ADVERTISEMENT
Saturday, September 26, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ದೇಶದ ಪರಿಸ್ಥಿತಿ ಸರಿಯಿಲ್ಲ ಅದಕ್ಕೆ ನೀವೆಲ್ಲ ಹೇಗಿದ್ದೀರಿ ಎಂದು ಕೇಳಲ್ಲ :ಚುನಾವಣಾ ಆಯೋಗದ ವಿರುದ್ಧ ಸಿಡಿದೆದ್ದ ಪ್ರಕಾಶ್ ರಾಜ್

Shwetha by Shwetha
September 26, 2026
in ರಾಜ್ಯ, Newsbeat, State
Share on FacebookShare on TwitterShare on WhatsappShare on Telegram

ಬೆಂಗಳೂರು: ದೇಶದ ಪ್ರಸ್ತುತ ಸ್ಥಿತಿಗತಿ ಮತ್ತು ಚುನಾವಣಾ ಆಯೋಗದ ನಡೆಗಳ ಬಗ್ಗೆ ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಅತ್ಯಂತ ಕಳವಳ ಮತ್ತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ ಶಾದಿಮಹಲ್‌ನಲ್ಲಿ ನಡೆದ ನಾಗರಿಕ ಸಂಘಟನೆಗಳ ಒಕ್ಕೂಟ ಹಾಗೂ ಜಾತ್ಯತೀತ ಮುಖಂಡರ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶವೇ ಸಂಕಷ್ಟದಲ್ಲಿರುವಾಗ ಕ್ಷೇಮ ಸಮಾಚಾರ ವಿಚಾರಿಸುವುದು ಅರ್ಥಹೀನ ಎಂದು ಮಾರ್ಮಿಕವಾಗಿ ನುಡಿದರು.

ಮತದಾರರ ಪಟ್ಟಿಯಿಂದ 1.8 ಕೋಟಿ ಹೆಸರುಗಳ ನಾಪತ್ತೆ

Related posts

ಚುನಾವಣಾ ಆಯೋಗ ಬಿಜೆಪಿಯ ಚುನಾವಣಾ ಮೋರ್ಚಾವೇ? ಸಿಇಸಿ ಜ್ಞಾನೇಶ್ ಕುಮಾರ್ ಅವರನ್ನು ಎಲ್ಲಿ ಬಚ್ಚಿಟ್ಟಿದ್ದೀರಿ :ಆಯೋಗದ ವಕ್ತಾರನಂತೆ ಬಿಜೆಪಿ ವರ್ತನೆ ಏಕೆ? ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಪ್ರಶ್ನಿಸಿದ ಖರ್ಗೆ

ಚುನಾವಣಾ ಆಯೋಗ ಬಿಜೆಪಿಯ ಚುನಾವಣಾ ಮೋರ್ಚಾವೇ? ಸಿಇಸಿ ಜ್ಞಾನೇಶ್ ಕುಮಾರ್ ಅವರನ್ನು ಎಲ್ಲಿ ಬಚ್ಚಿಟ್ಟಿದ್ದೀರಿ :ಆಯೋಗದ ವಕ್ತಾರನಂತೆ ಬಿಜೆಪಿ ವರ್ತನೆ ಏಕೆ? ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಪ್ರಶ್ನಿಸಿದ ಖರ್ಗೆ

September 26, 2026
ನೀಲಿ ಶಾಲು ಸಮಾನತೆಯ ಸಂಕೇತ ನಾನು ದಲಿತ ವಿರೋಧಿಯಲ್ಲ: ದಲಿತ ವಿರೋಧಿ ಎಂಬ ಟೀಕೆಗೆ ಪ್ರತಾಪ್ ಸಿಂಹ ಖಡಕ್ ಕೌಂಟರ್

ಸಂಕಷ್ಟದಲ್ಲಿ ಸಿಂಹ: ದಲಿತರ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದ ಆರೋಪದ ಮೇಲೆ ಬಂಧನ ಭೀತಿ -ಬಂಧನದಿಂದ ರಕ್ಷಣೆ ನೀಡಲು ಹೈಕೋರ್ಟ್ ನಕಾರ

September 26, 2026

ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಅಥವಾ ಎಸ್‌ಐಆರ್ ಹೆಸರಿನಲ್ಲಿ ಕರ್ನಾಟಕದಲ್ಲಿ ಬರೋಬ್ಬರಿ 1.8 ಕೋಟಿ ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಪ್ರಕಾಶ್ ರಾಜ್ ಗಂಭೀರ ಆರೋಪ ಮಾಡಿದರು. ಇದರಲ್ಲಿ 43 ಲಕ್ಷ ಜನರು ಸರಿಯಾಗಿ ಮ್ಯಾಪ್ ಆಗಿಲ್ಲ ಎಂದು ಸ್ವತಃ ಚುನಾವಣಾ ಆಯೋಗವೇ ಒಪ್ಪಿಕೊಳ್ಳುತ್ತಿದೆ. ಈ ಹಿಂದೆ ಬುದ್ಧಿಜೀವಿಗಳು ಎಚ್ಚರಿಸಿದಾಗ ಜನ ಅಲಕ್ಷಿಸಿದ್ದರು, ಆದರೆ ಈಗ ಈ ಸಮಸ್ಯೆಯ ತೀವ್ರತೆ ಜನಸಾಮಾನ್ಯರಿಗೆ ಅರ್ಥವಾಗುತ್ತಿದೆ ಎಂದು ಅವರು ಹೇಳಿದರು.

ಆಯೋಗದ ತಾರತಮ್ಯದ ವಿರುದ್ಧ ಗುಡುಗು

ಚುನಾವಣಾ ಆಯೋಗದ ಕಾರ್ಯವೈಖರಿಯಲ್ಲಿನ ತಾರತಮ್ಯವನ್ನು ಪ್ರಶ್ನಿಸಿದ ಪ್ರಕಾಶ್ ರಾಜ್, ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿರುವ ಪ್ರಭಾವಿಗಳ ಮನೆಗೆ ಆಯೋಗದ ಅಧಿಕಾರಿಗಳೇ ಹೋಗಿ ಸರಿಪಡಿಸುತ್ತಾರೆ. ಆದರೆ, ಅದೇ ಜನಸಾಮಾನ್ಯರು ತಮ್ಮ ಮತದಾನದ ಹಕ್ಕನ್ನು ಸಾಬೀತುಪಡಿಸಲು ಕಚೇರಿಗಳಿಗೆ ಅಲೆಯಬೇಕಾದ ಪರಿಸ್ಥಿತಿ ಇದೆ. ಅಂಬೇಡ್ಕರ್ ಅವರ ಸಂವಿಧಾನದ ಪ್ರಕಾರ ಮತದಾನದ ವಿಷಯದಲ್ಲಿ ಪ್ರತಿಯೊಬ್ಬರೂ ಸಮಾನರು. ಸರ್ಕಾರದ ಹಣೆಬರಹ ನಿರ್ಧರಿಸುವ ಹಕ್ಕನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದರೆ ನಾವು ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದರು.

ಆಯೋಗದ ಮೌನ

ರಾಜ್ಯ ಚುನಾವಣಾ ಆಯೋಗದ ಅಧ್ಯಕ್ಷ ಅನ್ಬುಕುಮಾರ್ ಅವರನ್ನು ಭೇಟಿಯಾದಾಗ 11 ಲಕ್ಷ ಹೊಸ ಮತದಾರರು ಸೇರ್ಪಡಿಕೊಂಡಿದ್ದಾರೆ ಎಂದು ಹೇಳಿದ್ದರು. ಆದರೆ, ಆ ಪಟ್ಟಿಯನ್ನು ನೀಡುವಂತೆ ನಾವು ಕೋರಿದರೂ ಈವರೆಗೆ ಯಾವುದೇ ಉತ್ತರ ಬಂದಿಲ್ಲ. ಇದು ವ್ಯವಸ್ಥಿತವಾಗಿ ನಡೆಯುತ್ತಿರುವ ಪಿತೂರಿಯೇ ಎಂಬ ಅನುಮಾನ ಮೂಡಿಸುತ್ತಿದೆ ಎಂದು ಅವರು ಅನುಮಾನ ವ್ಯಕ್ತಪಡಿಸಿದರು.

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಯ ಕಹಳೆ

ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವವರ ಬಗ್ಗೆ ಮಾಹಿತಿ ಸಂಗ್ರಹಿಸುವ ಪ್ರಕ್ರಿಯೆ ಸೆಪ್ಟೆಂಬರ್ 30ರವರೆಗೆ ನಡೆಯಲಿದೆ. ಈ ಬಗ್ಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ರಾಜ್ಯಾದ್ಯಂತ ಸೋಷಿಯಲ್ ಆಡಿಟ್ ಮಾಡುವಂತೆ ಒತ್ತಾಯಿಸಲಾಗುವುದು. ಅಷ್ಟಕ್ಕೂ ನ್ಯಾಯ ಸಿಗದಿದ್ದರೆ ಅಕ್ಟೋಬರ್ 15ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಎಲ್ಲ ಸಂತ್ರಸ್ತರು ಒಗ್ಗೂಡಿ ಬೃಹತ್ ಪ್ರತಿಭಟನೆ ನಡೆಸಲಿದ್ದೇವೆ ಎಂದು ಪ್ರಕಾಶ್ ರಾಜ್ ಘೋಷಿಸಿದರು.

ShareTweetSendShare
Join us on:

Related Posts

ಚುನಾವಣಾ ಆಯೋಗ ಬಿಜೆಪಿಯ ಚುನಾವಣಾ ಮೋರ್ಚಾವೇ? ಸಿಇಸಿ ಜ್ಞಾನೇಶ್ ಕುಮಾರ್ ಅವರನ್ನು ಎಲ್ಲಿ ಬಚ್ಚಿಟ್ಟಿದ್ದೀರಿ :ಆಯೋಗದ ವಕ್ತಾರನಂತೆ ಬಿಜೆಪಿ ವರ್ತನೆ ಏಕೆ? ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಪ್ರಶ್ನಿಸಿದ ಖರ್ಗೆ

ಚುನಾವಣಾ ಆಯೋಗ ಬಿಜೆಪಿಯ ಚುನಾವಣಾ ಮೋರ್ಚಾವೇ? ಸಿಇಸಿ ಜ್ಞಾನೇಶ್ ಕುಮಾರ್ ಅವರನ್ನು ಎಲ್ಲಿ ಬಚ್ಚಿಟ್ಟಿದ್ದೀರಿ :ಆಯೋಗದ ವಕ್ತಾರನಂತೆ ಬಿಜೆಪಿ ವರ್ತನೆ ಏಕೆ? ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಪ್ರಶ್ನಿಸಿದ ಖರ್ಗೆ

by Shwetha
September 26, 2026
0

ಬೆಂಗಳೂರು: ಕೇಂದ್ರ ಚುನಾವಣಾ ಆಯೋಗದ ಆಯುಕ್ತರ ನಡುವೆ ಆಂತರಿಕ ಭಿನ್ನಾಭಿಪ್ರಾಯಗಳು ಸ್ಫೋಟಗೊಂಡಿರುವ ಬೆನ್ನಲ್ಲೇ, ಗೃಹ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ ಮತ್ತು ಆಯೋಗದ ವಿರುದ್ಧ ಅತ್ಯಂತ ಕಟುವಾದ...

ನೀಲಿ ಶಾಲು ಸಮಾನತೆಯ ಸಂಕೇತ ನಾನು ದಲಿತ ವಿರೋಧಿಯಲ್ಲ: ದಲಿತ ವಿರೋಧಿ ಎಂಬ ಟೀಕೆಗೆ ಪ್ರತಾಪ್ ಸಿಂಹ ಖಡಕ್ ಕೌಂಟರ್

ಸಂಕಷ್ಟದಲ್ಲಿ ಸಿಂಹ: ದಲಿತರ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದ ಆರೋಪದ ಮೇಲೆ ಬಂಧನ ಭೀತಿ -ಬಂಧನದಿಂದ ರಕ್ಷಣೆ ನೀಡಲು ಹೈಕೋರ್ಟ್ ನಕಾರ

by Shwetha
September 26, 2026
0

ಬೆಂಗಳೂರು: ದಲಿತ ಸಮುದಾಯ ಮತ್ತು ನೀಲಿ ಶಾಲಿನ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದ ಆರೋಪ ಎದುರಿಸುತ್ತಿರುವ ಮೈಸೂರಿನ ಮಾಜಿ ಸಂಸದ ಪ್ರತಾಪ್ ಸಿಂಹ ಅವರಿಗೆ ಕಾನೂನು ಸಂಕಷ್ಟ ಎದುರಾಗಿದೆ....

ಚುನಾವಣಾ ಆಯೋಗ ಬಿಜೆಪಿಯ ಚುನಾವಣಾ ಮೋರ್ಚಾವೇ? ಸಿಇಸಿ ಜ್ಞಾನೇಶ್ ಕುಮಾರ್ ಅವರನ್ನು ಎಲ್ಲಿ ಬಚ್ಚಿಟ್ಟಿದ್ದೀರಿ :ಆಯೋಗದ ವಕ್ತಾರನಂತೆ ಬಿಜೆಪಿ ವರ್ತನೆ ಏಕೆ? ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಪ್ರಶ್ನಿಸಿದ ಖರ್ಗೆ

ಸಿದ್ದರಾಮಯ್ಯ ನಮ್ಮ ಆರ್ಮಿ ಕ್ಯಾಪ್ಟನ್, 2028ಕ್ಕೆ ಡಿ ಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿಯಾಗಲಿ: ಜಾರಕಿಹೊಳಿ ಸಿದ್ದರಾಮಯ್ಯ ದೋಸ್ತಿ ಭದ್ರ- ವದಂತಿಗಳಿಗೆ ಫುಲ್ ಸ್ಟಾಪ್ ಇಟ್ಟ ಸಾಹುಕಾರ್

by Shwetha
September 26, 2026
0

ಬೆಳಗಾವಿ: ರಾಜ್ಯ ರಾಜಕಾರಣದಲ್ಲಿ ಕಳೆದ ಕೆಲವು ದಿನಗಳಿಂದ ಕೇಳಿಬರುತ್ತಿದ್ದ ಸರಣಿ ವದಂತಿಗಳಿಗೆ ಮತ್ತು ಊಹಾಪೋಹಗಳಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ತೆರೆ ಎಳೆದಿದ್ದಾರೆ. ಮಾಜಿ ಮುಖ್ಯಮಂತ್ರಿ...

ಚುನಾವಣಾ ಆಯೋಗ ಬಿಜೆಪಿಯ ಚುನಾವಣಾ ಮೋರ್ಚಾವೇ? ಸಿಇಸಿ ಜ್ಞಾನೇಶ್ ಕುಮಾರ್ ಅವರನ್ನು ಎಲ್ಲಿ ಬಚ್ಚಿಟ್ಟಿದ್ದೀರಿ :ಆಯೋಗದ ವಕ್ತಾರನಂತೆ ಬಿಜೆಪಿ ವರ್ತನೆ ಏಕೆ? ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಪ್ರಶ್ನಿಸಿದ ಖರ್ಗೆ

ಚುನಾವಣಾ ಮಾರುಕಟ್ಟೆಯಲ್ಲಿ ಹಸ್ತಕ್ಕಿಂತ ಕಮಲವೇ ಶ್ರೀಮಂತ:ಕಾಂಗ್ರೆಸ್ ಇಡೀ ದೇಶಕ್ಕೆ ಮಾಡಿದ ಖರ್ಚಿಗಿಂತ ಬಂಗಾಳದ ಮೇಲೆ ಬಿಜೆಪಿ ಸುರಿದ ಹಣವೇ ಹೆಚ್ಚು

by Shwetha
September 26, 2026
0

ನವದೆಹಲಿ: ಚುನಾವಣಾ ರಾಜಕಾರಣದಲ್ಲಿ ಕೇವಲ ಸಿದ್ಧಾಂತ ಮತ್ತು ಭಾಷಣಗಳಷ್ಟೇ ಅಲ್ಲ, ಆರ್ಥಿಕ ಶಕ್ತಿಯೂ ಎಷ್ಟು ಪ್ರಬಲ ಪಾತ್ರ ವಹಿಸುತ್ತದೆ ಎನ್ನುವುದು ಈಗ ಚುನಾವಣಾ ಆಯೋಗಕ್ಕೆ ಸಲ್ಲಿಕೆಯಾಗಿರುವ ಅಂಕಿ...

ದಿನ ಭವಿಷ್ಯ (26-09-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (26-09-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
September 26, 2026
0

ದಿನ ಭವಿಷ್ಯ: 26-09-2026 ಮೇಷ ರಾಶಿ ಇಂದು ನಿಮಗೆ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವ ದಿನ. ಕರ್ಮಸ್ಥಾನದಲ್ಲಿನ ಗ್ರಹಗಳ ಪ್ರಭಾವದಿಂದಾಗಿ ವೃತ್ತಿ ಜೀವನದಲ್ಲಿ ನಿಮ್ಮ ಕಾರ್ಯಕ್ಷಮತೆ ಹೆಚ್ಚಾಗುತ್ತದೆ....

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram