ADVERTISEMENT
Tuesday, September 15, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ವಂತಾರಾದಿಂದ ಕೋಲ್ಹಾಪುರದ ಹೆಣ್ಣಾನೆ ಮಾಧುರಿ ಬಗ್ಗೆ ಹೇಳಿಕೆ ಬಿಡುಗಡೆ

admin by admin
September 15, 2026
in Newsbeat, National, ದೇಶ - ವಿದೇಶ
vantara-madhuri-mahadevi-kolhapur-statement

vantara-madhuri-mahadevi-kolhapur-statement

Share on FacebookShare on TwitterShare on WhatsappShare on Telegram

ಜಾಮ್ ನಗರ (ಗುಜರಾತ್),  ಹೆಣ್ಣಾನೆ ಮಾಧುರಿ (ಮಹಾದೇವಿ) ಕುರಿತು ಅನಂತ್ ಅಂಬಾನಿ ನೇತೃತ್ವದಲ್ಲಿ ನಡೆಯುತ್ತಿರುವ ವಂತಾರಾದಿಂದ ಹೇಳಿಕೆಯೊಂದನ್ನು ಬಿಡುಗಡೆ ಮಾಡಲಾಗಿದೆ. ವನ್ಯಜೀವಿಗಳ ಸಂರಕ್ಷಣೆ, ಪಾಲನೆ- ಪೋಷಣೆಗಾಗಿ ಮೀಸಲಾದ ಈ ಸಂಸ್ಥೆಯು ಭಾರೀ ಚರ್ಚೆಗೆ ಕಾರಣವಾಗಿದ್ದ, ಭಾವನಾತ್ಮಕ ನಂಟನ್ನು ಹೊಂದಿದ್ದ ಕೊಲ್ಹಾಪುರದ ಹೆಣ್ಣಾನೆ ಮಾಧುರಿ ಕುರಿತಂತೆ ಮಹತ್ತರವಾದ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಅದರ ವಿವರ ಹೀಗಿದೆ.

ಮಾಧುರಿ, ಕೊಲ್ಹಾಪುರದಲ್ಲಿ ಪರಿಚಿತವಾಗಿರುವುದು ಹಾಗೂ ಪ್ರೀತಿಸುವುದು ಮಹಾದೇವಿಯಾಗಿ. ಈ ಹೆಣ್ಣಾನೆ ಜಾಮ್ ನಗರದಲ್ಲಿನ ವಂತಾರಾಕ್ಕೆ ಬಂದಿದ್ದು 2025ರ ಜುಲೈ 30ನೇ ತಾರೀಕು. ಹೈ ಪವರ್ಡ್ ಕಮಿಟಿ (ಎಚ್ ಪಿಸಿ) ನಿರ್ದೇಶನದ ನಿಯಮಾನುಸಾರವಾಗಿಯೇ ವಂತಾರಾಕ್ಕೆ ಕರೆತರಲಾಗಿತ್ತು. ಆ ನಂತರ ಎಚ್ ಪಿಸಿ ನಿರ್ದೇಶನವನ್ನು ಗೌರವಾನ್ವಿತ ಬಾಂಬೆ ಹೈಕೋರ್ಟ್ ಹಾಗೂ ಗೌರವಾನ್ವಿತ ಸುಪ್ರೀಂ ಕೋರ್ಟ್ ಸಹ ಎತ್ತಿ ಹಿಡಿಯಿತು. ವಂತಾರಾದಿಂದ ಮಾಧುರಿಯನ್ನು ತಮಗೆ ಒಪ್ಪಿಸುವಂತೆ ಸಹ ಕೇಳಿರಲಿಲ್ಲ. ಆದರೆ ವಂತಾರಾದಿಂದ ಆ ಹೆಣ್ಣಾನೆಯನ್ನು ಸ್ವೀಕರಿಸಿದ್ದು ಹಾಗೂ ಕಾಳಜಿ ಮಾಡಿದ್ದು ಆ ರೀತಿಯಾಗಿ ಮಾಡುವಂತೆ ನಿರ್ದೇಶನ ನೀಡಿದ್ದರಿಂದ ಮಾತ್ರ.

Related posts

mandalao-vantara-launch-historic-elephant-conservation-programme-laos

ಮಂಡಲಾವೊ ಎಲಿಫೆಂಟ್ ಕನ್ಸರ್ವೇಶನ್ ಮತ್ತು ವಂತರಾದಿಂದ ಲಾವೋಸ್‌ನಲ್ಲಿ ಐತಿಹಾಸಿಕ ಆನೆ ಸಂರಕ್ಷಣಾ ಕಾರ್ಯಕ್ರಮಕ್ಕೆ ಚಾಲನೆ

September 15, 2026
mukesh-ambani-calls-for-more-women-leadership-in-corporate-sector

ಕಾರ್ಪೊರೇಟ್‌ ವಲಯಕ್ಕೆ ಮಹಿಳಾ ನಾಯಕತ್ವ ಅಗತ್ಯ: ಮುಕೇಶ್‌ ಅಂಬಾನಿ

September 15, 2026

ಕೊಲ್ಹಾಪುರದಲ್ಲಿ ಮಾಧುರಿ ಸುತ್ತ ಇರುವಂಥ ಆಳವಾದ ಭಾವನಾತ್ಮಕ ಬಂಧವನ್ನು ನಾವು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿದ್ದೇವೆ. ಮಹಾರಾಷ್ಟ್ರ ಸರ್ಕಾರ, ಅದರ ಅಧಿಕಾರಿಗಳು, ಇತರ ಭಾಗೀದಾರರು ಮತ್ತು ಸಮುದಾಯ ಸದಸ್ಯರ ಜೊತೆಗೆ ಚರ್ಚೆ ಮಾಡಿದ ನಂತರ, ವಂತಾರಾದಿಂದ 2025ರ ಆಗಸ್ಟ್ 6ರಂದು ಹೇಳಿಕೆ ನೀಡಲಾಯಿತು: ಸಂಸ್ಥೆಯು ಈ ಭಾವನೆಗಳನ್ನು ಗೌರವಿಸುತ್ತದೆ ಮತ್ತು ಸಕ್ಷಮ ಪ್ರಾಧಿಕಾರದ ನಿರ್ದೇಶನಕ್ಕೆ ಬದ್ಧವಾಗಿರುತ್ತದೆ.

ಗೌರವಾನ್ವಿತ ಸುಪ್ರೀಂ ಕೋರ್ಟ್ ಆನಂತರದಲ್ಲಿ ಪಕ್ಷದಾರರಿಗೆ ತಮ್ಮ ವಾದವನ್ನು ಎಚ್ ಪಿಸಿ ಮುಂದಿಡುವಂತೆ ನಿರ್ದೇಶನ ನೀಡಿತು. ಪಕ್ಷದಾರರ ಅಹವಾಲನ್ನು ಕೇಳಿಕೊಂಡ ನಂತರ, ವರದಿಯನ್ನು ಹಾಗೂ ನಂದನಿಯಲ್ಲಿನ ವ್ಯವಸ್ಥೆ- ಕೇಂದ್ರ ಹೇಗಿದೆ ಎಂದು ಪರಿಶೀಲಿಸಲು ತಿಳಿಸಲಾಯಿತು. 2026ರ ಸೆಪ್ಟೆಂಬರ್ 9ನೇ ತಾರೀಕು ಎಚ್ ಪಿಸಿಯಿಂದ ಒಂದು ಕಾರಣ ಸಹಿತವಾದ ಆದೇಶವನ್ನು ನೀಡಿದ್ದು, ಕಠಿಣವಾದ ಷರತ್ತುಗಳೊಂದಿಗೆ ಮಾಧುರಿಯನ್ನು ಕೊಲ್ಹಾಪುರಕ್ಕೆ ಹಿಂತಿರುಗಿಸಲು ಅನುಮತಿ ನೀಡಿತು. ಅದರಲ್ಲಿ ಇದ್ದ ನಿಯಮ ಪ್ರಕಾರ ಮಾಧುರಿಯನ್ನು ಮೆರವಣಿಗೆ ಅಥವಾ ಬೇರೆ ಯಾವುದೇ ಇತರ ಉದ್ದೇಶಗಳಿಗೆ ಬಳಸಬಾರದು, ಸದಾ ಕಾಲ ಹೆಣ್ಣಾನೆ ಆರೋಗ್ಯದ ಬಗ್ಗೆ ಕಾಳಜಿ ತೆಗೆದುಕೊಳ್ಳಬೇಕು ಹಾಗೂ ಪ್ರತಿ ಹದಿನೈದು ದಿನಕ್ಕೊಮ್ಮೆ ಆರೋಗ್ಯ ತಪಾಸಣೆ ಆಗಬೇಕು ಎಂಬ ಷರತ್ತುಗಳನ್ನೂ ಒಳಗೊಂಡಿತ್ತು.

ಆ ಸಂದರ್ಭದಲ್ಲಿ ಎಚ್ ಪಿಸಿಯ ಅಧಿಕಾರವನ್ನು ವಂತಾರಾ ಗೌರವಿಸಿ, ಆ ಎಲ್ಲ ನಿರ್ದೇಶನಗಳಿಗೂ ಸಂಪೂರ್ಣವಾಗಿ ಬದ್ಧವಾಗಿತ್ತು.

ಮಾಧುರಿಯ ಕುರಿತಾದ ನಮ್ಮ ನಿಲುವು ಯಾವಾಗಲೂ ಪಶುವೈದ್ಯಕೀಯ ವಿಜ್ಞಾನ ಮತ್ತು ಅವಳ ಒಳಿತಿಗೆ ಏನು ಮಾಡಬೇಕೋ ಅದರಂತೆಯೇ ತೆಗೆದುಕೊಳ್ಳಲಾಗಿದೆ. ನಿರಂತರ ಪಶುವೈದ್ಯಕೀಯ ಆರೈಕೆಯ ಮೂಲಕ ಮಾಧುರಿ ಸ್ಥಿತಿಯನ್ನು ಸ್ಥಿರಗೊಳಿಸಲಾಗಿದೆ, ಆದರೆ ಅವಳ ದೀರ್ಘಕಾಲದ ಕಾಯಿಲೆಗಳು ಮಾಯವಾಗಿಲ್ಲ. ಅವಳಿಗೆ ಸೂಕ್ತವಾದ ಆರೈಕೆ, ಬೆಂಬಲ ನಿರ್ವಹಣೆ ಮತ್ತು ನಿಯಮಿತ ಪಶುವೈದ್ಯಕೀಯ ಮೇಲ್ವಿಚಾರಣೆ ಮುಂದುವರಿಯುವ ಅಗತ್ಯವಿದೆ.

ಕೊಲ್ಹಾಪುರಕ್ಕೆ ಮಾಧುರಿಯನ್ನು ವಾಪಸ್ ಕಳುಹಿಸುವುದರೊಂದಿಗೆ ನಮ್ಮ ಜವಾಬ್ದಾರಿ ಕೊನೆಗೊಳ್ಳುವುದಿಲ್ಲ. ಸೂಕ್ತ ವಾಸಸ್ಥಳಗಳು, ಪಶುವೈದ್ಯಕೀಯ ಮೂಲ ಸೌಕರ್ಯಗಳು, ವೈದ್ಯಕೀಯ ಉಪಕರಣಗಳು, ಔಷಧಿಗಳು ಮತ್ತು ಇತರ ಅಗತ್ಯಗಳು ಸ್ಥಳದಲ್ಲಿ ಇರುವುದನ್ನು ಖಚಿತಪಡಿಸಿಕೊಳ್ಳುವ ಮೂಲಕ ಹೆಣ್ಣಾನೆಯ ಪರಿವರ್ತನೆಯನ್ನು ಬೆಂಬಲಿಸಲು ವಂತಾರಾ ಕೆಲಸ ಮಾಡಿದೆ. ಎಚ್‌ಪಿಸಿ (HPC) ನಿರ್ದೇಶನದಂತೆ, ಕೊಲ್ಹಾಪುರದಲ್ಲಿರುವ ಮಾಧುರಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲು ಮತ್ತು ಸಕ್ಷಮ ಪ್ರಾಧಿಕಾರಗಳಿಗೆ ವರದಿಗಳನ್ನು ಸಲ್ಲಿಸಲು ವಂತಾರಾದ ಪಶುವೈದ್ಯರು ಪ್ರತಿ ಹದಿನೈದು ದಿನಗಳಿಗೊಮ್ಮೆ ಭೇಟಿ ನೀಡುತ್ತಾರೆ. ಇದು ಆರೈಕೆಯ ನಿರಂತರತೆ ಮತ್ತು ಮಾಧುರಿ ಎಲ್ಲೇ ಆಶ್ರಯ ಪಡೆದಿದ್ದರೂ ಅವಳ ಒಳಿತನ್ನು ಕಾಪಾಡುವ ಬಗ್ಗೆಯ ಸಂಗತಿಯಾಗಿದೆ.

ಮಾಧುರಿಯು ಈಗ ಹಿಂತಿರುಗುತ್ತಿರುವ ನಂದಿನಿಯಲ್ಲಿರುವ ಆವರಣ ಮತ್ತು ಸೌಲಭ್ಯದ ಮೇಲೂ ವಂತಾರಾ ಕೆಲಸ ಮಾಡಿದೆ. ಲಭ್ಯವಿರುವ ಮೂಲಸೌಕರ್ಯಗಳ ಒಳಗೆ ಆಕೆಗಾಗಿ ಅತ್ಯುತ್ತಮವಾದ ವ್ಯವಸ್ಥೆಗಳನ್ನು ಮಾಡಲಾಗಿದೆ. ಟ್ರಸ್ಟ್‌ನ ಜಮೀನಿನ ಮೂಲಕ ಹೋಗುವ ರಸ್ತೆಯ ಅಭಿವೃದ್ಧಿಗೆ ಲಭ್ಯವಿರುವ ಭೂಮಿಯೂ ಕಡಿಮೆ ಇರುವುದರಿಂದ, ಪಟ್ಟಣ ಯೋಜನೆ (ಟೌನ್ ಪ್ಲಾನಿಂಗ್) ನಿರ್ಬಂಧಗಳ ಕಾರಣದಿಂದ ಈ ಹಂತದಲ್ಲಿ ಮೂಲಸೌಕರ್ಯಗಳಲ್ಲಿ ಹೆಚ್ಚಿನ ಸುಧಾರಣೆಗಳನ್ನು ಮಾಡಲು ಸಾಧ್ಯವಾಗಲಿಲ್ಲ. ಮಾಧುರಿಯು ನೆಲೆಯಾದ ನಂತರದಲ್ಲಿ ಇರುವ ಸೌಲಭ್ಯದ ನವೀಕರಣಕ್ಕಾಗಿ ಮಠಕ್ಕೆ ವಂತಾರಾ ಸದಾ ಲಭ್ಯವಿರುತ್ತದೆ. ನ್ಯಾಯಾಲಯಗಳು ಅಥವಾ ಸಕ್ಷಮ ಪ್ರಾಧಿಕಾರಗಳು ನಿರ್ದೇಶಿಸಿದರೆ ವಂತಾರಾದಿಂದ ಅಂತಹ ನವೀಕರಣದಲ್ಲಿಯೂ ಸಹಕರಿಸಲಾಗುತ್ತದೆ.

ನಿಜವಾದ ಪ್ರಾಣಿ ಕಲ್ಯಾಣಕ್ಕೆ ವಾಸ್ತವಗಳು, ಪಶುವೈದ್ಯಕೀಯ ವಿಜ್ಞಾನ, ಜವಾಬ್ದಾರಿಯುತ ಆರೈಕೆ, ಕಾನೂನು ಪ್ರಕ್ರಿಯೆಯ ಗೌರವ ಮತ್ತು ಜೀವವನ್ನು ಎಂದೆಂದಿಗೂ ರಕ್ಷಿಸುವ ದೃಢವಾದ ಬದ್ಧತೆ ಅಗತ್ಯವಿದೆ ಎಂದು ವಂತಾರಾ ನಂಬುತ್ತದೆ.

ಗೌರವಾನ್ವಿತ ಸುಪ್ರೀಂ ಕೋರ್ಟ್, ಗೌರವಾನ್ವಿತ ಬಾಂಬೆ ಹೈಕೋರ್ಟ್ ಮತ್ತು ಎಚ್‌ಪಿಸಿಯ (HPC) ನಿರ್ದೇಶನಗಳಿಗೆ ವಂತಾರಾ ಕೃತಜ್ಞವಾಗಿದೆ. ಮಹಾರಾಷ್ಟ್ರ ಮತ್ತು ಗುಜರಾತ್ ಸರ್ಕಾರಗಳು ಹಾಗೂ ಅವುಗಳ ಅಧಿಕಾರಿಗಳ ಬೆಂಬಲಕ್ಕಾಗಿ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ. ಮಾಧುರಿಯ ಬಗ್ಗೆ ಕಾಳಜಿ ವಹಿಸಿದ್ದಕ್ಕಾಗಿ ನಾವು ಮಠಕ್ಕೆ ಮತ್ತು ಕೊಲ್ಹಾಪುರದ ಜನರಿಗೆ ಸಮಾನವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಮಾಧುರಿಯ ಸ್ಥಿತಿಯನ್ನು ಎಚ್‌ಪಿಸಿಯ ಮುಂದೆ ತರುವಲ್ಲಿ ಪೆಟಾ ಇಂಡಿಯಾ (PETA India) ವಹಿಸಿದ ಪಾತ್ರವನ್ನು ನಾವು ಗುರುತಿಸುತ್ತೇವೆ ಮತ್ತು ಪ್ರಾಣಿ ಕಲ್ಯಾಣದ ನಿಟ್ಟಿನಲ್ಲಿ ನಮ್ಮ ದೀರ್ಘಕಾಲದ ಒಡನಾಟಕ್ಕೆ ಗೌರವ ನೀಡುತ್ತೇವೆ.

ಮಾಧುರಿಯ ಯೋಗಕ್ಷೇಮವು ಯಾವಾಗಲೂ ವಂತಾರಾದ ಆದ್ಯತೆ ಕಾಳಜಿಯಾಗಿದೆ. ಆಕೆಯ ಆರೋಗ್ಯ, ಒಳಿತು ಮತ್ತು ಘನತೆಯ ಬಗ್ಗೆ ನಮ್ಮ ಬದ್ಧತೆಯು ಮಾಧುರಿ ಎಲ್ಲಿ ವಾಸಿಸುತ್ತಾಳೆ ಎಂಬುದರ ಮೇಲೆ ಅವಲಂಬಿಸಿಲ್ಲ. ಆಕೆ ಉತ್ತಮ ಆರೋಗ್ಯ, ದೀರ್ಘಕಾಲದ, ಸುರಕ್ಷಿತ ಮತ್ತು ಸಂತೋಷದ ಜೀವನವನ್ನು ನಡೆಸಲಿ ಎಂದು ನಾವು ಹಾರೈಸುತ್ತೇವೆ.

Tags: #Vantara #Madhuri #Mahadevi #Kolhapur #Elephant #ElephantWelfare #AnantAmbani #HPC #SupremeCourt #BombayHighCourt #PETAIndia #WildlifeConservation #saakhsatv
ShareTweetSendShare
Join us on:

Related Posts

mandalao-vantara-launch-historic-elephant-conservation-programme-laos

ಮಂಡಲಾವೊ ಎಲಿಫೆಂಟ್ ಕನ್ಸರ್ವೇಶನ್ ಮತ್ತು ವಂತರಾದಿಂದ ಲಾವೋಸ್‌ನಲ್ಲಿ ಐತಿಹಾಸಿಕ ಆನೆ ಸಂರಕ್ಷಣಾ ಕಾರ್ಯಕ್ರಮಕ್ಕೆ ಚಾಲನೆ

by admin
September 15, 2026
0

* ಈ ಪಾಲುದಾರಿಕೆಯು ಆನೆಗಳ ಪಶುವೈದ್ಯಕೀಯ ಸಾಮರ್ಥ್ಯವನ್ನು ವಿಸ್ತರಿಸಲಿದೆ. ಆನೆಗಳಿಗೆ ವಿಶ್ರಾಂತಿ ಹಾಗೂ ಆಜೀವ ಆರೈಕೆಯನ್ನು ಒದಗಿಸಲಿದೆ ಮತ್ತು ಲಾವೋಸ್‌ನ ಕಾಡು ಆನೆಗಳ ಸಂರಕ್ಷಣೆಗೆ ಬಲ ತುಂಬಲಿದೆ....

mukesh-ambani-calls-for-more-women-leadership-in-corporate-sector

ಕಾರ್ಪೊರೇಟ್‌ ವಲಯಕ್ಕೆ ಮಹಿಳಾ ನಾಯಕತ್ವ ಅಗತ್ಯ: ಮುಕೇಶ್‌ ಅಂಬಾನಿ

by admin
September 15, 2026
0

ಮುಂಬಯಿ: ಭಾರತದ ಕಾರ್ಪೊರೇಟ್‌ ವಲಯದಲ್ಲಿ ಕೆಲಸ ಮಾಡುವ ಮಹಿಳೆಯರು ಹಾಗೂ ತಾಯಂದಿರನ್ನು ಬೆಂಬಲಿಸಲು ಎಲ್ಲರೂ ಒಟ್ಟಾಗಿ ಉತ್ತಮ ವ್ಯವಸ್ಥೆಯನ್ನು ರೂಪಿಸಬೇಕು. ಇಲ್ಲಿ ಮಹಿಳಾ ನಾಯಕತ್ವ ಹೆಚ್ಚಬೇಕು ಎಂದು...

jio-users-free-canva-pro-12-months-offer

ಜಿಯೋ ಬಳಕೆದಾರರಿಗೆ 12 ತಿಂಗಳ ಉಚಿತ ಕ್ಯಾನ್ವಾ ಪ್ರೊ

by admin
September 15, 2026
0

* 399 ರೂ.ಗಳ ಪ್ಲಾನ್‌ನಲ್ಲಿ ಕ್ಯಾನ್ವಾ ಪ್ರೊ, ಆಯ್ದ 2 ಜಿಬಿ / ದಿನದ ಯೋಜನೆಗಳಲ್ಲಿ ಕ್ಯಾನ್ವಾ ಪ್ರೊ ಲೈಟ್ ರೂ.349 ಮತ್ತು ಅದಕ್ಕಿಂತ ಹೆಚ್ಚಿನ ಬೆಲೆಯಲ್ಲಿ...

2,000 ಕೋಟಿ ವ್ಯವಹಾರ ಮಾಡೋರ ಹತ್ರ 2 ಕೋಟಿ ಇರೋದು ದೊಡ್ಡ ವಿಷಯವೇ? ಸತೀಶ್ ಜಾರಕಿಹೊಳಿ ಪರ ರಾಜಣ್ಣ ಬ್ಯಾಟಿಂಗ್

2,000 ಕೋಟಿ ವ್ಯವಹಾರ ಮಾಡೋರ ಹತ್ರ 2 ಕೋಟಿ ಇರೋದು ದೊಡ್ಡ ವಿಷಯವೇ? ಸತೀಶ್ ಜಾರಕಿಹೊಳಿ ಪರ ರಾಜಣ್ಣ ಬ್ಯಾಟಿಂಗ್

by Shwetha
September 13, 2026
0

ತುಮಕೂರು: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅವರ ಕುಟುಂಬಸ್ಥರ ಮನೆ ಮತ್ತು ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿರುವ ಸರಣಿ ದಾಳಿಯ ವಿರುದ್ಧ ಸಹಕಾರ...

ಚಾರಿತ್ರ್ಯ ವಧೆ ಮಾಡುವುದೇ ಇಡಿ ಕೆಲಸವೇ? ಇಡಿ ವಿರುದ್ಧ ಅಬ್ಬರಿಸಿದ ವಿಜಯ್ ಮಲ್ಯ: ಸತೀಶ್ ಜಾರಕಿಹೊಳಿ ಪರ ಬ್ಯಾಟಿಂಗ್ ಮಾಡಿ ಲಂಡನ್‌ನಿಂದಲೇ ಗುಡುಗಿದ ಉದ್ಯಮಿ

ಚಾರಿತ್ರ್ಯ ವಧೆ ಮಾಡುವುದೇ ಇಡಿ ಕೆಲಸವೇ? ಇಡಿ ವಿರುದ್ಧ ಅಬ್ಬರಿಸಿದ ವಿಜಯ್ ಮಲ್ಯ: ಸತೀಶ್ ಜಾರಕಿಹೊಳಿ ಪರ ಬ್ಯಾಟಿಂಗ್ ಮಾಡಿ ಲಂಡನ್‌ನಿಂದಲೇ ಗುಡುಗಿದ ಉದ್ಯಮಿ

by Shwetha
September 13, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತಲ್ಲಣ ಸೃಷ್ಟಿಸಿರುವ ಸಚಿವ ಸತೀಶ್ ಜಾರಕಿಹೊಳಿ ಮೇಲಿನ ಇಡಿ ದಾಳಿಯ ಪ್ರಕರಣ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಭಾರತದಿಂದ ಪರಾರಿಯಾಗಿ ಲಂಡನ್‌ನಲ್ಲಿ ನೆಲೆಸಿರುವ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram