗ್ರೂಪ್ ಕ್ಯಾಪ್ಟನ್ ಅಭಿನಂದನ್ ವರ್ಧಮಾನ್‌ ಅವರು ಭಾರತೀಯ ವಾಯುಪಡೆಯ...

parks-land-use-bill-withdrawn-bjp-victory-r-ashoka-seven-day-assembly

ಉದ್ಯಾನಗಳ ಶೇ.5 ಭೂ ಬಳಕೆ ಮಸೂದೆ ವಾಪಸ್‌, ಬಿಜೆಪಿಯ ಹೋರಾಟಕ್ಕೆ ಮತ್ತೊಂದು ಜಯ: ಪ್ರತಿಪಕ್ಷ ನಾಯಕ ಆರ್‌.ಅಶೋಕ

by admin
September 4, 2026
0

ಬೆಂಗಳೂರು,  ಕಾಂಗ್ರೆಸ್‌ ಸರ್ಕಾರ ಉದ್ಯಾನಗಳಲ್ಲಿ ಶೇ.5 ರಷ್ಟು ಭೂಮಿಯನ್ನು ಮೂಲಸೌಕರ್ಯಕ್ಕೆ ಬಳಸುವ ಮಸೂದೆ ಹಿಂಪಡೆದಿರುವುದು ಬಿಜೆಪಿಯ ಹೋರಾಟಕ್ಕೆ ಸಿಕ್ಕ ಮತ್ತೊಂದು ಜಯ. ಮುಂದೆಯೂ ಉದ್ಯಾನಗಳನ್ನು ಬಳಸುವುದಕ್ಕೆ ಬಿಜೆಪಿ ಅವಕಾಶ...

swiggy-delivery-partners-hero-bike-discount-easy-loan-deal

ಸ್ವಿಗ್ಗಿ ಡೆಲಿವರಿ ಪಾರ್ಟ್ನರ್ಸ್‌ಗೆ ಬಂಪರ್ ಆಫರ್: ರಿಯಾಯಿತಿ ದರದಲ್ಲಿ ಬೈಕ್, ಸುಲಭ ಸಾಲಕ್ಕಾಗಿ ಹೀರೋ ಜೊತೆ ಒಪ್ಪಂದ

by admin
September 4, 2026
0

ಬೆಂಗಳೂರು: ಪ್ರಮುಖ ಆನ್‌ಲೈನ್ ಫುಡ್ ಮತ್ತು ದಿನಸಿ ಡೆಲಿವರಿ ಪ್ಲಾಟ್‌ಫಾರ್ಮ್ ಸ್ವಿಗ್ಗಿ ತನ್ನ ಡೆಲಿವರಿ ಪಾರ್ಟ್ನರ್‌ಗಳ ಅನುಕೂಲಕ್ಕಾಗಿ ವಿಶ್ವದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆಯಾದ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram