ADVERTISEMENT
Tuesday, November 3, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

ಟೆಸ್ಟ್ ರೈಡ್ ಮಾಡಿ, ಉಚಿತವಾಗಿ ಡ್ರೀಮ್ ಬೈಕ್ ಗೆಲ್ಲಿ! ‘ಜಾವಾ ಯೆಜ್ಡಿ’ಯಿಂದ ದೀಪಾವಳಿ ಧಮಾಕಾ ಆಫರ್‌

admin by admin
November 3, 2026
in National, Newsbeat, ದೇಶ - ವಿದೇಶ
java-yezdi-bsa-diwali-offers-test-ride-win-dream-bike-classic-legends

java-yezdi-bsa-diwali-offers-test-ride-win-dream-bike-classic-legends

Share on FacebookShare on TwitterShare on WhatsappShare on Telegram

ಬೆಂಗಳೂರು: ಜಾವಾ, ಯೆಜ್ಡಿ ಅಥವಾ ಬಿಎಸ್‌ಎ ಬೈಕ್ ಖರೀದಿಸುವ ಕನಸು ಕಾಣುತ್ತಿರುವವರಿಗೆ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಕಂಪನಿ ಭರ್ಜರಿ ಆಫರ್‌ ಘೋಷಿಸಿದೆ. ಬೈಕ್ ಪ್ರಿಯರ ಕನಸನ್ನು ನನಸು ಮಾಡಲು ಮಾತೃಸಂಸ್ಥೆ ಕ್ಲಾಸಿಕ್ ಲೆಜೆಂಡ್ಸ್ ಭರ್ಜರಿ ಫೈನಾನ್ಸ್ ಆಫರ್‌ಗಳ ಜೊತೆಗೆ ‘ಟೆಸ್ಟ್ ರೈಡ್ ಮಾಡಿ, ನಿಮ್ಮ ಡ್ರೀಮ್ ಬೈಕ್ ಗೆಲ್ಲಿ’ ಎಂಬ ವಿಶೇಷ ಅಭಿಯಾನವನ್ನು ಘೋಷಿಸಿದೆ.

ನೀವು ಹತ್ತಿರದ ಜಾವಾ-ಯೆಜ್ಡಿ ಶೋರೂಮ್‌ಗೆ ಭೇಟಿ ನೀಡಿ, ನಿಮಗೆ ಇಷ್ಟವಾದ ಬೈಕ್ ಅನ್ನು ಕೇವಲ ‘ಟೆಸ್ಟ್ ರೈಡ್’ ಮಾಡಿದರೆ ಸಾಕು, ನೀವು ಆ ಬೈಕ್ ಅನ್ನು ಉಚಿತವಾಗಿ ಗೆಲ್ಲುವ ಅದೃಷ್ಟಶಾಲಿಗಳಾಗಬಹುದು. ಇದರ ಜೊತೆಗೆ, ಗ್ರಾಹಕರಿಗೆ ಬೈಕ್ ಖರೀದಿಯನ್ನು ಇನ್ನಷ್ಟು ಸುಲಭಗೊಳಿಸಲು ಕಂಪನಿಯು ಅತ್ಯಾಕರ್ಷಕ ಹಣಕಾಸು ಆಯ್ಕೆಗಳನ್ನು ಸಹ ಒದಗಿಸುತ್ತಿದೆ:

Related posts

cognizant-openai-partnership-25000-ai-professionals-frontier-capability-group-chatgpt-codex

ಎಐ ಜಗತ್ತಿನಲ್ಲಿ ಕಾಂಗ್ನಿಜೆಂಟ್ ಭರ್ಜರಿ ಹೆಜ್ಜೆ: ಓಪನ್‌ ಎಐ ಸೇವೆಗಾಗಿ 25,000 ಟೆಕ್ಕಿಗಳ ಬೃಹತ್ ಪಡೆ ಸಜ್ಜು

November 3, 2026
pi-industries-india-first-indigenously-developed-insecticide-pyoxaniliprole-launch

10 ವರ್ಷಗಳ ಸಂಶೋಧನೆಗೆ ಜಯ: ಭಾರತದ ಮೊಟ್ಟಮೊದಲ ‘ಸ್ವದೇಶಿ’ ಕೀಟನಾಶಕ ಬಿಡುಗಡೆ ಮಾಡಿದ ಪಿಐ ಇಂಡಸ್ಟ್ರೀಸ್!

November 3, 2026

ಅತಿ ಕಡಿಮೆ ಇಎಂಐ: ನಿಮ್ಮ ಸಾಲದ ಮೊತ್ತದ ಪ್ರತಿ ಒಂದು ಲಕ್ಷ ರೂಪಾಯಿಗೆ, ಮಾಸಿಕ ಕಂತು ಕೇವಲ 1,888 ರೂ.ಗಳಿಂದ ಪ್ರಾರಂಭವಾಗುತ್ತದೆ.
ಕಡಿಮೆ ಬಡ್ಡಿ ದರ: ಸಾಲದ ಮೇಲಿನ ಬಡ್ಡಿ ದರವು ಶೇ. 4.75ರಿಂದ ಶುರುವಾಗುತ್ತದೆ.
ಕಡಿಮೆ ಡೌನ್ ಪೇಮೆಂಟ್: ಕೇವಲ 4,999 ರೂ.ಗಳಷ್ಟು ಕಡಿಮೆ ಮುಂಗಡ ಹಣ ಕಟ್ಟಿ ನಿಮ್ಮ ನೆಚ್ಚಿನ ಬೈಕ್ ಅನ್ನು ಮನೆಗೊಯ್ಯಬಹುದು.

ಈ ಅತ್ಯಾಕರ್ಷಕ ಆಯ್ಕೆಗಳು ಗ್ರಾಹಕರಿಗೆ ಯಾವುದೇ ಆರ್ಥಿಕ ಹೊರೆಯಿಲ್ಲದೆ, ಸುಲಭವಾಗಿ ವಾಹನ ಖರೀದಿಸಲು ಅನುವು ಮಾಡಿಕೊಡಲಿವೆ.

ಜಾವಾ, ಯೆಜ್ಡಿ ಅಥವಾ ಬಿಎಸ್‌ಎ ಬೈಕ್‌ಗಳು ತಮ್ಮದೇ ಆದ ವಿಶಿಷ್ಟ ಇತಿಹಾಸ ಮತ್ತು ಗಾಂಭೀರ್ಯವನ್ನು ಹೊಂದಿವೆ. ಹಳೆಯ ಕಾಲದ ಟೈಮ್‌ಲೆಸ್ ಸ್ಟೈಲ್ ಇಷ್ಟಪಡುವವರಿಗೆ ‘ಜಾವಾ’, ಸಾಹಸ ಮತ್ತು ಬೋಲ್ಡ್ ಲುಕ್ ಬಯಸುವವರಿಗೆ ‘ಯೆಜ್ಡಿ’ ಹಾಗೂ ಬ್ರಿಟಿಷ್ ಕರಕುಶಲತೆಯ ಗತ್ತು ಬೇಕೆನ್ನುವವರಿಗೆ ‘ಬಿಎಸ್‌ಎ’ ಹೇಳಿ ಮಾಡಿಸಿದ ಬೈಕ್‌ಗಳಾಗಿವೆ. ಪ್ರತಿಯೊಬ್ಬ ಸವಾರನೂ ತನ್ನ ವ್ಯಕ್ತಿತ್ವಕ್ಕೆ ಒಪ್ಪುವ ಬೈಕ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು.

ಈ ಹಬ್ಬದ ಕೊಡುಗೆಗಳ ಕುರಿತು ಮಾತನಾಡಿದ ಕ್ಲಾಸಿಕ್ ಲೆಜೆಂಡ್ಸ್ ಸಹ-ಸಂಸ್ಥಾಪಕ ಅನುಪಮ್ ಥರೇಜಾ, “ಬಹಳಷ್ಟು ಜನರಿಗೆ ತಾವು ಇಷ್ಟಪಡುವ ಬೈಕ್ ಅನ್ನು ಖರೀದಿಸುವುದು ಒಂದು ದೊಡ್ಡ ಕನಸಾಗಿರುತ್ತದೆ. ರಸ್ತೆಯಲ್ಲಿ ಹೋಗುವಾಗಲೋ, ಆನ್‌ಲೈನ್‌ನಲ್ಲೋ ಅಥವಾ ಸ್ನೇಹಿತರ ಬಳಿಯೋ ಆ ಬೈಕ್ ನೋಡಿ ತಾವು ಅದನ್ನು ಕೊಳ್ಳಬೇಕು ಎಂದು ಬಯಸುತ್ತಾರೆ. ಈ ದೀಪಾವಳಿಯಂದು ಅವರ ಆ ಕನಸನ್ನು ನನಸು ಮಾಡಲು ನಾವು ಬಯಸಿದ್ದೇವೆ. ನಮ್ಮ ಬ್ರ್ಯಾಂಡ್‌ಗಳು ಸವಾರರೊಂದಿಗೆ ಬಲವಾದ ಭಾವನಾತ್ಮಕ ಬಂಧವನ್ನು ಹೊಂದಿವೆ. ಈ ಅತ್ಯಾಕರ್ಷಕ ಆಫರ್‌ಗಳು ಮತ್ತು ಟೆಸ್ಟ್ ರೈಡ್ ಅಭಿಯಾನವು ಗ್ರಾಹಕರನ್ನು ಅವರ ನೆಚ್ಚಿನ ಮೋಟಾರ್‌ಸೈಕಲ್‌ಗಳಿಗೆ ಇನ್ನಷ್ಟು ಹತ್ತಿರ ತರಲಿದೆ,” ಎಂದು ಅಭಿಪ್ರಾಯಪಟ್ಟರು.

ಹಾಗಾದ್ರೆ ಇನ್ನೇಕೆ ತಡ? ನಿಮ್ಮ ಕನಸಿನ ಬೈಕ್ ನಿಮ್ಮದಾಗಿಸಿಕೊಳ್ಳಲು ಈ ದೀಪಾವಳಿ ಹಬ್ಬವನ್ನು ಸದುಪಯೋಗಪಡಿಸಿಕೊಳ್ಳಿ. ಇಂದೇ ನಿಮ್ಮ ಹತ್ತಿರದ ‘ಜಾವಾ ಯೆಜ್ಡಿ’ ಅಧಿಕೃತ ಶೋರೂಮ್‌ಗೆ ಭೇಟಿ ನೀಡಿ, ಟೆಸ್ಟ್ ರೈಡ್ ಮಾಡಿ ಹಾಗೂ ಬೈಕ್ ಗೆಲ್ಲುವ ಅವಕಾಶ ನಿಮ್ಮದಾಗಿಸಿಕೊಳ್ಳಿ.

ShareTweetSendShare
Join us on:

Related Posts

cognizant-openai-partnership-25000-ai-professionals-frontier-capability-group-chatgpt-codex

ಎಐ ಜಗತ್ತಿನಲ್ಲಿ ಕಾಂಗ್ನಿಜೆಂಟ್ ಭರ್ಜರಿ ಹೆಜ್ಜೆ: ಓಪನ್‌ ಎಐ ಸೇವೆಗಾಗಿ 25,000 ಟೆಕ್ಕಿಗಳ ಬೃಹತ್ ಪಡೆ ಸಜ್ಜು

by admin
November 3, 2026
0

ಬೆಂಗಳೂರು: ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ಕಾರ್ಪೊರೇಟ್ ಜಗತ್ತಿಗೆ ಮತ್ತಷ್ಟು ಹತ್ತಿರ ತರುವ ನಿಟ್ಟಿನಲ್ಲಿ ಪ್ರಮುಖ ಐಟಿ ದಿಗ್ಗಜ ಸಂಸ್ಥೆ ಕಾಂಗ್ನಿಜೆಂಟ್ ಮಹತ್ವದ ಹೆಜ್ಜೆ ಇಟ್ಟಿದೆ. ಚಾಟ್‌ಜಿಪಿಟಿ...

pi-industries-india-first-indigenously-developed-insecticide-pyoxaniliprole-launch

10 ವರ್ಷಗಳ ಸಂಶೋಧನೆಗೆ ಜಯ: ಭಾರತದ ಮೊಟ್ಟಮೊದಲ ‘ಸ್ವದೇಶಿ’ ಕೀಟನಾಶಕ ಬಿಡುಗಡೆ ಮಾಡಿದ ಪಿಐ ಇಂಡಸ್ಟ್ರೀಸ್!

by admin
November 3, 2026
0

* ಸಂಪೂರ್ಣವಾಗಿ ಭಾರತದಲ್ಲೇ ಸಂಶೋಧಿಸಿ, ಅಭಿವೃದ್ಧಿಪಡಿಸಿದ ಮೊಟ್ಟಮೊದಲ ಕೀಟನಾಶಕ 'ಪಯೋಕ್ಸಾನಿಲಿಪ್ರೋಲ್' ಬಿಡುಗಡೆ. * ಪಿಐ ಇಂಡಸ್ಟ್ರೀಸ್‌ನ 700ಕ್ಕೂ ಹೆಚ್ಚು ವಿಜ್ಞಾನಿಗಳ ಶ್ರಮ, 10 ವರ್ಷಗಳ ನಿರಂತರ ಸಂಶೋಧನೆಗೆ...

swiggy-delivery-partners-insurance-cover-10-lakh-25-lakh-gig-workers-indusind-general-insurance

ಸ್ವಿಗ್ಗಿ ಡೆಲಿವರಿ ಪಾರ್ಟ್ನರ್‌ಗಳಿಗೆ ಬಂಪರ್‌: 25 ಲಕ್ಷಕ್ಕೂ ಹೆಚ್ಚು ಸಿಬ್ಬಂದಿಗೆ ₹10 ಲಕ್ಷದವರೆಗಿನ ವಿಮಾ ಸೌಲಭ್ಯ

by admin
November 3, 2026
0

ಬೆಂಗಳೂರು: ಭಾರತದ ಪ್ರಮುಖ ಆನ್‌ಲೈನ್‌ ಡೆಲಿವರಿ ಪ್ಲಾಟ್‌ಫಾರ್ಮ್ ಸ್ವಿಗ್ಗಿ ಮಳೆ-ಬಿಸಿಲೆನ್ನದೆ ಗ್ರಾಹಕರಿಗೆ ಸೇವೆ ಒದಗಿಸುವ ತನ್ನ ಡೆಲಿವರಿ ಪಾಲುದಾರರ ಆರ್ಥಿಕ ಮತ್ತು ಆರೋಗ್ಯ ಭದ್ರತೆಗಾಗಿ ಮಹತ್ವದ ಹೆಜ್ಜೆಯಿಟ್ಟಿದೆ....

ಪುತ್ರನ ಪಟ್ಟ ಉಳಿಸಿಕೊಳ್ಳಲು ದೇವೇಗೌಡರ ಮೊರೆ ಹೋದ ಯಡಿಯೂರಪ್ಪ: ಮುಂದಿನ ಹತ್ತು ವರ್ಷ ಸಿಎಂ ಆಕಾಂಕ್ಷಿಯಲ್ಲ ಎಂದು ವಿಜಯೇಂದ್ರ ಘೋಷಿಸಲಿ-ಇಂದು ಒಂದಾಗಿದ್ದೇವೆ ಎನ್ನುವ ಬಿಎಸ್‌ವೈ ಮತ್ತು ದೇವೇಗೌಡರು ನಾಳೆ ಕಚ್ಚಾಡುವುದು ಖಚಿತ ಎಂದ ಯತ್ನಾಳ್

ಪುತ್ರನ ಪಟ್ಟ ಉಳಿಸಿಕೊಳ್ಳಲು ದೇವೇಗೌಡರ ಮೊರೆ ಹೋದ ಯಡಿಯೂರಪ್ಪ: ಮುಂದಿನ ಹತ್ತು ವರ್ಷ ಸಿಎಂ ಆಕಾಂಕ್ಷಿಯಲ್ಲ ಎಂದು ವಿಜಯೇಂದ್ರ ಘೋಷಿಸಲಿ-ಇಂದು ಒಂದಾಗಿದ್ದೇವೆ ಎನ್ನುವ ಬಿಎಸ್‌ವೈ ಮತ್ತು ದೇವೇಗೌಡರು ನಾಳೆ ಕಚ್ಚಾಡುವುದು ಖಚಿತ ಎಂದ ಯತ್ನಾಳ್

by Shwetha
November 3, 2026
0

ವಿಜಯಪುರ: ರಾಜ್ಯ ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಅವರ ಪುತ್ರ ಬಿ.ವೈ. ವಿಜಯೇಂದ್ರ ವಿರುದ್ಧ...

SIR ಪಟ್ಟಿಯ ಕುರಿತು ಅಂತಿಮ ನಿರ್ಧಾರ ಇನ್ನೂ ಬಾಕಿ: ಮುಖ್ಯಮಂತ್ರಿ, ಸಚಿವ ಸಂಪುಟ ಸಭೆಯಲ್ಲಿ ಚರ್ಚೆ

SIR ಪಟ್ಟಿಯ ಕುರಿತು ಅಂತಿಮ ನಿರ್ಧಾರ ಇನ್ನೂ ಬಾಕಿ: ಮುಖ್ಯಮಂತ್ರಿ, ಸಚಿವ ಸಂಪುಟ ಸಭೆಯಲ್ಲಿ ಚರ್ಚೆ

by Shwetha
November 3, 2026
0

ಕರ್ನಾಟಕದಲ್ಲಿ ಬಹಳ ದಿನಗಳಿಂದ ಬಾಕಿ ಉಳಿದಿರುವ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳ ಸಿದ್ಧತೆ ನಡುವೆಯೇ ಮತದಾರರ ಪಟ್ಟಿ ವಿಚಾರ ಹೊಸ ಚರ್ಚೆಗೆ ಕಾರಣವಾಗಿದೆ. ಮುಂಬರುವ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram