ಪಾಂಡವಪುರ: ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಪಾಂಡವಪುರ ತಾಲೂಕಿನ ಹಿರೇಮರಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ವಿಸಿ ನಾಲೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು.
ಹಿರೇಮರಳಿ ಪಾಯಿಂಟ್ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗುತ್ತಿರುವ ವಿವಿಧ ಕಾಮಗಾರಿಗಳ ಮೂಲಕ ನಾಲೆಗಳ ಸುಧಾರಣೆ, ನೀರಿನ ಹರಿವಿಗೆ ಅನುಕೂಲ ಕಲ್ಪಿಸುವುದು ಹಾಗೂ ರೈತರ ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ನೀರು ಸಮರ್ಪಕವಾಗಿ ತಲುಪುವಂತೆ ಮಾಡುವ ಉದ್ದೇಶ ಹೊಂದಲಾಗಿದೆ.
ಈ ಯೋಜನೆಯಡಿ ನುಗ್ಗಹಳ್ಳಿ ಗ್ರಾಮದ 22ನೇ ವಿತರಣಾ ನಾಲೆಯಲ್ಲಿ ಬಾಕ್ಸ್ ಡ್ರೈನ್ ಕಾಮಗಾರಿ, 23ನೇ ವಿತರಣಾ ನಾಲೆಯಲ್ಲಿ ಬಾಕ್ಸ್ ಡ್ರೈನ್ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಇದೇ ರೀತಿ ಹಿರೇಮರಳಿ ಗ್ರಾಮದ 19ನೇ ವಿತರಣಾ ನಾಲೆಯಲ್ಲಿ ಬಾಕ್ಸ್ ಡ್ರೈನ್ ಕಾಮಗಾರಿ ಕೂಡ ನಡೆಯಲಿದೆ.
ಇದರೊಂದಿಗೆ ನುಗ್ಗಹಳ್ಳಿ ಗ್ರಾಮದ 22ನೇ ನಾಲೆಯಲ್ಲಿ ಬಾಕ್ಸ್ ಡ್ರೈನ್ ಹಾಗೂ ಗಾಡಿ ಸೇತುವೆ ಕಾಮಗಾರಿ ಮತ್ತು ರಕ್ಷಣಾ ಗೋಡೆ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗುತ್ತಿದೆ.
ನಾಲೆಗಳ ಅಭಿವೃದ್ಧಿ ಹಾಗೂ ಅಗತ್ಯ ಮೂಲಸೌಕರ್ಯಗಳ ನಿರ್ಮಾಣದಿಂದ ಈ ಭಾಗದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ. ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿಯಲು ಹಾಗೂ ನಾಲೆಗಳ ಸುರಕ್ಷತೆ ಮತ್ತು ಬಳಕೆಗೆ ಈ ಕಾಮಗಾರಿಗಳು ಸಹಕಾರಿಯಾಗಲಿವೆ ಎಂದು ತಿಳಿಸಲಾಯಿತು.
ಹಿರೇಮರಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗುತ್ತಿರುವ ಈ ಅಭಿವೃದ್ಧಿ ಕಾಮಗಾರಿಗಳು ನಿಗದಿತ ಗುಣಮಟ್ಟದಲ್ಲಿ ಹಾಗೂ ತ್ವರಿತವಾಗಿ ಪೂರ್ಣಗೊಳ್ಳಬೇಕು ಎಂಬುದು ಸ್ಥಳೀಯರ ಆಶಯವಾಗಿದೆ.







