ADVERTISEMENT
Sunday, November 1, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಅನ್ನದಾತರ ಪರ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸಿಂಹಘರ್ಜನೆ

admin by admin
November 1, 2026
in Newsbeat, State, ರಾಜ್ಯ
darshan-puttannaiah-farmers-protest-mandya-ganangur-toll-highway-block-sugarcane-milk-price-loan-waiver

darshan-puttannaiah-farmers-protest-mandya-ganangur-toll-highway-block-sugarcane-milk-price-loan-waiver

Share on FacebookShare on TwitterShare on WhatsappShare on Telegram

 

ಮಂಡ್ಯ: ಕಬ್ಬು ಮತ್ತು ಹಾಲಿಗೆ ವೈಜ್ಞಾನಿಕ ದರ ನಿಗದಿ ಹಾಗೂ ಸಂಪೂರ್ಣ ಕೃಷಿ ಸಾಲ ಮನ್ನಾ ಸೇರಿದಂತೆ ಹಲವು ಜೀವನ್ಮರಣ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮತ್ತು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಗಣಂಗೂರು ಟೋಲ್ ಬಳಿ ಬೃಹತ್ ಹೆದ್ದಾರಿ ತಡೆ ಚಳವಳಿ ಯಶಸ್ವಿಯಾಗಿ ಜರುಗಿತು.

Related posts

darshan-puttannaiah-farmers-protest-mandya-ganangur-toll-highway-block-sugarcane-milk-price-loan-waiver

ಪಾಂಡವಪುರದ ಆಲೆಮನೆಗಳಿಗೆ ಸೋಲಾರ್ ಬಲ ತುಂಬಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ

November 1, 2026
darshan-puttannaiah-solar-powered-organic-jaggery-units-sunkathonur-mandya

ಸಾವಯವ ಕೃಷಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮತ್ತೊಂದು ಬಲವಾದ ಹೆಜ್ಜೆ

November 1, 2026

ದರ್ಶನ್ ಪುಟ್ಟಣ್ಣಯ್ಯ ಅವರ ಕರೆಯ ಮೇರೆಗೆ ಮಂಡ್ಯ, ಮೈಸೂರು, ಚಾಮರಾಜನಗರ, ರಾಮನಗರ ಹಾಗೂ ತುಮಕೂರು ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ರೈತರು, ವಿಶೇಷವಾಗಿ ಪಾಂಡವಪುರ, ದುದ್ದ ಹೋಬಳಿ ಮತ್ತು ಶ್ರೀರಂಗಪಟ್ಟಣ ಭಾಗದಿಂದ ಬೈಕ್ ರ್ಯಾಲಿ ಮೂಲಕ ಟೋಲ್‌ಗೆ ಮುತ್ತಿಗೆ ಹಾಕಿದರು. ಮಹಿಳಾ ರೈತರು ಸೇರಿದಂತೆ ಅಪಾರ ಸಂಖ್ಯೆಯ ಹೋರಾಟಗಾರರು ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯನ್ನು ಸುಮಾರು ಎರಡು ಗಂಟೆಗಳ ಕಾಲ ಸಂಪೂರ್ಣ ಬಂದ್ ಮಾಡಿ ಆಕ್ರೋಶದ ಕಹಳೆ ಮೊಳಗಿಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ದರ್ಶನ್‌ ಪುಟ್ಟಣ್ಣಯ್ಯ, ರೈತರ ಸಮಸ್ಯೆಗಳನ್ನು ಪರಿಹರಿಸಲು ಎಲ್ಲ ಭಿನ್ನಮತವನ್ನು ಬಿಟ್ಟು ಎಲ್ಲ ಸಂಘಟನೆಗಳೂ ಒಗ್ಗೂಡಿವೆ. ಈ ರೀತಿ ಒಗ್ಗೂಡಿದರೆ ರೈತರ ಸಮಸ್ಯೆಗಳು ಪರಿಹಾರವಾಗುತ್ತವೆ ಎಂದರು.

ರೈತರ ಪರ ಮಂಡಿಸಿದ ಪ್ರಮುಖ ಬೇಡಿಕೆಗಳು:
• ಪ್ರತಿ ಟನ್ ಕಬ್ಬಿಗೆ ಕನಿಷ್ಠ ₹5,500 ಕಡ್ಡಾಯ ಬೆಂಬಲ ಬೆಲೆ ನಿಗದಿಪಡಿಸಬೇಕು.
• ಸಕ್ಕರೆ ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿರುವ ಹಣವನ್ನು ತಕ್ಷಣವೇ ರೈತರ ಖಾತೆಗಳಿಗೆ ಜಮೆ ಮಾಡಬೇಕು.
• ರೈತರ ಹಾಲಿನ ಖರೀದಿ ದರವನ್ನು ಹೆಚ್ಚಿಸಬೇಕು.
• ಸಂಕಷ್ಟದಲ್ಲಿರುವ ರಾಜ್ಯದ ಅನ್ನದಾತರ ಸಂಪೂರ್ಣ ಕೃಷಿ ಸಾಲವನ್ನು ಸರ್ಕಾರ ಯಾವುದೇ ಷರತ್ತಿಲ್ಲದೆ ಮನ್ನಾ ಮಾಡಬೇಕು.

ಹೆದ್ದಾರಿಯಲ್ಲೇ ಕುಳಿತ ರೈತರು; ಮಣಿದ ಸರ್ಕಾರ: ರೈತರು ರಸ್ತೆಗಿಳಿದಿದ್ದರಿಂದ ಹೆದ್ದಾರಿಯ ಸಂಚಾರ ಸಂಪೂರ್ಣ ಸ್ತಬ್ಧವಾಯಿತು. ಟೋಲ್ ಮುತ್ತಿಗೆ ಹಾಕಲು ಮುಂದಾದಾಗ ಐಜಿಪಿ ಬೋರಲಿಂಗಯ್ಯ ರೈತರೊಂದಿಗೆ ಮಾತುಕತೆ ನಡೆಸಿ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದರು. ಆದರೆ ತಮ್ಮ ಬೇಡಿಕೆಗಳಿಗೆ ಸ್ಪಷ್ಟ ಭರವಸೆ ಸಿಗುವವರೆಗೂ ಜಗ್ಗುವುದಿಲ್ಲ ಎಂದು ರೈತರು ಮತ್ತು ರೈತ ಮುಖಂಡರು ಪಟ್ಟುಹಿಡಿದರು.

ಸ್ಥಳದಲ್ಲಿ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದ್ದು, ಪ್ರತಿಭಟನೆಯ ತೀವ್ರತೆಗೆ ಎಚ್ಚೆತ್ತ ರಾಜ್ಯ ಸರ್ಕಾರ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಹಾಗೂ ಜಿಲ್ಲಾಧಿಕಾರಿ ಡಾ.ಕುಮಾರ್ ಅವರನ್ನು ಸ್ಥಳಕ್ಕೆ ಕಳುಹಿಸಿತು. ಶಾಸಕ ದರ್ಶನ್ ಪುಟ್ಟಣ್ಣಯ್ಯ ಹಾಗೂ ರೈತ ಮುಖಂಡರೊಂದಿಗೆ ಚರ್ಚಿಸಿದ ಸಚಿವರು, ಅಕ್ಟೋಬರ್ 26 ರಂದು ಬೆಳಗಾವಿಯಲ್ಲಿ ಸ್ವತಃ ಮುಖ್ಯಮಂತ್ರಿಗಳೇ ರೈತರ ಮಹತ್ವದ ಸಭೆ ಕರೆದಿದ್ದು, ಅಲ್ಲಿ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸ್ಪಷ್ಟ ಭರವಸೆ ನೀಡಿದರು.

ಅಕ್ಟೋಬರ್ 26ರ ಬಳಿಕ ಮುಂದಿನ ಹೆಜ್ಜೆ: ಸಿಎಂ ಸಭೆಯ ಭರವಸೆ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ರಸ್ತೆ ತಡೆ ಹಿಂಪಡೆದ ರೈತ ಮುಖಂಡರು, ಅಕ್ಟೋಬರ್ 26ರ ಸಭೆಯ ನಿರ್ಧಾರವನ್ನು ಆಧರಿಸಿ ಮುಂದಿನ ನಿರ್ಣಾಯಕ ಹೋರಾಟದ ರೂಪುರೇಷೆ ಪ್ರಕಟಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ರೈತ ನಾಯಕರಾದ ಬಡಗಲಪುರ ನಾಗೇಂದ್ರ, ಕೆಂಪೂಗೌಡ, ಹೊನ್ನೂರು ಪ್ರಕಾಶ್, ಮಂಜುಕಿರಣ, ಹೊಸೂರು ಕುಮಾರ್, ಗೋವಿಂದರಾಜು, ಮಹದೇವಪ್ಪ, ಭಾಗ್ಯರಾಜ್ ಹಾಗೂ ವಿವಿಧ ಕನ್ನಡಪರ ಮತ್ತು ದಲಿತಪರ ಸಂಘಟನೆಗಳ ಪದಾಧಿಕಾರಿಗಳು ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಾಥ್ ನೀಡಿದರು.

ಹೋರಾಟಗಾರರಿಗೆ, ಮಹಿಳೆಯರಿಗೆ ದರ್ಶನ್ ಕೃತಜ್ಞತೆ: ಹೋರಾಟ ಯಶಸ್ವಿಯಾದ ಬಳಿಕ ಮಾತನಾಡಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಅನ್ನದಾತರ ಹಕ್ಕೊತ್ತಾಯಕ್ಕಾಗಿ ಸಾವಿರಾರು ಸಂಖ್ಯೆಯಲ್ಲಿ ಹೆದ್ದಾರಿಗೆ ಬಂದು ಹೋರಾಡಿದ ಎಲ್ಲಾ ರೈತ ಬಾಂಧವರಿಗೆ, ಹೆಗಲಿಗೆ ಹೆಗಲು ಕೊಟ್ಟು ನಿಂತ ಅಕ್ಕ-ತಂಗಿಯರಿಗೆ ನನ್ನ ಹೃದಯಪೂರ್ವಕ ಕೃತಜ್ಞತೆಗಳು. ರೈತರ ಕಣ್ಣೀರು ಒರೆಸುವವರೆಗೂ ಈ ಹೋರಾಟ ನಿಲ್ಲುವುದಿಲ್ಲ ಎಂದರು.

ShareTweetSendShare
Join us on:

Related Posts

darshan-puttannaiah-farmers-protest-mandya-ganangur-toll-highway-block-sugarcane-milk-price-loan-waiver

ಪಾಂಡವಪುರದ ಆಲೆಮನೆಗಳಿಗೆ ಸೋಲಾರ್ ಬಲ ತುಂಬಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ

by admin
November 1, 2026
0

  ಪರಿಸರ ಸ್ನೇಹಿ ಬೆಲ್ಲ ತಯಾರಿಕೆ ಮಂಡ್ಯ: ಕೃಷಿ ಕ್ಷೇತ್ರದಲ್ಲಿ ವಿನೂತನ ಪ್ರಯೋಗಗಳು ಹಾಗೂ ರೈತರ ಪರ ಕಾಳಜಿಗೆ ಸದಾ ಮುಂದಿರುವ ಮೇಲುಕೋಟೆ ಕ್ಷೇತ್ರದ ಜನಪ್ರಿಯ ಶಾಸಕ...

darshan-puttannaiah-solar-powered-organic-jaggery-units-sunkathonur-mandya

ಸಾವಯವ ಕೃಷಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮತ್ತೊಂದು ಬಲವಾದ ಹೆಜ್ಜೆ

by admin
November 1, 2026
0

ಸಾವಯವ ಕೃಷಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮತ್ತೊಂದು ಬಲವಾದ ಹೆಜ್ಜೆ ಸುಂಕಾತೊಣ್ಣೂರಿನ ಆಲೆಮನೆಗಳಿಗೂ ಸೋಲಾರ್ ಬಲ ಮಂಡ್ಯ: ಪಾಂಡವಪುರ ತಾಲೂಕಿನಲ್ಲಿ ಸಾವಯವ ಕೃಷಿ ಹಾಗೂ ಪರಿಸರ ಸ್ನೇಹಿ...

rishab-shetty-chhatrapati-shivaji-maharaj-biopic-t-series-bhushan-kumar-sandeep-singh-2027

ಛತ್ರಪತಿ ಶಿವಾಜಿ ಮಹಾರಾಜ್ ಬಯೋಪಿಕ್: ರಿಷಬ್ ಶೆಟ್ಟಿ-ಸಂದೀಪ್ ಸಿಂಗ್ ಚಿತ್ರಕ್ಕೆ ಕೈಜೋಡಿಸಿದ ಭೂಷಣ್ ಕುಮಾರ್; 2027ರಲ್ಲಿ ಶೂಟಿಂಗ್ ಆರಂಭ

by admin
November 1, 2026
0

ಮುಂಬೈ: ಮರಾಠ ಸಾಮ್ರಾಜ್ಯದ ಸಂಸ್ಥಾಪಕ, ಹಿಂದೂ ಸಾಮ್ರಾಜ್ಯದ ಮಹಾನ್ ಚಕ್ರವರ್ತಿ ಛತ್ರಪತಿ ಶಿವಾಜಿ ಮಹಾರಾಜರ ಶೌರ್ಯ, ತ್ಯಾಗ ಮತ್ತು ಸ್ವರಾಜ್ಯದ ಮಹೋನ್ನತ ಪರಿಕಲ್ಪನೆಯನ್ನು ಬೆಳ್ಳಿಪರದೆಯ ಮೇಲೆ ತರಲು...

dolly-dhananjay-anna-from-mexico-mass-song-release-vasuki-vaibhav-december-24

ʻಡಾಲಿʼ ಧನಂಜಯ್ ನಟನೆಯ ‘ಅಣ್ಣ ಫ್ರಂ ಮೆಕ್ಸಿಕೋ’ ಚಿತ್ರದ ಪವರ್‌ಫುಲ್ ಮಾಸ್ ಸಾಂಗ್ ರಿಲೀಸ್

by admin
November 1, 2026
0

ಬೆಂಗಳೂರು: ಸ್ಯಾಂಡಲ್‌ವುಡ್‌ನ ಜನಪ್ರಿಯ ನಟ, ‘ನಟರಾಕ್ಷಸ’ ಡಾಲಿ ಧನಂಜಯ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಅಣ್ಣ ಫ್ರಂ ಮೆಕ್ಸಿಕೋ’ ಸಿನಿಮಾದ ಎರಡನೇ ಹಾಡು ಬಿಡುಗಡೆಯಾಗಿದೆ. ಈಗಾಗಲೇ ಬಿಡುಗಡೆಯಾಗಿ ಅಪಾರ...

chenkol-the-last-kingdom-mass-song-release-aryan-santhosh-kannada-fantasy-drama

ಆರ್ಯನ್ ಸಂತೋಷ್ ನಿರ್ದೇಶನದ ‘ಚೆಂಕೋಲ್: ದಿ ಲಾಸ್ಟ್ ಕಿಂಗ್‌ಡಮ್’ ಸಿನಿಮಾದಿಂದ ಮಾಸ್ ಸಾಂಗ್ ರಿಲೀಸ್: ಕುತೂಹಲ ಮೂಡಿಸಿದ ಫ್ಯಾಂಟಸಿ ಡ್ರಾಮಾ

by admin
November 1, 2026
0

ಬೆಂಗಳೂರು: ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ಆರ್ಯನ್ ಸಂತೋಷ್ ಈಗ ನಿರ್ದೇಶಕರಾಗಿ ಹೊಸ ಹೆಜ್ಜೆ ಇಡುತ್ತಿದ್ದಾರೆ. ಅವರು ನಟಿಸಿ, ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳಿರುವ ಮಹತ್ವಾಕಾಂಕ್ಷೆಯ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram