ADVERTISEMENT
Thursday, November 19, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ಡಾಲಿʼ ಧನಂಜಯ್ ‘ಅಣ್ಣ ಫ್ರಂ ಮೆಕ್ಸಿಕೋ’ ಚಿತ್ರದ ‘ಹೋಗೋಣ ಬಾರಾ ಮೆಕ್ಸಿಕೋ’ ಲಿರಿಕಲ್ ಸಾಂಗ್ ರಿಲೀಸ್: ಯೋಗರಾಜ್ ಭಟ್ ಸಾಹಿತ್ಯಕ್ಕೆ ಭರ್ಜರಿ ರೆಸ್ಪಾನ್ಸ್

admin by admin
November 19, 2026
in Cinema, Newsbeat, ಮನರಂಜನೆ
anna-from-mexico-hogona-bara-mexico-lyrical-song-dolly-dhananjay

anna-from-mexico-hogona-bara-mexico-lyrical-song-dolly-dhananjay

Share on FacebookShare on TwitterShare on WhatsappShare on Telegram

ಬೆಂಗಳೂರು: ಡಾಲಿ ಧನಂಜಯ್ ಅಭಿನಯದ ಬಹುನಿರೀಕ್ಷಿತ ‘ಅಣ್ಣ ಫ್ರಂ ಮೆಕ್ಸಿಕೋ’ ಸಿನಿಮಾ ಇದೇ ಡಿಸೆಂಬರ್ 24ರಂದು ಅದ್ಧೂರಿಯಾಗಿ ತೆರೆಗೆ ಬರಲು ಸಜ್ಜಾಗಿದ್ದು, ಚಿತ್ರತಂಡ ಪ್ರಚಾರದ ಭರಾಟೆಯನ್ನು ಜೋರಾಗಿಸಿದೆ. ಈಗಾಗಲೇ ಈ ಚಿತ್ರದ ಹಾಡುಗಳು ಸಿನಿಪ್ರಿಯರ ಮನಗೆದ್ದು ದೊಡ್ಡ ಮಟ್ಟದಲ್ಲಿ ಹಿಟ್ ಆಗಿವೆ. ವಾಸುಕಿ ವೈಭವ್ ಸಂಗೀತ ಸಂಯೋಜನೆಯಲ್ಲಿ ಈ ಹಿಂದೆ ಬಿಡುಗಡೆಯಾಗಿದ್ದ, ‘ಪುಟ್ಟಮಲ್ಲಿ’ (ಸಾಹಿತ್ಯ: ಚೇತನ್ ಕುಮಾರ್) ಮತ್ತು ‘ಮಾಸಿಗೂ ಅಣ್ಣನೇ ನಿಮ್ ಬಾಸಿಗೂ ಅಣ್ಣನೆ’ (ಸಾಹಿತ್ಯ: ನಾಗಾರ್ಜುನ ಶರ್ಮಾ) ಹಾಡುಗಳು ಕೇಳುಗರ ಫೇವರಿಟ್ ಪಟ್ಟಿಗೆ ಸೇರಿವೆ. ಇದೀಗ ಆ ಸಾಲಿಗೆ ಚಿತ್ರದ ಮೂರನೇ ಹಾಡು ಸೇರ್ಪಡೆಯಾಗಿದ್ದು, ‘ಹೋಗೋಣ ಬಾರಾ ಮೆಕ್ಸಿಕೋ’ ಎಂಬ ಕ್ಯಾಚಿ ಲಿರಿಕಲ್ ವಿಡಿಯೋ ಸಾಂಗ್ ನವೆಂಬರ್ 15ರಂದು ‘ಆನಂದ್ ಆಡಿಯೋ’ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ.

ಖ್ಯಾತ ನಿರ್ದೇಶಕ ಹಾಗೂ ಗೀತರಚನೆಕಾರ ಯೋಗರಾಜ್ ಭಟ್ ಅವರ ಲೇಖನಿಯಲ್ಲಿ ಮೂಡಿಬಂದಿರುವ ಈ ಹಾಡು ತನ್ನ ವಿಶಿಷ್ಟ ಪದಬಳಕೆಯಿಂದ ಗಮನ ಸೆಳೆಯುತ್ತಿದೆ. “ಬಾರಾ ಬೇಬಿ ಬಾರಾ ಬೇಬಿ.. ಪ್ಯಾರು ಮಾಡೋಣು.. ತುಟಿಗೆ ತುಟಿ ತಾಕಿಸೋಣು.. ನೌವ್ನ್ ಆಗಿದ್ದು ಆಗೋಗ್ಲಿ.. ಬಾರಾ ಬಾಬು ಬಾರಾ ಬಾಬು ಸೇರಿ ಹಾಡೋಣು.. ಕೊಟಿಗಿ ಕತ್ಲಾಗ ಮೀಟ್ ಆಗೋಣು..” ಎಂಬ ಭಟ್ಟರ ಮಜವಾದ ಸಾಲುಗಳಿಗೆ ವಾಸುಕಿ ವೈಭವ್ ಅಷ್ಟೇ ಲವಲವಿಕೆಯ ಸಂಗೀತ ನೀಡಿದ್ದಾರೆ. ಉತ್ತರ ಕರ್ನಾಟಕದ ಸೊಗಡಿನ ಗಾಯಕ ಮಾಳು ನಿಪನಾಳ್ ಅವರ ಜೊತೆಗೆ ಮಾಧುರಿ ಶೇಷಾದ್ರಿ ಮತ್ತು ಅಭಿಷೇಕ್ ನಗರ್ಕರ್ ಈ ಹಾಡಿಗೆ ಧ್ವನಿಯಾಗಿದ್ದು, ಹಾಡಿನ ಎನರ್ಜಿಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

Related posts

parak-movie-poster-childrens-day-davanagere-students-sriimurali-halesh-kogundi

ಮಕ್ಕಳ ದಿನಾಚರಣೆಯಂದು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ‘ಪರಾಕ್’ ಚಿತ್ರದ ಪೋಸ್ಟರ್ ಬಿಡಿಸಿದ ದಾವಣಗೆರೆ ವಿದ್ಯಾರ್ಥಿಗಳು; ನಿರ್ದೇಶಕ ಹಾಲೇಶ್ ಕೋಗುಂಡಿಗೆ ವಿಶೇಷ ಗೌರವ

November 19, 2026
sathya-son-of-harishchandra-ga-garaga-song-release-niroop-bhandari-kailash-kher

ನಿರೂಪ್ ಭಂಡಾರಿ ಅಭಿನಯದ ‘ಸತ್ಯ ಸನ್ ಆಫ್ ಹರಿಶ್ಚಂದ್ರ’ ಚಿತ್ರದ ‘ಗಾ ಗರಗ’ ಹಾಡು ಬಿಡುಗಡೆ: ಕೈಲಾಶ್ ಖೇರ್ ಧ್ವನಿ ಹಾಗೂ ಸಚಿನ್ ಬಸ್ರೂರ್ ಸಂಗೀತದ ಮೋಡಿ

November 19, 2026

ಈ ಹಾಡಿನಲ್ಲಿ ನಾಯಕ ಡಾಲಿ ಧನಂಜಯ್ ಮತ್ತು ನಾಯಕಿ ರೀಷ್ಮಾ ನಾಣಯ್ಯ ಅವರ ಜೋಡಿ ಸಖತ್ ಮೋಡಿ ಮಾಡಿದೆ. ಇಬ್ಬರ ಕೆಮಿಸ್ಟ್ರಿ ಹಾಗೂ ಭರ್ಜರಿ ಡ್ಯಾನ್ಸ್ ಸ್ಟೆಪ್ಸ್ ಅಭಿಮಾನಿಗಳಿಗೆ ಹಬ್ಬದೂಟ ನೀಡುವಂತಿದ್ದು, ಲಿರಿಕಲ್ ವಿಡಿಯೋಗೆ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ‘ಬಡವ ರಾಸ್ಕಲ್’ ಖ್ಯಾತಿಯ ಶಂಕರ್ ಗುರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಕಮರ್ಷಿಯಲ್ ಅಂಶಗಳ ಜೊತೆಗೆ ಮನರಂಜನೆಯ ಪ್ಯಾಕೇಜ್ ನೀಡಲು ಸಜ್ಜಾಗಿದ್ದಾರೆ.

‘ಅಣ್ಣ ಫ್ರಂ ಮೆಕ್ಸಿಕೋ’ ಚಿತ್ರಕ್ಕೆ ದೊಡ್ಡ ತಾರಾಗಣವೇ ಇದ್ದು, ಡಾಲಿ ಧನಂಜಯ್ ಹಾಗೂ ರೀಷ್ಮಾ ನಾಣಯ್ಯ ಜೊತೆಗೆ ಹಿರಿಯ ನಟಿ ಉಮಾಶ್ರೀ, ರಂಗಾಯಣ ರಘು, ನಾಗಭೂಷಣ, ಸಾಧು ಕೋಕಿಲ, ಪೂರ್ಣಚಂದ್ರ ಮೈಸೂರು, ಹುಲಿ ಕಾರ್ತಿಕ್ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ಬಣ್ಣ ಹಚ್ಚಿದ್ದಾರೆ. ನಟ ಲೂಸ್‌ ಮಾದ ಯೋಗಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಐರಾ ಫಿಲಂಸ್ ಬ್ಯಾನರ್ ಅಡಿಯಲ್ಲಿ ಚನ್ನರಾಜ್ ಬಿ ಹಟ್ಟಿಹೊಳಿ ಮತ್ತು ಮೃಣಾಲ್ ಹಾಗೂ ರಾಯಲ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಸತ್ಯ ರಾಯಲ ಮತ್ತು ಜಾನ್ವಿ ರಾಯಲ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಎ.ಜೆ. ಶೆಟ್ಟಿ ಮತ್ತು ಎಸ್.ಕೆ. ರಾವ್ ಅವರ ಛಾಯಾಗ್ರಹಣ ಚಿತ್ರಕ್ಕಿದ್ದು, ನಿರಂಜನ್‌ ದೇವರಮನೆ ಸಂಕಲನ ಮಾಡಿದ್ದಾರೆ. ಡಿಸೆಂಬರ್ 24ರಂದು ಈ ಸಿನಿಮಾ ಬೆಳ್ಳಿತೆರೆಯ ಮೇಲೆ ಮಿಂಚಲು ಸಿದ್ಧವಾಗಿದೆ.

ShareTweetSendShare
Join us on:

Related Posts

parak-movie-poster-childrens-day-davanagere-students-sriimurali-halesh-kogundi

ಮಕ್ಕಳ ದಿನಾಚರಣೆಯಂದು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ‘ಪರಾಕ್’ ಚಿತ್ರದ ಪೋಸ್ಟರ್ ಬಿಡಿಸಿದ ದಾವಣಗೆರೆ ವಿದ್ಯಾರ್ಥಿಗಳು; ನಿರ್ದೇಶಕ ಹಾಲೇಶ್ ಕೋಗುಂಡಿಗೆ ವಿಶೇಷ ಗೌರವ

by admin
November 19, 2026
0

  ದಾವಣಗೆರೆ: ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಪರಾಕ್’ ಬಿಡುಗಡೆಗೂ ಮುನ್ನವೇ ಸ್ಯಾಂಡಲ್‌ವುಡ್‌ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಇದೀಗ ಮಕ್ಕಳ ದಿನಾಚರಣೆಯ ವಿಶೇಷ ಸಂದರ್ಭದಲ್ಲಿ...

sathya-son-of-harishchandra-ga-garaga-song-release-niroop-bhandari-kailash-kher

ನಿರೂಪ್ ಭಂಡಾರಿ ಅಭಿನಯದ ‘ಸತ್ಯ ಸನ್ ಆಫ್ ಹರಿಶ್ಚಂದ್ರ’ ಚಿತ್ರದ ‘ಗಾ ಗರಗ’ ಹಾಡು ಬಿಡುಗಡೆ: ಕೈಲಾಶ್ ಖೇರ್ ಧ್ವನಿ ಹಾಗೂ ಸಚಿನ್ ಬಸ್ರೂರ್ ಸಂಗೀತದ ಮೋಡಿ

by admin
November 19, 2026
0

ಬೆಂಗಳೂರು: ನಟ ನಿರೂಪ್ ಭಂಡಾರಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಬಹುನಿರೀಕ್ಷಿತ ‘ಸತ್ಯ ಸನ್ ಆಫ್ ಹರಿಶ್ಚಂದ್ರ’ ಚಿತ್ರದ ‘ಗಾ ಗರಗ’ ಎಂಬ ಭಾವನಾತ್ಮಕ ಹಾಗೂ ಅರ್ಥಪೂರ್ಣ ಗೀತೆ ಅಧಿಕೃತವಾಗಿ...

friends-and-families-kannada-movie-first-look-title-launch-dia-combo

ದಿಯಾ’ ಜೋಡಿಯೊಂದಿಗೆ ಮತ್ತೆ ಬಂದ ನಿರ್ದೇಶಕ ಕೆ. ಎಸ್. ಅಶೋಕ: ‘ಫ್ರೆಂಡ್ಸ್ & ಫ್ಯಾಮಿಲಿಸ್’ ಫಸ್ಟ್ ಲುಕ್ & ಟೈಟಲ್ ಅನಾವರಣ

by admin
November 19, 2026
0

ಬೆಂಗಳೂರು: ‘6-5=2’ ಹಾಗೂ ಸೂಪರ್ ಹಿಟ್ ‘ದಿಯಾ’ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಿರ್ದೇಶಕ ಕೆ. ಎಸ್. ಅಶೋಕ ಇದೀಗ ತಮ್ಮ...

yashwanth-kumar-samudra-manthana-kannada-movie-hero-entry

ಕಿರುತೆರೆಗೆ ಅಲ್ಪವಿರಾಮ, ಬೆಳ್ಳಿತೆರೆಯತ್ತ ಯಶ್ವಂತ್ ಕುಮಾರ್ ಪಯಣ: ‘ಸಮುದ್ರ ಮಂಥನ’ ಚಿತ್ರದ ಮೂಲಕ ನಾಯಕನಾಗಿ ಎಂಟ್ರಿ

by admin
November 19, 2026
0

  ​ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳ ಮೂಲಕ ಮನೆಮಾತಾಗಿರುವ ನಟ ಯಶ್ವಂತ್ ಕುಮಾರ್, ಇದೀಗ ತಮ್ಮ ಕಿರುತೆರೆ ಪಯಣಕ್ಕೆ ತಾತ್ಕಾಲಿಕ ವಿರಾಮ ನೀಡಿ ಪೂರ್ಣಪ್ರಮಾಣದಲ್ಲಿ ಸಿನಿಮಾರಂಗದಲ್ಲಿ...

lambodara-2-0-grand-red-carpet-premiere-bengaluru-celebrities

ಲಂಬೋದರ 2.0’ ಚಿತ್ರದ ಗ್ರ್ಯಾಂಡ್ ರೆಡ್ ಕಾರ್ಪೆಟ್ ಪ್ರದರ್ಶನ; ಸಿನಿಮಾ ತಾರೆಯರು, ಜಾಗತಿಕ ಉದ್ಯಮಿಗಳ ದಂಡು ಭಾಗಿ!

by admin
November 19, 2026
0

ಬೆಂಗಳೂರು: ಅನಿಲ್ ಶೆಟ್ಟಿ ನಿರ್ಮಿಸಿ, ಪ್ರಮುಖ ಪಾತ್ರದಲ್ಲಿ ನಟಿಸಿರುವ ಹಾಗೂ ‘ಸಿಂಪಲ್’ ಸುನಿ ನಿರ್ದೇಶನದ ಬಹುನಿರೀಕ್ಷಿತ ‘ಲಂಬೋದರ 2.0’ ಸಿನಿಮಾದ ಭವ್ಯ ರೆಡ್ ಕಾರ್ಪೆಟ್ ಪ್ರದರ್ಶನ ನಗರದ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram