ADVERTISEMENT
Saturday, September 5, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಕಂದಾಯ ಇಲಾಖೆಯಲ್ಲಿ ಮಹತ್ವದ ವರ್ಗಾವಣೆ: 18 ತಹಶೀಲ್ದಾರ್‌ಗಳ ವರ್ಗಾವಣೆ, ಸ್ಥಳನಿಯುಕ್ತಿ

Shwetha by Shwetha
September 5, 2026
in ರಾಜ್ಯ, Newsbeat, State
Share on FacebookShare on TwitterShare on WhatsappShare on Telegram

ಆಡಳಿತಾತ್ಮಕ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಕಂದಾಯ ಇಲಾಖೆಯ ಗ್ರೇಡ್-1 ಮತ್ತು ಗ್ರೇಡ್-2 ವೃಂದದ 18 ತಹಶೀಲ್ದಾರ್‌ಗಳನ್ನು ರಾಜ್ಯ ಸರ್ಕಾರ ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಹಾಗೂ ಸ್ಥಳನಿಯುಕ್ತಿಗೊಳಿಸಿ ಆದೇಶ ಹೊರಡಿಸಿದೆ.

ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಜಿ.ಕೆ. ನರಸಿಂಹಮೂರ್ತಿ ಅವರು ಅಧಿಸೂಚನೆ ಹೊರಡಿಸಿದ್ದು, ಸ್ಥಳ ನಿರೀಕ್ಷೆಯಲ್ಲಿದ್ದ ಅಧಿಕಾರಿಗಳಿಗೆ ಹುದ್ದೆ ನೀಡುವುದರ ಜೊತೆಗೆ ಹಲವು ತಾಲೂಕುಗಳು ಹಾಗೂ ನಿಗಮ-ಮಂಡಳಿಗಳಲ್ಲಿನ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

Related posts

ಉತ್ತರ ಪ್ರದೇಶದಲ್ಲಿ ಮತ್ತೆ ಅರಳಲಿದೆ ಕಮಲ:ಯುಪಿಯಲ್ಲಿ ಬಿಜೆಪಿಗೆ ಎದುರೇ ಇಲ್ಲ-2027ರಲ್ಲೂ ಬಿಜೆಪಿಗೆ ಭರ್ಜರಿ ಬಹುಮತ ಖಚಿತ ಯೋಗಿ ಭವಿಷ್ಯ

ಉತ್ತರ ಪ್ರದೇಶದಲ್ಲಿ ಮತ್ತೆ ಅರಳಲಿದೆ ಕಮಲ:ಯುಪಿಯಲ್ಲಿ ಬಿಜೆಪಿಗೆ ಎದುರೇ ಇಲ್ಲ-2027ರಲ್ಲೂ ಬಿಜೆಪಿಗೆ ಭರ್ಜರಿ ಬಹುಮತ ಖಚಿತ ಯೋಗಿ ಭವಿಷ್ಯ

September 5, 2026
21 ಉನ್ನತ ಶಿಕ್ಷಣ ಪ್ರಾಧ್ಯಾಪಕರಿಗೆ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ

21 ಉನ್ನತ ಶಿಕ್ಷಣ ಪ್ರಾಧ್ಯಾಪಕರಿಗೆ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ

September 5, 2026

ಸಂಗಮೇಶ ಜಿಡಗ (ಗ್ರೇಡ್-2): ಬಳ್ಳಾರಿ ನಗರಾಭಿವೃದ್ಧಿ ಕೋಶದಿಂದ ಯಾದಗಿರಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಪುರಸಭಾ ತಹಶೀಲ್ದಾರ್.
ಎಂ.ಆರ್. ಷಣ್ಮುಖ (ಗ್ರೇಡ್-2): ಕಾರಟಗಿಯಿಂದ ರಾಯಚೂರು ಜಿಲ್ಲಾಧಿಕಾರಿ ಕಚೇರಿಯ ಸಹಾಯಕ ಹುದ್ದೆಗೆ.
ಶಾರದಾ ಬಿರಾದಾರ (ಗ್ರೇಡ್-2): ಸ್ಥಳ ನಿರೀಕ್ಷೆಯಲ್ಲಿದ್ದ ಇವರನ್ನು ಕಲಬುರಗಿಯ KKRDB ಆಪ್ತ ಕಾರ್ಯದರ್ಶಿಯಾಗಿ ನಿಯುಕ್ತಿ.
ಹೆಚ್.ಸಿ. ಸುಜಾತ (ಗ್ರೇಡ್-2): ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್. ಪುರ ತಹಶೀಲ್ದಾರ್.
ರುಕಿಯಾ ಬೇಗಂ (ಗ್ರೇಡ್-1): ಹಿಂದಿನ ವರ್ಗಾವಣೆ ಆದೇಶ ರದ್ದು; ಸಾಲಿಗ್ರಾಮದಲ್ಲೇ ಮುಂದುವರಿಕೆ.
ರೂಪಾ ಡಿ. (ಗ್ರೇಡ್-2): ಕರ್ನಾಟಕ ರಾಜ್ಯ ಹಣಕಾಸು ನಿಗಮದ (KSFC) ವಿಶೇಷ ತಹಶೀಲ್ದಾರ್.
ನೀಲಬಾಯಿ ಲಮಾಣಿ (ಗ್ರೇಡ್-2): ಬೆಂಗಳೂರಿನ ಕಿದ್ವಾಯಿ ಸಂಸ್ಥೆಯ ಆಡಳಿತಾಧಿಕಾರಿ.
ಎಸ್.ಬಿ. ಕಾಯಲಿ (ಗ್ರೇಡ್-2): ಬೀಳಗಿಯಿಂದ ಜಮಖಂಡಿ ತಾಲೂಕು ತಹಶೀಲ್ದಾರ್.
ಎಂ.ವಿ. ಬಿರಾದರ ಪಾಟೀಲ (ಗ್ರೇಡ್-2): ರಾಮದುರ್ಗದಿಂದ ಅಥಣಿ ತಾಲೂಕಿಗೆ.
ಆರ್.ಎಸ್. ವಳಸಂಗ (ಗ್ರೇಡ್-2): ಅಥಣಿಯಿಂದ ರಾಮದುರ್ಗ ತಾಲೂಕಿಗೆ.
ಜಯಲಕ್ಷ್ಮಿ ವಸ್ತ್ರದ (ಗ್ರೇಡ್-1): ಗದಗ ಜಿಲ್ಲಾಧಿಕಾರಿ ಕಚೇರಿಯ ಸಹಾಯಕ ಹುದ್ದೆಗೆ.
ಜಿ.ಕೆ. ಮಂಜುನಾಂದ (ಗ್ರೇಡ್-2): ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕು ತಹಶೀಲ್ದಾರ್.
ವಿ.ಎಸ್. ರವೀಂದ್ರ (ಗ್ರೇಡ್-2): ಬೆಂಗಳೂರು ಮಹಾನಗರ ಕಾರ್ಯಪಡೆ (BMTF) ತಹಶೀಲ್ದಾರ್.
ಟಿ. ವಿನೋದ (ಗ್ರೇಡ್-1): ಮೈಸೂರಿನ UPOR ತಹಶೀಲ್ದಾರ್.
ನರಸಿಂಹಮೂರ್ತಿ ಟಿ.ಎನ್. (ಗ್ರೇಡ್-1): ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿ ಕಚೇರಿಯ ಸಹಾಯಕ ಹುದ್ದೆಗೆ.
ಡಿ.ಜೆ. ಕೋರಿ (ಗ್ರೇಡ್-2): ಬೆಳಗಾವಿ ವಿಶೇಷ ಜಿಲ್ಲಾಧಿಕಾರಿಗಳ ಕಚೇರಿಯ ವಿಶೇಷ ತಹಶೀಲ್ದಾರ್.
ಜೆ.ವಿ. ತುಳಸಿ (ಗ್ರೇಡ್-2): ಗುಡಿಬಂಡೆಯಿಂದ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮಕ್ಕೆ (KRDCL) ವರ್ಗಾವಣೆ.
ಕಾವ್ಯಶ್ರೀ ಹೆಚ್. (ಗ್ರೇಡ್-1): ಬೆಂಗಳೂರಿನ IMA ವಿಶೇಷಾಧಿಕಾರಿ ಮತ್ತು ಸಕ್ಷಮ ಪ್ರಾಧಿಕಾರ ಕಚೇರಿಯ ತಹಶೀಲ್ದಾರ್.

ವರ್ಗಾವಣೆಗೊಂಡಿರುವ ಎಲ್ಲಾ ಅಧಿಕಾರಿಗಳು ನಿಯೋಜಿತ ಸ್ಥಳಗಳಲ್ಲಿ ತಕ್ಷಣ ಕರ್ತವ್ಯಕ್ಕೆ ಹಾಜರಾಗಿ, ಚಾರ್ಜ್ ರಿಪೋರ್ಟ್ (CTC) ಅನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಸೂಚಿಸಲಾಗಿದೆ.

ShareTweetSendShare
Join us on:

Related Posts

ಉತ್ತರ ಪ್ರದೇಶದಲ್ಲಿ ಮತ್ತೆ ಅರಳಲಿದೆ ಕಮಲ:ಯುಪಿಯಲ್ಲಿ ಬಿಜೆಪಿಗೆ ಎದುರೇ ಇಲ್ಲ-2027ರಲ್ಲೂ ಬಿಜೆಪಿಗೆ ಭರ್ಜರಿ ಬಹುಮತ ಖಚಿತ ಯೋಗಿ ಭವಿಷ್ಯ

ಉತ್ತರ ಪ್ರದೇಶದಲ್ಲಿ ಮತ್ತೆ ಅರಳಲಿದೆ ಕಮಲ:ಯುಪಿಯಲ್ಲಿ ಬಿಜೆಪಿಗೆ ಎದುರೇ ಇಲ್ಲ-2027ರಲ್ಲೂ ಬಿಜೆಪಿಗೆ ಭರ್ಜರಿ ಬಹುಮತ ಖಚಿತ ಯೋಗಿ ಭವಿಷ್ಯ

by Shwetha
September 5, 2026
0

ಮಥುರಾ: ಉತ್ತರ ಪ್ರದೇಶದಲ್ಲಿ 2027ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿ ಅಭೂತಪೂರ್ವ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಮರಳಲಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಥುರಾದಲ್ಲಿ...

21 ಉನ್ನತ ಶಿಕ್ಷಣ ಪ್ರಾಧ್ಯಾಪಕರಿಗೆ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ

21 ಉನ್ನತ ಶಿಕ್ಷಣ ಪ್ರಾಧ್ಯಾಪಕರಿಗೆ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ

by Shwetha
September 5, 2026
0

ವಿಶ್ವವಿದ್ಯಾಲಯಗಳ ಬೋಧನೆ ಇದೀಗ ಕೇವಲ ತರಗತಿ ಕೊಠಡಿಗಳಿಗೆ ಸೀಮಿತವಾಗದೆ, ಅಪರಾಧ ಪ್ರಯೋಗಾಲಯಗಳು, ಹವಾಮಾನ ಮುನ್ಸೂಚನೆ ಕೇಂದ್ರಗಳು ಹಾಗೂ ಸಮುದಾಯ ಆಧಾರಿತ ಕ್ಷೇತ್ರ ಯೋಜನೆಗಳವರೆಗೆ ವಿಸ್ತರಿಸಿದೆ. ಶಿಕ್ಷಣ, ಸಂಶೋಧನೆ...

ಉದ್ಯಾನವನಗಳನ್ನು ಮಾರುತ್ತಿಲ್ಲ, ಜನರ ಭಾವನೆಗೆ ಗೌರವ ನೀಡುತ್ತಿದ್ದೇವೆ:ಬೆಂಗಳೂರಿಗೆ ಬಿಜೆಪಿಯದ್ದೇ ದೊಡ್ಡ ಶಾಪ: ಕೆರಳಿದ ಕನಕಪುರ ಬಂಡೆ

ಉದ್ಯಾನವನಗಳನ್ನು ಮಾರುತ್ತಿಲ್ಲ, ಜನರ ಭಾವನೆಗೆ ಗೌರವ ನೀಡುತ್ತಿದ್ದೇವೆ:ಬೆಂಗಳೂರಿಗೆ ಬಿಜೆಪಿಯದ್ದೇ ದೊಡ್ಡ ಶಾಪ: ಕೆರಳಿದ ಕನಕಪುರ ಬಂಡೆ

by Shwetha
September 5, 2026
0

ಬೆಂಗಳೂರು: ರಾಜಧಾನಿ ಬೆಂಗಳೂರಿನ ಅಭಿವೃದ್ಧಿ ಮತ್ತು ಉದ್ಯಾನವನಗಳ ಸಂರಕ್ಷಣಾ ಕಾಯ್ದೆ ತಿದ್ದುಪಡಿ ವಿಚಾರವಾಗಿ ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿಯ ನಡುವಿನ ವಾಕ್ಸಮರ ತಾರಕಕ್ಕೇರಿದೆ. ಬೆಂಗಳೂರಿಗೆ ಬಿಜೆಪಿಯದ್ದೇ...

ಡಿ ಕೆ ಶಿವಕುಮಾರ್ ಒಬ್ಬ ಡಮ್ಮಿ ಸಿಎಂ, ರಿಮೋಟ್ ಕಂಟ್ರೋಲ್ ದೆಹಲಿಯಲ್ಲಿದೆ:ಬಂಡೆ ಅಲ್ಲ ಇದು ದೆಹಲಿ ಎದುರು ಮಂಡಿಯೂರಿದ ಸರ್ಕಾರ-ಆರ್ ಅಶೋಕ್

ಡಿ ಕೆ ಶಿವಕುಮಾರ್ ಒಬ್ಬ ಡಮ್ಮಿ ಸಿಎಂ, ರಿಮೋಟ್ ಕಂಟ್ರೋಲ್ ದೆಹಲಿಯಲ್ಲಿದೆ:ಬಂಡೆ ಅಲ್ಲ ಇದು ದೆಹಲಿ ಎದುರು ಮಂಡಿಯೂರಿದ ಸರ್ಕಾರ-ಆರ್ ಅಶೋಕ್

by Shwetha
September 5, 2026
0

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಹರಿಹಾಯ್ದಿರುವ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಡಿಕೆಶಿ ಅವರು ಕರ್ನಾಟಕ ಕಂಡ...

ದಿನ ಭವಿಷ್ಯ (02-09-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (05-09-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
September 5, 2026
0

ದಿನ ಭವಿಷ್ಯ: 05-09-2026 1. ಮೇಷ ರಾಶಿ ಸಾಮಾನ್ಯ ಫಲ: ಇಂದು ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಿರುತ್ತದೆ. ಆದರೆ ಅತಿಯಾದ ಆತುರದಿಂದ ಕೆಲಸಗಳು ಕೆಡುವ ಸಾಧ್ಯತೆ ಇದೆ. ತಾಳ್ಮೆಯಿಂದ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram